ಭವಿಷ್ಯದಲ್ಲಿ ಮಾನವನ ಕೆಲಸಗಳನ್ನು ರೊಬೊಟ್ ಮಾಡಲು 5 ದಾರಿಗಳು

By Prateeksha
|

ರೊಬೊಟಿಕ್ ತಂತ್ರಜ್ಞಾನದ ಬೆಳವಣಿಗೆ ಹತ್ತಾರು ವರ್ಷಗಳ ಹಿಂದೆ ಪ್ರಾರಂಭವಾಯಿತು, ಈಗ ಅದು ಬಹಳಷ್ಟು ಮಟ್ಟಿಗೆ ಪಕ್ಚಗೊಂಡಿದ್ದು ಈಗ ರೊಬೊಟ್‍ಗಳು ಮಾನವನನ್ನು ಹಲವು ವಿಭಾಗಗಳಲ್ಲಿ ಸಹಾಯಮಾಡುತ್ತಿದೆ.

ಭವಿಷ್ಯದಲ್ಲಿ ಮಾನವನ ಕೆಲಸಗಳನ್ನು ರೊಬೊಟ್ ಮಾಡಲು 5 ದಾರಿಗಳು

ತಯಾರಿಕಾ ಕಂಪನಿಗಳಲ್ಲಿ ಈಗ ಮುನುಷ್ಯನ ಸ್ಥಾನವನ್ನು ರೊಬೊಟ್ ಗಳು ತೆಗೆದುಕೊಂಡಿದೆ. ಅದು ಆರೋಗ್ಯ ಕಾಳಜಿ ಮತ್ತು ಆಟೊಮೆಟಿಕ್ ಇಂಡಸ್ಟ್ರಿ ಹೀಗೆ ಮುಂತಾದವುಗಳಲ್ಲಿ ತನ್ನ ಸ್ಥಾನ ಗಟ್ಟಿಗೊಳಿಸಿದೆ. ರೊಬೊಟಿಕ್ಸ್ ಕ್ಷೇತ್ರದಲ್ಲಿ ಇನ್ನೂ ಬೆಳವಣಿಗೆ ಆಗಬೇಕಾಗಿದೆ ಆದರೂ ಕೂಡ ಅದು ವಯಕ್ತಿಕ ರೀತಿಯಲ್ಲಿ ಸಹಾಯಮಾಡುತ್ತಿದೆ.

ಓದಿರಿ: 'ಮೊಡೊಬ್ಯಾಗ್' ಸೂಟ್‌ಕೇಸ್‌: ಲಗೇಜ್ ಎಷ್ಟೇ ಇರಲಿ ಕುಳಿತು ಡ್ರೈವ್‌ಮಾಡಿ!

ವಯಕ್ತಿಕ ರೊಬೊಟ್‍ಗಳು ನಮ್ಮ ದಿನನಿತ್ಯದ ಜೀವನದಲ್ಲಿ ಸಹಾಯ ಮಾಡುತ್ತಿದೆ. ಈ ವಯಕ್ತಿಕ ರೊಬೊಟ್ಸ್ ತನ್ನ ಉಪಯುಕ್ತತೆಗಳಿಂದ ಭವಿಷ್ಯದಲ್ಲಿ ತುಂಬಾ ಮಹತ್ವದ ಸ್ಥಾನ ಹೊಂದಲಿದೆ. ಕೆಳಗಟೆ ನೋಡಿ ಹೇಗೆ 5 ರೀತಿಯಲ್ಲಿ ರೊಬೊಟ್ಸ್ ನಮ್ಮ ಬದುಕನ್ನು ಭವಿಷ್ಯದಲ್ಲಿ ಹೇಗೆ ಬದಲಿಸಲಿದೆಯೆಂದು.

ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ಸಹಾಯಕ

ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ಸಹಾಯಕ

ವಯಕ್ತಿಕ ರೊಬೊಟ್ಸ್ ಗಳ ವಿಷಯ ಬಂದಾಗ , ಭವಿಷ್ಯದಲ್ಲಿ ಇದನ್ನು ಮುಖ್ಯವಾಗಿ ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ಉಪಯೋಗಿಸಲಾಗುವುದು. ಅಂದಾಜು ಮಾಡಿರುವ ಹಾಗೆ 2050 ರ ಒಳಗೆ 65 ವರ್ಷಕ್ಕೆ ಮೇಲ್ಪಟ್ಟವರ ಸಂಖ್ಯೆ 100 ಶೇಕಡಾ ಹೆಚ್ಚಲಿದೆ ಮತ್ತು ಯುವಕರ ಸಂಖ್ಯೆ ಕೇವಲ 1/6 ರಷ್ಟು ಮಾತ್ರ ಹೆಚ್ಚಲಿದೆ.

ಈ ರೊಬೊಟ್‍ಗಳು ದಿನನಿತ್ಯದ ಕೆಲಸವನ್ನು ಸುಲಭಮಾಡುತ್ತದೆ ಹಿರಿಯರಿಗೆ ಸ್ನಾನ ಮಾಡಿಸುವುದು,ಭಾರದ ವಸ್ತುಗಳನ್ನು ಎತ್ತುವುದು ಮತ್ತು ಟ್ರಿವಿಯಾ ಆಟಗಳ ಮೂಲಕ ಅವರ ಮಿದುಳನ್ನು ಚುರುಕಾಗಿ ಇಡುತ್ತದೆ.

ಅವುಗಳು ವಿಶೇಷವಾಗಿರುತ್ತವೆ

ಅವುಗಳು ವಿಶೇಷವಾಗಿರುತ್ತವೆ

ನಿಮಗೆ ಕೆಲಸ ಕೊಡುವ ಬದಲು ಈ ವ್ಯಕ್ತಿಗತ ರೊಬೊಟ್‍ಗಳಿಗೆ ಮುಖದ ಭಾವ, ಶಾರೀರಿಕ ಭಾಷೆ ಮತ್ತು ಮೌಖಿಕ ಸಹ್ನೆ ಗಳನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯ ನೀಡಲಾಗಿದೆ ಮತ್ತು ಮನುಷ್ಯರೊಡನೆ ಸಂವಾದ ನಡೆಸುತ್ತದೆ. ಈ ರೊಬೊಟ್‍ಗಳು ಸಹ್ನೆಗಳನ್ನು ಓದುತ್ತವೆ ಮತ್ತು ವಯಕ್ತಿಕ ಹಾಗೂ ಸಜೀವ ರೀತಿಯ ಸಂವಾದ ನಡೆಸುತ್ತದೆ.

ನಿಮ್ಮೊಡನೆ ತಂಡದಲ್ಲಿ ಸೇರುವುದು

ನಿಮ್ಮೊಡನೆ ತಂಡದಲ್ಲಿ ಸೇರುವುದು

ವಯಕ್ತಿಕ ಜೀವನದಲ್ಲಿ ತನ್ನ ಛಾಪು ಹಾಕಲು , ರೊಬೊಟ್‍ಗಳಿಗೆ ಮನುಷ್ಯರಂತೆ ಇರಬೇಕಾದ ಅವಶ್ಯಕತೆಯಿಲ್ಲಾ. ಇನ್ನೂ ಹೇಳಬೇಕೆಂದರೆ ಇದು ಬೇರೆಯವರೊಡನೆ ಸಂವಾದ ನಡೆಸುವ ರೀತಿ ನೋಡಿದರೆ ಇದು ಜೀವನದ ಮೌಲ್ಯವನ್ನು ಹೆಚ್ಚಿಸುತ್ತದೆ. ಸ್ವಾರ್ಮ್ ರೊಬೊಟ್ ಟೆಕ್ನೊಲೊಜಿಯಿಂದ,ರೊಬೊಟ್ ಪರಸ್ಪರ ಮಾತನಾಡಲು ಸಾಧ್ಯವಾಗಿದೆ ಹೀಗಾಗಿ ಸುರಕ್ಷಿತ ಡ್ರೈವಿಂಗ್ ಅಥವಾ ರೋಗಗಳೊಂದಿಗೆ ಹೋರಾಡಲು ದೇಹದೊಳಗೆ ಇಂಜೆಕ್ಷನ್ ಹಾಕುವುದು ಇವುಗಳೆಲ್ಲವನ್ನು ಸುಲಭವಾಗಿ ಮಾಡುತ್ತದೆ.

ನಿಮ್ಮ ರೊಬೊಟ್ ಅನ್ನು ಕಸ್ಟಮೈಜ್ ಮಾಡಬಹುದು

ನಿಮ್ಮ ರೊಬೊಟ್ ಅನ್ನು ಕಸ್ಟಮೈಜ್ ಮಾಡಬಹುದು

ಸೈಕೊಲೊಜಿಕಲ್ ರಿಸರ್ಚ್ ಹೇಳುತ್ತದೆ ಮಾನವ ತನ್ನಂತೆ ಇರುವ ಇನ್ನೊಂದೇನಾದರು ಇರಲು ಉತ್ಸುಕನಾಗಿದ್ದಾನೆ, ಹೀಗಾಗಿ ಭವಿಷ್ಯದಲ್ಲಿನ ರೊಬೊಟ್‍ಗಳು ನಮಗೆ ಲಿಂಗ, ವಯಸ್ಸು, ಧ್ವನಿ ಮತ್ತು ಇನ್ನಿತರ ವಿಷಯಗಳನ್ನು ಆಯ್ಕೆ ಮಾಡಲು ಅನುಮತಿ ನೀಡುತ್ತದೆ , ನಿಮ್ಮ ಅನುಭವವನ್ನು ಮತ್ತಷ್ಟು ವೈಯಕ್ತಿಕ ಮಾಡಲು.

ರೊಬೊಟ್ಸ್ ನಿಮ್ಮ ಕುಟುಂಬದ ಸದಸ್ಯ ಆಗಲಿದೆ

ರೊಬೊಟ್ಸ್ ನಿಮ್ಮ ಕುಟುಂಬದ ಸದಸ್ಯ ಆಗಲಿದೆ

ಇದಕ್ಕಾಗಿ ತುಂಬಾ ಸಮಯ ಕಾಯಬೇಕಾಗಿಲ್ಲಾ. ವಯಕ್ತಿಕ ರೊಬೊಟ್ಸ್ ಸೋಷಿಯಲ್ ರೊಬೊಟ್ ಎನ್ನುವ ಹೆಸರಲ್ಲಿ ಬರಲಿದೆ ಮತ್ತು ಜಿಬೊ ಪ್ರಪಂಚದ ಮೊದಲ ಅಂತಹ ಸೋಷಿಯಲ್ ರೊಬೊಟ್ ಆಗಲಿದೆ.

Most Read Articles
Best Mobiles in India

Read more about:
English summary
Robots have become useful and the robotic technology has progressed a lot these days. Check out five ways in which the robots can change your life.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more