ಚಿತ್ರಗಳಲ್ಲಿ ಬಿಂಬಿತವಾಗಿರುವ ವಿಜ್ಞಾನದ ಅಪ್ರತಿಮ ಲೋಕ

Written By:

ವಿಶ್ವವು ತನ್ನಲ್ಲಿ ಬಣ್ಣಿಸಲಾಗದೇ ಇರುವ ಅಭೂತಪೂರ್ವ ಅಂಶಗಳನ್ನು ಹುದುಗಿಸಿಟ್ಟುಕೊಂಡಿದೆ. ಈ ರಹಸ್ಯಗಳು ಕಾಲ ಕಳೆದಂತೆ ಹೊರಪ್ರಪಂಚಕ್ಕೆ ಬಂದು ನಮ್ಮನ್ನು ವಿಸ್ಮಯಲೋಕಕ್ಕೆ ತಳ್ಳುತ್ತದೆ. ಬೇರೆ ಬೇರೆ ಪರಿಕರಗಳನ್ನು ಬಳಸಿ ತೆಗೆದಿರುವಂತಹ ಈ ರಹಸ್ಯಮಯ ಫೋಟೋಗಳನ್ನು ಇಂದಿನ ಲೇಖನದಲ್ಲಿ ನಾವು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.

ನಮ್ಮ ಊಹೆಗೂ ನಿಲುಕದ ಬಹಳಷ್ಟು ಸಂಗತಿಗಳು ಈ ಬ್ರಹ್ಮಾಂಡದಲ್ಲಿದ್ದು ಹೊಸ ಹೊಸ ಅನ್ವೇಷಣೆಗಳು ಇವುಗಳನ್ನು ಹೊರಕ್ಕೆ ತಂದಾಗ ಇವುಗಳಲ್ಲಿರುವ ಮಹತ್ವತೆಯ ಅರಿವು ನಮಗುಂಟಾಗುತ್ತದೆ. ಹಾಗಿದ್ದರೆ ಅದನ್ನು ತಿಳಿದುಕೊಳ್ಳುವ ಬಯಕೆ ನಿಮ್ಮದಾಗಿದ್ದಲ್ಲಿ ಕೆಳಗಿನ ಸ್ಲೈಡರ್ ಇದಕ್ಕೆ ನೆರವು ನೀಡಲಿದೆ. ಬನ್ನಿ ಅದೇನು ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಬ್ಬಲ್ಸ್ ಹೆಚ್ಚುವರಿ ಡೀಪ್ ಫೀಲ್ಡ್

ಹಬ್ಬಲ್ಸ್ ಹೆಚ್ಚುವರಿ ಡೀಪ್ ಫೀಲ್ಡ್

#1

ಹಬ್ಬಲ್ ಎಕ್ಸ್ಟ್ರೀಮ್ ಡೀಪ್ ಫೀಲ್ಡ್ ಇದು ಹೆಚ್ಚು ಆಳವಾದ ಬಾಹ್ಯಾಕಾಶ ವೀಕ್ಷಣೆ ಎಂದೆನಿಸಿದ್ದು ಇದನ್ನು ಸರೆಹಿಡಿಯುವುದು ಒಂದು ಟ್ರಿಕ್ ಆಗಿದೆ. ಈ ಚಿತ್ರವು ಆಕಾಶದ ಸಣ್ಣ ಪ್ಯಾಚ್ ಅನ್ನು ಸರೆಹಿಡಿದಿದ್ದು, ನಿಮ್ಮ ಹೆಬ್ಬರಳಿನ ತುದಿಗಿಂತ ಇದು ತುಂಬಾ ಸಣ್ಣದಾಗಿದೆ. ಇದು ಕನಿಷ್ಟ ಪಕ್ಷ 5,000 ವಿವಿಧ ಗ್ಯಾಲಕ್ಸಿಗಳನ್ನು ಒಳಗೊಂಡಿದೆ.

