Subscribe to Gizbot

ತಂತ್ರಜ್ಞಾನ ಕ್ಷೇತ್ರಕ್ಕೆ 2017 'ವಿಫಲತೆಯ ವರ್ಷ'!!..ಏಕೆ ಗೊತ್ತಾ?

Written By:

2017ರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಆವಿಷ್ಕಾರಗಳೇನೂ ನಡೆದಿಲ್ಲ ಎನ್ನಬಹುದು. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಮತ್ತು ತಜ್ಞರು ಊಹಿಸಿದಷ್ಟು ಬದಲಾಗದ 2017 ನೇ ವರ್ಷವನ್ನು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ 'ವಿಫಲತೆಯ ವರ್ಷ' ಎಂದೇ ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.!!

2017 ರಲ್ಲಿ ಮಾಹಿತಿ ಸಂರಕ್ಷಣೆಗೆ ಸಂಬಂಧಿಸಿದ ಹೊಸ ಆವಿಷ್ಕಾರಗಳು ಮಾತ್ರ ಸ್ವಲ್ಪಮಟ್ಟನ ಯಶಸ್ಸನ್ನು ಗಳಿಸಿದ್ದು, ಮಾಹಿತಿ ಸಂರಕ್ಷಣೆಗೆ ಸಂಬಂಧಿಸಿದಂತೆ ಸುಧಾರಿತ ಭದ್ರತಾ ತಂತ್ರಾಂಶಗಳು ಅಭಿವೃದ್ಧಿಗೊಡು ಆನ್‌ಲೈನ್‌ ಗ್ರಾಹಕರು ನಿಟ್ಟುಸಿರು ಬಿಟ್ಟದ್ದಾರೆ.! ಆದರೂ ಕೂಡ 2017 ಅನ್ನು 'ವಿಫಲತೆಯ ವರ್ಷ' ಎಂದು ಕರೆಯಲು ಕಾರಣಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿರೀಕ್ಷಿಸಿದಷ್ಟು ಸುದ್ದಿ ಮಾಡಲಿಲ್ಲ!!

ನಿರೀಕ್ಷಿಸಿದಷ್ಟು ಸುದ್ದಿ ಮಾಡಲಿಲ್ಲ!!

2017 ನೇ ವರ್ಷದಲ್ಲಿ ಸ್ಮಾರ್ಟ್‌ವಾಚ್, ಆಪಲ್‌ನ ಮುಖಚರ್ಯೆ ಗುರುತಿಸುವ ತಂತ್ರಜ್ಞಾನ, ಸ್ಮಾರ್ಟ್‌ಹೋಂ, ಜಪಾನಿನ ನಿಂಟೆಂಡೊ ಸ್ವಿಚ್‌ನಂತಹ ಹೈಬ್ರಿಡ್ ಗೇಮಿಂಗ್ ಸಾಧನ ಮಾರುಕಟ್ಟೆಗಳೆಲ್ಲವೂ ಮಾರುಕಟ್ಟೆಗೆ ಬಂದು ಹೆಸರಾದರೂ ಕೂಡ ಇವುಗಳು ಮಾರುಕಟ್ಟೆ ನಿರೀಕ್ಷಿಸಿದಷ್ಟು ಸುದ್ದಿ ಮಾಡಲಿಲ್ಲ. !!

Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!
ಗ್ಯಾಜೆಟ್‌ಗಳು ಫೇಲ್!!

ಗ್ಯಾಜೆಟ್‌ಗಳು ಫೇಲ್!!

2016 ನೇ ವರ್ಷಕ್ಕೆ ಹೋಲಿಸಿದರೆ ಟಿವಿ, ವಾಷಿಂಗ್ ಮಷಿನ್ ಸೇರಿ ಯಾವೊಂದು ಎಲೆಕ್ಟ್ರಾನಿಕ್ ಡಿವೈಸ್ ತಂತ್ರಜ್ಞಾನ ಕೂಡ ಸದ್ದು ಮಾಡಲಿಲ್ಲ. ಸ್ಯಾಮ್‌ಸಂಗ್, ಎಲ್‌ಜಿ ಕಂಪೆನಿಗಳು ಗೃಹ ಉತ್ಪನ್ನಗಳಲ್ಲಿ ಕೆಲವು ಅವಿಷ್ಕಾರಗಳನ್ನು ತಂದರೂ, ಇವು ಜನರಿಗೆ ಹತ್ತಿರವಾದ ತಂತ್ರಜ್ಞಾನಗಳಾಗಲಿಲ್ಲ ಎನ್ನುವುದು ವಿಶೇಷ.!!

ಸ್ನ್ಯಾಪ್‌ಚಾಟ್ ಕನ್ನಡಕ!!

ಸ್ನ್ಯಾಪ್‌ಚಾಟ್ ಕನ್ನಡಕ!!

ಕನ್ನಡಕದಲ್ಲಿಯೇ ವಿಡಿಯೋ ಮಾಡಬಹುದಾದ ಸ್ನ್ಯಾಪ್‌ಚಾಟ್ ಕನ್ನಡಕ ಮೊದಲು ಭಾರಿ ಹೆಸರು ಮಾಡಿತ್ತು. ಆದರೆ, ಕನ್ನಡಕದಲ್ಲಿ ಇದ್ದ ಕಡಿಮೆ ಫೀಚರ್ಸ್ ಹಾಗೂ ಹೆಚ್ಚು ಬೆಲೆಯ ಕಾರಣದಿಂದಾಗಿ ಸ್ನ್ಯಾಪ್‌ಚಾಟ್ ಕನ್ನಡಕವನ್ನು ಖರೀದಿಸುವವರ ಸಂಖ್ಯೆ ಪೂರ್ತಿ ಅದೋಗತಿಗಿಳಿಯಿತು.!!

ಆಪಲ್‌ನ ಸ್ಮಾರ್ಟ್‌ವಾಚ್

ಆಪಲ್‌ನ ಸ್ಮಾರ್ಟ್‌ವಾಚ್

ಬಿಡುಗಡೆಯಾದಾಗ ಸಂಚಲನ ಮೂಡಿಸಿದ ಆಪಲ್ ಸ್ಮಾರ್ಟ್‌ವಾಚ್ ನಂತರ ತನ್ನ ಹೆಸರನ್ನು ಉಳಿಸಿಕೊಳ್ಳಲು ವಿಫಲವಾಯಿತು. ಸ್ಮಾರ್ಟ್‌ವಾಚ್ ನಿರ್ವಹಣೆಗೆ ಐಫೋನ್ ಖರೀದಿಸುವುದು ಅನಿವಾರ್ಯವಾಗಿತ್ತು ಮತ್ತು ವಾಚ್‌ನ ಬ್ಯಾಟರಿ ಬಾಳಿಕೆ ಸಾಮರ್ಥ್ಯ ಕಡಿಮೆ ಇತ್ತು. ಹೀಗಾಗಿ ಈ ಉಪಕರಣ ಮಾರುಕಟ್ಟೆಯಲ್ಲಿ ನಿರೀಕ್ಷಿಸಿದಷ್ಟು ಬೆಳೆಯಲಿಲ್ಲ.!!

ಐಫೋನ್ 10!!

ಐಫೋನ್ 10!!

ಆಪಲ್ ಕಂಪೆನಿಯ 10 ನೇ ವರ್ಷದ ನೆನಪಿಗೆ ಮಾರುಕಟ್ಟೆಗೆ ಕಾಲಿಟ್ಟ ಆಪಲ್‌ ಕಂಪೆನಿ ಐಫೋನ್ 10 ಸ್ಮಾರ್ಟ್‌ಫೋನ್ ಕೂಡ ನಿರೀಕ್ಷಿತ ಸಾಧನೆ ಮಾಡಲಿಲ್ಲ.!! ಫೇಸ್‌ಲಾಕ್ ತಂತ್ರಜ್ಞಾನ ಐಫೋನ್ 10ಗೆ ಮೆರಗು ತಂದರೂ ಕೂಡ ಬೆಲೆ ಹೆಚ್ಚಿದ್ದರಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡಲಿಲ್ಲ.!!

ನಕಲಿ ಖಾತೆಗಳ ಸುದ್ದಿ.!!

ನಕಲಿ ಖಾತೆಗಳ ಸುದ್ದಿ.!!

ನಕಲಿ ಸಮಾಜಿಕ ಜಾಲತಾಣ ಖಾತೆದಾರರು ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು ಎಂದು ರಿಪೋರ್ಟ್ ಹೊರಬಿತ್ತು. ನಕಲಿ ಖಾತೆಗಳನ್ನು ಸ್ಥಗಿತಗೊಳಿಸಲು ಕ್ರಮ ವಹಿಸುವುದಾಗಿ ಫೇಸ್‌ಬುಕ್‌ ಹಾಗೂ ಟ್ವಿಟರ್‌ ಹೇಳಿಕೊಂಡರೂ ನಕಲಿ ಖಾತೆಗಳನ್ನು ಸ್ಥಗಿತಗೊಳಿಸಲು ಪರಿಣಾಮಕಾರಿ ತಂತ್ರಜ್ಞಾನ ಅಭಿವೃದ್ಧಿಯಾಗಿಲ್ಲ.!!

ಓದಿರಿ:ಅಪಾಯ ತಿಳಿದಿದ್ದರೂ ತಪ್ಪು ಮಾಡುತ್ತಿದ್ದಾರೆ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
technology this year was one big “fail” after another.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot