Subscribe to Gizbot

ಬಿಟ್‌ಕಾಯಿನ್ ಮೇಲೆ ಹೂಡಿಕೆ ಏಕೆ ಮಾಡಬಾರದು?..ಶತಕೋಟ್ಯಾಧಿಪತಿ ಹೇಳುತ್ತಾರೆ ಕೇಳಿ!!

Written By:

ವಿಶ್ವದಲ್ಲಿಯೇ ಅತಿ ಹೆಚ್ಚು ದಾನ ಮಾಡಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಶತಕೋಟ್ಯಾಧಿಪತಿ ಹೂಡಿಕೆದಾರ ವಾರೆನ್ ಬಫೆಟ್ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.! ಹಣಗಳಿಸಲು ನಡೆಸಲಾಗುತ್ತಿರುವ ಆನ್‌ಲೈನ್ ವರ್ಚುವಲ್ ಮನಿ ಕ್ರಿಪ್ಟೋಕರೆನ್ಸಿ ಕೊನೆಯಲ್ಲಿ ಅತಿ ಕೆಟ್ಟ ಅಂತ್ಯ ಕಾಣಲಿದೆ ಎಂದು ಅವರು ತಿಳಿಸಿದ್ದಾರೆ.!!

ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ದೀರ್ಘಕಾಲ ಉಳಿಯುವುದಿಲ್ಲ ಹಾಗಾಗಿ ಯಾವುದೇ ಕಾರಣಕ್ಕೂ ತಾನು ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವುದಿಲ್ಲ ಎಂದು ಸಿಎನ್‌ಬಿಸಿ ಸಂದರ್ಶನದಲ್ಲಿ ವಾರೆನ್ ಬಫೆಟ್ ಈ ಬಗ್ಗೆ ಹೇಳಿದ್ದಾರೆ.! ಹಾಗಾದರೆ, ಬಿಟ್‌ಕಾಯಿನ್ ಮೇಲೆ ಹೂಡಿಕೆ ಏಕೆ ಮಾಡಬಾರದು? ಹೂಡಿಕೆ ಮಾಡಿದರೆ ಏನಾಗಲಿದೆ? ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅತಿ ಕೆಟ್ಟ ಅಂತ್ಯ ಕಾಣಲಿದೆ ಕ್ರಿಪ್ಟೋಕರೆನ್ಸಿ!!

ಅತಿ ಕೆಟ್ಟ ಅಂತ್ಯ ಕಾಣಲಿದೆ ಕ್ರಿಪ್ಟೋಕರೆನ್ಸಿ!!

ವಾರೆನ್ ಬಫೆಟ್ ಸೇರಿ ವಿರ್ಶವದ ಬಹುತೇಕ ಹೂಡಿಕೆದಾರರು ಕ್ರಿಪ್ಟೋಕರೆನ್ಸಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳೂ ಕೊನೆಯಲ್ಲಿ ಅತಿ ಕೆಟ್ಟ ಅಂತ್ಯ ಕಾಣಲಿದ್ದು, ಅಪಾಯದ ನಿರೀಕ್ಷೆ ಕಡಿಮೆ ಇರುವ ದೀರ್ಘಕಾಲದ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ಬಫೆಟ್ ಸಲಹೆ ನೀಡಿದ್ದಾರೆ.!!

ಎಂದೂ ಹೂಡಿಕೆ ಮಾಡುವುದಿಲ್ಲ.!!

ಎಂದೂ ಹೂಡಿಕೆ ಮಾಡುವುದಿಲ್ಲ.!!

ಡಿಜಿಟಲ್ ಕರೆನ್ಸಿ ದೀರ್ಘಕಾಲ ಉಳಿಯುವುದಿಲ್ಲವಾದರಿಂದ ಡಿಜಿಟಲ್ ಕರೆನ್ಸಿಯಲ್ಲಿ ಯಾವುದೇ ಕಾರಣಕ್ಕೂ ಹೂಡಿಕೆ ಮಾಡುವುದಿಲ್ಲ ಎಂದು ವಾರೆನ್ ಬಫೆಟ್ ಸ್ಪಷ್ಟಪಡಿಸಿದ್ದಾರೆ. ಸರಿಯಾದ ಹೂಡಿಕೆ ಹಾಗು ಸರಿಯಾದ ವಹಿವಾಟಿಗೆ ಜನರು ಹೆಚ್ಚಿನ ಗಮನ ನೀಡಬೇಕು. ಇಲ್ಲದಿದ್ದರೆ ನಷ್ಟವನ್ನು ಎದುರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.!!

