TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ನೀವು ಈ ಹೈಬ್ರಿಡ್ ಗ್ಯಾಡ್ಜೆಟ್ಸ್ ನೋಡಿದರೆ ಮೂಗಿನ ಮೇಲೆ ಬೆರಳಿಟ್ಕೊಳ್ತಿರಿ..!
ನಮ್ಮ ನಿಮಗೆಲ್ಲ ಹೈಬ್ರಿಡ್ ಕಲ್ಪನೆ ಪರಿಚಯವಿದೆ. ಕೃಷಿ, ಹೈನುಗಾರಿಕೆ ಮತ್ತೀತರ ಕ್ಷೇತ್ರಗಳಲ್ಲಿ ಗಣನೀಯ ಯಶಸ್ಸನ್ನು ಕಂಡಿರುವ ಹೈಬ್ರಿಡ್ ಪರಿಕಲ್ಪನೆ ಟೆಕ್ ಲೋಕಕ್ಕೂ ಕಾಲಿಟ್ಟಿರುವುದು ಹಳೆಯ ಸಂಗತಿ. ಮೊಬೈಲ್‌ನಲ್ಲಿ ಕ್ಯಾಮೆರಾ ಬಂದಿದ್ದು, ಕ್ಯಾಮೆರಾದಲ್ಲಿ ಇಂಟರ್‌ನೆಟ್ ಬಂದಿದ್ದು, ಎಲ್ಲವೂ ಹೈಬ್ರಿಡ್ ಕಲ್ಪನೆಯ ಪರಿಣಾಮವೇ ಆಗಿದೆ.
ಆದರೆ, ಮೊಬೈಲ್ ಒಕೆ ಎನ್ನಬಹುದು. ಇಲ್ಲಿ ನಾವೂ ತೋರಿಸುವ ಹೈಬ್ರಿಡ್ ಗ್ಯಾಡ್ಜೆಟ್‌ಗಳನ್ನು ನೀವು ನೋಡಿದರೆ ಹೈಬ್ರಿಡ್ ಪರಿಕಲ್ಪನೆ ಹಿಂಗೂ ಬಳಕೆಯಾಗುತ್ತಾ ಎಂದು ಅಚ್ಚರಿ ಪಡಬಹುದು. ರೇಡಿಯೋದಲ್ಲಿಯೇ ರೋಸ್ಟರ್ ಅಂತೆ, ಏರೋಪ್ಲೇನ್‌ನ್ನು ಹೈಬ್ರಿಡ್ ಮಾಡಿ ಯೂರೋಕಾಪ್ಟರ್ ಮಾಡಿದ್ದು, ನಿಮ್ಮನ್ನು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡುತ್ತದೆ. ಅಂತಹ ಹತ್ತು ವೈರಲ್ ಟೆಕ್ ಹೈಬ್ರಿಡ್ ಗ್ಯಾಡ್ಜೆಟ್‌ಗಳನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇವೆ. ನೋಡಿ ಹಿಂಗೂ ಇರುತ್ತಾ ಎಂದು ಹೇಳಿ ಅಷ್ಟೇ..
ಜೈಕ್: ಸ್ಕೂಟರ್ + ಬೈಸಿಕಲ್ + ಸ್ಟೇರ್-ಸ್ಟೇಪ್ಪರ್
ನಿಮಗೆ ಸ್ಕೂಟರ್ ಚಾಲನೆ ಮಾಡಬೇಕು ಎನ್ನುವ ಆಸೆ ಇದೆಯೇ. ಸೈಕಲ್ ರೈಡ್ ಮಾಡಬೇಕೆಂಬ ಆಸೆ ಮತ್ತು ಮೆಟ್ಟಿಲುಗಳನ್ನು ಹತ್ತಲು ಬಳಸುವ ಸ್ಟೇರ್ ಸ್ಟೇಪ್ಪರ್‌ನಲ್ಲಿ ಹೋಗಬೇಕು ಎನ್ನುವ ಆಸೆ ಇದೆಯೇ.. ಆಗಿದ್ರೆ ಜೈಕ್ ಎಂಬ ಹೈಬ್ರಿಡ್ ಗ್ಯಾಡ್ಜೆಟ್ ಪ್ರಯತ್ನಿಸಿ. ಜೈಕ್ ಮೂರು ವಾಹನಗಳ ಸಮ್ಮಿಲನವಾಗಿದ್ದು, ನಿಮಗೆ ಮೂರು ವಾಹನಗಳ ಅನುಭವವನ್ನು ನೀಡುತ್ತದೆ.
ಹ್ಯಾಮ್ಮಚರ್ ಸ್ಕ್ಲೇಮರ್ಸ್ ಟೋಸ್ಟರ್: ರೇಡಿಯೋ + ರೋಸ್ಟರ್
ರೇಡಿಯೋದಲ್ಲಿ ಎಲ್ಲಾದರೂ ಟೋಸ್ಟರ್ ಇರುತ್ತಾ..? ಅಥವಾ ಟೋಸ್ಟರ್‌ನಲ್ಲಿ ರೇಡಿಯೋ ಇರೋಕೆ ಸಾಧ್ಯನಾ..? ಆದರೆ ಇಲ್ಲಿ ಇದು ಸಾಧ್ಯವಾಗಿದೆ. ಹ್ಯಾಮ್ಮಚರ್ ಸ್ಕ್ಲೇಮರ್ಸ್ ಟೋಸ್ಟರ್ ಎನ್ನುವ ಹೈಬ್ರಿಡ್ ಗ್ಯಾಡ್ಜೆಟ್ ಇಂತಹ ಅಪರೂಪದ ಸಾಧನೆಗೆ ಸಾಕ್ಷಿಯಾಗಿರುವುದಕ್ಕೆ ನೀವು ಅಬ್ಬಾ ಎನ್ನುವುದು ಖಂಡಿತ. ಇದು ಸ್ಥಳವನ್ನು ಉಳಿಸುವುದಲ್ಲದೇ, ನಿಮಗೆ ಯಾವುದೇ ಅಡತಡೆಗಳಿಲ್ಲದೆ AM ಮತ್ತು FM ರೇಡಿಯೋವನ್ನು ಕೇಳಬಹುದಾಗಿದೆ.
ದಿ ಸ್ಪೇಸ್ ಸೇವರ್: ವಾಷಿಂಗ್ ಮಷಿನ್ + ಸಿಂಕ್
ಎಷ್ಟೋ ಮನೆಗಳಲ್ಲಿ ಸ್ಥಳದ ಸಮಸ್ಯೆಯಿರುತ್ತೆ. ಅದಕ್ಕಂತಲೇ ಅನೇಕ ಅನ್ವೇಷಣೆಗಳು ಆಗಿವೆ. ಅದರಂತೆ ವಾಷಿಂಗ್ ಮಷಿನ್‌ನಲ್ಲಿ ಸಿಂಕ್ ಕೂಡಿಸಿ ದಿ ಸ್ಪೇಸ್ ಸೇವರ್ ಎನ್ನುವ ಗ್ಯಾಡ್ಜೆಟ್ ಮಾಡಲಾಗಿದೆ.
ಯುರೋಕಾಪ್ಟರ್: ಏರೋಪ್ಲೇನ್ + ಹೆಲಿಕಾಪ್ಟರ್
ಏರೋಪ್ಲೇನ್ ಮತ್ತು ಹೆಲಿಕಾಪ್ಟರ್ ಎರಡು ಒಂದೇ ವಿಧಾನವನ್ನು ಬಳಸಿದರು ಎರಡು ವಿಭಿನ್ನ ವೈಮಾನಿಕ ವಾಹನಗಳು ಆಗಿವೆ. ಆದರೆ, ಇಲ್ಲಿ ಇವೆರಡನ್ನೂ ಕೂಡಿಸಿ ಯುರೋಕಾಪ್ಟರ್ ಎಂಬ ಹೊಸ ಹೈಬ್ರಿಡ್ ವಾಹನ ರಚಿಸಿರುವುದಕ್ಕೆ ನಾವು ಭೇಷ್ ಎನ್ನಲೇಬೇಕು ಅಲ್ವಾ..! ಈ ಯುರೋಕಾಪ್ಟರ್‌ನ್ನು 430 km/h ವೇಗದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಲಾಗಿದ್ದು ಯಶಸ್ಬಿಯಾಗಿದೆ.
ಐಲಾಂಜ್: ಟಾಯ್ಲೆಟ್ ಪೇಪರ್ ಡಿಸ್ಪೇನ್ಸರ್ + ಐಪಾಡ್ ಡಾಕ್
ಈ ಐಲಾಂಜ್ ನೋಡಿದರೆ ನಿಮಗೆ ಖಂಡಿತ ಅಚ್ಚರಿ ಉಂಟಾಗುತ್ತದೆ. ಒಂದು ಕಡೆ ಟಾಯ್ಲೆಟ್ ಪೇಪರ್ ಡಿಸ್ಪೇನ್ಸರ್ ಇದ್ದರೆ ಮತ್ತೊಂದು ಕಡೆ ಐಪಾಡ್ ಡಾಕ್ ಇದೆ. ಅದಲ್ಲದೇ ಇದರಲ್ಲಿ ಯುಎಸ್‌ಬಿ ಸ್ಲಾಟ್ ಇದ್ದು, ನ್ಯಾವಿಗೇಟ್ ಬಟನ್‌ಗಳನ್ನು ಹೊಂದಿದ್ದು ಐಪಾಡ್ ಇಟ್ಟು ಸರಳವಾಗಿ ಬಳಸುವ ಆಯ್ಕೆಯನ್ನು ಈ ಹೈಬ್ರಿಡ್ ಗ್ಯಾಡ್ಜೆಟ್ ಹೊಂದಿದೆ.
ಎಂಕಾರ್: ಕಾರ್ + ಸ್ಕೂಟರ್
ಶಾಂಗೈ ಮೋಟಾರ್ ಶೋನಲ್ಲಿ ಎಂಕಾರ್‌ನ್ನು ಪ್ರದರ್ಶಿಸಲಾಯಿತು. ಇದರಲ್ಲಿ ಕಾರ್ ಮತ್ತು ಸ್ಕೂಟರ್ ಸಮ್ಮಿಲನಗೊಂಡಿದ್ದು, ಪಾರ್ಕಿಂಗ್‌ಗೆ, ನಗರಗಳಲ್ಲಿ ಉತ್ತಮವಾಗಿ ಸಂಚರಿಸಲು ಅನುಕೂಲವಾಗುತ್ತದೆ. ಆದರೂ ಹಿಂಗೆಲ್ಲಾ ಸಮ್ಮಿಲನ ಮಾಡಬಹುದಾ ಹೇಳಿ..!
VN-CX1A: ಮೌಸ್ + ವಾಯ್ಪ್ ಫೋನ್
ಮೌಸ್ ಜತೆ ಫೋನ್ ಬೇಕಿತ್ತಾ. ಬೇಡ ತಾನೇ ಆದರೆ ನಮ್ಮ ಸಂಶೋಧಕರು ಮೌಸ್ ಜತೆ ಫೋನ್ ಸಹ ಸೇರಿಸಿ ವಿಎನ್-ಸಿಎಕ್ಸ್1ಎ ಎಂಬ ಹೊಸ ಹೈಬ್ರಿಡ್ ಗ್ಯಾಡ್ಜೆಟ್ ಕಂಡುಹಿಡಿದಿರುವುದು ಎಂತವರನ್ನೂ ಹುಬ್ಬೆರಿಸುತ್ತದೆ. ನಿಮಗೆ ಇದು ಸ್ಕೈಪ್ ಬಳಸುವಾಗ ಬಹಳಷ್ಟು ಉಪಯೋಗಕ್ಕೆ ಬರುತ್ತದೆ. ನೀವು ಸ್ಕೈಪ್‌ನಲ್ಲಿ ಒಂದು ಕಡೆ ಮಾತನಾಡುತ್ತಾ, ಮತ್ತೊಂದು ಕಡೆ ಮೌಸ್ ಆಪರೇಟ್ ಮಾಡುವ ಆಯ್ಕೆಯನ್ನು ಈ ಹೈಬ್ರಿಡ್ ಗ್ಯಾಡ್ಜೆಟ್ ಹೊಂದಿದೆ.
ಎಕ್ಸ್ ಮಾರ್ಕ್ ಐ: ಮೌಸ್ + ಕ್ಯಾಲ್ಕ್ಯೂಲೇಟರ್
ಮೌಸ್‌ನಲ್ಲಿ ಕ್ಯಾಲ್ಕ್ಯೂಲೇಟರ್ ನಿಮ್ಮ ತಲೆಗೆ ಬಂದಿರಬಹುದು ಕಂಪ್ಯೂಟರ್‌ನಲ್ಲಿಯೇ ಕ್ಯಾಲ್ಕ್ಯೂಲೇಟರ್ ಇದೆಯಲ್ಲಾ ಮತ್ಯಾಕೆ ಮೌಸ್‌ನಲ್ಲಿ ಬೇಕಿತ್ತು ಎಂದು. ಇದು ಬ್ಲೂಟೂತ್ 2.0 ಸಂಪರ್ಕ ಹೊಂದಿದ್ದು, 1200 ಡಿಪಿಐ ಹೊಂದಿದೆ. 3 ಕ್ಲಿಕ್ ಮಾಡಬಹುದಾದ ಬಟನ್‌ಗಳು ಹಾಗೂ ಸ್ಕ್ರಾಲಿಂಗ್ ರೂಲ್ ಹೊಂದಿದೆ.
ಫೋಸ್ಸಿಲ್ FX2008: ಪಾಮ್ + ಕೈ ಗಡಿಯಾರ
ಇದು ಫೋಸ್ಸಿಲ್ ಎಫ್‌ಎಕ್ಸ್2008 ಕೈ ಗಡಿಯಾರದಲ್ಲಿಯೇ ಪಿಡಿಎ ಹೊಂದಿದ್ದು, ಪಾಮ್ ಒಎಸ್‌ನಿಂದ ಕಾರ್ಯನಿರ್ವಹಿಸುತ್ತಿತ್ತು. ವಿಶಿಷ್ಟವಾದ ಸ್ಟೈಲ್ ಮ್ಯಾಟರ್ ಆಗಿರುವ ಈ ವಾಚ್‌ನಲ್ಲಿ ಪಾಮ್ ಒಎಸ್ ಬೇಕಿತ್ತಾ ಎನ್ನುವುದು ಕೆಲವರ ಪ್ರಶ್ನೆ.
ಎಸ್ಕೋಪೇಟಾರಿಯಾ: ಎಕೆ-47 + ಗೀಟಾರ್
ಕೋಲಂಬಿಯಾದ ಸೇಸರ್ ಲೋಪೆಜ್ ಎನ್ನುವಾತ ಸೈನ್ಯದ ಉಪಕರಣಗಳನ್ನು ತೆಗೆದುಕೊಂಡು ಗೀಟಾರ್ ಮಾಡಿದ್ದು, ನಿಮಗೆ ಬೇಕಾದಂಗೆ ಉಪಯೋಗಿಸಬಹುದು ಶತ್ರುಗಳಿಗೆ ಗುಂಡಿನ ಉತ್ತರ, ಮಿತ್ರರಿಗೆ ಸಂಗೀತದ ಆಲಾಪ ಎಂತಾ ಐಡಿಯಾ ಅಲ್ವಾ..