ವಿಶ್ವದ ಅತ್ಯಂತ ದುಬಾರಿ ಐಫೋನ್ ಬೆಲೆ ಎಷ್ಟು ಗೊತ್ತಾ?.ವಜ್ರದಲ್ಲಿಯೇ ತಯಾರಾಗಿದೆ!!

Written By:

ಆಪಲ್ ಕಂಪೆನಿಯ ಲಕ್ಷಗಟ್ಟಲೆ ಬೆಲೆ ಹೊಂದಿರುವ ದುಬಾರಿ ಐಫೋನ್‌ಗಳ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಆದರೆ, ಆಪಲ್ ಕಂಪೆನಿಯ ಅತ್ಯಂತ ದುಬಾರಿ ಫೋನ್ ಯಾವುದು ಎಂದು ತಿಳಿದರೆ ಎಲ್ಲರೂ ತಲೆತಿರುಗಿ ಬೀಳುತ್ತಾರೆ.! ಏಕೆಂದರೆ ಆಪಲ್ ಕಂಪೆನಿಯ ವಿಶ್ವದ ಅತ್ಯಂತ ದುಬಾರಿ ಐಫೋನ್‌ನಿಂದ 10ಕ್ಕಿಂತ ಹೆಚ್ಚು ಫೆರಾರಿ ಕಾರುಗಳನ್ನು ಖರೀದಿಸಬಹುದು.!!

ವಿಶ್ವದ ಅತ್ಯಂತ ದುಬಾರಿ ಐಫೋನ್ ಬೆಲೆ ಎಷ್ಟು ಗೊತ್ತಾ?.ವಜ್ರದಲ್ಲಿಯೇ ತಯಾರಾಗಿದೆ!!

ಹೌದು, ನಂಬಿದರೆ ನಂಬಿ ಬಿಟ್ಟರೆ ಬಿಡಿ ವಿಶ್ವದ ಅತ್ಯಂತ ದುಬಾರಿ ಐಫೋನ್ ಮಾರುಕಟ್ಟೆಗೆ ಬಂದಿದೆ. ಬ್ಲ್ಯಾಕ್​ ಡೈಮಂಡ್ ಬಣ್ಣದಲ್ಲಿ 97 ಕೋಟಿ ರೂ. ಬೆಲೆ ದುಬಾರಿ ಐಫೋನ್ ಬಿಡುಗಡೆಯಾಗಿದೆ.! ಈ ಫೋನ್ ನೋಡಿ ಮೊಬೈಲ್ ಜಗತ್ತು ಬೆರಾಗಾಗಿದ್ದು, ಹಾಗಾದರೆ, ಈ ವಿಶ್ವದ ದುಬಾರಿ ಐಫೋನ್ ವಿಶೇಷತೆಗಳೇನು? ಈ ಐಫೋನ್ 97 ಕೋಟಿ ರೂ. ಬೆಲೆ ಹೊಂದಲು ಕಾರಣ ಏನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
97 ಕೋಟಿ ರೂ.ಬೆಲೆ!!

97 ಕೋಟಿ ರೂ.ಬೆಲೆ!!

50 ಸಾವಿರದಿಂದ ಲಕ್ಷ ರೂಪಾಯಿ ಬೆಲೆ ಹೊಂದಿರುವ ಐಫೋನ್ ಖರೀದಿಸಲು ನಮ್ಮಲ್ಲಿ ಹರಸಾಹಸಪಡುತ್ತಿದ್ದಾರೆ. ಆದರೆ, ವಿಶ್ವವೇ ಬೆರಗಾಗುವಂತೆ 97 ಕೋಟಿ ರೂ.ಬೆಲೆ ಹೊಂದಿರುವ ಐಫೋನ್ ಮಾರುಕಟ್ಟೆಗೆ ಬಂದಿದೆ. ಐಷಾರಾಮಿ ವೆಬ್ಸೈಟ್ alux.com ಇದನ್ನು ವಿಶ್ವದ ಅತ್ಯಂತ ದುಬಾರಿ ಐಫೋನ್ ಎಂದು ಹೇಳಿದೆ.!!

ಹೇಗಿದೆ 97 ಕೋಟಿ ಫೋನ್?

ಹೇಗಿದೆ 97 ಕೋಟಿ ಫೋನ್?

ಸಾಮಾನ್ಯ ಐಫೋನ್ ಆಗಿದ್ದ ಐಫೋನ್ 5 ಐಫೋನ್​ ಅನ್ನು ಚಿನ್ನ ಮತ್ತು ಡೈಮಂಡ್‌ನಿಂದ ಮಾಡಲಾಗಿದ್ದು, ಚಿನ್ನ ಹಾಗೂ ಡೈಮಂಡ್ ಈ ಐಫೋನಿನ ಪೂರ್ಣ ದೇಹವನ್ನು ಅಲಂಕರಿಸಲಾಗಿವೆ. ಇನ್ನು ಹಿಂಬದಿಯಲ್ಲಿರುವ ಆಪಲ್​ ಲೋಗೋವನ್ನೂ ವಜ್ರದಿಂದಲೇ ವಿನ್ಯಾಸ ಮಾಡಲಾಗಿರುವುದು ಈ ದುಬಾರಿ ಐಫೋನಿನ ವಿಶೇಷವಾಗಿದೆ!!

97 ಕೋಟಿ ರೂ.ಬೆಲೆ ಏಕೆ?

97 ಕೋಟಿ ರೂ.ಬೆಲೆ ಏಕೆ?

ಬ್ಲ್ಯಾಕ್​ ಡೈಮಂಡ್ ಐಫೋನ್ 5 ಫೋನ್​ ಅನ್ನು ಚಿನ್ನ ಮತ್ತು ಡೈಮಂಡ್‌ನಿಂದ ಮಾಡಲಾಗಿದ್ದು, ದುಬಾರಿ ವಜ್ರವೆನಿಸಿಕೊಂಡಿರುವ ಬ್ಲ್ಯಾಕ್ ಡೈಮಂಡ್​ನಿಂದ ಫೋನ್ ಅನ್ನು ಅಲಂಕರಿಸಲಾಗಿದೆ.! ಹಾಗಾಗಿಯೇ, ಈ ಫೋನ್ 97 ಕೋಟಿ ರೂ.ಬೆಲೆಯನ್ನು ಹೊಂದಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ.!!

ಫೋನ್ ಫೀಚರ್ಸ್ ಏನು?

ಫೋನ್ ಫೀಚರ್ಸ್ ಏನು?

4 ಇಂಚಿನ ಸ್ಕ್ರೀನ್​ ಹೊಂದಿರುವ ಈ ಫೋನ್, 8 ಮೆಗಾ ಪಿಕ್ಸೆಲ್​ನ ರೆಕಾರ್ಡಿಂಗ್ ಕ್ಯಾಮರಾ ಕೂಡಾ ಇದೆ. ಈ ದುಬಾರಿ ಐಫೋನ್ 6 ಜಿಬಿ, 32 ಜಿಬಿ ಹಾಗೂ 64 ಜಿಬಿಯ ಮೂರು ವೇರಿಯೆಂಟ್​ಗಳಲ್ಲಿ ಬಿಡುಗಡೆಗೊಳಿಸಲಾಗಿದೆ.!!

How to view all photos, pages, comments and posts you liked on Facebook (KANNADA)
ಆಪಲ್ ಕಂಪೆನಿ ತಯಾರಿಸಿಲ್ಲ!!

ಆಪಲ್ ಕಂಪೆನಿ ತಯಾರಿಸಿಲ್ಲ!!

ವಿಶ್ವದ ಕೆಲವು ದುಬಾರಿ ಮತ್ತು ಐಷಾರಾಮಿ ವಸ್ತುಗಳ ಹೆಸರಾಂತ ಸೃಷ್ಟಿಕರ್ತ ಸ್ಟುವರ್ಟ್ ಹ್ಯೂಸ್ ಅವರು ಈ ವಿಶ್ವದ ದುಬಾರಿ ಐಫೋನ್ ಅನ್ನು ತಯಾರಿಸಿದ್ದಾರೆ.! ಈ ಐಫೋನ್ ಮೂಲಭೂತವಾಗಿ ಐಫೋನ್ 5 ಆಗಿದ್ದು, ಇದೀಗ ವಿಶ್ವದ ದುಬಾರಿ ಫೋನ್ ಆಗಿದೆ.!!

ಓದಿರಿ:ಆಂಡ್ರಾಯ್ಡ್ ಫೋನ್‌ಗಳ ವೇಗ ಹೆಚ್ಚಿಸಲು ಗೂಗಲ್‌ನಿಂದ ಹೊಸ ಫೀಚರ್!!..ಏನದು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This is the most expensive iPhone in the world, according to luxury website alux.com.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot