ಆಧಾರ್-ಸಿಮ್ ಲಿಂಕ್ ಮಾಡಲುಹೋಗಿ 1.30 ಲಕ್ಷ ಕಳೆದುಕೊಂಡ ಯುವಕ!..ಏರ್‌ಟೆಲ್‌ಗೆ ಜಾಡಿಸಿದ!!

ಈ ಹಣವನ್ನು ಕಳೆದುಕೊಂಡ ವ್ಯಕ್ತಿಯೇನು ದಡ್ಡನಲ್ಲ.! ಖದೀಮರು ಮಾಡಿರುವ ಚಾಲಾಕಿತನವೊ. ಅಥವಾ ಏರ್‌ಟೆಲ್ ಕಂಪೆನಿ ನಿರ್ಲಕ್ಷಕ್ಕೋ ಶಾಶ್ವತ್ ಎಂಬ ಯುವಕನೋರ್ವ ಹಣ ಕಳೆದುಕೊಂಡಿದ್ದಾರೆ.!

|

ಸರ್ಕಾರದ ಆದೇಶದಂತೆ 2018 ಫೆಬ್ರವರಿ ಒಳಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲೇಬೇಕಿದೆ. ಆದರೆ, ಇದನ್ನೇ ದುರಪಯೋಗಪಡಿಸಿಕೊಂಡ ಖದೀಮರು ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲು ಹೇಳಿ ಯುವಕನೋರ್ವನಿಂದ 1.30 ಲಕ್ಷ ರೂಪಾಯಿಗಳನ್ನು ಎಗರಿಸಿದ್ದಾರೆ.!!

ಆದರೆ, ಈ ಹಣವನ್ನು ಕಳೆದುಕೊಂಡ ವ್ಯಕ್ತಿಯೇನು ದಡ್ಡನಲ್ಲ.! ಖದೀಮರು ಮಾಡಿರುವ ಚಾಲಾಕಿತನವೊ. ಅಥವಾ ಏರ್‌ಟೆಲ್ ಕಂಪೆನಿ ನಿರ್ಲಕ್ಷಕ್ಕೋ ಶಾಶ್ವತ್ ಎಂಬ ಯುವಕನೋರ್ವ ಹಣ ಕಳೆದುಕೊಂಡಿದ್ದಾರೆ.! ಈ ಸಂಪೂರ್ಣ ಸ್ಟೋರಿ ನೋಡಿದರೆ ತನ್ನದಲ್ಲದ ತಪ್ಪಿಗೆ ಶಾಶ್ವತ್ ಮೋಸಹೋಗಿದ್ದಾರೆ.! ಹಾಗಾದರೆ, ಏನಿದು ಸ್ಟೋರಿ? ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ!!

ಎಲ್ಲರಿಗೂ ಕರೆ ಬರುತ್ತಿವೆ.!!

ಎಲ್ಲರಿಗೂ ಕರೆ ಬರುತ್ತಿವೆ.!!

2018 ಫೆಬ್ರವರಿ ಒಳಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡುದೇ ಇದ್ದರೆ ನಿಮ್ಮ ಸಿಮ್ ಅನ್ನು ನಿಷ್ಕ್ರೀಯಗೊಳಿಸಲಾಗುತ್ತದೆ ಎಂದು ಎಲ್ಲರಿಗೂ ಕರೆಗಳು ಮತ್ತು ಮೆಸೇಜ್‌ಗಳು ಬರುತ್ತಿವೆ. ಇದು ನಿಜವೇ ಆದರೂ, ಇದರಲ್ಲಿ ಸ್ವಲ್ಪ ಯಾಮಾರಿದರೂ ಸಹ ನಮ್ಮನ್ನು ಮೋಸ ಮಾಡುವ ಖದೀಮರಿದ್ದಾರೆ.!!

ಶಾಶ್ವತ್ ಹಣ ಕಳೆದುಕೊಂಡಿದ್ದು ಹೇಗೆ?

ಶಾಶ್ವತ್ ಹಣ ಕಳೆದುಕೊಂಡಿದ್ದು ಹೇಗೆ?

