1999ರಲ್ಲಿ ಬಿಲ್‌ಗೆಟ್ಸ್ ಹೇಳಿದ್ದ ಈ ಎಲ್ಲಾ ಭವಿಷ್ಯವಾಣಿ ಇಂದು ನಿಜವಾಗಿವೆ!! ಏನವು ಗೊತ್ತಾ?

  ಜ್ಯೋತಿಷಿಗಳು ಹೇಳಿದ ಮಾತು ಸುಳ್ಳಾಗಬಹುದು ಆದರೆ, ವಿಜ್ಞಾನಿಗಳು ಹೇಳಿದ ಮಾತು ಎಂದೂ ಸುಳ್ಳಾಗುವುದಿಲ್ಲ ಎನ್ನುವ ಮಾತಿದೆ. ಆದರೆ, ಇತ್ತ ಜ್ಯೋತಿಷಿಯೂ ಅಲ್ಲದ, ಅತ್ತ ವಿಜ್ಞಾನಿಯೂ ಅಲ್ಲದ ತಂತ್ರಜ್ಞಾನ ದಿಗ್ಗಜನೋರ್ವನ ಭವಿಷ್ಯದ ವಾಣಿ ಕೇವಲ 18 ವರ್ಷಗಳಲ್ಲಿ ನಿಜವಾಗಿವೆ ಎಂದರೆ ನೀವು ನಂಬಲೇಬೇಕು.

  ಹೌದು, ನಾವು ಹೇಳುತ್ತಿರುವುದು ಮಹಾನ್ ತಂತ್ರಜ್ಞಾನಿ ಬಿಲ್‌ಗೆಟ್ಸ್ ಬಗ್ಗೆ. ಪ್ರಸ್ತುತ ಪ್ರಪಂಚದ ನಂಬರ್ ಒನ್ ಶ್ರೀಮಂತನಾಗಿ ಬದುಕುತ್ತಿರುವ, ತಂತ್ರಜ್ಞಾನ ಪ್ರಪಂಚದ ದಿಗ್ಗಜನಾಗಿ ಮೆರೆಯುತ್ತಿರುವ ಬಿಲ್‌ಗೆಟ್ಸ್ 1999ರಲ್ಲಿಯೇ ಹೇಳಿದ್ದ ಭವಿಷ್ಯವಾಣಿಗಳು ಇಂದು ಅಕ್ಷರಶಹ ನಿಜವಾಗಿವೆ.

  'ಬ್ಯುಸಿನೆಸ್ ಎಟ್ ದಿ ಸ್ಪೀಡ್ ಆಫ್ ಥಾಟ್" ಎಂಬ ಪುಸ್ತಕದಲ್ಲಿ ಭವಿಷ್ಯ ದಿನಗಳಲ್ಲಿ ಬದಲಾಗುವ ತಂತ್ರಜ್ಞಾನದ ಬಗ್ಗೆ ಹಾಗೂ ಹುಟ್ಟಿಕೊಳ್ಳುವ ವಿಸ್ಮಯಗಳ ಬಗ್ಗೆ ಬಿಲ್‌ಗೆಟ್ಸ್ ಬರೆದಿದ್ದು, ಅದರಲ್ಲಿ ಬಹುತೇಕ ಅಂಶಗಳು ನಿಜವಾಗಿವೇ. ಹಾಗಾದರೆ, ಬಿಲ್‌ಗೆಟ್ಸ್ ನುಡಿದಿದ್ದ ಭವಿಷ್ಯ ಏನು? ಏನೆಲ್ಲಾ ನಿಜವಾಗಿವೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಆನ್‌ಲೈನ್‌ನಲ್ಲಿ ಬೆಲೆ ಹೋಲಿಕೆ

  ಆನ್‌ಲೈನ್ ಮುಖಾಂತರ ವಸ್ತುಗಳ ಬೆಲೆ ನೋಡಿ ಖರೀದಿಸುವ ವ್ಯವಸ್ತೆ ಬರಲಿದೆ ಎಂದು ಬಿಲ್‌ಗೆಟ್ಸ್ ಭವಿಷ್ಯ ನುಡಿದಿದ್ದರು. ಪ್ರಸ್ತುತದ ಭಾರಿ ಟ್ರೆಂಡಿಂಗ್ ಇದು.!! ಉದಾ: ಅಮೆಜಾನ್, ಫ್ಲಿಪ್‌ಕಾರ್ಟ್ ಮುಂತಾದವು.

  ಸ್ಮಾರ್ಟ್‌ ಸಾಧನಗಳು

  ತಾವಿದ್ದಲ್ಲಿಯೇ ಸುದ್ದಿ ಓದಲು, ವಿಮಾನ ಟಿಕೆಟ್ ಬುಕ್ ಮಾಡಲು, ಶೇರ್ ಮಾರ್ಕೆಟ್ ಮಾಹಿತಿ ಕಲೆಯಾಕಲು ಮತ್ತು ಇತರರ ಜೊತೆ ನಿರಂತರ ಸಪಂರ್ಕ ಸಾಧಿಸಲು ಸ್ಮಾರ್ಟ್‌ಸಾಧನಗಳನ್ನು ಬಳಸುತ್ತಾರೆ ಎಂದಿದ್ದರು.ಇದಕ್ಕೆ ನಿಮ್ಮ ಸ್ಮಾರ್ಟ್‌ಫೋನ್ ಉದಾಹರಣೆ.

  ಆನ್‌ಲೈನ್ ಪೇಮೆಂಟ್..ಮತ್ತೆ ಹಣ ಹೂಡಿಕೆ

  ಭವಿಷ್ಯದಲ್ಲಿ ಹಣ ವರ್ಗಾವಣೆಗಳು ಆನ್‌ಲೈನ್ ಮೂಲಕವೇ ನಡೆಯುತ್ತವೆ. ಒಂದು ಕ್ಲಿಕ್‌ನಲ್ಲಿ ಹಣವರ್ಗಾವಣೆಯಂತಹ ಕಾರ್ಯ ಆಗುತ್ತದೆ ಎಂದು ಹೇಳಿದ್ದರು. ಆಗಿದೆ ಅಲ್ಲವೇ? ಜೊತೆಗೆ ಜನರು ಹಣ ಹೂಡಿಕೆಯನ್ನು ಆನ್‌ಲೈನ್‌ ಮೂಖಾಂತರವೇ ಜನರು ಮಾಡುತ್ತಾರೆ ಎಂದು ಹೇಳಿದ್ದಾರೆ.

  ಆನ್‌ಲೈನ್ ಹೋಮ್ ಮಾನಿಟರಿಂಗ್ ( ಮೇಲ್ವಿಚಾರಣೆ).

  ಮನೆ ಅಥವಾ ಆಫೀಸ್ ಯಾವುದೇ ಇರಲಿ ತಂತ್ರಜ್ಞಾನ ಸಹಾಯದಿಂದ ಎಲ್ಲವನ್ನು ಮಾನಿಟರಿಂಗ್ ಮಾಡಬಹುದು ಎಂದು ಬಿಲ್‌ಗೆಟ್ಸ್ ಹೇಳಿದ್ದರು. ಅಂತೆಯೇ ಇಂದು ತಂತ್ರಜ್ಞಾನ ಸಹಾಯದಿಂದ ಹೋಮ್ ಮಾನಿಟರಿಂಗ್ ಮಾಡುವುದನ್ನು ನೋಡಬಹುದು.

  Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
  ಪ್ರಮೋಷನಲ್ ಜಾತತಾಣಗಳು

  ಪ್ರಮೋಷನಲ್ ಜಾತತಾಣಗಳು

  ನಿಮ್ಮ ಅಭಿರುಚಿಗೆ ತಕ್ಕಂತೆ ನಿಮ್ಮ ಮನಸ್ಸನ್ನು ಅರಿತು ನಿಮಗೆ ಬೇಕಾದ ವಸ್ತುಗಳಿಗೆ ಡಿಸ್ಕೌಂಟ್ ನೀಡುವ, ನಿಮ್ಮನ್ನು ಪ್ರೇರೇಪಿಸುವ ಸಾಫ್ಟ್‌ವೇರ್‌ಗಳು ಹುಟ್ಟುತ್ತವೆ ಎಂದು ಬಿಲ್‌ಗೆಟ್ಸ್ ಹೇಳಿದ್ದರು. ಅಂತೆಯೇ, ಫೇಸ್‌ಬುಕ್, ಗೂಗಲ್ ಎಲ್ಲವೂ ಪ್ರಮೋಷನಲ್ ಆಕ್ಟಿವಿಟಿಯನ್ನು ಮಾಡುತ್ತವೆ.

  ಆನ್‌ಲೈನ್ ಸಂವಾದ.

  ಭವಿಷ್ಯದಲ್ಲಿ ಜನರು ಆನ್‌ಲೈನ್ ಪ್ಲಾಟ್‌ಫಾರ್ಮ್ಗಳಲ್ಲಿಯೇ ಸಂವಾದ ನಡೆಸುವ ಪರಿಪಾಟ ಬೆಳೆಯುತ್ತದೆ ಎಂದು ಬಿಲ್‌ಗೆಟ್ಸ್ ಹೇಳಿದ್ದರು. ಅದರಂತೆ ಫೇಸ್‌ಬುಕ್, ಸ್ಕೈಪ್‌ನಂತೆ ಬಹುತೇಕ ಎಲ್ಲಾ ಇಂಟರ್‌ನೆಟ್‌ ಜಾಲತಾಣಗಳಲ್ಲಿಯೂ ಆನ್‌ಲೈನ್ ಸಂವಾದ ನಡೆಸುವುದನ್ನು ನಾವು ನೋಡಬಹುದು.

  ವಿಷಯಾಧಾರಿತ ವೆಬ್‌ಸೈಟ್‌ಗಳು

  ಒಂದೊಂದು ವಿಷಯಕ್ಕೂ ಸಂಭಂದಿಸಿದಂತೆ ಆನ್‌ಲೈನ್ ಮೂಲಕ ವಿಷಯಾಧಾರಿತ ವೆಬ್‌ಸೈಟ್‌ಗಳು ಹುಟ್ಟಿಕೊಳ್ಳುತ್ತವೆ ಎಂದು ಬಿಲ್‌ಗೆಟ್ಸ್ ಹೇಳಿದ್ದರು. ಅದರಂತೆ ಪ್ರತಿಯೊಂದು ಪ್ರಾಡೆಕ್ಟ್‌ಗಳಿಗೂ ಒಂದೊಂದು ವೆಬ್‌ಸೈಟ್ ಆಯ್ಕೆಗಳನ್ನು ನಾವು ನೋಡಬಹುದು.

  ಆನ್‌ಲೈನ್ ನೇಮಕಾತಿ.

  ಭವಿಷಯದಲ್ಲಿ ಕೆಲಸಕ್ಕಾಗಿ ಹುಡುಕುತ್ತಿರುವರು ಮತ್ತು ಕೆಲಸಗಾರರ ಅವಶ್ಯಕತೆ ಇರುವವರು ಆನ್‌ಲೈನ್‌ ಮೂಲಕವೇ ಜೊತೆ ಸೇರುತ್ತಾರೆ ಎಂದು ಬಿಲ್‌ಗೆಟ್ಸ್ ಹೇಳಿದ್ದರು. ಅದರಂತೆಯೇ ಇಂದು ಕೆಲಸ ಹುಡುಕುವುದಕ್ಕೆಯೇ ನೂರಾರು ವೆಬ್‌ಸೈಟ್‌ಗಳು ಲಭ್ಯವಿದೆ.

  ಓದಿರಿ:ಜಿಯೋ ಎಫೆಕ್ಟ್..ಭಾರತದಲ್ಲಿ ಯಾವಾಗಲೂ ಆನ್‌ಲೈನ್‌ನಲ್ಲಿ ಇರೋರು ಎಷ್ಟು ಜನ?!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Bill Gates was predicting what the world would look like in the coming .to know morte visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more