777888999 ನಂಬರ್ ನಿಂದ ಬರಲಿದೆ ಹಾಕ್ಸ್ ಕಾಲ್ : ರಿಸೀವ್ ಮಾಡಬೇಕೆ..? ಬೇಡವೇ..?

777888999 ಎಂಬ ಸಂಖ್ಯೆಯಿಂದ ಕರೆ ಬರಲಿದೆ ಅದನ್ನು ಸ್ವೀಕರರಿಸಿದರೆ ನಿಮ್ಮ ಮೊಬೈಲ್ ಬ್ಲಾಸ್ಟ್ ಆಗಲಿದೆ ಎನ್ನುವ ಮೇಸೆಜ್ ಕಳೆದ ಒಂದುವಾರದಿಂದ ಹರಿದಾಡುತ್ತಿದ್ದು,

|

ಫೇಸ್‌ಬುಕ್ ಮತ್ತು ವಾಟ್ಸ್‌ಆಪ್‌ನಲ್ಲಿ ವೈರಲ್ ಮೇಸೆಜ್ ಒಂದು ಓಡಾಡುತ್ತಿದ್ದು, ಎಲ್ಲೇಡೆ ಭಾರೀ ಚರ್ಚೆಗೆ ಗುರಿಯಾಗಿದೆ. 777888999 ಎಂಬ ಸಂಖ್ಯೆಯಿಂದ ಕರೆ ಬರಲಿದೆ ಅದನ್ನು ಸ್ವೀಕರಿಸಿದರೆ ನಿಮ್ಮ ಮೊಬೈಲ್ ಬ್ಲಾಸ್ಟ್ ಆಗಲಿದೆ ಎನ್ನುವ ಮೇಸೆಜ್ ಕಳೆದ ಒಂದು ವಾರದಿಂದ ಹರಿದಾಡುತ್ತಿದ್ದು, ನಿಮ್ಮ ಮೊಬೈಲ್‌ಗೂ ಈ ಮೇಸೆಜ್ ಬಂದಿದ್ದರೆ ಆಶ್ಚರ್ಯಪಡುವ ಅಗತ್ಯವಿಲ್ಲ.

777888999 ನಂಬರ್ ನಿಂದ ಬರಲಿದೆ ಹಾಕ್ಸ್ ಕಾಲ್ : ರಿಸೀವ್ ಮಾಡಬೇಕೆ..? ಬೇಡವೇ..?

ಈಗಾಗಲೇ ಹಲವು ವಾಟ್ಸ್ಆಪ್ ಗ್ರೂಪ್‌ಗಳಲ್ಲಿ ಮತ್ತು ಫೇಸ್‌ಬುಕ್ ಗ್ರೂಪ್‌ಗಳಲ್ಲಿ ಈ ಮಸೇಜ್ ಹರಿದಾಡುತ್ತಿದ್ದು, ಇದನ್ನು ಹುಟ್ಟಿಹಾಕಿದವರು ಯಾರು ಎನ್ನುವ ಪ್ರಶ್ನೆಗೆ ಇನ್ನು ಉತ್ತರ ದೊರೆತಿಲ್ಲ. ಆದರೆ ಈ ನಂಬರ್ ನಿಂದ ನಿಜವಾಗಿಯೂ ಕಾಲ್ ಬರಲಿದೆಯೇ ಇಲ್ಲ ಇದೊಂದು ಹೆದರಿಸುವ ತಂತ್ರವೇ ಎಂದಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ಏನೀದು 777888999?

ಏನೀದು 777888999?

ಸದ್ಯ ವಾಟ್ಸ್ಆಪ್ ಗ್ರೂಪ್‌ಗಳಲ್ಲಿ ಅತೀ ವೇಗವಾಗಿ ಹರಿದಾಡುತ್ತಿರುವ ಮೆಸೆಜ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಫೋನ್ ನಂಬರ್ ಇದಾಗಿದ್ದು, "URGENT? pl don't attend any Call of mob no ...777888999....if u attend. Call your mobile will blast .....pl share to your friends ..." ಎಂಬ ಸಂದೇಶವು ಎಲ್ಲೇಡೆಯಿಂದ ರವಾನೆಯಾಗುತ್ತಿದೆ.

ಇದರ ಹಿಂದಿಯೇ ಮತ್ತೊಂದು ಕಥೆ:

ಇದರ ಹಿಂದಿಯೇ ಮತ್ತೊಂದು ಕಥೆ:

ಈ ನಂಬರ್ ನಿಂದ ಕರೆ ಬಂದ ತಕ್ಷಣ ಮಹಿಳೆಯೊಬ್ಬರು ರಿಸಿವ್ ಮಾಡಿದ್ದಾರೆ, ಮಾಡಿದ ತಕ್ಷಣ ಆಕೆ ಫೋನ್ ಬ್ಲಾಸ್ಟ್ ಆಗಿದ್ದು, ಆಕೆ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಹೀಗಾಗಿ ಆಕೆಯ ಮನೆಯವರು ಮತ್ತು ಸಂಬಂಧಿಕರು ಇನ್ಯಾರು ಈ ರೀತಿಯಲ್ಲಿ ದಾಳಿಗೆ ಸಿಲುಕಬಾರದು ಎಂದು ಈ ಮೇಸೆಜ್ ಅನ್ನು ಕಳುಹಿಸಿದ್ದಾರೆ ಎನ್ನುವ ಕಥೆಯೊಂದು ಹರಿದಾಡುತ್ತಿದೆ.

ನಿಜವಾಗಿಯೂ ಕರೆ ಬರಲಿದೆಯೇ..?

ನಿಜವಾಗಿಯೂ ಕರೆ ಬರಲಿದೆಯೇ..?

ಇದೊಂದು ನಕಲಿ ಮೇಸೆಜ್ ಆಗಲಿದ್ದು, ಯಾರು ಸಹ ಭಯ ಭೀತರಾಗಬೇಕಾಗಿಲ್ಲ. ಇಂತಹ ಮೇಸೆಜ್‌ಗಳು ವಾಟ್ಸ್‌ಆಪ್‌ನಲ್ಲಿ ದಿನಕ್ಕೆ ನೂರಾರು ಹರಿದಾಡುತ್ತಿರುತ್ತವೆ. ಇದಕ್ಕೆ ಜನರು ತಲೆ ಕೆಡೆಸಿಕೊಳ್ಳು ಅವಶ್ಯಕತೆ ಇಲ್ಲ.

ಇದೊಂದು ನಕಲಿ ಜಾಲ:

ಇದೊಂದು ನಕಲಿ ಜಾಲ:

ಈ ಮೊಬೈಲ್ ನಂಬರ್ ನಲ್ಲಿ ಕೇವಲ ಒಂಬತ್ತು ಸಂಖ್ಯೆಗಳಿದ್ದು, ಯಾವುದೇ ನಂಬರ್ ನಿಂದ ಕರೆ ಮಾಡಬೇಕಾದೆ ಕನಿಷ್ಠ ಪಕ್ಷ ಅದರಲ್ಲಿ ಹತ್ತು ಅಂಕೆಗಳು ಇರಲೇ ಬೇಕು. ಹಾಗಾಗಿ ಇದು ನಕಲಿ ಜಾಲ. ಇನ್ನೊಂದು ಉದಾಹರಣೆ ಎಂದರೆ ಕರೆ ಮಾಡಿದರೆ ಬರುವ ರೆಡಿಯೋ ತರಂಗತರದಿಂದ ನಿಮ್ಮ ಮೇಲೆ ಯಾವುದೇ ದಾಳಿಯನ್ನು ಮಾಡಲು ಸಾಧ್ಯವೇ ಇಲ್ಲ.

ನಾವೇನು ಮಾಡಬೇಕು:

ನಾವೇನು ಮಾಡಬೇಕು:

ಈ ರೀತಿಯ ಮೇಸೆಜ್ ಬಂದ ಸಮಯದಲ್ಲಿ ಹಿಂದೂ ಮುಂದೆ ನೋಡದೆ ಎಲ್ಲಾ ಗ್ರೂಪ್‌ಗಳಲ್ಲಿಯೂ ಶೇರ್ ಮಾಡುವುದನ್ನು ತಪ್ಪಿಸಬೇಕು, ಮೊದಲು ತಮಗೆ ಸಿಕ್ಕಿರುವ ಸುದ್ದಿಯನ್ನು ನಂಬಬೇಕೆ ಬೇಡವೇ ಎಂಬುದನ್ನು ಯೋಚಿಸ ಬೇಕು. ಈ ರೀತಿಯ ರೂಮರ್ಗಳನ್ನು ಹರಡುವುದನ್ನು ತಪ್ಪಸಬೇಕು..

Best Mobiles in India

Read more about:
English summary
Those who've been on social platforms like Facebook and WhatsApp would perhaps know by now that not everything can and should be trusted. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X