ಬಿಲ್‌ ಗೇಟ್ಸ್‌ ತಂದರು ಕ್ರಾಂತಿಕಾರಿ "ವಾಟರ್‌ಲೆಸ್‌ ಟಾಯ್ಲೆಟ್"

By Suneel
|

ಮೂರನೇ ಮಹಾಯುದ್ಧ ಯಾವ ಕಾರಣಕ್ಕಾಗಿ ನಡೆಯಬಹುದು ಎಂದು ಕೇಳಿದರೆ ಬಹುಶಃ ಎಲ್ಲರೂ ಬೆರಳು ತೋರಿಸುವುದು ನೀರಿನ ಕಡೆ. ಖಂಡಿತ ಪ್ರಸ್ತುತ ರೀತಿಯಲ್ಲೇ ಪರಿಸರದ ಮೇಲಿನ ಕಾಳಜಿ ಮುಂದುವರೆದರೆ ನೀರಿಗಾಗಿ ಯುದ್ಧ ಸಂಭವಿಸುವುದರಲ್ಲಿ ಸಂಶಯವಿಲ್ಲ. ಹೇ ಹಾಗೆಲ್ಲಾ ಆಗಲ್ಲಾ ಬಿಡ್ರಿ ಅಂತ ಯಾರಾದ್ರು ಹೇಳೋರಿದ್ರೆ ನೀರಿಗಾಗಿ ಬೆಳಿಗ್ಗೆ ಬೆಳಿಗ್ಗೆಯೇ ಹಳ್ಳಿಗಳಲ್ಲಿ ಹೋಗಿ ನೋಡಿದ್ರೆ ಜಗಳ ಹೇಗೆ ನಡೆಯುತ್ತೇ ಅಂತ ನೋಡಬಹುದು. ಈ ಸಿಟಿಗಳಲ್ಲೂ ಆಗಾಗ ನಡೆಯುತ್ತೇ ಆದರೆ ಜನರ ವಿರುದ್ಧ ಅಲ್ಲಾ ಜನರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪ್ರತಿನಿಧಿಗಳ ವಿರುದ್ಧ.

ಅಂದಹಾಗೆ ಟೆಕ್ನಾಲಜಿ ಬಗ್ಗೆ ಮಾಹಿತಿ ನೀಡೋ ನಾವು ನೀರಿನ ಬಗ್ಗೆ ಯಾಕ್‌ ಹೇಳ್ತಿದ್ದೀವಿ ಅಂದ್ರೆ ನೀರಿನ ಮಹತ್ವ, ಮುಂದಿನ ದಿನಗಳಲ್ಲಿ ನೀರಿನ ಬೇಡಿಕೆ ಬಗ್ಗೆ ಅಲೋಚಿಸಿದ ಬಿಲ್‌ ಗೇಟ್ಸ್‌'ರವರು ಈಗ ತಂತ್ರಜ್ಞಾನ ಆಧಾರಿತ "ನೀರಿಲ್ಲದ ಟಾಯ್ಲೆಟ್" (Waterless Toilet) ಅಭಿವೃದ್ದಿ ಪಡಿಸಿದ್ದಾರೆ. ನೀರಿಗಾಗಿ ಯುದ್ಧ ನೆಡೆಯುತ್ತೋ ಬಿಡುತ್ತೋ ಆದ್ರೆ ನೀರಿನ ಬೇಡಿಕೆಯ ಸಮಸ್ಯೆ ನೀಗಿಸಲು ಅಂತು "ನೀರಿಲ್ಲದ ಟಾಯ್ಲೆಟ್" (Waterless Toilet) ಅಭಿವೃದ್ದಿಗೊಂಡಿದೆ. ಅಂದಹಾಗೆ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಒಮ್ಮೆ ಲೇಖನದಲ್ಲಿ ಓದಿ. ಹಾಗೆ ಇದರ ವಿಶೇಷತೆ ಏನು ಎಂದು ಸಹ ತಿಳಿಯಿರಿ.

waterless toilet

waterless toilet

5 ವರ್ಷಗಳ ನಂತರ ಬಿಲ್‌ ಮತ್ತು ಮೆಲಿಂಡ ಗೇಟ್ಸ್‌ ಫೌಂಡೇಷನ್‌ ಸಮರ್ಥನೀಯ ಅಗ್ಗದ ಬೆಲೆಯ "ನೀರಿಲ್ಲದ ಟಾಯ್ಲೆಟ್" (Waterless Toilet) ಅನ್ನು ಅಭಿವೃದ್ದಿ ಪಡಿಸಿ ಎಂದು ಪ್ರಪಂಚಕ್ಕೆ ಚಾಲೆಂಜ್‌ ಮಾಡಿತ್ತು. ಅದನ್ನು ಈಗ ಕ್ರ್ಯಾನ್‌ಫೀಲ್ಡ್‌ ವಿಶ್ವವಿದ್ಯಾಲಯ ಸಂಶೋಧಕರ ತಂಡ ಕಾರ್ಯಸಾಧಿಸಿ ತೋರಿಸಿದೆ.

waterless toilet

waterless toilet

"ನೀರಿಲ್ಲದ ಟಾಯ್ಲೆಟ್" (Waterless Toilet), ನ್ಯಾನೋ ಪೊರೆಯ ಶೌಚಾಲಯ (Nano Membrane Toilet) ಎಂದೇ ಪ್ರಖ್ಯಾತವಾಗಿದ್ದು ಇದನ್ನು ಗೇಟ್ಸ್‌ ಫೌಂಡೇಷನ್ 2012ರ ಸೆಪ್ಟೆಂಬರ್‌ನಲ್ಲಿ ಅಭಿವೃದ್ದಿಪಡಿಸಿದೆ.

waterless toilet

waterless toilet

ಮಾರ್ಚ್‌ 22 'ವಿಶ್ವ ನೀರಿನ ದಿನ'ವಾಗಿದ್ದು ಈ ದಿನದಂದು ಈ ಮಹತ್ತರ ಸಂಶೋಧನೆಯ ಕುರಿತು ಹೇಳಿದ್ದು, ಪ್ರಸ್ತುತದಲ್ಲಿಯೂ ಸಹ 2.4 ಬಿಲಿಯನ್‌ ಜನರು ಶುಚಿತ್ವವಿಲ್ಲದ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆ ಎನ್ನಲಾಗಿದೆ.

waterless toilet

waterless toilet

ಹರಿವ ನೀರಿನಿಂದ ಸ್ವಚ್ಛತೆ ಮಾಡದಿದ್ದಲ್ಲಿ ಅನಾರೋಗ್ಯ ಕಾಡುವ ಭಯವನ್ನು ನೀಗಿಸಲು ನೀರನ್ನು ಬಳಸದ ಟಾಯ್ಲೆಟ್‌ ಅಭಿವೃದ್ದಿಪಡಿಸಲಾಗಿದೆ. ಇದು ಬಳಸಲು ಸರಳವಾಗಿದ್ದು, ಮುಂದಿನ ದಿನಗಳಿಗೆ ಬಹಳ ಉಪಯೋಗವಾಗಲಿದೆ. ಅಲ್ಲದೇ "ಬಡತನ ಕಾಡುವ ಹಳ್ಳಿಗಳ ಪ್ರದೇಶಗಳಿಗೆ ಇದು ಸೇವೆನೀಡಲು ವಿನ್ಯಾಸಗೊಂಡಿದೆ" ಎಂದು ಕ್ರ್ಯಾನ್‌ಫೀಲ್ಡ್‌ ವಿಶ್ವವಿದ್ಯಾಲಯದ ಅಲಿಸನ್‌ ಪಾರ್ಕರ್‌ ಹೇಳಿದ್ದಾರೆ.

waterless toilet

ವ್ಯಕ್ತಿಯು ತನ್ನ ನಿತ್ಯಕರ್ಮ ಮುಗಿಸಿ ಟಾಯ್ಲೆಟ್‌ನ ಲಿಡ್‌ ಅನ್ನು ಮುಚ್ಚುತ್ತಾನೆ. ಟಾಯ್ಲೆಟ್‌ ಬೋಲ್‌ ತಿರುಗುತ್ತಾ 270ಡಿಗ್ರಿಗೆ ತಿರುಗಿ ತ್ಯಾಜ್ಯವನ್ನು ಕೆಳಗಿನ ವ್ಯಾಟ್ (ತೊಟ್ಟಿ) ಹಾಕುತ್ತದೆ. ಘನ ತ್ಯಾಜ್ಯವು ಲಿಕ್ವಿಡ್‌ ಮೇಲೇರುವವರೆಗೆ ಕೆಳಗೆ ಇರುತ್ತದೆ. ನಂತರದಲ್ಲಿ ನೀರು ಹರಿದು ತ್ಯಾಜ್ಯವನ್ನು ಮಣಿಗಳ ಹಗೆ ವಿನ್ಯಾಸಗೊಳಿಸಿ ಅದನ್ನು ಸಸ್ಯಗಳ ಬೆಳವಣಿಗೆಗೆ ಅನುಕೂಲವಾಗುವ ರೀತಿಯಲ್ಲಿ ಬಳಸಬಹುದಾಗಿದೆ. ಈ ವೀಡಿಯೋ ನೋಡಿ ಮಾಹಿತಿ ತಿಳಿಯುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ವೋಡಾಫೋನ್ ಬಳಕೆದಾರರು ಉಚಿತ ಇಂಟರ್ನೆಟ್‌ ಬಳಸುವುದು ಹೇಗೆ?ವೋಡಾಫೋನ್ ಬಳಕೆದಾರರು ಉಚಿತ ಇಂಟರ್ನೆಟ್‌ ಬಳಸುವುದು ಹೇಗೆ?

ಜೀವನದಲ್ಲಿ ಒಮ್ಮೆಯಾದರೂ ಈ ಟೆಕ್ ಅದ್ಭುತಗಳನ್ನು ನೋಡಲೇಬೇಕುಜೀವನದಲ್ಲಿ ಒಮ್ಮೆಯಾದರೂ ಈ ಟೆಕ್ ಅದ್ಭುತಗಳನ್ನು ನೋಡಲೇಬೇಕು

ಅಂತು ಬಂತು ಇಂಟರ್ನೆಟ್‌ ಕಾರು: ರಸ್ತೆಗೆ ಯಾವಾಗ?ಅಂತು ಬಂತು ಇಂಟರ್ನೆಟ್‌ ಕಾರು: ರಸ್ತೆಗೆ ಯಾವಾಗ?

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Bill Gates is backing a revolutionary waterless toilet — here’s how it works. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X