Just In
- 20 min ago
ಸ್ಮಾರ್ಟ್ಫೋನ್ಗಳಲ್ಲಿನ ಸೆನ್ಸರ್ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು?
- 59 min ago
ಏರ್ಟೆಲ್ ಗ್ರಾಹಕರೇ, ಅವಸರವಾಗಿ ರೀಚಾರ್ಜ್ ಮಾಡಬೇಡಿ, ಈ ಪ್ಲ್ಯಾನ್ ಗಮನಿಸಿ!
- 1 hr ago
ಲೆನೊವೊದಿಂದ ಭಾರತದಲ್ಲಿ ಹೊಸ ಲ್ಯಾಪ್ಟಾಪ್ ಬಿಡುಗಡೆ! ಇದರ ಕಾರ್ಯದಕ್ಷತೆ ಹೇಗಿದೆ?
- 2 hrs ago
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
Don't Miss
- News
ಯಡಿಯೂರಪ್ಪ ಅವರ ಮಗನ್ನ ಮಂತ್ರಿ ಮಾಡಬೇಕಾಗುತ್ತೆ ಅಂತಲೇ ಮಂತ್ರಿಮಂಡಲ ವಿಸ್ತರಣೆ ಮಾಡುತ್ತಿಲ್ಲ:ಸಿದ್ದರಾಮಯ್ಯ
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- Movies
"ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ": ಅಭಿಮಾನಿಗಳಲ್ಲಿ ದರ್ಶನ್ ವಿಶೇಷ ಮನವಿ
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗೂಗಲ್ ಮ್ಯಾಪ್‌ನಲ್ಲಿ ಗೂಗಲ್ ಮುಚ್ಚಿಟ್ಟಿರುವ ರಹಸ್ಯ ಸ್ಥಳಗಳಿವು!!..ಎಲ್ಲರೂ ನೋಡಲು ಸಾಧ್ಯವಿಲ್ಲ.!!
ಗೂಗಲ್ ಮ್ಯಾಪ್ ಬಳಕೆ ಮಾಡಬೇಕಾದರೆ ಗೂಗಲ್ ಮ್ಯಾಪಿನಲ್ಲಿ ಭೂಮಿಯ ಮೇಲಿನ ಅಷ್ಟೂ ಮಾಹಿತಿ ಇದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಏಕೆಂದರೆ, ಮ್ಯಾಪಿನಲ್ಲಿ ನಮ್ಮ ಮನೆಯ ಪಕ್ಕದ ಬೀದಿಯನ್ನು ತೋರಿಸುವ ಗೂಗಲ್ ಭೂಮಿಯ ಎಲ್ಲಾ ಪ್ರದೇಶಗಳನ್ನು ತೋರಿಸಬಹುದು ಎಂಬುದು ಅವರ ಲೆಕ್ಕಾಚಾರ!
ಆದರೆ, ನಿಮಗೆ ಗೊತ್ತಾ? ಗೂಗಲ್ ಮ್ಯಾಪ್ ನಿಮಗೆ ತೋರಿಸುವುದು ಸರ್ಕಾರದಿಂದ ಮಾನ್ಯತೆ ಸಿಕ್ಕಿರುವ ಹಾಗೂ ಗೂಗಲ್ ಕಂಪೆನಿಯವರಿಗೆ ತೋರಿಸಲು ಸಾಧ್ಯವಾಗಿರುವ ಪ್ರದೇಶಗಳನ್ನು ಮಾತ್ರ! ಹಾಗಾಗಿ, ಗೂಗಲ್ ಎಲ್ಲ ಜಾಗಗಳನ್ನು ಜನರಿಗೆ ತನ್ನ ಮ್ಯಾಪ್ ಮೂಲಕ ತೋರಿಸುತ್ತದೆ ಎಂದರೆ ಅದು ತಪ್ಪು ತಿಳುವಳಿಕೆ ಎನ್ನಬಹುದು.!!

ನೀವು ಬೇಕಾದರೆ ಚೆಕ್ ಮಾಡಿ, ಗೂಗಲ್‌ನಲ್ಲಿ ಕೆಲವೊಂದು ಸ್ಥಳಗಳನ್ನು ಬ್ಲರ್ ಮಾಡಿರಲಾಗುತ್ತದೆ. ಗೂಗಲ್‌ನವರು ತುಂಬಾ ಸ್ಥಳಗಳ ಬಗ್ಗೆ ನಮಗೆ ತಿಳಿಯದೇ ರಹಸ್ಯವಾಗಿ ನಿರ್ವಹಿಸುತ್ತಿರುತ್ತಾರೆ.!! ಅಂತಹ ರಹಸ್ಯವಾದ ಸ್ಥಳಗಳ ಬಗ್ಗೆ ಗೂಗಲ್ ಕೂಡ ಹೇಳುವುದಿಲ್ಲ ಎಂದರೆ ಆ ಸ್ಥಳಗಳು ಇನ್ನೆಷ್ಟು ನಿಗೂಢ ಎಂದು ನೀವು ತಿಳಿಯಬಹುದು! ಹಾಗಾದರೆ, ಅಂತಹ ಸ್ಥಳಗಳು ಯಾವುವು? ಅವುಗಳನ್ನು ಏನೆಂದು ಊಹಿಸಲಾಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಸ್ನೋ ಸಾಡಿಲ್ – ನೇಪಾಳ!!
ಸಮುದ್ರ ಮಟ್ಟದಿಂದ ಇಪ್ಪತ್ತೆರಡು ಸಾವಿರ ಅಡಿಗಳ ಎತ್ತರದ ಹಿಮದಿಂದ ಕೂಡಿರುವ ಈ ಪ್ರದೇಶವನ್ನು ಗೂಗಲ್ ನಕ್ಷೆಯಲ್ಲಿ ಬಹುತೇಕ ಕಾಣದಹಾಗೆ ಮಾಡಿದೆ. ಇಲ್ಲಿ ಹಲವಾರು ಬಾರಿ ಗುರುತಿಸಲಾಗದ ಹಾರುವ ವಸ್ತು (UFO unidentified flying object) ಕಾಣಿಸಿಕೊಂಡಂತೆ ಪಿಸು ಮಾತುಗಳು ಕೇಳಿ ಬಂದಿದೆ, ಇನ್ನು ಈ ಪ್ರದೇಶವನ್ನು ಹೀಗೆ ಮರೆ ಮಾಡಿದ್ದರಿಂದ ಹಲವಾರು ಅನುಮಾನಕ್ಕೆ ಕಾರಣವಾಗಿದೆ.!!

ಜಂಕ್ಷನ್ ಶ್ರೇಣಿ- ಕ್ಯಾಲಿಫೋರ್ನಿಯಾ!!
ಅಮೆರಿಕಾದ ನಾವಿ ಮಿಲಿಟರಿ ವೆಪನ್ಸ್ ಟೆಸ್ಟಿಂಗ್ ಸೆಂಟರ್ ಎಂದು ಗುರುತಿಸಲಾಗಿರುವ ಜಂಕ್ಷನ್ ಶ್ರೇಣಿಗೆ ಸಾಮಾನ್ಯರು ಕಾಲಿಡುವ ಮಾತೆ ಇಲ್ಲ.!! ಇಲ್ಲಿ ವಿಶ್ವದ ಅತ್ಯಂತ ಸುಧಾರಿತ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಲಾಗುತ್ತದೆ ಎಂಬ ಸಮಾಚಾರ ಆದ್ದರಿಂದ ಈ ಪ್ರದೇಶವು ಸಂಪೂರ್ಣವಾಗಿ ಅಡಗಿಸಲಾಗಿದೆ.!!

ಚುಕೊಟ್ಕಾ – ಸೈಬೀರಿಯಾ!!
ಸೈಬೀರಿಯಾದ ಪ್ರಾಂತ್ಯದ ಗುಡ್ಡಗಾಡು ಪ್ರದೇಶಗಳನ್ನು ಚುಕೊಟ್ಕಾ ಎಂದು ಕರೆಯುತ್ತಾರೆ. ಗೂಗಲ್ ನಕ್ಷೆಗಳಲ್ಲಿ ಈ ಪ್ರದೇಶ ಫ್ಲಾಟ್ ಆಗಿದ್ದು ಇಲ್ಲಿ ಯಾವುದೇ ಬೆಟ್ಟಗಳು ಕಾಣಿಸುವುದಿಲ್ಲ.!! ಈ ಪ್ರದೇಶಗಳ ಬಗ್ಗೆ ಅನುಮಾನ ಮೂಡಿರುವಂತೆ ಇದು ರಷ್ಯಾದ ಸೇನಾ ರಹಸ್ಯ ನೆಲೆಯೆಂದು ಎಂದು ಹೇಳಲಾಗುತ್ತಿದೆ.!!


ಬ್ರೋಕನ್ ಯಾರೊ – ಗ್ರೀನ್ಲ್ಯಾಂಡ್!!
ಗ್ರೀನ್‌ಲ್ಯಾಂಡ್ ದ್ವೀಪದ ಬ್ರೊಕನ್ ಮರೊ ಎನ್ನುವ ಸ್ಥಳವು ಗೂಗಲ್ ಮೂಲ ನಕ್ಷೆಗಳಲ್ಲಿ ಸಂಪೂರ್ಣವಾಗಿ ಮರೆಮಾಡಲ್ಪಟ್ಟಿದೆ, ಅಮೆರಿಕಾದ ಮಿಲಿಟರಿ ಅಣ್ವಸ್ತ್ರಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ಈ ಪ್ರದೇಶದಲ್ಲಿ ನಡೆಸುತ್ತಿರುವುದರಿಂದ ಈ ಪ್ರದೇಶವನ್ನು ಗೌಪ್ಯವಾಗಿ ಇಡಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.!!

ಫೆಸಿಫಿಕ್ ಸ್ಯಾಂಡಿ ದ್ವೀಪ!!
ಪೆಸಿಫಿಕ್ ಮಹಾ ಸಮುದ್ರದ ಮಧ್ಯೆ ಇರುವ ಒಂದು ದ್ವೀಪ ಫೆಸಿಫಿಕ್ ಸ್ಯಾಂಡಿ ದ್ವೀಪ.!! ಈ ದ್ವೀಪವನ್ನು ಗೂಗಲ್ ಮ್ಯಾಪ್‌ನಲ್ಲಿ ಸಂಪೂರ್ಣವಾಗಿ ನೀರಿನೊಂದಿಗೆ ಆವರಿಸಿದ ಹಾಗೆ ಮುಚ್ಚಿ ಹಾಕಿದೆ, ಈ ದ್ವೀಪ ಇಲ್ಲದಹಾಗೆ ಮರೆ ಮಾಚುವ ಅವಶ್ಯಕತೆ ಗೂಗಲ್‌ಗೆ ಏನಿತ್ತು ಎಂದು ಹಲವು ಪ್ರಶ್ನಿಸಿದ್ದಾರೆ.!!

ಭಾರತದಲ್ಲಿಯೂ ಅಂತಹ ಪ್ರದೇಶಗಳಿವೆ.!!
ಗೂಗಲ್ ಮ್ಯಾಪಿನಲ್ಲಿ ಮರೆಮಾಚಿರುವ ಭಾರತದ ಹಲವಾರು ಪ್ರದೇಶಗಳು ಸಹ ಇವೆ. ಸೇನಾ ರಹಸ್ಯವಿಷಯಗಳನ್ನು ಮ್ಯಾಪಿನಲ್ಲಿ ಭಾರತ ಸರ್ಕಾರ ಬಚ್ಚಿಟ್ಟಿದೆ.!ಒಮ್ಮೆ ಪಾಕಿಸ್ತಾನ ಆರೋಪಿಸಿದಂತೆ ನಮ್ಮ ಸಾಂಸ್ಕೃತಿಕ ರಾಜದಾನಿ ಮೈಸೂರಿನಲ್ಲಿ ಅಣುಘಟಕವಿದೆಯಂತೆ. ಅದನ್ನು ಭಾರತ ಜಗತ್ತಿಗೆ ಕಾಣದ ಹಾಗೆ ಮುಚ್ಚಿಟ್ಟಿದೆಯಂತೆ.!

ನೀವು ತಿಳಿದಿರಲೇಬೇಕಾದ 13 ಗೂಗಲ್ ಮ್ಯಾಪ್ಸ್ ಟ್ರಿಕ್ಸ್..!
ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ನಮಗೆಲ್ಲಾ ದಾರಿ ತೋರಿಸುವ ಏಕೈಕ ಮಾರ್ಗದರ್ಶಿ ಎಂದರೆ ಗೂಗಲ್ ಮ್ಯಾಪ್ಸ್. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಗೂಗಲ್ ಮ್ಯಾಪ್ಸ್ ಆಪ್ ಇರದ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ಇಲ್ಲ. ಅಷ್ಟರ ಮಟ್ಟಿಗೆ ನಮ್ಮೊಂದಿಗೆ ಗೂಗಲ್ ಮ್ಯಾಪ್ ಬೆರೆತು ಹೋಗಿದೆ. ಇದನ್ನು ಅರಿತಿರುವ ಗೂಗಲ್ ತನ್ನ ಆಪ್‌ನಲ್ಲಿ ದಿನಕ್ಕೊಂದು ಅಪ್‌ಡೇಟ್ ಮಾಡ್ತಾ ಇದೆ.
ಹೌದು, ಗೂಗಲ್ ಮ್ಯಾಪ್ಸ್ ಆಪ್ ಕೇವಲ ದಾರಿ ತೋರಿಸುವುದಕ್ಕೆ ಮಾತ್ರ ಬಳಸುವ ಆಪ್ ಅಲ್ಲ. ದಾರಿ ತೋರಿಸುವುದಲ್ಲದೇ ಅನೇಕ ಫೀಚರ್ಸ್‌ಗಳಿಂದ ಗೂಗಲ್ ಮ್ಯಾಪ್ ಜನರನ್ನು ಆಕರ್ಷಿಸುತ್ತದೆ. ಆದರೆ, ಮಾಹಿತಿಯ ಕೊರತೆಯಿಂದ ಹೊಸ ಫೀಚರ್ಸ್‌ಗಳನ್ನು ನಾವೆಲ್ಲಾ ಬಳಕೆ ಮಾಡೋದೆ ಇಲ್ಲ. ಅಂತಹ ನಿಮ್ಮ ಜೀವನವನ್ನು ಇನ್ನು ಸರಳಗೊಳಿಸುವ ಫೀಚರ್ಸ್‌ಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

ಪಾರ್ಕಿಂಗ್ ಸ್ಥಳವನ್ನು ಉಳಿಸಿ
ನಿಮಗೆ ಪಾರ್ಕಿಂಗ್ ಸ್ಥಲ ಮರೆಯುವ ಅಭ್ಯಾಸ ಇದ್ದರೆ ಇನ್ಮುಂದೆ ಚಿಂತಿಸುವ ಅಗತ್ಯವಿಲ್ಲ. ಯಾಕೆಂದರೆ ಗೂಗಲ್ ಮ್ಯಾಪ್ ಬಳಸಿಕೊಂಡು ನಿಮ್ಮ ಪಾರ್ಕಿಂಗ್ ಸ್ಥಳವನ್ನು ಪಿನ್ ಮಾಡಿದರೆ ಸಾಕು. ಗೂಗಲ್ ಮ್ಯಾಪ್ ಲೋಕೆಷನ್ ಸೆಟ್ಟಿಂಗ್ಸ್ ಆಧಾರದಲ್ಲಿ ಪಾರ್ಕಿಂಗ್ ಲೋಕೆಷನ್‌ನ್ನು ಗುರುತಿಸುತ್ತದೆ. ವಾಹನವನ್ನು ನಿಲ್ಲಿಸಿದ ನಂತರ ನೀಲಿ ಚುಕ್ಕೆಯ ಮೇಲೆ ಟ್ಯಾಪ್ ಮಾಡಿ ಸೇವ್ ಯುವರ್ ಪಾರ್ಕಿಂಗ್ ಆಯ್ಕೆಯನ್ನು ಆಯ್ದುಕೊಳ್ಳಿ. ಅದಲ್ಲದೇ ಗೂಗಲ್ ಅಸಿಸ್ಟಂಟ್‌ಗೂ ಪಾರ್ಕಿಂಗ್ ಲೋಕೆಷನ್ ಉಳಿಸಲು ಹೇಳುವ ಆಯ್ಕೆ ನೀಡಲಾಗಿದೆ.

ಅನೇಕ ಸ್ಥಳಗಳಿಗೆ ಹೋಗುವ ಆಯ್ಕೆ ಪಡೆಯಿರಿ
ನೀವು ಆಫೀಸ್‌ಗೆ ಹೋಗುವಾಗ ನಿಮ್ಮ ಮಗುವನ್ನು ಶಾಲೆಗೆ ಡ್ರಾಪ್ ಮಾಡಬೇಕಾಗಿರುತ್ತದೆ. ಆಗ ನೀವು ಅನೇಕ ಸ್ಥಳಗಳನ್ನು ಸೇರಿಸಿ ಪ್ರಯಾಣವನ್ನು ಒಂದೇ ಬಾರಿಗೆ ಆರಂಭಿಸಬಹುದಾಗಿದೆ. ಈ ಫೀಚರ್ ಬಳಸಲು ಎ ಯಿಂದ ಬಿ ವರೆಗೆ ಡೈರೆಕ್ಷನ್ ನಿಗದಿಪಡಿಸಿ, ನಂತರ ಬಲ ಭಾಗದಲ್ಲಿ ಮೇಲೆ ಇರುವ 3 ಚುಕ್ಕೆಯ ಚಿಹ್ನೆಯನ್ನು ಆಯ್ಕೆ ಮಾಡಿಕೊಂಡು ಅನೇಕ ಸ್ಥಳಗಳನ್ನು ಸೇರಿಸಬಹುದು.

ನಿಮ್ಮದೇ ಆದ ಗೂಗಲ್ ಮ್ಯಾಪ್ ತಯಾರಿಸಿ
ನಿಮ್ಮ ಪ್ರಯಾಣದ ಪ್ಲಾನ್‌ನ್ನು ಸ್ನೇಹಿತರಿಗೆ ಮತ್ತು ಕುಟುಂಬಕ್ಕೆ ಹಂಚಿಕೊಳ್ಳುವಾಗ ಈ ಫೀಚರ್ ಬಹಳಷ್ಟು ಉಪಯುಕ್ತವಾಗುತ್ತದೆ. ನಿಮ್ಮದೇ ಆದ ಮ್ಯಾಪ್ ಸಿದ್ಧಪಡಿಸಿಕೊಂಡು ಅದರಲ್ಲಿ ಬೇಕಾಗುವ ಮಾಹಿತಿ, ಆಸಕ್ತಿ, ಡೈರೆಕ್ಷನ್, ಮಾರ್ಗಗಳನ್ನು ಸೇರಿಸಬಹುದಾಗಿದೆ. ನಿಮ್ಮದೇ ಆದ ಗೂಗಲ್ ಮ್ಯಾಪ್ ತಯಾರಿಸಿಕೊಳ್ಳಲು ಗೂಗಲ್ ಅಕೌಂಟ್‌ಗೆ ಸೈನ್ ಇನ್ ಆಗಬೇಕು. ಅಲ್ಲೊಂದು ಟ್ಯುಟೋರಿಯಲ್ ಬರುತ್ತದೆ. ಅದನ್ನು ನೋಡಿಕೊಂಡು ನಿಮ್ಮದೇ ಮ್ಯಾಪ್ ತಯಾರಿಸಿಕೊಳ್ಳಿ.

ಚಾಲನೆ ಮಾಡುವಾಗ ವಾಯ್ಸ್ ಕಮಾಂಡ್ ಬಳಸಿ
ಚಾಲನೆ ಮಾಡುವಾಗ ವಾಯ್ಸ್ ಕಮಾಂಡ್ ಬಳಸುವ ಆಯ್ಕೆ ನಿಮಗೆ ಭದ್ರತೆಯನ್ನು ನೀಡುತ್ತದೆ. ಇಲ್ಲಿ ಬಹಳಷ್ಟು ವಾಯ್ಸ್ ಕಮಾಂಡ್ ಆಯ್ಕೆಯೊಂದಿಗೆ ಗೂಗಲ್ ಮ್ಯಾಪ್ಸ್ ಬಳಸಬಹುದಾಗಿದೆ. ನೀವು ಸುಲಭವಾಗಿ ಮೈಕ್ರೊಪೋನ್ ಐಕಾನ್ ಮೇಲೆ ಕ್ಲಿಕ್ ಮಾಡಿ ಕಮಾಂಡ್ ಹೇಳಬಹುದು.

ನಿಮ್ಮ ಇಷ್ಟದ ಸ್ಥಳಗಳನ್ನು ಗುರುತಿಸಿ
ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸ್ಥಳಗಳನ್ನು ಗುರುತಿಸಿಟ್ಟುಕೊಳ್ಳಬಹುದು. ನಿಮ್ಮ ಫ್ರೇಂಡ್ ಹೋಮ್, ರೆಸ್ಟೋರೆಂಟ್ ಮುಂತಾದ ಸ್ಥಳಗಳನ್ನು ಗೂಗಲ್ ಮ್ಯಾಪ್‌ನಲ್ಲಿ ಲೇಬಲ್ ಮಾಡಿ ಇಟ್ಟುಕೊಳ್ಳಬಹುದು. ಇದು ಪ್ರತಿ ಬಾರಿ ವಿವರವಾದ ವಿಳಾಸವನ್ನು ಟೈಪ್ ಮಾಡುವುದನ್ನು ತಪ್ಪಿಸುತ್ತದೆ. ಲೋಕೆಷನ್ ಸರ್ಚ್‌ನಲ್ಲಿ ಅಡ್ರೆಸ್ ಹಾಕುವ ಮೂಲಕ ಅಥವಾ ಸ್ಕ್ರೀನ್ ಮೇಲೆ ಲಾಂಗ್ ಪ್ರೆಸ್ ಮಾಡುವ ಮೂಲಕ ಮ್ಯಾಪ್‌ನಲ್ಲಿ ಪಿನ್ ಮಾಡಬಹುದಾಗಿದೆ.

ಆಫ್‌ಲೈನ್ ಮ್ಯಾಪ್ಸ್
ಗೂಗಲ್ ಮ್ಯಾಪ್‌ನಿಂದ ಮತ್ತೊಂದು ಉಪಯೋಗವೆನೆಂದರೆ ನೀವು ಮ್ಯಾಪ್‌ನ ಒಂದು ಭಾಗವನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಇದರ ಮೂಲಕ ನಿಮ್ಮ ಹಳೆಯ ಸ್ಮಾರ್ಟ್‌ಪೋನ್ ಅನ್ನು ಜಿಪಿಎಸ್ ಡಿವೈಸ್ ಆಗಿ ಬೈಕ್ ಮತ್ತು ಕಾರ್‌ಗಳಲ್ಲಿ ಬಳಸಬಹುದು. ಆಫ್‌ಲೈನ್ ಮ್ಯಾಪ್ಸ್ ಆಯ್ಕೆಯಲ್ಲಿ ಆಪ್ ಹಾರಿಜಂಟಲ್ ಸೆಲೆಕ್ಷನ್ ಟೂಲ್ ನೀಡುತ್ತದೆ ಮತ್ತು ಎಷ್ಟು ಸ್ಥಳಾವಕಾಶ ಬೇಕು ಎಂಬುದನ್ನು ಕೇಳುತ್ತದೆ. ವೈ-ಫೈ ಸಂಪರ್ಕವಾದಾಗ ಸ್ವಯಂಚಾಲಿತವಾಗಿ ಡೌನ್‌ಲೋಡ್ ಮಾಡಿರುವ ಮ್ಯಾಪ್ ಅಪ್‌ಡೇಟ್ ಆಗುತ್ತದೆ.

ನಿಮ್ಮ ಡಿಫಾಲ್ಟ್ ವಿಳಾಸ ಉಳಿಸಿ
ನೀವು ಆಫ್‌ಲೈನ್ ಮ್ಯಾಪ್ ಡೌನ್‌ಲೋಡ್ ಮಾಡಿದ ನಂತರ ನಿಮ್ಮ ಮನೆ ಮತ್ತು ಕಚೇರಿ ವಿಳಾಸವನ್ನು ಡಿಫಾಲ್ಟ್ ಆಗಿ ಸೇರಿಸಿ ಉಪಯೋಗ ಮಾಡಬಹುದು. ಇದರಿಂದ ನ್ಯಾವೆಗೇಷನ್ ಬೇಗ ಆರಂಭವಾಗುತ್ತದೆ. ಮತ್ತು ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ನೀವು ಹೋಗುವ ಮಾರ್ಗದ ಟ್ರಾಫಿಕ್ ಸೂಚನೆಯನ್ನು ತಿಳಿಸುತ್ತದೆ.

ನಿಮ್ಮ ಲೋಕೆಷನ್ ಹಂಚಿಕೊಳ್ಳಿ
ನಿಮ್ಮ ಸ್ನೇಹಿತರು ನಿಮ್ಮ ಸ್ಥಳವನ್ನು ಹುಡುಕುವುದಕ್ಕೆ ಬಹಳಷ್ಟು ಸಲ ಪ್ರಯಾಸ ಪಡುತ್ತಾರೆ. ಅದಕ್ಕೋಸ್ಕರ ಗೂಗಲ್ ಲೋಕೆಷನ್ ಶೇರಿಂಗ್ ಫೀಚರ್ ಪರಿಚಯಿಸಿದ್ದು, ಇದು ರಿಯಲ್ ಟೈಮ್ ಲೋಕೆಷನ್‌ನ್ನು ನಿಗದಿತ ಅವಧಿಯಲ್ಲಿ ಗೂಗಲ್ ಮ್ಯಾಪ್ ಮೂಲಕ ಶೇರ್ ಮಾಡಬಹುದಾಗಿದೆ. ಈ ಫೀಚರ್ ಸ್ನೇಹಿತರಿಗೆ ನಾನಿಲ್ಲೇ ಇದ್ದಿನಿ ಎಂದು ಹೇಳುವುದಕ್ಕೆ ಬಹಳಷ್ಟು ಉಪಯುಕ್ತವಾಗುತ್ತದೆ.

ನಿಮಗೆ ಹತ್ತಿರವಾದ ಸ್ಥಳ ಮತ್ತು ವ್ಯಾಪಾರ
ನಿಮ್ಮ ಮನೆ ಅಡುಗೆ ಮನೆಯಲ್ಲಿ ಸಾಮಗ್ರಿ ಇರುವುದಿಲ್ಲ. ಆಗ ಮನೆಗ್ಯಾರೋ ಹತ್ತಿರದ ಸಂಬಂಧಿ ಬರುತ್ತೇನೆ ಎಂದು ತಿಳಿಸುತ್ತಾರೆ. ಆಗ ನೀವೇನಾದ್ರೂ ತರಲು ಹೊರಹೋಗುತ್ತಿರಿ, ನಿಮ್ಮ ಬೈಕ್‌ನಲ್ಲಿ ಪೆಟ್ರೋಲ್ ಖಾಲಿಯಾಗಿ ದಾರಿ ಮಧ್ಯದಲ್ಲಿ ನಿಲ್ಲುತ್ತದೆ. ಆಗ ನಿಮ್ಮತ್ರ ಗೂಗಲ್ ಮ್ಯಾಪ್ ಇದ್ರೇ ನಿಮ್ಮ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗುತ್ತದೆ. ಹತ್ತಿರದಲ್ಲಿ ಸಿಗುವ ಪ್ರಮುಖ ಸ್ಥಳ ಮತ್ತು ವ್ಯಾಪಾರಗಳನ್ನು ಗೂಗಲ್ ಮ್ಯಾಪ್ ತಿಳಿಸುತ್ತದೆ.

ಒಂದೇ ಕೈಯಲ್ಲಿ ಜೂಮ್ ಮಾಡಬಹುದು
ನ್ಯಾವಿಗೇಟ್ ಆಗುತ್ತಿರುವಾಗ ಮ್ಯಾಪ್‌ನಲ್ಲಿ ಜೂಮ್ ಮಾಡುವುಸು ಪ್ರಯಾಸದ ಕೆಲಸವಾಗಿತ್ತು. ಡಬಲ್ ಟ್ಯಾಪ್ ಮಾಡಿ ಜೂಮ್ ಮಾಡಬೇಕಾಗಿತ್ತು. ಮತ್ತು ನಿಮ್ಮ ಬೆರಳುಗಳು ಸ್ಕ್ರೀನ್ ಮೇಲೆ ಇರುವಂತೆ ಜಾಗೃತಿವಹಿಸಬೇಕಾಗಿತ್ತು. ಆದರೆ, ಈಗ ಮ್ಯಾನುವಲ್ ಆಗಿ ಜೂಮ್ ಇನ್ ಮತ್ತು ಜೂಮ್ ಔಟ್ ಮಾಡಬಹುದು.

ಬಸ್ ಮತ್ತು ರೈಲ್ವೇ ಸಮಯ ನೋಡಿ
ಭಾರತದಲ್ಲಿ ಗೂಗಲ್ ಮ್ಯಾಪ್ಸ್ ನಿಮ್ಮ ನಗರದಲ್ಲಿ ಕಾರ್ಯನಿರ್ವಹಿಸುವ ಬಸ್ ಮತ್ತು ರೈಲ್ವೇ ಸಮಯಗಳನ್ನು ತಿಳಿಸುತ್ತದೆ. ನೀವು ಹೋಗುವ ಮಾರ್ಗದಲ್ಲಿ ಸಾರ್ವಜನಿಕ ಸಾರಿಗೆಯನ್ನು ತೋರಿಸುವ ಆಯ್ಕೆ ನೀಡಿದರೆ ಸಾಕು. ಬಸ್ ಮಾರ್ಗದಲ್ಲಿ ಯಾವ ನಂಬರ್ ಬಸ್ ಎಲ್ಲಿಗೋಗುತ್ತೇ, ಎಷ್ಟು ನಿಲುಗಡೆ ಇವೆ ಎಂಬುದನ್ನು ತಿಳಿಸುತ್ತದೆ.

ನಿಮ್ಮ ಚಲನೆಯನ್ನು ಟ್ರಾಕ್ ಮಾಡಿ
ಹಿಂದೆ ನೀವ್ಯಾವುದೋ ಸ್ಥಳಕ್ಕೆ ಭೇಟಿ ನೀಡಿರುತ್ತಿರಿ. ಆದರೆ, ಆ ಸ್ಥಳದ ನೆನಪು ನಿಮಗೆ ಇರುವುದಿಲ್ಲ.ಚಿಂತೆ ಮಾಡಬೇಡಿ ಗೂಗಲ್ ಮ್ಯಾಪ್ ನಿಮ್ಮ ಪ್ರತಿದಿನದ ಚಲನೆಯನ್ನು ಹಿಸ್ಟರಿಯಲ್ಲಿ ಟ್ರಾಕ್ ಮಾಡಿಟ್ಟಿರುತ್ತೇ. ನೀವು ಟೈಮ್ ಲೈನ್ ಆಯ್ಕೆಯನ್ನು ಹೊಂದಿದ್ದು, ಅದರಲ್ಲಿ ನೀವು ಹೋದ ಮಾರ್ಗ, ನೀವು ಭೇಟಿ ನೀಡಿದ ಸ್ಥಳಗಳ ಬಗ್ಗೆ ಮಾಹಿತಿ ಹೊಂದಿರುತ್ತೆ.

ಸ್ಥಳೀಯ ಮಾರ್ಗದರ್ಶಕನಾಗಿ ಹಣ ಗಳಿಸಿ
ಗೂಗಲ್ ಮ್ಯಾಪ್‌ನಲ್ಲಿ ಗೂಗಲ್ ರಿವಾರ್ಡ್ಸ್ ಎಂಬ ಆಯ್ಕೆ ನೀಡಿದ್ದು, ಬಿಡುವಿಲ್ಲದ ಸಮಯದಲ್ಲಿಯೂ ಸರ್ವೇಗಳಿಗೆ ಪ್ರತಿಕ್ರಿಯೆ ನೀಡುತ್ತಾರೋ ಅವರಿಗೆ ಗೂಗಲ್ ಪಾವತಿಸುತ್ತದೆ. ಇದನ್ನೇ ಗೂಗಲ್ ಲೋಕಲ್ ಗೈಡ್ಸ್ ಎಂದು ಕರೆಯುತ್ತದೆ. ಈ ರಿವಾರ್ಡ್ ಪ್ರೋಗ್ರಾಂಗೆ ಸೈನ್ ಅಪ್ ಆಗಿ ನೀವಿರುವ ಸ್ಥಳದ ಕುರಿತು ಮಾಹಿತಿ ಸೇರಿಸಬೇಕು. ಅಂಗಡಿಗಳು, ರೆಸ್ಟೋರೆಂಟ್‌ಗಳು, ವ್ಯಾಪಾರದ ಬಗ್ಗೆ ಮಾಹಿತಿ ಮತ್ತು ಚಿತ್ರಗಳನ್ನು ಹಂಚಿಕೊಂಡು ಹಣ ಗಳಿಸಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470