ಗೇಮ್‌ ಖರೀದಿರಿಸಲು ಇರುವ ಆನ್‌ಲೈನ್‌ ತಾಣಗಳು..!

By Tejaswini P G

  ನಮ್ಮ ಬಾಲ್ಯದ ದಿನಗಳಲ್ಲಿ ಗೇಮ್ಸ್ ಎಂದರೆ ಆನಂದ ನೀಡುವ ಅನಿಯಮಿತ ಘಂಟೆಗಳಾಗಿದ್ದವು. ಆದರೆ ನಾವು ಬೆಳೆದಂತೆ ಈ ಸಮಯ ಕಡಿಮೆಯಾಗುತ್ತಾ ಬಂದಿದೆ. ಗೇಮ್ಸ್ ಆಡಲು ಸಿಗುವ ಸಮಯ ಕಡಿಮೆಯಾಗಿದೆ ಎಂದ ಮಾತ್ರಕ್ಕೆ ನೀವು ನಿಮ್ಮ ನೆಚ್ಚಿನ ಆಟ ಆಡುವುದನ್ನು ನಿಲ್ಲಿಸಬೇಕೆಂದೇನಿಲ್ಲ ಅಥವಾ ಬೇರೆ ಆಟಗಳನ್ನು ಹುಡುಕುವದನ್ನೂ ನಿಲ್ಲಿಸಬೇಕೆಂದೇನಿಲ್ಲ.

  ಗೇಮ್‌ ಖರೀದಿರಿಸಲು ಇರುವ ಆನ್‌ಲೈನ್‌ ತಾಣಗಳು..!

  ಪೂರ್ವ-ಸ್ವಾಮ್ಯದ ಅಂದರೆ ಬೇರೊಬ್ಬರು ಉಪಯೋಗಿಸಿರುವ ಗೇಮ್ ಗಳನ್ನು ಖರೀದಿಸಲು ಆನ್ಲೈನ್ ನಲ್ಲಿ ಅನೇಕ ವೆಬ್ಸೈಟ್ಗಳು ಲಭ್ಯವಿದೆ. ನಿಮ್ಮ ಸಂಗ್ರಹದಲ್ಲಿರುವ ಯಾವುದಾದರೂ ಗೇಮ್ ಅನ್ನು ನೀವು ಮಾರಬಯಸಿದರೂ ಇದೇ ವೆಬ್ಸೈಟ್ಗಳ ಬಳಕೆ ಮಾಡಬಹುದು. ಸಾಕಷ್ಟು ಗೇಮಿಂಗ್ ಪ್ರಿಯರು ಈ ವೆಬ್ಸೈಟ್ಗಳ ನಿರ್ವಹಣೆ ನಡೆಸುತ್ತಿದ್ದು ಅತ್ಯಲ್ಪ ಶುಲ್ಕ ನೀಡಿ ಗೇಮ್ಗಳನ್ನು ಬಾಡಿಗೆಗೆ ಪಡೆಯುವ ಸೌಲಭ್ಯವನ್ನೂ ಈ ವೆಬ್ಸೈಟ್ಗಳು ನೀಡುತ್ತವೆ. ಸಾಮನ್ಯವಾಗಿ ಗೇಮಿಂಗ್ ನ ಎಲ್ಲಾ ಪ್ಲ್ಯಾಟ್ಫಾರ್ಮ್ ಗಳಲ್ಲೂ ಬಳಸುವ ಗೇಮ್ಗಳನ್ನು ಇವರು ಹೊಂದಿರುತ್ತಾರೆ.

  What is Jio Cricket Gold Pass? How to Buy it
  ನೀವು ಹೀಗೆ ಪೂರ್ವ-ಸ್ವಾಮ್ಯದ ಗೇಮ್ಸ್ ಮತ್ತು ಕನ್ಸೋಲ್ ಗಳನ್ನು ಖರೀದಿಸುವ ಇರಾದೆ ಹೊಂದಿದ್ದರೆ ಈ ಕೆಳಗಿನ 5 ವೆಬ್ಸೈಟ್ಗಳಿಗೆ ಭೇಟಿ ನೀಡಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಗೇಮ್XS

  ಭಾರತದಲ್ಲಿ ಗೇಮಿಂಗ್ ಸಂಸ್ಕøತಿಯನ್ನು ಪ್ರೋತ್ಸಾಹಿಸುವ ಯೋಜನೆ ಹೊಂದಿರುವ ಕೆಲವು ಐಐಟಿ ಪದವೀಧರರು ಒಟ್ಟಾಗಿ ಸೃಷ್ಟಿಸಿರುವ ಆನ್ಲೈನ್ ಗೇಮಿಂಗ್ ಸ್ಟೋರ್ ಈ ಗೇಮ್XS ಅಥವಾ ಗೇಮ್ಎಕ್ಸೆಸ್. ಕನ್ಸೋಲ್ ಹೊಂದಿದ್ದೂ ಗೇಮ್ ನಿಂದ ವಿಮುಖರಾಗಿರುವವರನ್ನು ಮತ್ತೆ ಗೇಮ್ ನತ್ತ ಸೆಳೆಯುವುದು ಅಥವಾ ಹೊಸಬರನ್ನು ಗೇಮಿಂಗ್ ನತ್ತ ಸೆಳೆಯುವುದು ಅವರ ಉದ್ದೇಶ.

  ಹಲವಾರು ಹೊಸತು ಮತ್ತು ಪೂರ್ವ-ಸ್ವಾಮ್ಯದ ಗೇಮ್ಗಳ ಸಂಗ್ರಹ ಇವರ ಬಳಿ ಇದ್ದು, ನೀವು ನಿಮ್ಮ ಬಳಿಯಿರುವ ಗೇಂಗಳನ್ನು ಮಾರ ಬಯಸಿದರೆ ಅದನ್ನು ಈ ಸ್ಟೋರ್ನಲ್ಲಿ ಮಾರುವ ಮೂಲಕ ಸ್ಟೋರ್ ಕ್ರೆಡಿಟ್ ಗಳನ್ನು ಗಳಿಸಬಹುದು.

  ಈ ಸ್ಟೋರ್ ನಲ್ಲಿ ಗೇಮ್ಗಳನ್ನು ಬಾಡಿಗೆಗೆ ನೀಡಲಾಗುವುದಿಲ್ಲ ಮತ್ತು ಪೈರೆಸಿ ವಿರುದ್ಧ ಈ ಮಳಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿದೆ.

  ಗೇಮ್ಲೂಟ್

  ಈ ವೆಬ್ಸೈಟ್ ನಲ್ಲಿ ಎಲ್ಲಾ ರೀತಿಯ ಗೇಮಿಂಗ್ ಕನ್ಸೋಲ್ಗಳಲ್ಲಿ(PS4,PS3,Xಬಾಕ್ಸ್ ಒನ್,Xಬಾಕ್ಸ್ 360, ಮತ್ತುPS ವಿಟಾ) ಬಳಸಬಲ್ಲ ಗೇಮ್ ಗಳಿವೆ. ಹೊಸತಾದ ಮತ್ತು ಪೂರ್ವ-ಸ್ವಾಮ್ಯದ ಗೇಂಗಳು, ಮತ್ತು ವಿವಿಧ ಗೇಮಿಂಗ್ ಕನ್ಸೋಲ್ಗಳು ಮತ್ತು ಆಕ್ಸೆಸರೀಸ್ ಗಳು ಈ ವೆಬ್ಸೈಟ್ ನಲ್ಲಿ ಲಭ್ಯವಿದೆ. ಪಿಸಿ ಗಳಲ್ಲಿ ಬಳಸಬಲ್ಲ ಗೇಂಗಳು ಸಧ್ಯಕ್ಕೆ ಇಲ್ಲಿ ಲಭ್ಯವಿಲ್ಲವಾದರೂ ಶೀಘ್ರದಲ್ಲಿ ಅದನ್ನು ಮಾರಾಟಮಾಡುವ ಭರವಸೆ ನೀಡಿದ್ದಾರೆ.

  ಗೇಮ್ಸ್ದಿಶಾಪ್

  ಗೇಮ್ಸ್ದಿಶಾಪ್ ನ ಆಫ್ಲೈನ್ ಮಳಿಗೆ ಮತ್ತು www.gamestheshop.com ಎಂಬ ಆನ್ಲೈನ್ ಮಳಿಗೆಗೆಳೆರಡೂ ಇದ್ದು PS4,PS3,PS2,PSP, Xಬಾಕ್ಸ್ 360, ನಿಂಟೆಂಡೋ ವೈ, NDS ಮೊದಲಾದ ಕನ್ಸೋಲ್ಗಳು ಇಲ್ಲಿ ಲಭ್ಯವಿದೆ. ಉತ್ತಮ ಗೇಮಿಂಗ್ ಅನುಭವ ನೀಡಲು ಅಗತ್ಯವಾದ ಸಾಫ್ಟ್ವೇರ್ ಮತ್ತು ಆಕ್ಸೆಸರೀಸ್ ಈ ಮಳಿಗೆಯಲ್ಲಿ ಲಭ್ಯವಿದೆ.

  ಮೊದಲ 5G ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ ಹುವಾವೆ: ಏರ್‌ಟೆಲ್‌ನೊಂದಿಗೆ ಹೊಂದಾಣಿಕೆ...!

  ಗೇಮ್ಸ್nಗ್ಯಾಜೆಟ್

  ಈ ವೆಬ್ಸೈಟ್ ನಲ್ಲಿ ಹೊಸತಾದ ಮತ್ತು ಪೂರ್ವ-ಸ್ವಾಮ್ಯದ ಕನ್ಸೋಲ್ ಗೇಮ್ಗಳು ಲಭ್ಯವಿದ್ದು,ನೀವು ಇದರ ಖರೀದಿಯಲ್ಲಿ ದೊಡ್ಡ ಉಳಿತಾಯ ಮಾಡುವ ಯೋಜನೆ ಹೊಂದಿದ್ದರೆ ಈ ಸೈಟ್ನಲ್ಲಿ ಕನ್ಸೋಲ್ಗಳು ರಿಯಾಯಿತಿ ದರದಲ್ಲೂ ಲಭ್ಯವಿದೆ. ಆದರೆ ಇಲ್ಲಿ ಪಿಸಿ ಗೇಮ್ಗಳು ಖರೀದಿಗೆ ಲಭ್ಯವಿಲ್ಲ.

  ಗೇಮರ್ಸ್ಅಡ್ಡಾ

  ಹ್ಯಾಂಡ್ಹೆಲ್ಡ್ ನಿಂಟೆಂಡೋ ಕನ್ಸೋಲ್ ನಿಂದ ಹಿಡಿದು ಪಿಸಿ ಗೇಮಿಂಗ್ ವರೆಗೆ ಎಲ್ಲಾ ರೀತಿಯ ಗೇಮಿಂಗ್ ಪ್ಲ್ಯಾಟ್ಫಾರ್ಮ್ಗಳಲ್ಲಿ ಬಳಸಬಹುದಾದ ಗೇಮ್ಗಳು ಗೇಮರ್ಸ್ಅಡ್ಡಾ ದಲ್ಲಿ ದೊರಕುತ್ತದೆ. ಗೇಮಿಂಗ್ ಪ್ರಿಯರಿಗೆ ಗೇಮ್ಗಳನ್ನು ಮಾರಲು ಮತ್ತು ಖರೀದಿಸಲು ಪ್ಲ್ಯಾಟ್ಫಾರ್ಮ್ ಒಂದನ್ನು ನೀಡುವ ಈ ವೆಬ್ಸೈಟ್ ತನ್ನ ಬಳಕೆದಾರರಿಗೆ ತಮ್ಮತಮ್ಮೊಳಗೆ ಗೇಮ್ಗಳನ್ನು ಕೊಟ್ಟುಕೊಳ್ಳುವ ಆಯ್ಕೆಯನ್ನೂ ನೀಡುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  A number of websites let you buy pre-owned games. And if you have games from your collection that you wish to sell, then you can do it online as some websites let you sell games. Some websites also let you rent games by paying a nominal fee instead of a hefty amount in purchasing them. Here are five such websites to buy pre-owned games.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more