Subscribe to Gizbot

ಲೈವ್‌ನಲ್ಲಿಯೇ 'ಐಫೋನ್' ಹ್ಯಾಕ್ ಮಾಡಿದ ಹ್ಯಾಕರ್!!..ಇಂತಹ ಶಾಕಿಂಗ್ ವಿಡಿಯೋ ನೀವು ನೋಡಿರೊಲ್ಲಾ!!

Written By:

ಇಲ್ಲಿಯವರೆಗೂ ನೀವು ಸೈಬರ್ ಕ್ರಿಮಿನಲ್‌ಗಳು ಸ್ಮಾರ್ಟ್‌ಫೋನ್‌ಗಳನ್ನು ಹೇಗೆಲ್ಲಾ ಹ್ಯಾಕ್ ಮಾಡಬಹುದು ಎಂಬುದರ ಬಗ್ಗೆ ಮಾತ್ರ ಕೇಳಿರುತ್ತೀರಾ.! ಆದರೆ, ಇಂದಿನ ಒಂದು ವಿಡಿಯೋದಲ್ಲಿ ಹ್ಯಾಕರ್‌ಗಳು ಸ್ಮಾರ್ಟ್‌ಫೋನ್‌ಗಳನ್ನು ಕ್ಷಣಾರ್ಧದಲ್ಲಿ ಹೇಗೆ ಹ್ಯಾಕ್ ಮಾಡುತ್ತಾರೆ ಎಂಬುದನನ್ನು ಲೈವ್ ಆಗಿ ನೋಡಬಹುದು.!!

ಲೈವ್‌ನಲ್ಲಿಯೇ 'ಐಫೋನ್' ಹ್ಯಾಕ್ ಮಾಡಿದ ಹ್ಯಾಕರ್!!.ಶಾಕಿಂಗ್ ವಿಡಿಯೋ!!

ಹೌದು, ಸ್ಮಾರ್ಟ್‌ಫೋನ್ ಬಳಕೆದಾರರು ಒಂದು ಕ್ಷಣ ಬೆಚ್ಚಿ ಬೀಳುವಂತಹ ಲೈವ್ ಹ್ಯಾಕಿಂಗ್ ಕಾರ್ಯಕ್ರವೊಂದನ್ನು ಪ್ರಮುಖ ಇಂಗ್ಲೀಷ್ ಮೀಡಿಯಾ ಒಂದು ಪ್ರಸಾರ ಮಾಡಿದೆ.! '60 ಮಿನಿಟ್ಸ್ ಷೋ' ಎಂಬ ಕಾರ್ಯಕ್ರಮದಲ್ಲಿ ಹ್ಯಾಕರ್‌ಗಳಿಗೆ ಚಾಲೆಂಜ್ ಮಾಡಿದ್ದ ಆಂಕರ್ ಸಹ ದಂಗಾದ ವಿಡಿಯೋ ಇದಾಗಿದೆ.! ಹಾಗಾದರೆ, ಈ ಕಾರ್ಯಕ್ರಮ ಹೇಗೆ ನಡೆಯಿತು? ಹ್ಯಾಕರ್‌ಗಳು ಹೇಗೆ ಹ್ಯಾಕ್ ಮಾಡಿದರು? ಎಂಬೆಲ್ಲಾ ಮಾಹಿತಿ ತಿಳಿಯಿರಿ ಮತ್ತು ವಿಡಿಯೋ ನೋಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!
ಸ್ಮಾರ್ಟ್‌ಫೋನ್ ಅಟ್ಯಾಕ್!!

ಸ್ಮಾರ್ಟ್‌ಫೋನ್ ಅಟ್ಯಾಕ್!!

ಪ್ರಪಂಚದಲ್ಲಿ ಈಗಾಗಲೇ 250 ಕೋಟಿಗೂ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆದಾರರಿದ್ದು, ಸ್ಮಾರ್ಟ್‌ಫೋನ್‌ಗಳ ತಂತ್ರಜ್ಞಾನ ಎಷ್ಟೇ ಸುರಕ್ಷಿತವಾಗಿದ್ದರೂ ಕೂಡ ಹ್ಯಾಕರ್‌ಗಳು ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ.!! ಹಾಗಾಗಿ, ಈ ವಿಡಿಯೋದಲ್ಲಿ ಹ್ಯಾಕರ್‌ಗಳು ಹ್ಯಾಕ್ ಹೇಗೆ ಮಾಡುತ್ತಾರೆ ಎಂಬುದನ್ನು ಲೈವ್ ಆಗಿ ತೋರಿಸಿದ್ದಾರೆ.!!

ಹ್ಯಾಕರ್‌ಗಳಿಗೆ ಚಾಲೆಂಜ್!!

ಹ್ಯಾಕರ್‌ಗಳಿಗೆ ಚಾಲೆಂಜ್!!

ಇಂದಿನ ವಿಡಿಯೋದಲ್ಲಿ, ಸಿಬಿಎಸ್ ಎನ್ನುವ ಚಾನೆಲ್‌ನಲ್ಲಿ 60 ಮಿನಿಟ್ಸ್ ಷೋ' ಎಂಬ ಕಾರ್ಯಕ್ರಮದಲ್ಲಿ ಹ್ಯಾಕರ್‌ಗಳಿಗೆ ಸ್ಮಾರ್ಟ್‌ಫೋನ್ ಅನ್ನು ಹ್ಯಾಕ್ ಮಾಡುವ ಚಾಲೆಂಜ್ ಅನ್ನು ನೀಡಲಾಗಿತ್ತು. 5 ಜನ ಸ್ಪೆಷಲಿಸ್ಟ್ ಹ್ಯಾಕರ್‌ಗಳನ್ನು ಕರೆಸಿ ಸ್ಮಾರ್ಟ್‌ಫೋನ್‌ಗಳನ್ನು ಲೈವ್ ಆಗಿ ಹ್ಯಾಕ್ ಮಾಡಲು ಚಾಲೆಂಜ್ ನೀಡಲಾಗಿತ್ತು.!!

ಐಫೋನ್ ಹ್ಯಾಕಿಂಗ್ ಚಾಲೆಂಜ್!!

ಐಫೋನ್ ಹ್ಯಾಕಿಂಗ್ ಚಾಲೆಂಜ್!!

ವಿಶ್ವದಲ್ಲಿಯೇ ಅತ್ಯಂತ ಸೆಕ್ಯೂರ್ ಫೋನ್‌ಗಳು ಎಂದು ಹೆಸರಾಗಿರುವ ಆಪಲ್ ಕಂಪೆನಿಯ ಐಫೋನ್ ಅನ್ನು ಹ್ಯಾಕ್ ಮಾಡಲು ಹ್ಯಾಕರ್‌ಗಳು ಚಾಲೆಂಜ್ ಸ್ವೀಕರಿಸಿದ್ದಾರೆ.!! ಚಾಲೇಂಜ್ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿಯೇ ಆ ಆಪಲ್ ಐಫೋನ್ ಅನ್ನು ಹ್ಯಾಕ್ ಮಾಡಿದ್ದಾರೆ.!!

ಫೋನ್ ಹ್ಯಾಕ್ ಮಾಡಿದ್ದು ಹೇಗೆ?

ಫೋನ್ ಹ್ಯಾಕ್ ಮಾಡಿದ್ದು ಹೇಗೆ?

ಟಿವಿ ಆಂಕರ್ ಬಳಿ ಕುಳಿತ ಹ್ಯಾಕರ್‌ಗಳ ತಂಡ ತನ್ನದೇ ಸ್ವಂತ ಫೇಕ್ 'ವೈಫೈ' ಸೃಷ್ಟಿಸಿದ್ದಾರೆ. ನಂತರ ಆ ವೈಫೈಗೆ ಲಾಗಿನ್ ಆಗಲು ಆಂಕರ್‌ಗೆ ತಿಳಿಸಿದ್ದಾರೆ.! ಟಿವಿ ಆಂಕರ್ ಆ ವೈಫೈಗೆ ಲಾಗಿನ್ ಆಗಿ ಕೆಲವೇ ಕ್ಷಣಗಳಲ್ಲಿ ಹ್ಯಾಕರ್‌ಗಳು ಆಂಕರ್‌ನ ಫೋನ್ ಹ್ಯಾಕ್ ಮಾಡಿದ್ದಾರೆ.!!

ಎಲ್ಲಾ ಮಾಹಿತಿಗಳು ಲೀಕ್!!

ಎಲ್ಲಾ ಮಾಹಿತಿಗಳು ಲೀಕ್!!

ಹ್ಯಾಕರ್‌ಗಳು ಸೃಷ್ಟಿಸಿದ್ದ ವೈಫೈಗೆ ಆಂಕರ್ ಲಾಗಿನ್ ಆದ ಕ್ಷಣದಲ್ಲಿಯೇ ಹ್ಯಾಕರ್‌ಗಳು ಆಂಕರ್ ಮೊಬೈಲ್‌ನಲ್ಲಿನ ಡೇಟಾವೆಲ್ಲವನ್ನು ಹ್ಯಾಕ್ ಮಾಡಿದ್ದಾರೆ.!! ಹ್ಯಾಕ್ ಆದ ಸ್ಮಾರ್ಟ್‌ಫೋನ್‌ನಲ್ಲಿದ್ದ ಎಲ್ಲಾ ಪಾಸ್‌ವರ್ಡ್‌ಗಳು ಮತ್ತು ಮಾಹಿತಿಗಳನ್ನು ಕ್ಷಣಮಾತ್ರದಲ್ಲಿ ಕದ್ದು ತೋರಿಸಿದ್ದಾರೆ.!!

ಓದಿರಿ:ತಂತ್ರಜ್ಞಾನ ಕ್ಷೇತ್ರಕ್ಕೆ 2017 'ವಿಫಲತೆಯ ವರ್ಷ'!!..ಏಕೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
"60 Minutes" shows how easily your phone can be hacked. to know more visit to kannada.gibot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot