ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಡುವೆ ನಡೆಯಲಿದೆ 'ಪ್ರೈಸ್ ವಾರ್': ಯಾವುದಕ್ಕೆ ಬೆಲೆ ಕಡಿಮೆ..?

Written By:

ಸದ್ಯ ದೇಶಿಯ ಇ-ಕಾಮರ್ಸ್ ನಲ್ಲಿ ಸಾಕಷ್ಟು ಹಿಡಿತವನ್ನು ಸಾಧಿಸಿರುವ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳು ಗ್ರಾಹಕರಿಗೆ ಈಗಾಗಲೇ ಅನೇಕ ಆಫರ್ ಗಳನ್ನು ನೀಡುತ್ತಿವೆ. ಆದರೆ ಇದೇ ಮೊದಲ ಭಾರಿ ಈ ಎರಡು ಕಂಪನಿಗಳು ತಮ್ಮಲ್ಲಿ ಸಿಗುವ ವಸ್ತುಗಳ ಮೇಲೆ ಭಾರೀ ಡಿಸ್ಕಂಟ್ ಘೋಷಿಸಲಿವೆ ಎನ್ನಲಾಗಿದೆ. ಅಲ್ಲದೇ ಶೇ. 80% ದರ ಕಡಿತವನ್ನು ಮಾಡಲಿವೆ ಎನ್ನುವ ಸುದ್ದಿ ಲಭ್ಯವಾಗಿದೆ.

ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಡುವೆ ನಡೆಯಲಿದೆ 'ಪ್ರೈಸ್ ವಾರ್'

ಒಟ್ಟಿನಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವವರಿಗೆ ಮುಂದಿನ ವಾರ ಹಬ್ಬವಾಗಿದ್ದು, ನೀವು ಬಯಸಿದ ವಸ್ತುಗಳು ಅತೀ ಕಡಿಮೆ ಬೆಲೆಗೆ ದೊರೆಲಿದೆ ಎನ್ನುವ ಮಾಹಿತಿ ದೊರೆತಿದ್ದು, ಈಗಾಗಲೇ ಪ್ಲಾನ್ ಮಾಡಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಲಿಪ್‌ಕಾರ್ಟ್‌ನಿಂದ 'BIG 10':

ಫ್ಲಿಪ್‌ಕಾರ್ಟ್‌ನಿಂದ 'BIG 10':

ಫ್ಲಿಪ್ ಕಾರ್ಟ್ ತನ್ನ 10ನೇ ವರ್ಷದ ವಾರ್ಷಿಕೋತ್ಸದ ಅಂಗವಾಗಿ ಮೇ 14ರಿಂದ 18 ರ ವರೆಗೆ 'BIG 10' ಸೇಲ್ ಆರಂಭಿಸಲಿದ್ದು, ಶೇ.80% ಬೆಲೆ ಕಡಿತವನ್ನು ಮಾಡಲಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಅಲ್ಲದೇ ಅನೇಕ ಡೀಲ್‌ಗಳನ್ನು ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಅಮೆಜಾನ್‌ನಿಂದ 'ಗ್ರೇಟ್ ಇಂಡಿಯಾ ಸೇಲ್'

ಅಮೆಜಾನ್‌ನಿಂದ 'ಗ್ರೇಟ್ ಇಂಡಿಯಾ ಸೇಲ್'

ಫ್ಲಿಪ್ ಕಾರ್ಟ್‌ಗೆ ಸೆಡ್ಡು ಹೊರೆಯುವ ಸಲುವಾಗಿ ಅಮೆಜಾನ್‌ನಿಂದ ಮೇ 11 ರಿಂದ 14ರ ವರೆಗೆ 'ಗ್ರೇಟ್ ಇಂಡಿಯಾ ಸೇಲ್ ನಡೆಸಲಿದೆ. ಈ ಹಿಂದೆ ಎಂದು ನೀಡದಂತಹ ಆಫರ್ ಮತ್ತು ಡೀಲ್‌ಗಳನ್ನು ನೀಡುವುದಾಗಿ ಅಮೆಜಾನ್ ತಿಳಿಸಿದ್ದು, ವಿವಿಧ ಬ್ಯಾಂಕ್ ಗಳ ಕಾರ್ಡ್ ಮೇಲೆ ಆಫರ್ ನೀಡುವ ಸಾಧ್ಯತೆ ದಟ್ಟವಾಗಿದೆ.

ಸ್ಮಾರ್ಟ್‌ಪೋನ್, ಟಿವಿ ಕೊಳ್ಳಲು ಒಳ್ಳೆಯ ಸಮಯ:

ಸ್ಮಾರ್ಟ್‌ಪೋನ್, ಟಿವಿ ಕೊಳ್ಳಲು ಒಳ್ಳೆಯ ಸಮಯ:

ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್‌ಗಳು ಈ ಬಾರಿ ಸೆಲ್‌ನಲ್ಲಿ ಸ್ಮಾರ್ಟ್‌ಪೋನ್, ಟಿವಿ, ಕನ್ಜ್ಯೂಮರ್ ಎಲೆಕ್ಟ್ರಾನಿಕ್ಸ್ ಸೇರಿದಂತೆ ಫ್ಯಾಷನ್ ಮೇಲೆ ಹೆಚ್ಚಿನ ರಿಯಯಿತಿಯನ್ನು ನೀಡಲಿದೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಪೋನ್, ಟಿವಿ ಕೊಳ್ಳಲು ಇದು ಒಳ್ಳೆಯ ಸಮಯ ಎಂಬುದು ತಜ್ಞ ಅಭಿಪ್ರಯಾವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

Read more about:
English summary
Amazon and Flipkart, the two largest e-commerce players in the market have two mega sale events lined up for this month. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot