ಈ ಸುಂದರಿ ರೊಬೋಟ್ ಎಂದರೆ ನೀವು ಖಂಡಿತ ನಂಬಲಾರಿರಿ!!

By Shwetha
|

ನೀವು ಹೆಚ್ಚಿನ ಮಾನವ ರೊಬೋಟ್‌ಗಳನ್ನು ಕಂಡಿರುತ್ತೀರಿ ಅಲ್ಲವೇ? ಅವುಗಳೆಲ್ಲಾ ಟರ್ಮಿನೇಟರ್ ಡ್ರಾಯ್ಡ್ಸ್‌ಗಳಂತೆ ಕಾಣಿಸಿಕೊಳ್ಳುತ್ತವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಬಾಲ್ಯದ ಕನಸಾದ ಮಾನವ ರೊಬೋಟ್ ಅನ್ನು ತಯಾರಿಸುವ ನನಸು ಮಾಡಿಕೊಂಡಿದ್ದು ಈ ರೊಬೋಟ್ ಅಮೇರಿಕನ್ ನಟಿ, ರೂಪದರ್ಶಿ ಹಾಗೂ ಹಾಡುಗಾರ್ತಿ ಸ್ಕಾರ್‌ಲೆಟ್ ಜಾನ್‌ಸನ್‌ನಂತೆಯೇ ಇದ್ದಾರೆ.

ಹಾಂಕ್‌ಕಾಂಗ್ ಮೂಲದ ಸಂಶೋಧಕ ಮತ್ತು ವಿನ್ಯಾಸಕಾರ ರಿಕಿ ಮಾ, ಮಾನವನಂತೆಯೇ ಕಾಣುವ ರೊಬೋಟ್ ಅನ್ನು ಸೃಷ್ಟಿಸಿದ್ದು ಇದನ್ನು "ಮಾರ್ಕ್ 1" ಎಂದು ಕರೆಯಲಾಗಿದೆ. ಇದು ಬರಿಯ ರೊಬೋಟ್ ಮಾತ್ರವಲ್ಲದೆ, ಮಹಿಳಾ ರೊಬೋಟ್ ಆಗಿದ್ದು ಹಾಲಿವುಡ್ ನಟಿಯಂತೆಯೇ ಇದು ಕಾಣುತ್ತಿದೆ.

ಮೂಲಗಳ ಪ್ರಕಾರ ರಿಕಿ ಮಾ ಬಾಲ್ಯದಲ್ಲಿಯೇ ರೊಬೋಟ್‌ಗಳ ಮೇಲೆ ಪ್ರೀತಿಯನ್ನು ಇರಿಸಿಕೊಂಡಿದ್ದಾರೆ. ಇವರು ಒಂದೂವರೆ ವರ್ಷಗಳಷ್ಟು ಕಾಲ ಈ ರೊಬೋಟ್ ಅನ್ನು ತಯಾರಿಸಲು ಕಾಲಾವಕಾಶ ತೆಗೆದುಕೊಂಡಿದ್ದು ಈ ರೊಬೋಟ್ ಕುರಿತಾದ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

#1

#1

ನಾನು ಮಗುವಾಗಿದ್ದಾಗಿನಿಂದ ನನಗೆ ರೊಬೋಟ್‌ಗಳೆಂದರೆ ಇಷ್ಟ. ಅನಿಮೇಶನ್ ಅನ್ನು ನಾನು ಹೆಚ್ಚು ವೀಕ್ಷಿಸುವುದರಿಂದ ರೊಬೋಟ್ ನನಗೆ ಪ್ರಿಯವಾಗಿದೆ. ಎಲ್ಲಾ ಮಕ್ಕಳಿಗೂ ರೊಬೋಟ್ ಮತ್ತು ಅನಿಮೇಶನ್ ಇಷ್ಟಪಡುತ್ತಾರೆ. ಟ್ರಾನ್ಸ್‌ಫಾರ್ಮರ್ಸ್, ಕಾರ್ಟೂನ್ಸ್ ಅಂತೆಯೇ ರೊಬೋಟ್‌ಗಳ ಹೊಡೆದಾಟ, ರೊಬೋಟ್ ಗೇಮ್ಸ್ ಮಕ್ಕಳಿಗೆ ಹೆಚ್ಚು ಇಷ್ಟವಾಗುವುದು.

#2

#2

ನಾನು ದೊಡ್ಡದಾದ ನಂತರ ರೊಬೋಟ್ ಮಾಡಬೇಕೆಂಬ ಹಂಬಲ ನನಗಿತ್ತು. ಆದರೆ ಈ ಪ್ರಕ್ರಿಯೆಯ ಸಂದರ್ಭದಲ್ಲಿ ನೀನು ಮೂರ್ಖನೇ? ಇದಕ್ಕೆ ಬಹಳಷ್ಟು ಹಣ ಬೇಕಾಗುತ್ತದೆ. ನಿನಗೆ ಹೇಗೆ ತಯಾರಿಸುವುದು ಎಂಬುದು ಗೊತ್ತಿದೆಯೇ ಎಂಬುದಾಗಿ ಜನ ಕೇಳಿದ್ದರು ಎಂದು ರಿಕಿ ಸ್ಮರಿಸಿಕೊಳ್ಳುತ್ತಾರೆ.

#3

#3

ಈ ರೊಬೋಟ್ ಅನ್ನು ತಯಾರಿಸಲು ನನಗೆ 1.5 ವರ್ಷಗಳ ಬೇಕಾಯಿತು ಎಂಬುದು ರಿಕಿ ಮಾತಾಗಿದೆ.

#4

#4

ರೊಬೋಟ್‌ನ ದೇಹ ಭಾಗಗಳನ್ನು ಅಂದರೆ ಅಸ್ಥಿಪಂಜರವನ್ನು 3 ಡಿ ಪ್ರಿಂಟೆಡ್ ಭಾಗಗಳಿಂದ ತಯಾರು ಮಾಡಲಾಗಿದೆ. ಅಂತೆಯೇ ಈ ರೊಬೋಟ್‌ನ 70 % ದಷ್ಟು ದೇಹವನ್ನು 3 ಡಿ ಪ್ರಿಂಟೆಡ್ ಸಾಮಾಗ್ರಿಗಳಿಂದ ತಯಾರಿಸಲಾಗಿದೆ.

#5

#5

ಈ ರೊಬೋಟ್ ಧ್ವನಿಗೆ ಪ್ರತಿಕ್ರಿಯೆನ್ನು ನೀಡುತ್ತದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

#6

#6

ರಿಕಿ ರೊಬೋಟ್ ಅನ್ನು "ಮಾರ್ಕ್ 1" ಎಂದು ಕರೆದಿದ್ದು, ಇದು ಈತನ ಪ್ರಥಮ ಪ್ರೊಟೊಟೈಪ್ ಆಗಿದೆ. ಇಲ್ಲದೆ ಕೆಲವೊಂದು ಧ್ವನಿ ಆದೇಶಗಳು.

#7

#7

ಹಲವಾರು ಧ್ವನಿ ಆದೇಶಗಳಿಗೆ ರೊಬೋಟ್ ಪ್ರತಿಕ್ರಿಯೆಯನ್ನು ನೀಡುತ್ತಿದೆ

#8

#8

ರೊಬೋಟ್‌ಗೆ ನೀನು ಸುಂದರಳಾಗಿದ್ದೀಯ ಎಂದು ಹೇಳಿದಾಗ ಅದು ಹುಬ್ಬನ್ನು ಮೇಲೆತ್ತಿ ಮುಖವನ್ನು ಬಾಗಿಸುತ್ತಾ ನಗುತ್ತಾ ಧನ್ಯವಾದ ಎಂದು ಹೇಳುತ್ತದೆ.

#9

#9

ಈ ರೊಬೋಟ್‌ಗೆ ನಿಲ್ಲಲು ಏನಾದರೂ ಬೆಂಬಲ ಅವಶ್ಯಕವಾಗಿದ್ದು ಅದನ್ನು ಚಿತ್ರದಲ್ಲಿ ನಿಮಗೆ ಕಾಣಬಹುದು.

#10

#10

ತನ್ನ ಪ್ರಥಮ ರೊಬೋಟ್ ಮಾದರಿಯಲ್ಲೇ ರಿಕಿ ಹೆಚ್ಚು ಸಂತೃಪ್ತರಾಗಿದ್ದಾರೆ. ಈ ಯೋಜನೆಯ ಮುಂದಿನ ಕಾರುಬಾರೇನು ಎಂಬುದನ್ನು ಕುರಿತು ರಿಕಿ ಇನ್ನೂ ಯೋಚಿಸಿಲ್ಲ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಅಂತು ಇಂತು ಬಂತು ಸೆಲ್ಫ್‌ ಡ್ರೈವಿಂಗ್ ಬೈಸಿಕಲ್‌: ಗೂಗಲ್‌!!</a><br /><a href=ಮಾನವನ ಮೆದುಳು ರೊಬೋಟ್ ದೇಹ: ಮರಣ ನಮ್ಮ ಕಾಲಡಿಯಲ್ಲಿ
ಕಾಣೆಯಾದ ಶೇಕ್ಸ್‌ಪಿಯರ್‌ ತಲೆಬುರುಡೆ: ಪತ್ತೆ ಮಾಡಿದ ತಂತ್ರಜ್ಞಾನ
ಪ್ರಪಂಚಕ್ಕೆ ಕೊಡುಗೆ ನೀಡಿದ ಭಾರತೀಯರ ಪ್ರಖ್ಯಾತ ಆವಿಷ್ಕಾರಗಳು" title="ಅಂತು ಇಂತು ಬಂತು ಸೆಲ್ಫ್‌ ಡ್ರೈವಿಂಗ್ ಬೈಸಿಕಲ್‌: ಗೂಗಲ್‌!!
ಮಾನವನ ಮೆದುಳು ರೊಬೋಟ್ ದೇಹ: ಮರಣ ನಮ್ಮ ಕಾಲಡಿಯಲ್ಲಿ
ಕಾಣೆಯಾದ ಶೇಕ್ಸ್‌ಪಿಯರ್‌ ತಲೆಬುರುಡೆ: ಪತ್ತೆ ಮಾಡಿದ ತಂತ್ರಜ್ಞಾನ
ಪ್ರಪಂಚಕ್ಕೆ ಕೊಡುಗೆ ನೀಡಿದ ಭಾರತೀಯರ ಪ್ರಖ್ಯಾತ ಆವಿಷ್ಕಾರಗಳು" loading="lazy" width="100" height="56" />ಅಂತು ಇಂತು ಬಂತು ಸೆಲ್ಫ್‌ ಡ್ರೈವಿಂಗ್ ಬೈಸಿಕಲ್‌: ಗೂಗಲ್‌!!
ಮಾನವನ ಮೆದುಳು ರೊಬೋಟ್ ದೇಹ: ಮರಣ ನಮ್ಮ ಕಾಲಡಿಯಲ್ಲಿ
ಕಾಣೆಯಾದ ಶೇಕ್ಸ್‌ಪಿಯರ್‌ ತಲೆಬುರುಡೆ: ಪತ್ತೆ ಮಾಡಿದ ತಂತ್ರಜ್ಞಾನ
ಪ್ರಪಂಚಕ್ಕೆ ಕೊಡುಗೆ ನೀಡಿದ ಭಾರತೀಯರ ಪ್ರಖ್ಯಾತ ಆವಿಷ್ಕಾರಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಹೆಚ್ಚಿನ ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X