ನಿಮ್ಮ ಮೊಬೈಲ್ ಸಂಖ್ಯೆ ಬ್ಲಾಕ್ ಆಗಿದೆ. ಅದನ್ನು ಸಕ್ರಮಗೊಳಿಸಬೇಕಾದರೆ ನಿಮ್ಮ ಸಿಮ್ ನಂಬರ್, ಫೋನ್ ಸೀರಿಯಲ್ ನಂಬರ್ ಗಳನ್ನು 121 ಗೆ ಮೆಸೇಜ್ ಮಾಡಿ ಎಂಬ ಸಂದೇಶ ಶಾಶ್ವತ್‌ಗೆ ಬಂದಿತು. ಆ ಸಂದೇಶ ಏರ್‌ಟೆಲ್ ಕಸ್ಟಮರ್ ಕೇರ್ ನಿಂದ ಬರುವ ಸಂದೇಶದಂತೆಯೇ ಇತ್ತು. ಇದನ್ನು ನಿಜವೆಂದು ನಂಬಿದ ಶಾಶ್ವತ್ ವಿವರಗಳನ್ನು ಮೆಸೇಜ್ ಮಾಡಿದ್ದು, 1.30 ಲಕ್ಷ ರೂ ಹಣ ಕಳೆದುಕೊಂಡಿದ್ದಾನೆ.!!

ಏರ್‌ಟೆಲ್ ಎಂದು ಸಿಮ್ ನಂಬರ್ ನೀಡಿದ!!

ಏರ್‌ಟೆಲ್ ಎಂದು ಸಿಮ್ ನಂಬರ್ ನೀಡಿದ!!

ನಿಮ್ಮ ಸಿಮ್ ನಂಬರ್, ಫೋನ್ ಸೀರಿಯಲ್ ನಂಬರ್‌ಗಳನ್ನು 121 ಗೆ ಮೆಸೇಜ್ ಮಾಡಿ ಎಂದಾಗ, ಏರ್‌ಟೆಲ್ ಕಸ್ಟಮರ್ ಕೇರ್ ಹೌದು ಇದು ಎಂದು ಶಾಶ್ವತ್‌ಮ್ ನಂಬರ್, ಫೋನ್ ಸೀರಿಯಲ್ ನಂಬರ್‌ ನೀಡಿದ್ದಾನೆ. ಆದರೆ, ಇದು ಖದೀಮರಿಗೆ ಸಿಕ್ಕಿ ಕ್ಷಣಾರ್ದಗಳಲ್ಲಿ ಶಾಶ್ವತ್ ಮೊಬೈಲ್ ಸಿಮ್‌ನ ತದ್ರೂಪಿ ಸಿಮ್ ಅನ್ನು ಸೃಷ್ಟಿಸಿ, ಆತನ ಅಕೌಂಟ್‌ನಲ್ಲಿರುವ 1.30 ಲಕ್ಷ ರೂಪಾಯಿಗಳನ್ನು ಎಗುರಿಸಿದ್ದಾರೆ.!!

ಹಣ ಖದಿಯಲು ಹೇಗೆ ಸಾಧ್ಯ?

ಹಣ ಖದಿಯಲು ಹೇಗೆ ಸಾಧ್ಯ?

ಯುಪಿಎ( ಯುನೈಟೆಡ್ ಪೇಮೆಂಟ್ ಇಂಟರ್ ಫೇಸ್) ಸೇವೆ ಮೂಲಕ ಡಿಜಿಟಲ್ ಪೇಮೆಂಟ್ ನಡೆಸುವುದು ನಿಮಗೆ ಗೊತ್ತೇ ಇದೆ. ದಕ್ಕೆ ಕೇವಲ ಮೊಬೈಲ್ ನಂಬರ್ ಇದ್ದರೆ ಸಾಕು. ನಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವ ಅಗತ್ಯವಿರುವುದಿಲ್ಲ. ಮೊಬೈಲ್ ನಂಬರನ್ನು ಯುಪಿಎಗೆ ಲಿಂಕ್ ಮಾಡಿದರೆ ಸಾಕು. ಆ ಮೊಬೈಲ್ ನಂಬರ್ ಗೆ ಕನೆಕ್ಟ್ ಆಗಿರುವ ಎಲ್ಲಾ ಬ್ಯಾಂಕ್ ಅಕೌಂಟ್ ಗಳ ವಿವರಗಳನ್ನು ನೀಡುತ್ತದೆ.!!

ಹಣ ಲೂಟಿ ಮಾಡಿದ್ದು ಹೀಗೆ.!!

ಹಣ ಲೂಟಿ ಮಾಡಿದ್ದು ಹೀಗೆ.!!

ಶಾಶ್ವತ್ ಮೊಬೈಲ್ ಸಿಮ್‌ನ ತದ್ರೂಪಿ ಸಿಮ್ ಅನ್ನು ಸೃಷ್ಟಿಸಿ ಯುಪಿಎ ( ಯುನೈಟೆಡ್ ಪೇಮೆಂಟ್ ಇಂಟರ್ ಫೇಸ್) ಮೂಲಕ ಶಾಶ್ವತ್ ನಂಬರ್‌ಗೆ ಕನೆಕ್ಟ್ ಆಗಿರುವ ಬ್ಯಾಂಕ್ ಅಕೌಂಟ್ ವಿವರ ಪಡೆದಿದ್ದಾರೆ. ಇಷ್ಟು ದೊರೆತರೆ ಸಾಕು. ಬ್ಯಾಂಕ್ ವಿವರಗಳು ಅಗತ್ಯವಿಲ್ಲದೆಯೇ ನೇರವಾಗಿ ಯುಪಿಎ ಮೂಲಕ ಹಣವನ್ನು ಬೇರೊಬ್ಬರಿಗೆ ಕಳುಹಿಸಬಹುದಾಗಿದ್ದು, ಆತನ ಖಾತೆಯಲ್ಲಿದ್ದ 1.30 ಲಕ್ಷ ರೂಪಾಯಿಗಳನ್ನು ಎಗುರಿಸಿದ್ದಾರೆ.!!

Link Aadhaar Number !! ಆನ್‌ಲೈನ್‌ನಲ್ಲಿ ಆಧಾರ್ ಅನ್ನು ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಮಾಡುವುದು ಹೇಗೆ?
ಏರ್‌ಟೆಲ್‌ಗೆ ಜಾಡಿಸಿದ ಯುವಕ!!

ಏರ್‌ಟೆಲ್‌ಗೆ ಜಾಡಿಸಿದ ಯುವಕ!!

ನನ್ನ ಹಣವನ್ನು ಕಳೆದುಕೊಳ್ಳಲು ಏರ್‌ಟೆಲ್ ಸಂಪೂರ್ಣವಾಗಿ ಕಾರಣವಾಗಿದೆ. 121 ಎಂಬುದು ಏರ್‌ಟೆಲ್‌ನ ಅಧಿಕೃತ ಕಸ್ಟಮರ್ ಸಂಖ್ಯೆಯಾಗಿದ್ದು, ಖದೀಮರಿಗೆ ಈ ನಂಬರ್ ಹೇಗೆ ಸಿಗಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. ಏರ್‌ಟೆಲ್ ಕಸ್ಟಮರ್ ಕೇರ್ ನಂಬರ್ ಖದೀಮರಿಗೆ ಸಿಕ್ಕಿದ್ದು, ಏರ್‌ಟೆಲ್ ನನಗೆ ಮೋಸ ಮಾಡಿದೆ ಎಂದು ಹೇಳಿದ್ದಾರೆ.!!

ಅಧಿಕೃತ ಸ್ಟೋರ್‌ಗಳಿಗೆ ತೆರಳಿ.!!

ಅಧಿಕೃತ ಸ್ಟೋರ್‌ಗಳಿಗೆ ತೆರಳಿ.!!

ಈ ಮೇಲಿನ ಘಟನೆಯನ್ನು ನೋಡಿದರೆ ಯಾವ ಟೆಲಿಕಾಂ ಕಂಪೆನಿಯನ್ನು ನಂಬುವುದು ಎನ್ನುವಹಾಗಿದೆ. ಆ ಟೆಲಿಕಾಂ ಕಂಪೆನಿಗೆ ತಿಳಿದೇ ಹಲವು ಮೋಸದ ಮೆಸೇಜ್‌ಗಳು ಗ್ರಾಹಕರಿಗೆ ಹರಿದಾಡುತ್ತವೆ ಎಂಬವುದು ಸುಳ್ಳೆನಲ್ಲ. ಹಾಗಾಗಿ, ನಿಮ್ಮ ಮೊಬೈಲ್ ಹಾಗೂ ಆಧಾರ್ ಸಂಖ್ಯೆಗಳನ್ನು ಲಿಂಕ್ ಮಾಡಲು ಅಧಿಕೃತ ಸ್ಟೋರ್‌ಗಳಿಗೆ ತೆರಳಿ ಲಿಂಕ್ ಮಾಡಿ. ನೀವು ಹುಷಾರಾಗಿರಿ.!!

</a></strong><a class=ಭವಿಷ್ಯದ ಪಾರದರ್ಶಕ ಸ್ಮಾರ್ಟ್‌ಫೋನ್‌ ಬಳಸಲು ನೀವು ರೆಡಿನಾ?" title="ಭವಿಷ್ಯದ ಪಾರದರ್ಶಕ ಸ್ಮಾರ್ಟ್‌ಫೋನ್‌ ಬಳಸಲು ನೀವು ರೆಡಿನಾ?" loading="lazy" width="100" height="56" />ಭವಿಷ್ಯದ ಪಾರದರ್ಶಕ ಸ್ಮಾರ್ಟ್‌ಫೋನ್‌ ಬಳಸಲು ನೀವು ರೆಡಿನಾ?

Best Mobiles in India

English summary
This man lost Rs 1.3 lakh from salary account; here is how.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X