ಪೇಲ್ ಬ್ಲ್ಯೂ ಡಾಟ್

ಪೇಲ್ ಬ್ಲ್ಯೂ ಡಾಟ್

#2

ಮೂಲ ಪೇಲ್ ಬ್ಲ್ಯೂ ಡಾಟ್ ಭೂಮಿಯ ಚಿತ್ರವಾಗಿದ್ದು ಇದನ್ನು ವ್ಯೊಗೇರ್ 1 ಸ್ಪೇಸ್ ಪ್ರೊಬ್ 1990 ರಲ್ಲಿ 6 ಬಿಲಿಯನ್ ಅಂತರದಲ್ಲಿ ಸೆರೆಹಿಡಿದಿದ್ದಾರೆ. ಇದರಲ್ಲಿ ಭೂಮಿಯು ಒಂದು ಸಣ್ಣ ಚುಕ್ಕೆಯಂತೆ ಕಾಣುತ್ತಿದ್ದು, ಪಿಕ್ಸೆಲ್‌ ವೈಡ್‌ಗಿಂತ ಸಣ್ಣದಾಗಿದೆ. ಕಾರ್ಲ್ ಸಾಗನ್ ಎಂಬ ಖಗೋಳ ಶಾಸ್ತ್ರಜ್ಞ ಈ ಚಿತ್ರವನ್ನು ಸೆರೆಹಿಡಿದಿದ್ದಾರೆ.

ವಿಂಡೊ ಎಟ್ ಲಿ ಗ್ರಾಸ್ ವೀಕ್ಷಣೆ

ವಿಂಡೊ ಎಟ್ ಲಿ ಗ್ರಾಸ್ ವೀಕ್ಷಣೆ

#3

ಇದು ಪ್ರಥಮ ಫೋಟೋಗ್ರಫಿ ಎಂದೆನಿಸಿದ್ದು ಇಲ್ಲಿ ನಿಮಗೆ ಕಟ್ಟಡ, ಟವರ್ ಮತ್ತು ಕಿಟಕಿಗಳು ಹಾಗೂ ಹಿನ್ನಲೆಯಲ್ಲಿ ಮರ ಕಂಡುಬರುತ್ತಿದೆ. ಈ ಚಿತ್ರವನ್ನು ಜೋಸೆಫ್ ನಿಕೋಫರ್ ನಿಪೀಸ್ 1826 ರಲ್ಲಿ ತೆಗೆದಿದ್ದು, ತನ್ನ ಮನೆಯ ಕಿಟಕಿಯಿಂದ ಈ ಚತ್ರವನ್ನು ಕ್ಯಾಪ್ಚರ್ ಮಾಡಿದ್ದಾನೆ.

ಸ್ಪೇಸ್ ವಾಕ್

ಸ್ಪೇಸ್ ವಾಕ್

#4

1984 ರಲ್ಲಿ ತೆಗೆದ ಫೋಟೋ ಇದಾಗಿದ್ದು, ಖಗೋಳ ಶಾಸ್ತ್ರಜ್ಞ ಬ್ರುಸ್ ಮೆಕಾಂಡಲ್ಸ್ ಕಾರ್ಗೊ ಬೇಯಿಂದ 100 ಮೀಟರ್‌ಗಳ ಅಂತರದಲ್ಲಿ ಇದ್ದ ಫೋಟೋ ಇದಾಗಿದೆ. ಹಿನ್ನಲೆಯಲ್ಲಿ ಕಪ್ಪು ಬಣ್ಣ ಮತ್ತು ಕೆಳಭಾಗದಲ್ಲಿ ನೀಲಿ ಬಣ್ಣವು ಚಿತ್ರದಲ್ಲಿದ್ದು ಇಲ್ಲಿರುವ ಖಗೋಳ ಶಾಸ್ತ್ರಜ್ಞ ಅತಿ ಸಣ್ಣದಾಗಿ ಕಂಡುಬಂದಿದ್ದಾನೆ.

ರೋಬರ್ಟ್ ಹೂಕರ್ಸ್ ಫ್ಲಿಯಾ ಡ್ರಾಯಿಂಗ್

ರೋಬರ್ಟ್ ಹೂಕರ್ಸ್ ಫ್ಲಿಯಾ ಡ್ರಾಯಿಂಗ್

#5

ಈ ಸಣ್ಣ ಚಿಗಟೆಯ ಚಿತ್ರ ಎಲ್ಲರ ಚಿತ್ತವನ್ನೂ ಒಮ್ಮೆ ಕಲಕಲಿರುವುದಂತೂ ಸತ್ಯ. ಫೋಟೋಗ್ರಫಿಯ ಅನ್ವೇಷಣೆ ಸಮಯದಲ್ಲಿ, ಮೈಕ್ರೋಸ್ಕೋಪ್‌ಗಳನ್ನು ಬಳಸುತ್ತಿದ್ದ ಕಾಲದಲ್ಲಿ ಈ ಚಿತ್ರವನ್ನು ಬಿಡಿಸಲಾಗಿದೆ. ರಾಬರ್ಟ್ ಹುಕ್ಸ್ ಪುಸ್ತಕವಾದ ಮೈಕ್ರೊಗ್ರಾಫಿಯಾ ಈ ಮರೆಯಾದ ರಹಸ್ಯವನ್ನು ಬಯಲು ಮಾಡಿದ್ದಾರೆ.

ಫೋಟೋ 51

ಫೋಟೋ 51

#6

ಫೋಟೋಗ್ರಾಫ್ 51 ಎಂಬುದು ಎಕ್ಸರೇ ಡಿಫ್ರಾಕ್ಶನ್ ಚಿತ್ರ ಎಂದೆನಿಸಿದ್ದು ಡಿಎನ್‌ಎ ಯನ್ನು ಪ್ರತಿನಿಧಿಸುತ್ತದೆ. ಪಿಎಚ್‌ಡಿ ವಿದ್ಯಾರ್ಥಿ ರೇಮಂಡ್ ಗೋಸ್ಲಿಂಗ್ 1952 ರಲ್ಲಿ ಇದನ್ನು ಸೆರೆಹಿಡಿದಿದ್ದಾನೆ. ಈ ಚಿತ್ರ ಹೆಚ್ಚು ವಿವಾದಾತ್ಮಕವಾಗಿದ್ದು, ಇದು ಕದ್ದ ಚಿತ್ರ ಎಂಬುದಾಗಿ ಟೀಕೆಗೂ ಒಳಗಾಗಿತ್ತು.

ಪಯೋನಿಯರ್ ಪ್ಲೇಕ್

ಪಯೋನಿಯರ್ ಪ್ಲೇಕ್

#7

ಏಲಿಯನ್‌ಗಳನ್ನು ಅರಿತುಕೊಳ್ಳಲು ಇದನ್ನು ಸಿದ್ಧಪಡಿಸಲಾಯಿತು. ಇದರಲ್ಲಿರುವ ಮಾನವ ಚಿತ್ರಗಳು ನಮ್ಮ ಗಾತ್ರವನ್ನು ತೋರಿಸುತ್ತಿದೆ. ನಕ್ಷೆಯ ಎಡಭಾಗದಲ್ಲಿರುವ ಸ್ಲೈಟರ್ ರೀತಿಯ ಡಯಾಗ್ರಾಮ್ ನಮ್ಮ ಸೌರ ವ್ಯವಸ್ಥೆಯ ಸ್ಥಿತಿಯನ್ನು ತೋರಿಸುತ್ತಿದ್ದು, ಗ್ಯಾಲಕ್ಸಿಯ ಕೇಂದ್ರಕ್ಕೆ ಸಂಬಂಧಿತವಾಗಿದೆ

ಮಗು ಹುಟ್ಟಿರುವುದು

ಮಗು ಹುಟ್ಟಿರುವುದು

#8

1965 ರಲ್ಲಿ ಹುಟ್ಟದೇ ಇರುವ ಭ್ರೂಣದ ಚಿತ್ರವೊಂದು ಲೈಫ್ ಪತ್ರಿಕೆಯ ಮುಖ್ಯಪುಟದಲ್ಲಿ ಕಾಣಿಸಿಕೊಂಡಿದೆ. ಜನನದ ಸಂಪೂರ್ಣ ಚಿತ್ರವನ್ನು ಸ್ವೀಡಿಶ್ ಫೋಟೋಗ್ರಾಫರ್ ಲೆನ್ನಾರ್ಟ್ ನಿಲ್‌ಸನ್ ತೆಗೆದಿದ್ದಾರೆ

ಮಂಗಳನಲ್ಲಿ ಸೂರ್ಯಾಸ್ತಮಾನ

ಮಂಗಳನಲ್ಲಿ ಸೂರ್ಯಾಸ್ತಮಾನ

#9

2005 ರಲ್ಲಿ, ನಾಸಾದ ಮಾರ್ಸ್ ರೋವರ್ ಮಾನವ ಇತಿಹಾಸದಲ್ಲಿಯೇ ಸಂಪೂರ್ಣ ಭಿನ್ನವಾದ ಗ್ರಹವನ್ನೇ ಪ್ರಸ್ತುಪಡಿಸಿತು. ಮಂಗಳನ ವಾತಾವರಣದ ಸ್ಥಿತಿಗತಿಯನ್ನು ಅರ್ಥಮಾಡಿಕೊಳ್ಳಲು ಈ ಚಿತ್ರಗಳು ನಾಸಾ ವಿಜ್ಞಾನಿಗಳಿಗೆ ಸಹಾಯ ಮಾಡಿದೆ.

ಟ್ರಿನಿಟಿ ಸೈಟ್ ಎಕ್ಸ್‌ಪ್ಲೊಸಿಶನ್

ಟ್ರಿನಿಟಿ ಸೈಟ್ ಎಕ್ಸ್‌ಪ್ಲೊಸಿಶನ್

#10

ಇದೊಂದು ನ್ಯೂಕ್ಲಿಯರ್ ಎಕ್ಸ್‌ಪ್ಲೊಸಿಶನ್ ಆಗಿದೆ. ಜುಲೈ 16, 1945 ರಂದು ಸೋಮವಾರ 5:30 ಮುಂಜಾನೆ ನ್ಯೂಕ್ಲಿಯರ್ ಯುಗದ ಆರಂಭದ ನಂತರ ಈ ಚಿತ್ರವನ್ನು ಸೆರೆಹಿಡಿಯಲಾಯಿತು. ಅಣಬೆ ಮಾದರಿಯ ಮೋಡ ರಚನೆಯೇ ನ್ಯೂಕ್ಲಿಯರ್ ಎಕ್ಸ್‌ಪ್ಲೋಶನ್‌ನ ವಿವರಣೆಯನ್ನು ನಮಗೆ ನೀಡುತ್ತದೆ.

ಭೂಮಿಯ ಹುಟ್ಟು

ಭೂಮಿಯ ಹುಟ್ಟು

#11

ಚಂದ್ರನಲ್ಲಿಗೆ ಕಾಲಿಟ್ಟ ಪ್ರಥಮ ಮಾನವ ಆಪೊಲೊ 8, ಲೂನರ್ ಆರ್ಬಿಟ್ ಅನ್ನು ಕ್ರಿಸ್‌ಮಸ್ ಸಂಜೆ 1968 ರಂದು ಪ್ರವೇಶಿಸಿದರು. ಭೂಮಿಗೆ ಕಳುಹಿಸಿದ ಚಿತ್ರಗಳಲ್ಲಿ ಇದೂ ಒಂದಾಗಿದೆ.

ವೇಕೆಂಟಿ ಮೌಸ್

ವೇಕೆಂಟಿ ಮೌಸ್

#12

ಚಿತ್ರದಲ್ಲಿರುವ ಕಿವಿಯನ್ನು ವಾಸ್ತವವಾಗಿ ತಳೀಯವಾಗಿ ಬದಲಿಸಲಾಗಿತ್ತು. ಮಾನವನ ಕಿವಿಯಂತಿರುವ ಇದನ್ನು ತ್ವಚೆಗೆ ಅಂಟಿಸಲಾಗಿದೆ. ಅಂಗಗಳನ್ನು ಕಳೆದುಕೊಂಡಿರುವ ಜನರಿಗೆ ದೇಹದ ಭಾಗಗಳನ್ನು ಅಳವಡಿಸಲು ಈ ಮಾದರಿಯ ಅನ್ವೇಷಣೆಗಳನ್ನು ನಡೆಸಲಾಯಿತು.

ಚಂದ್ರನ ಪಾದದ ಅಚ್ಚು

ಚಂದ್ರನ ಪಾದದ ಅಚ್ಚು

#13

ಚಂದ್ರನ ಅಂಗಳದಲ್ಲಿ ಕಂಡುಬಂದ ಈ ಪಾದದ ಅಚ್ಚು ನಿಖರವಾಗಿ ತೋರುತ್ತಿದ್ದು ಮಣ್ಣಿನಲ್ಲಿ ಆಳವಾಗಿ ಬಿಂಬಿತವಾಗಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If a picture is usually worth a thousand words, then these iconic images could fill a book..
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot