Subscribe to Gizbot

3G,2G ಗ್ರಾಹಕರಿಗೂ ಬಂಪರ್ ಆಫರ್ ನೀಡಿದ ಅಂಬಾನಿ!..ಜಿಯೋ ಭರ್ಜರಿ ಕೊಡುಗೆ!!

Written By:

ಜಿಯೋ ಗ್ರಾಹಕರನ್ನು ಸೆಳೆಯಲು ಆಫರ್ ಬಿಡುಗಡೆ ಮಾಡುತ್ತಿದೆಯೊ ಅಥವಾ ಗ್ರಾಹಕರೆ ಜಿಯೋ ಬಗ್ಗೆ ಹುಚ್ಚುಹಿಡಿಸಿಕೊಂಡಿದ್ದಾರೊ ಗೊತ್ತಿಲ್ಲಾ. ಇಷ್ಟು ದಿವಸ ಉಚಿತ ಜಿಯೋ ಸೇವೆಯನ್ನು ಪಡೆದಿದ್ದ ಜಿಯೋ ಗ್ರಾಹಕರಿಗೆ ಇದೀಗ ಮತ್ತೊಂದು ಸಿಹಿಸುದ್ದಿ ದೊರೆತಿದ್ದು, ನೂತನ ಜಿಯೋ ಆಫರ್ ಎಲ್ಲರನ್ನು ಕೆರಳಿಸುವಂತಿಸಿದೆ.!

ಹೌದು, 2G ಮತ್ತು 3G ಗ್ರಾಹಕರನ್ನು ಸೆಳೆಯಲು ಜಿಯೋ ಹೊಸ ಆಫರ್ ನೀಡಿದ್ದು, 4G ಬಳಕೆದಾರರಲ್ಲದವರೂ ಕೂಡ ಜಿಯೋಫೈ ಮೂಲಕ ಜಿಯೋ ಸೇವೆಯನ್ನು ಪಡೆಯಬಹುದಾದ ಜಿಯೋಫೈಗೆ ಭಾರಿ ಆಫರ್ ನಿಡಿದೆ.!! ಈ ನೂತನ ಆಫರ್ ಮೂಲಕ ಜಿಯೋಫೈ ಖರೀದಿಸಿದರೆ ಶೇಕಡಾ 100ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.!!

ಹಾಗಾದರೆ, ಜಿಯೋ ಸೇವೆಯನ್ನು 2G ಮತ್ತು 3G ಗ್ರಾಹಕರು ಹೇಗೆ ಬಳಸಿಕೊಳ್ಳಬಹುದು. ಹೊಸದಾಗಿ ಜಿಯೋಫೈ ಆಫರ್‌ನಲ್ಲಿ ಏನು ನೀಡಲಾಗಿದೆ. ಜಿಯೋಫೈ ಮೇಲೆ 100ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
999 ರೂಪಾಯಿ ನೀಡಿದ್ರೆ ಜಿಯೋಫೈ!!

999 ರೂಪಾಯಿ ನೀಡಿದ್ರೆ ಜಿಯೋಫೈ!!

ಹೌದು, ಇಲ್ಲಿಯವರೆಗೂ ಜಿಯೋಫೈ ಬೆಲೆ 1999 ರೂಪಾಯಿಗಳಾಗಿತ್ತು. ಆದರೆ, ಜಿಯೋ ಜಿಯೋಫೈ ಬೆಲೆ ಕಡಿತ ಮಾಡಲಾಗಿದ್ದು, ಬಳಕೆದಾರರಿಗೆ ಹೊಸ ಡಿವೈಸ್ ಜೊತೆ ಸಾವಿರ ರೂಪಾಯಿ ಆಫರ್ ಲಾಭ ಸಿಗ್ತಾ ಇದೆ. ಹಾಗಾಗಿ, ಗ್ರಾಹಕರು 999 ರೂಪಾಯಿ ನೀಡಿದ್ರೆ ಸಾಕು ಜಿಯೋಫೈ ಕೈ ಸೇರಲಿದೆ.

ಹಳೆ ವೈ-ಫೈ ಡಾಂಗಲ್ ಏಕ್ಸ್ಚೇಂಜ್ ಆಫರ್!!

ಹಳೆ ವೈ-ಫೈ ಡಾಂಗಲ್ ಏಕ್ಸ್ಚೇಂಜ್ ಆಫರ್!!

ಹಳೆ ವೈ-ಫೈ ಡಾಂಗಲ್ ಮಾಡಿ ಹೊಸ ಜಿಯೋಫೈ ಡಿವೈಸ್ ಖರೀದಿ ಮಾಡಿದರೆ 2010 ರೂಪಾಯಿಯ 4ಜಿ ಡೇಟಾವನ್ನು ಜಿಯೋ ಉಚಿತವಾಗಿನೀಡುತ್ತದೆ. 999 ರೂಪಾಯಿ ನೀಡಿ ಜಿಯೋಫೈ ಖರೀದಿಸಿದರೆ ಬೆಲೆಗಿಂತ ಎರಡು ಪಟ್ಟು ಹೆಚ್ಚು ಡೇಟಾ ಗ್ರಾಹಕನಿಗೆ ಸಿಗಲಿದೆ. ಕಂಪನಿ ನಿಯಮದ ಪ್ರಕಾರ ಹಳೆ ಡಾಂಗಲ್ ಕೆಲಸ ನಿರ್ವಹಿಸುತ್ತಿರಬೇಕು!!

2G ಮತ್ತು 3G ಗ್ರಾಹಕರು ಆಫರ್ ಹೇಗೆ ಬಳಸಿಕೊಳ್ಳಬಹುದು.!!

2G ಮತ್ತು 3G ಗ್ರಾಹಕರು ಆಫರ್ ಹೇಗೆ ಬಳಸಿಕೊಳ್ಳಬಹುದು.!!

ಜಿಯೋಫೈ ಡಿವೈಸ್ ಖರೀದಿ ಮಾಡಿ ವೈಫೈ ಮೂಲಕ ಜಿಯೋ ಡೇಟಾವನ್ನು ಪಡೆದುಕೊಳ್ಳಬಹುದು. ಇಲ್ಲವಾದಲ್ಲಿ ಜಿಯೋಫೈ ಚಾರ್ಜ್ ಮಾಡಿ ಡಿವೈಸ್ ಇಟ್ಟುಕೊಂಡರೆ ಎಲ್ಲಡೇ ಜಿಯೋ ಡೇಟಾ ಪಡೆದುಕೊಳ್ಳಬಹುದು. ಸ್ವಲ್ಪ ಕಷ್ಟವಾದರೂ ಅತ್ಯುತ್ತಮ ಆಫರ್!!

ಜಿಯೋಫೈ ಮೇಲೆ 100ರಷ್ಟು ಕ್ಯಾಶ್ ಬ್ಯಾಕ್!!

ಜಿಯೋಫೈ ಮೇಲೆ 100ರಷ್ಟು ಕ್ಯಾಶ್ ಬ್ಯಾಕ್!!

ಜಿಯೋ ಬಿಡುಗಡೆ ಮಾಡಿರುವ ನೂತನ ಆಫರ್‌ನಲ್ಲಿ ಜಿಯೋ ಮನಿ ಮೂಲಕ ಜಿಯೋಫೈ ಬುಕ್ ಮಾಡಿದರೆ ಜಿಯೋ ಮೇಲೆ 100ರಷ್ಟು ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶವನ್ನು ಜಿಯೋ ನೀಡಿದೆ. ಆದರೆ, ಎಲ್ಲರಿಗೂ ಸಹ ಈ ಕ್ಯಾಶ್‌ಬ್ಯಾಕ್ ಸಿಗುವುದಿಲ್ಲ. ಕೇವಲ ಅದೃಷ್ಟವಂತರಿಗೆ ಮಾತ್ರ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
JioFi Now Available At Rs. 999 Effectively. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot