ಆಧಾರ್ ಸೇಫ್ ಅಲ್ಲ: ಆಧಾರ್ ಮಾಹಿತಿ ಮಾರಾಟಕ್ಕೆ ಲಭ್ಯ.!

Written By: Lekhaka

ಭಾರತ ಸರಕಾರವೂ ತನ್ನ ನಾಗರೀಕರಿಗೆ ಆಧಾರ್ ಕಾರ್ಡ್ ಮಾಡಿಸುವುದನ್ನು ಕಡ್ಡಾಯ ಮಾಡುತ್ತಿದೆ. ಮೊಬೈಲ್ ನಂಬರ್ ನಿಂದ ಹಿಡಿದು ಎಲ್ಲಾ ಸೇವೆಗಳಿಗೂ ಆಧಾರ್ ಕಡ್ಡಾಯ ಮಾಡುವುದಲ್ಲದೇ ಈಗಾಗಲೇ ಪಡೆದಿರುವ ಸೇವೆಗೂ ಆಧಾರ್ ಲಿಂಕ್ ಮಾಡಿಸಿ ಎನ್ನುತ್ತಿದೆ. ಬ್ಯಾಂಕ್ ಖಾತೆ, ಪ್ಯಾನ್ ಗೂ ಆಧಾರ್ ಬೇಕೆ-ಬೇಕು ಎನ್ನವಂತೆ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ದೇಶದ ನಾಗರೀಕರಿಗೆ ಶಾಕ್ ಆಗುವಂತಹ ಮಾಹಿತಿಯೊಂದು ಲಭ್ಯವಾಗಿದೆ.

ಆಧಾರ್ ಸೇಫ್ ಅಲ್ಲ: ಆಧಾರ್ ಮಾಹಿತಿ ಮಾರಾಟಕ್ಕೆ ಲಭ್ಯ.!

ಈಗಾಗಲೇ ಅನೇಕ ಬಾರಿ ಆಧಾರ್ ಕಾರ್ಡ್ ಮಾಹಿತಿಯೂ ಲೀಕ್ ಆಗಲಿದೆ ಎನ್ನುವ ಸುದ್ಧಿ ಕೇಳಿ ಬರುತ್ತಲೇ ಇತ್ತು. ಆದರೆ ಈ ಬಾರಿ ಅತೀ ದೊಡ್ಡ ಮಟ್ಟದಲ್ಲಿ ಆಧಾರ ಮಾಹಿತಿಯೂ ಮಾರಾಟವಾಗುತ್ತಿರುವ ಸುದ್ದಿಯೂ ಪ್ರಮುಖ ಮಾಧ್ಯಮಗಳಲ್ಲಿ ವರದಿಯಾಗಿದೆ. ಅದುವೇ ಕೇವಲ ರೂ.500ಕ್ಕೆ ಬಿಲಿಯನ್ ಸಂಖ್ಯೆಯ ಆಧಾರ್ ಡಿಟೈಲ್ಸ್ ದೊರೆಯುತ್ತಿದೆ ಎನ್ನಲಾಗಿದೆ.

ರೂ.500ಕ್ಕೆ ವಾಟ್ಸ್ಆಪ್ ನಲ್ಲಿ ಕೋಟಿ-ಕೋಟಿ ದೇಶದ ನಾಗರೀಕರ ಆಧಾರ್ ಮಾಹಿತಿಯನ್ನು ಮಾರಾಟ ಮಾಡಲಾಗುತ್ತಿದೆ. ಮೂಲಗಳ ಪ್ರಕಾರ ಇಡೀ ದೇಶದಲ್ಲಿ ಲಭ್ಯವಿರುವ ಎಲ್ಲಾ ಆಧಾರ್ ಕಾರ್ಡ್ ಗಳ ಮಾಹಿತಿಯು ಕೇವಲ ರೂ.500ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ.

ವಾಟ್ಸ್ಆಪ್ ಮೂಲಕ ಸಂಪರ್ಕಿಸುವ ಏಜೆಂಟ್ ಗಳು ಪೇಟಿಎಂ ಮೂಲಕ ರೂ.500 ಸ್ವೀಕರಿಸಿ ಯೂಸರ್ ಐಡಿ ಪಾಸ್ ವರ್ಡ್ ವೊಂದನ್ನು ನೀಡುತ್ತಾರೆ. ಅವರು ಹೇಳುವ ವೆಬ್ ಸೈಟಿನಲ್ಲಿ ಅವರು ನೀಡಿದ ಯೂಸರ್ ಐಡಿ ಪಾಸ್ ವರ್ಡ್ ಅನ್ನು ನೀಡಿ ಲಾಗ್ ಇನ್ ಆದರೆ ಅಲ್ಲಿ ಸಂಪೂರ್ಣ ಆಧಾರ್ ಮಾಹಿತಿಯನ್ನು ಪಡೆಯಬಹುದಾಗಿದೆ.

ಮೊಬೈಲ್ಸ್ ಬೋನಾನ್ಜ ಸೇಲ್ ಇಂದಿಗೆ ಕೊನೆ!..ಖರೀದಿಸಲು ಬೆಸ್ಟ್ ಸ್ಮಾರ್ಟ್‌ಫೋನ್‌ಗಳಿವು!!

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಇದಲ್ಲದೇ ಇನ್ನು ಹೆಚ್ಚುವರಿ ರೂ.300 ಪಾವತಿ ಮಾಡಿದರೆ ಆಧಾರ್ ಕಾರ್ಡ್ ಮಾಹಿತಿಯನ್ನು ಡೌನ್ ಲೋಡ್ ಮಾಡಿಕೊಳ್ಳುವ ಮತ್ತು ಪ್ರಿಂಟ್ ಮಾಡಿಕೊಳ್ಳುವ ಸಾಫ್ಟ್ ವೇರ್ ವೊಂದನ್ನು ಸಹ ಅವರೇ ನೀಡುತ್ತಿದ್ದಾರೆ ಎನ್ನಲಾಗಿದೆ. ಹ್ಯಾಕರ್ಸ್ ಮೂಲಕ ಆಧಾರ್ ವೆಬ್ ಸೈಟಿಗೆ ಕನ್ನ ಹಾಕಿ ಮಾಹಿತಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದ್ದು, ದೇಶದ ಭದ್ರತೆಯ ದೃಷ್ಠಿಯಿಂದ ಇದು ಮಾರಕ ಎನ್ನಲಾಗಿದೆ.
Read more about:
English summary
The Indian government is pushing the citizens of the country to link their Aadhaar card to every other personal details such as mobile number. Now, it looks like your Aadhaar card details are sold for just Rs. 500. Anonymous sellers are providing unrestricted access to Aadhaar details in India over WhatsApp.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot