650 ಕೋಟಿಯಲ್ಲಿ ತಯಾರಾಗಿರುವ ಈ ವಿಮಾನ ತುಂಬಾ ಡಿಫರೆಂಟ್!! ಏಕೆ ಗೊತ್ತಾ?
ಅಟೊಮೊಬಿಲಿ ಪೆಗಾನಿ ಎಂಬ ಸಂಸ್ಥೆ ಆಕಾಶವನ್ನು ಬಹುತೇಕ ಪಾರದರ್ಶಕವಾಗಿ ನೋಡಬಹುದಾದ ವಿಮಾನವನ್ನು ರೂಪಿಸಿದೆ.!!
ನೀವು ವಿಮಾನದಲ್ಲಿ ಪ್ರಯಾಣಿಸುವಾಗ ಕಿಟಕಿಯಿಂದ ಹೊರಗೆ ನೋಡುತ್ತಿದ್ದರೆ ಎಂತಹ ಅನುಭವವಿರುತ್ತದೆ ಅಲ್ಲವೇ? ಅದಕ್ಕಿಂತಲೂ ಹೆಚ್ಚಿನ ಅನುಭವವನ್ನು ನೀಡಲು ಬರುತ್ತಿದೆ ಹೊಸ ವಿಮಾನ ಹೌದು, ನೀವು ಊಹಿಸಲೂ ಸಾಧ್ಯವಾಗದ ರೀತಿ ವಿಮಾನ ತಯಾರಾಗಿದೆ.!!
ವಿಮಾನದಲ್ಲಿ ಪ್ರಯಾಣಿಸುವಾಗ ಕಣ್ಣು ಹಾಯಿಸಿದಲ್ಲೆಲ್ಲ ಅಂತರಿಕ್ಷವನ್ನು ನೋಡುವಂತಿದ್ದರೆ ಎಂಬ ಎಲ್ಲಾ ವಿಮಾನ ಪ್ರಯಾಣಿಕರ ಕನಸು ಈಗ ನನಸಾಗಿದೆ. ಅಟೊಮೊಬಿಲಿ ಪೆಗಾನಿ ಎಂಬ ಸಂಸ್ಥೆ ಆಕಾಶವನ್ನು ಬಹುತೇಕ ಪಾರದರ್ಶಕವಾಗಿ ನೋಡಬಹುದಾದ ವಿಮಾನವನ್ನು ರೂಪಿಸಿದೆ.!!

ನೂತನವಾಗಿ ತಯಾರಿಸಿರುವ ವಿಮಾನಕ್ಕೆ ಎಸಿಜೆ 319 ನಿಯೋ ಎಂದು ಹೆಸರಿಡಲಾಗಿದ್ದು, ಏರ್ಬಸ್ ವಿಮಾನ ಇದಾಗಿದೆ.ಹಾಗಾಗಿ, ಕ್ಯಾಬಿನ್ನ ಮೇಲ್ಬಾಗದವರೆಗೂ ಎಚ್ಡಿ ಸ್ಕ್ರೀನ್ ಅಳವಡಿಸಲಾಗಿದ್ದು, ಜೆಟ್ನಲ್ಲಿ ಪ್ರಯಾಣಿಸುವವರು ಕುಳಿತಲ್ಲಿಯೇ ಆಕಾಶದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಇನ್ನು ಅಟೊಮೊಬಿಲಿ ಪೆಗಾನಿ ಸಂಸ್ಥೆ ನಿರ್ಮಿಸಿರುವ ಈ ವಿಮಾನವನ್ನು 650 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.! ವಿಶೇಷವಾಗಿ ನಿರ್ಮಾಣವಾಗಿರುವ ಇದರ ಒಳಾಂಗಣ ವಿನ್ಯಾಸವನ್ನು ಇನ್ಫಿನಿಟೋ ಎಂದು ಹೆಸರಿಡಲಾಗಿದೆ.!! ಹಾಗಿದ್ರೆ ಕಣ್ಣು ಹಾಯಿಸಿದಲ್ಲೆಲ್ಲ ಅಂತರಿಕ್ಷ ನೋಡಲು ನೀವು ತಯಾರ?


Click it and Unblock the Notifications








