Subscribe to Gizbot

'ಗೂಗಲ್' ನಮಗೆ ಹೇಗೆಲ್ಲಾ ಮೋಸ ಮಾಡುತ್ತಿದೆ ಗೊತ್ತಾ?..ಇದೊಂದು ಪ್ರಕರಣವೇ ಸಾಕ್ಷಿ!!

Written By:

ಇಂಟರ್‌ನೆಟ್‌ನಲ್ಲಿ ಹುಡುಕಾಟ ನಡೆಸುವುದನ್ನು ಸಹ 'ಗೂಗಲಿಂಗ್' ಎಂದು ಕರೆಯುವಷ್ಟರ ಮಟ್ಟಿಗೆ ಗೂಗಲ್ ಕಂಪೆನಿ ಇಂದು ವಿಶ್ವದಲ್ಲಿ ಬೆಳದು ನಿಂತಿದೆ.! ಜಗತ್ತಿನ ಜ್ಞಾನವನ್ನು ವ್ಯವಸ್ಥಿತವಾಗಿಡುವ ಮತ್ತು ಯಾರಾದರೂ ಹುಡುಕಿದರೆ ಕೂಡಲೇ ಸಿಗುವಂತೆ ಮಾಡುವ ಉದ್ದೇಶದೊಂದಿಗೆ ಆರಂಭಗೊಂಡ ಗೂಗಲ್ ಇಂದು ಇಂಟರ್‌ನೆಟ್ ಪ್ರಪಂಚವನ್ನು ಆಕ್ರಮಿಸಿಕೊಂಡಿದೆ.!!

ಗೂಗಲ್ ಸ್ಥಾಪನೆಯಾದ ಎರಡೇ ವರ್ಷದಲ್ಲಿ ತನ್ನ ವ್ಯಾವಹಾರಿಕ ನೈತಿಕತೆಗೆ 'Don't be evil' (ಕೆಡುಕನ್ನು ಮಾಡಬೇಡ) ಎಂಬ ಧ್ಯೇಯವಾಕ್ಯ ಇಟ್ಟುಕೊಂಡ ಗೂಗಲ್ ಕಂಪೆನಿ ಇಂದು ಸರ್ಕಾರಗಳಿಗೆ ಭಾರಿ ದಂಡ ತೆರುತ್ತಿದೆ.! ಇದು ಗೂಗಲ್‌ನ ವ್ಯಾವಹಾರಿಕ ಮೋಸಕ್ಕೆ ಸಾಕ್ಷಿಯಾಗುತ್ತಿದೆ.! ಹಾಗಾಗಿ, ಭವಿಷ್ಯದಲ್ಲಿ ಗೂಗಲ್ ಕೂಡಾ ಜನರಿಗೆ ಕೆಡಕಾಗಬಹದು ಎಂದು ಹೇಳಲಾಗಿದೆ.!!

'ಗೂಗಲ್' ನಮಗೆ ಹೇಗೆಲ್ಲಾ ಮೋಸ ಮಾಡುತ್ತಿದೆ ಗೊತ್ತಾ?..ಇದೊಂದು ಪ್ರಕರಣವೇ ಸಾಕ್ಷಿ!!

ಆದರೆ, ಜನರು ಗೂಗಲ್ ಅನ್ನು ಜನರು ಎಷ್ಟು ನಂಬಿದ್ದಾರೆ ಎಂದರೆ, ''ಗೂಗಲ್ ಕಂಪೆನಿಯಿಂದ ಯಾವುದೇ ಕಾರಣಕ್ಕೂ ನಾವು ಮೋಸಹೋಗಲು ಸಾಧ್ಯವೇ ಇಲ್ಲ'' ಅಭಿಪ್ರಾಯಪಡುತ್ತಾರೆ. ಇದಕ್ಕೆ ಗೂಗಲ್ ಕೂಡ ತನ್ನ ವ್ಯಾವಹಾರಿಕ ನೈತಿಕತೆಯ ಬಗ್ಗೆ ಯಾವಾಗಲೂ ತನ್ನನ್ನು ಸಮರ್ಥಿಸಿಕೊಳ್ಳುತ್ತಾ ಬಂದಿದೆ.! ಆದರೆ, ನಿಜವಾಗಿಯೂ ಆಗುತ್ತಿರುವುದೇನು? ಗೂಗಲ್ ಎಂಬ ಮಾಯೆ ಬಗ್ಗೆ ನಿಮಗೆಷ್ಟು ಗೊತ್ತು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತದಲ್ಲಿ ಗೂಗಲ್‌ಗೆ 136 ಕೋಟಿ ದಂಡ!!

ಭಾರತದಲ್ಲಿ ಗೂಗಲ್‌ಗೆ 136 ಕೋಟಿ ದಂಡ!!

ಕೇವಲ ಮೂರು ದಿನಗಳ ಹಿಂದಷ್ಟೇ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಗೂಗಲ್‌ಗೆ ₹136 ಕೋಟಿ ದಂಡ ವಿಧಿಸಿದೆ.! ಈ ಹಿಂದೆ ಯುರೋಪ್ ಒಕ್ಕೂಟದಲ್ಲಿಯೂ ಕೂಡ ಗೂಗಲ್ ಮೇಲೆ ಮೊಕದ್ದಮೆ ದಾಖಲಿಸಿ ಸಾವಿರಾರು ಕೋಟಿ ದಂಡವನ್ನೂ ವಿಧಿಸಿತ್ತು. ಈ ಕಾರಣಗಳಿಂದ ಗೂಗಲ್ ಮೇಲೆ ಎಲ್ಲರಿಗೂ ಅಪನಂಬಿಕೆ ಬಂದಿದೆ. ಗೂಗಲ್ ಅನ್ನು ಹೇಗೆ ನಂಬುವುದು ಎನ್ನುವಂತಾಗಿದೆ.!!

ಅಷ್ಟಕ್ಕೂ ಭಾರತದಲ್ಲಿ ಗೂಗಲ್‌ಗೆ ದಂಡ ವಿಧಿಸಿದ್ದು ಏಕೆ?

ಅಷ್ಟಕ್ಕೂ ಭಾರತದಲ್ಲಿ ಗೂಗಲ್‌ಗೆ ದಂಡ ವಿಧಿಸಿದ್ದು ಏಕೆ?

ಭಾರತ್ ಮ್ಯಾಟ್ರಿಮೊನಿ ಎಂಬ ವಧು-ವರರ ನಡುವೆ ಸಂಬಂಧ ಕಲ್ಪಿಸುವ ಸೇವೆ ಒದಗಿಸುವ ಪೋರ್ಟಲ್‌ನ ವ್ಯಾಪಾರದ ಮೇಲೆ ದುಷ್ಪರಿಣಾಮ ಉಂಟುಮಾಡುವ ಕೆಲಸವನ್ನು ಗೂಗಲ್ ಜಾಹೀರಾತು ಸೇವೆಯಿಂದಾಗಿತ್ತು.! ಮ್ಯಾಟ್ರಿಮೊನಿ ಎಂಬ ಪದಗಳನ್ನು ಬಳಸಿ ಹುಡುಕಿದಾಗಲೂ ಆ ಸಂಸ್ಥೆಯ ಪ್ರತಿಸ್ಪರ್ಧಿಗಳ ಜಾಹೀರಾತು ಕಾಣಿಸುತ್ತಿದ್ದರಿಂದ ಗೂಗಲ್ ಮೇಲೆ ಕಾನೂನು ಹೋರಾಟ ನಡೆಸಲಾಗಿತ್ತು. ನಂತರ ಎಲ್ಲಾ ವಿಚಾರಣೆಗಳಿಂದ ಸಿಸಿಐ ಗೂಗಲ್‌ಗೆ 136 ಕೋಟಿ ದಂಡ ವಿಧಿಸಿ ಆದೇಶ ಹೊರಡಿದೆ.!!

ಗೂಗಲ್‌ನಿಂದ ಗ್ರಾಹಕರಿಗೆ ಮೋಸ?

ಗೂಗಲ್‌ನಿಂದ ಗ್ರಾಹಕರಿಗೆ ಮೋಸ?

ಅಂತರ್ಜಾಲ ಸರ್ಚ್ ಎಂಜಿನ್ ಮಾರುಕಟ್ಟೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಪಾಲು ಒಂದೇ ಸಂಸ್ಥೆಯ ತಂತ್ರಜ್ಞಾನವನ್ನು ಅವಲಂಬಿಸಿದ್ದರೆ ಏನೆಲ್ಲಾ ಅನಾಹುತಗಳಾಗಬಹುದೋ ಅವೆಲ್ಲವೂ ಗೂಗಲ್‌ ಮೂಲಕವೂ ಸಂಭವಿಸುತ್ತಿವೆ. ಗೂಗಲ್‌ನ ಸರ್ಚ್ ಎಂಜಿನ್ ಅನ್ನು ಗೂಗಲ್ ಸೇವೆಗಳೆಲ್ಲವೂ ಗ್ರಾಹಕರಿಗೆ ಉಚಿತವಾಗಿ ದೊರೆಯುತ್ತಿವದ್ದರೂ, ಗೂಗಲ್ ಸಂಸ್ಥೆ ತನ್ನ ಪ್ರಭಾವವನ್ನು ಬಳಸಿಕೊಂಡು ಜನರ ಬಳಿ ಹಣ ದೋಚುವ ಕೆಲಸವನ್ನು ಹೇಗೆಲ್ಲಾ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ.!!

ಜನರಿಗೆ ನೇರವಾಗಿ ಮೋಸ ಮಾಡಿಲ್ಲ.!!

ಜನರಿಗೆ ನೇರವಾಗಿ ಮೋಸ ಮಾಡಿಲ್ಲ.!!

ಈವರೆಗೂ ಯಾವೊಬ್ಬ ಬಳಕೆದಾರನು ಕೂಡ ಗೂಗಲ್ ಕಂಪೆನಿ ಮೋಸ ಮಾಡುತ್ತದೆ ಎಂಬುದನ್ನು ಯೋಚಿಸಿಯೂ ಇರುವುದಿಲ್ಲ. ಆದರೆ, ತನ್ನ ಬಳಕೆದಾರರಿಗೂ ತಿಳಿಯದಂತೆ ಗೂಗಲ್ ಅವರಿಂದ ಬೇರೊಂದು ರೂಪದಲ್ಲಿ ಹಣಗಳಿಸುತ್ತದೆ. ಉಚಿತ ಸೇವೆಗೆ ಖರ್ಚಾಗುವ ಹಣವನ್ನು ಗೂಗಲ್ ಜಾಹಿರಾತುಗಳ ಮೂಲಕ ತುಂಬಿಕೊಳ್ಳುತ್ತದೆ. ಇದು ವಯಕ್ತಿಕವಾಗಿ ನಡೆಯದಿದ್ದರೂ ಸಹ ಗೂಗಲ್ ಆಧಾಯದಲ್ಲಿ ಇದು ಸ್ಪಷ್ಟವಾಗುವುದನ್ನು ನಾವು ನೋಡಬಹುದು.!!

ಆಯ್ಕೆಗಳನ್ನೂ ಸೀಮಿತಗೊಳಿಸುತ್ತದೆ!!

ಆಯ್ಕೆಗಳನ್ನೂ ಸೀಮಿತಗೊಳಿಸುತ್ತದೆ!!

ಶೇಕಡ 90ಕ್ಕಿಂತ ಹೆಚ್ಚು ಮಾರುಕಟ್ಟೆಯಲ್ಲಿ ವ್ಯಾಪಿಸಿಕೊಂಡಿರುವ ಸಂಸ್ಥೆಯೊಂದು ತೆಗೆದುಕೊಳ್ಳುವ ನಿರ್ಧಾರಗಳು ಕೇವಲ ಸಮಾನ ಸ್ಪರ್ಧಾ ನಿಯಮಗಳನ್ನಷ್ಟೇ ಮುರಿಯದೇ ಅವು ಬಳಕೆದಾರನ ಎದುರು ಇರುವ ಆಯ್ಕೆಗಳನ್ನೂ ಸೀಮಿತಗೊಳಿಸುತ್ತಿರುತ್ತವೆ. ಹಾಗಾಗಿ, ಗೂಗಲ್‌ನಿಂದ ಆಗುತ್ತಿರುವ ಈ ಪ್ರಮಾದವು ಬಳಕೆದಾರರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಬೇಕು.!!

ಉದಾಹರಣೆ ಹೀಗಿದೆ!!

ಉದಾಹರಣೆ ಹೀಗಿದೆ!!

ಗೂಗಲ್ ಮೂಲಕ ಬಸ್ ಅಥವಾ ರೈಲು ಸಮಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರೆ ಟಿಕೆಟ್ ಕಾದಿರಿಸುವ ಸೇವೆಗಳ ಜಾಹೀರಾತು ಕೊಂಡಿಗಳು ನಮಗೆ ಕಾಣಿಸುತ್ತವೆ. ಬಳಕೆದಾರರು ಸಹಜವಾಗಿಯೇ ಅವುಗಳಲ್ಲಿ ಒಂದನ್ನು ಆರಿಸಿಕೊಳ್ಳುತ್ತಾರೆ. ಇದರಿಂದ ಗೂಗಲ್‌ಗೆ ಆದಾಯ ತಂದುಕೊಡುತ್ತದೆ.! ಜನರಿಗೆ ಇದೊಂದು ಸಮಸ್ಯೆಯೇ ಅಲ್ಲ ಆದರೆ, ಗೂಗಲ್ ಹೆಚ್ಚು ಹಣ ಗಳಿಸಲು ಇನ್ನಿತರ ಮಾರ್ಗಗಳನ್ನು ಹುಡುಕುತ್ತಿರುವುದ ದೊಡ್ಡ ಸಮಸ್ಯೆಯಾಗಿದೆ.!!

ಗೂಗಲ್ ತನ್ನ ಪ್ರಭಾವವನ್ನು ಬಳಸಿಕೊಳ್ಳುತ್ತಿದೆ.!!

ಗೂಗಲ್ ತನ್ನ ಪ್ರಭಾವವನ್ನು ಬಳಸಿಕೊಳ್ಳುತ್ತಿದೆ.!!

ಗೂಗಲ್ ತಂತ್ರಜ್ಞಾನದ ಹೆಸರಿನಲ್ಲಿ ಹಲವು ಬಗೆಯ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದೆ.! ಜನರನ್ನು ಆನ್‌ಲೈನ್ ಪ್ರಪಂಚಕ್ಕೆ ಕರೆದೊಯ್ಯುತ್ತಾ ಹೆಚ್ಚು ಹಣ ಗಳಿಸಲು ಇನ್ನಿತರ ಮಾರ್ಗಗಳನ್ನು ಹುಡುಕುತ್ತಿರುತ್ತದೆ. ಅದಕ್ಕಾಗಿ ತನ್ನ ಪ್ರಭಾವವನ್ನು ಬಳಸಿಕೊಳ್ಳುತ್ತಿದೆ. ಇದೆಲ್ಲವನ್ನೂ ಗೂಗಲ್ ತಂತ್ರಜ್ಞಾನದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿದೆಯಾದರೂ ತನ್ನ ಬಳಿ ಇರುವ ಹಣ ಬಲವನ್ನು ಗೂಗಲ್ ಇಂತಹ ಕೃತ್ಯಗಳಿಗಾಗಿ ಬಳಸಿಕೊಳ್ಳುತ್ತಿದೆ.!!

How to Activate UAN Number? KANNADA
ಅಂತರ್ಜಾಲ ಎಲ್ಲವೂ ಗೂಗಲ್‌ಮಯ!!

ಅಂತರ್ಜಾಲ ಎಲ್ಲವೂ ಗೂಗಲ್‌ಮಯ!!

2017ರ ಅಂತ್ಯದವರೆಗಿನ ಲೆಕ್ಕಾಚಾರಗಳಂತೆ ಪ್ರಪಂಚದ ಅಂತರ್ಜಾಲ ಸರ್ಚ್ ಎಂಜಿನ್ ಮಾರುಕಟ್ಟೆಯ ಶೇಕಡ 91.74ರಷ್ಟು ಪಾಲು ಗೂಗಲ್‌ನದ್ದು. ಎರಡನೇ ಸ್ಥಾನದಲ್ಲಿರುವ ಮೈಕ್ರೋಸಾಫ್ಟ್‌ನ ಬಿಂಗ್ ಬಳಕೆಯ ಪ್ರಮಾಣ ಕೇವಲ ಶೇಕಡ 2.76. ಮೂರನೇ ಸ್ಥಾನದಲ್ಲಿರುವ ಯಾಹೂ ಶೇಕಡ 1.83ರ ಮಾರುಕಟ್ಟೆ ಪಾಲಿಗೆ ಸೀಮಿತಗೊಂಡಿದೆ. ಅಂದರೆ ಗೂಗಲ್‌ ಸೇವೆ ಬಳಕೆಯ ಪ್ರಮಾಣ ತನ್ನ ಸಮೀಪದ ಪ್ರತಿಸ್ಪರ್ಧಿಗಿಂತ 33 ಪಟ್ಟು ಹೆಚ್ಚಿದೆ.!!

ಏಕಸ್ವಾಮ್ಯಕ್ಕೆ ಕೊನೆ ಹಾಡಬೇಕಿದೆ!!

ಏಕಸ್ವಾಮ್ಯಕ್ಕೆ ಕೊನೆ ಹಾಡಬೇಕಿದೆ!!

ವಿಶ್ವದ ಶೇ. 70 ಪರ್ಸೆಂಟ್‌ಗೂ ಹೆಚ್ಚು ಫೋನ್‌ಗಳು ಇಂದು ಗೂಗಲ್‌ಮಯವಾಗಿವೆ. ಗೂಗಲ್ ಸೇವೆಗಳನ್ನು ಮೊದಲೇ ಮೊಬೈಲ್‌ನಲ್ಲಿ ತುಂಬಲು ಗೂಗಲ್ ಮೊಬೈಲ್ ಕಂಪೆನಿಹಗಳಿಗೆ ಲಕ್ಷಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದೆ. ಹಾಗಾಗಿ, ಜನರು ಗೂಗಲ್ ಅನ್ನು ಬಿಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಇವೆಲ್ಲವುಗಳ ನಡುವೆ ಮಾರುಕಟ್ಟೆಯಲ್ಲಿ ಗೂಗಲ್ ಏಕಸ್ವಾಮ್ಯಕ್ಕೆ ಬ್ರೇಕ್ ಹಾಬೇಕಿದೆ.! ಇಲ್ಲದಿದ್ದರೆ ಭವಿಷ್ಯದಲ್ಲಿ ಗೂಗಲ್ ಆಡಿದ್ದೇ ಆಟ ಎನ್ನುವಂತಾಗುತ್ತದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
it affects the prospects of every company which has an online presence, industry insiders said. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot