ಡಿಜಿಟಲ್ ಭಾರತದಿಂದ ವಯಸ್ಕರಿಗೆ ತೊಂದರೆಯಾಗುತ್ತಿದೆಯೇ?..ಸಮೀಕ್ಷೆ ಏನನ್ನುತ್ತಿದೆ?

ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಸೇರಿ ಡಿಜಿಟಲ್‌ ಸಾಧನಗಳ ಬಳಕೆ ಬಗ್ಗೆ ಅರಿವು ಇಲ್ಲದ ಕಾರಣಕ್ಕೆ ವಯಸ್ಕರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಮತ್ತು ಡಿಜಿಟಲ್ ಅನಕ್ಷರಸ್ಥತೆ ಬಹುದೊಡ್ಡ ಸವಾಲು ಎಂದು ಹೊಸ ಸಮೀಕ್ಷೆ ಹೇಳಿದೆ.!!

|

ವಯಸ್ಕರು ಮತ್ತು ಅನಕ್ಷರಸ್ಥರಿಗೆ ಡಿಜಿಟಲ್ ಯುಗದಿಂದ ಬಹಳಷ್ಟು ತೊಂದರೆ ಆಗುತ್ತಿದೆ ಎಂದರೆ ನೀವು ನಂಬಲೇಬೇಕು.! ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಮತ್ತು ಎಲ್ಲಾ ಡಿಜಿಟಲ್‌ ಸಾಧನಗಳ ಬಳಕೆ ಬಗ್ಗೆ ಅರಿವು ಇಲ್ಲದೇ ಇರುವವರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.!!

ಡಿಜಿಟಲ್ ಇಂಡಿಯಾದ ರೂಪುರೇಷೆಯು ಅಕ್ಷರಸ್ಥ ಯುಜನತೆಗಷ್ಟೆ ಸಹಕಾರಿಕಾರಿಯಾಗಿದ್ದು, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಸೇರಿ ಡಿಜಿಟಲ್‌ ಸಾಧನಗಳ ಬಳಕೆ ಬಗ್ಗೆ ಅರಿವು ಇಲ್ಲದ ಕಾರಣಕ್ಕೆ ವಯಸ್ಕರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಮತ್ತು ಡಿಜಿಟಲ್ ಅನಕ್ಷರಸ್ಥತೆ ಬಹುದೊಡ್ಡ ಸವಾಲು ಎಂದು ಹೊಸ ಸಮೀಕ್ಷೆ ಹೇಳಿದೆ.!!

ಏಜ್‌ವೆಲ್ ಫೌಂಡೇಷನ್ ಎಂಬ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, ಡಿಜಿಟಲ್ ಅನಕ್ಷರಸ್ಥತೆ ಇರುವವರು ಒಂದು ವ್ಯವಸ್ಥೆಯಿಂದ ಮತ್ತೊಂದು ವ್ಯವಸ್ಥೆಗೆ ಬಹುಬೇಗ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ ಎಂದು ತಿಳಿಸಿದೆ.! ಹಾಗಾದರೆ ಈ ಸಮೀಕ್ಷೆ ವರದಿಗಳೇನು? ಎಷ್ಟು ಜನರನ್ನು ಸಮೀಕ್ಷೆ ಮಾಡಲಾಗಿದೆ? ಇದು ಡಿಜಿಟಲ್ ಯುಗದ ಅಪವಾದವೆ ಎಂಬುದನ್ನು ಕೆಳಗಿನ ಸ್ಲೈಡರ್ಗಳಲ್ಲಿ ತಿಳಿಯಿರಿ.!!

 5,000 ವಯಸ್ಕರ ಸಮೀಕ್ಷೆ!!

5,000 ವಯಸ್ಕರ ಸಮೀಕ್ಷೆ!!

ಏಜ್‌ವೆಲ್‌ ಫೌಂಡೇಷನ್ ನಡೆಸಿರುವ ಸಮೀಕ್ಷೆಯಲ್ಲಿ ಒಟ್ಟು 5,000 ವಯಸ್ಕರನ್ನು ಆಯ್ದುಕೊಳ್ಳಲಾಗಿದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ 85.8 ರಷ್ಟು ಮಂದಿ ಡಿಜಿಟಲ್‌ ಅನಕ್ಷರಸ್ಥರಾಗಿದ್ದಾರೆ. ಶೇ 76.5ರಷ್ಟು ಜನರು ವಯಸ್ಕ ಪುರುಷರು. ಶೇ 95ರಷ್ಟು ಮಂದಿ ವಯಸ್ಕ ಮಹಿಳೆಯರು ಇಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.!!

ಸಮೀಕ್ಷೆ ವರದಿಗಳೇನು?

ಸಮೀಕ್ಷೆ ವರದಿಗಳೇನು?

  • ವಯಸ್ಕರಿಗೆ ಆಧುನಿಕ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಾಧನಗಳನ್ನು ಬಳಸಲು ಕಷ್ಟವಾಗುತ್ತಿದೆ.!
  • ಸಮೀಕ್ಷೆಯ 44.6% ಜನರು ಡಿಜಿಟಲ್‌ ಸಾಕ್ಷರತೆ ಬಗ್ಗೆ ಮಾಹಿತಿಯೇ ಇಲ್ಲ ಎಂದು ಹೇಳಿದ್ದಾರೆ.!!
  • ಕಂಪ್ಯೂಟರ್‌ ಮತ್ತು ಡಿಜಿಟಲ್‌ ತರಬೇತಿ ಪಡೆಯುವ ಸೌಲಭ್ಯ ಎನಲ್ಲಿದೆ ಎಂದು ತಿಳಿಯದವರು 51%‌!!
  • ಬಹಳ ಪರಿಣಾಮ ಬೀರುತ್ತಿದೆ!!

    ಬಹಳ ಪರಿಣಾಮ ಬೀರುತ್ತಿದೆ!!

    ಶೇ 74.9ರಷ್ಟು ಜನರು ಕಂಪ್ಯೂಟರ್‌ ಮತ್ತು ಡಿಜಿಟಲ್‌ ಸಾಧನಗಳ ಬಳಕೆ ಗೊತ್ತಿಲ್ಲದಿರುವುದು ನಮ್ಮ ಜೀವನದ ಮೇಲೆ ಬಹಳ ಪರಿಣಾಮ ಬೀರುತ್ತಿದೆ. ಹಿರಿಯ ವಯಸ್ಸಿನವರು ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಬಳಸಲು ಹರಸಾಹಸ ಪಡುತ್ತಿದ್ದಾರೆ.!!

    ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ.!!

    ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ.!!

    ಆಧುನಿಕ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಾಧನಗಳ ಬಳಕೆ ಗೊತ್ತಿಲ್ಲದೇ ಇರುವುದರಿಂದ ಮಾಹಿತಿ ತಂತ್ರಜ್ಞಾನ ಮತ್ತು ಇಂಟರ್‌ನೆಟ್‌ ಆಧರಿತ ಆಡಳಿತದಿಂದ ನಾವು ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ ಎಂದು ಶೇ 82.4ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.!!

    ದೆಹಲಿಯಲ್ಲಿ ಸಮೀಕ್ಷೆ!!

    ದೆಹಲಿಯಲ್ಲಿ ಸಮೀಕ್ಷೆ!!

    ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಿನಲ್ಲಿ ಏಜ್‌ವೆಲ್‌ ಫೌಂಡೇಷನ್ ಈ ಬಗ್ಗೆ ಸಮೀಕ್ಷೆ ನಡೆಸಿದ್ದು, ದೆಹಲಿಯ ಸುತ್ತಮುತ್ತ ಪ್ರದೇಶದಲ್ಲಿ ಈ ಸಮೀಕ್ಷೆ ನಡೆದಿದೆ.! ದೆಹಲಿಯಲ್ಲಿ ಇರಬಹುದಾದ ಪರಿಸ್ಥಿತಿಯೇ ದೇಶದ ಹಲವೆಡೆ ಇದೆ ಎನ್ನಬಹುದಾದ್ದರಿಂದ ಸಮೀಕ್ಷೆ ವಾಸ್ತವವಾಗಿದೆ ಎನ್ನಬಹುದು.!!

    ಓದಿರಿ:ದುಬೈನಲ್ಲಿನ್ನು ಸ್ವಯಂಚಾಲಿತ ಏರ್‌ಟ್ಯಾಕ್ಸಿ ಸೇವೆ!..ಯಶಸ್ವಿ ಹಾರಾಟ ನಡೆಸಿದ ಏರ್‌ಟ್ಯಾಕ್ಸಿ!!

Best Mobiles in India

English summary
While the digitally illiterate are keen to learn soft skills, about 51 per cent claimed that there are hardly any facilities where they can do so.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X