ಬಿಟ್‌ಕಾಯಿನ್ ಇ-ವಂಚನೆಯ ಸ್ಕೀಮ್?

ಬಿಟ್‌ಕಾಯಿನ್ ಇ-ವಂಚನೆಯ ಸ್ಕೀಮ್?

ಆದಾಯ ತೆರಿಗೆ ಇಲಾಖೆಯು ಬೆಂಗಳೂರು ಸೇರಿದಂತೆ ದೇಶದ ನಗರಗಳಲ್ಲಿ ಬುಧವಾರ ಬಿಟ್‌ಕಾಯಿನ್ ವಿನಿಮಯ ಕೇಂದ್ರಗಳ ಸಮೀಕ್ಷೆಯನ್ನು ನಡೆಸಿದ್ದು, ಬಿಟ್‌ ಕಾಯಿನ್‌ ದರ ಕ್ಷಣ ಕ್ಷಣಕ್ಕೂ ಭಾರಿ ಜಿಗಿಯುತ್ತಿರುವುದರಿಂದ ಇದು ಇ-ವಂಚನೆಯ ಸ್ಕೀಮ್‌ ಆಗಿ ಮಾರ್ಪಡುವ ಸಂಭವ ಇದೆ ಎಂಬ ಭೀತಿ ಉಂಟಾಗಿದೆ.!!

ಬಿಟ್‌ಕಾಯಿನ್ ಆಸೆ ಬೇಡ!!

ಬಿಟ್‌ಕಾಯಿನ್ ಆಸೆ ಬೇಡ!!

ಕೇಲವೇ ತಿಂಗಳ ಹಿಂದಷ್ಟೆ 2 ಲಕ್ಷ ರೂಪಾಯಿಗಳ ಬೆಲೆ ಹೊಂದಿದ್ದ ಒಂದು ಬಿಟ್‌ಕಾಯಿನ್ ಬೆಲೆ ಇಂದು 13 ಲಕ್ಷ ರೂ.ವರೆಗೂ ಏರಿಕೆಯಾಗಿತ್ತು. ಹಾಗಾಗಿ, ಸುಲಭವಾಗಿ ಹಣ ಸಂಪಾದನೆ ಮಾಡುವ ಆಸೆ ಹೊತ್ತು ಹೆಚ್ಚು ಜನರು ಬಿಟ್‌ಕಾಯಿನ್ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಆದರೆ, ಒಮ್ಮೆ ಮೋಸಹೋದರೆ ಏನಾಗಬಹುದು ಎಂದು ಊಹಿಸಿ.!!

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?
ಭಾರತದಲ್ಲಿ ಬಿಟ್‌ಕಾಯಿನ್ ನಿಷೇಧ.!!

ಭಾರತದಲ್ಲಿ ಬಿಟ್‌ಕಾಯಿನ್ ನಿಷೇಧ.!!

ಬಿಟ್‌ಕಾಯಿನ್ ಅಥವಾ ಆ ರೀತಿಯ ಯಾವುದೇ ಕ್ರಿಪ್ಟೋ ಕರೆನ್ಸಿಗಳು ಭಾರತದಲ್ಲಿ ಕಾನೂನು ಮಾನ್ಯವಲ್ಲ. ಹಾಗಾಗಿ, ಬಿಟ್‌ಕಾಯಿನ್ ವಿಷಯದ ಬಗ್ಗೆ ಪರಿಶೀಲನೆ ನಡೆಸಲು, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಜೆಟ್ಲಿ ಹೇಳಿದ್ದಾರೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
I can say almost with certainty that cryptocurrencies will come to a bad end,” Buffett told CNBC in an interview.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot