ಮತ್ತೆ ಹಿಂದಿನಿಂದ ಹೊಡೆದ ಕಳ್ಳ ಚೀನಾ!.ಸಮಯಕ್ಕಾಗಿ ಕಾದಿದೆ ಭಾರತ!?

ಭಾರತೀಯ ಸೈನ್ಯಕ್ಕೆ ಸೇರಿದ ಅತ್ಯಾಧುನಿಕ ಮಾನವರಹಿತ ಡ್ರೋಣ್ ಒಂದು ಚೀನಾದ ಕೈಸೇರಿದೆ.! ಎರಡು ವಾರಗಳ ಹಿಂದೆ ಈ ಘಟನೆ ನಡೆದಿದ್ದು, ಭಾರತ ರಕ್ಷಣಾ ವ್ಯವಸ್ಥೆಗೆ ತೀವ್ರವಾದ ಅಪಾಯ ಎದುರಾಗಿದೆ.!!

|

ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ, ಚೀನಾದ ಭೂ ಭಾಗಕ್ಕೆ ಸೇರಿದೆ ಎನ್ನಲಾದ ಪ್ರದೇಶದೊಳಗೆ ಭಾರತೀಯ ಸೈನ್ಯಕ್ಕೆ ಸೇರಿದ ಅತ್ಯಾಧುನಿಕ ಮಾನವರಹಿತ ಡ್ರೋಣ್ ಒಂದು ಚೀನಾದ ಕೈಸೇರಿದೆ.! ಎರಡು ವಾರಗಳ ಹಿಂದೆ ಈ ಘಟನೆ ನಡೆದಿದ್ದು, ಭಾರತ ರಕ್ಷಣಾ ವ್ಯವಸ್ಥೆಗೆ ತೀವ್ರವಾದ ಅಪಾಯ ಎದುರಾಗಿದೆ.!!

ಮತ್ತೆ ಹಿಂದಿನಿಂದ ಹೊಡೆದ ಕಳ್ಳ ಚೀನಾ!.ಸಮಯಕ್ಕಾಗಿ ಕಾದಿದೆ ಭಾರತ!?

"ಹೆರಾನ್" ಎಂಬ ಭಾರತೀಯ ಸೈನ್ಯಕ್ಕೆ ಸೇರಿದ ಡ್ರೋನ್ ಚೀನಾದ ಗಡಿಯಲ್ಲಿ ಉರುಳಿಬಿದ್ದಿದ್ದು, ಚೀನೀ ಸೇನೆಗೆ ಸಿಲುಕಿರುವ ಇಸ್ರೇಲ್ ನಿರ್ಮಿತ ಭಾರತದ ಈ ಅತ್ಯಾಧುನಿಕ ಡ್ರೂಣ್ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಹಾಗಾಗಿ, ರಕ್ಷಣಾ ವ್ಯವಸ್ಥೆಯ ಕೆಲವು ಮಾಹಿತಿಗಳು ಚೀನಾದ ಪಾಲಾಗಿವೆ ಎಂದು ಅನುಮಾನ ವ್ಯಕ್ತವಾಗಿದೆ!!

ಚೀನಾದೊಳಗೆ ಭಾರತದ ಡ್ರೋಣ್?

ಚೀನಾದೊಳಗೆ ಭಾರತದ ಡ್ರೋಣ್?

ಭಾರತೀಯ ಸೈನ್ಯಕ್ಕೆ ಸೇರಿದ "ಹೆರಾನ್ " ಡ್ರೋಣ್ ಅನ್ನು ಚೀನಾದ ಕೈ ಸೇರಿದೆ.! ಗಡಿ ಪ್ರದೇಶ ದೋಕ್ಲಾಮ್ ಪ್ರಸ್ತಭೂಮಿಯೊಂದ ಚೀನಾದ ಹಿಡಿತದಲ್ಲಿರುವ ಗಡಿಯಿಂದ 20 ಕಿ.ಮಿ ಒಳಗೆ ಈ ಡ್ರೋಣ್ ಚೀನಾದ ಕೈ ಸೇರಿದೆ ಎಂದು ಹೇಳಿಕೊಂಡಿದೆ. ಆದರೆ, ಭಾರತ ಸೈನ್ಯ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ!!

ಕ್ಷಮಾಪಣೆ ಕೇಳಲು ಆಗ್ರಹ!!

ಕ್ಷಮಾಪಣೆ ಕೇಳಲು ಆಗ್ರಹ!!

ಎರಡು ವಾರಗಳ ನಂತರ 'ಹೆರಾನ್ ಡ್ರೋನ್' ತನ್ನ ಭೂ ಭಾಗವನ್ನು ಅಕ್ರಮವಾಗಿ ಪ್ರವೇಶಿಸಿದೆ ಎಂದು ಚೀನಾ ಹೇಳಿದೆ. ತಮ್ಮ ಭೂಪ್ರದೇಶಕ್ಕೆ ಪ್ರವೇಶಿಸಿದ್ದಕ್ಕಾಗಿ ಭಾರತವು ಕ್ಷಮಾಪಣೆ ಕೇಳಬೇಕೆಂದು ಹೇಳಿದೆ.!! ಆದರೆ, ಚೀನಾ ಡ್ರೋಣ್ ಅನ್ನು ಗಡಿಭಾಗದಲ್ಲಿಯೇ ಹೊಡೆದುರುಳಿಸಿರಬಹುದು ಎಂದು ಭಾರತ ಸೈನ್ಯ ಹೇಳಿದೆ!!

ರಕ್ಷಣಾ ವ್ಯವಸ್ಥೆಗೆ ತೀವ್ರ ಅಪಾಯ!!

ರಕ್ಷಣಾ ವ್ಯವಸ್ಥೆಗೆ ತೀವ್ರ ಅಪಾಯ!!

ಭಾರತದ ಹೆರಾನ್ ಡ್ರೋಣ್ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವುದರಿಂದ ಭಾರತ ಸೈನ್ಯಕ್ಕೆ ಸೇರಿದ ಹಲವು ಮಾಹಿತಿಗಳು ಡ್ರೋನ್‌ನಲ್ಲಿ ಸಂಗ್ರಹವಾಗಿವೆ. ಹಾಗಾಗಿ, ಎರಡು ವಾರಗಳ ಹಿಂದೆಯೇ ಡ್ರೋಣ್ ಚೀನಾದ ಕೈ ಸೇರಿರುವುದರಿಂದ ಭಾರತ ಸೈನ್ಯಕ್ಕೆ ಸೇರಿದ ಮಾಹಿತಿಗಳು ಚೀನಾದ ಪಾಲಾಗಿವೆ ಎನ್ನಲಾಗಿದೆ.!!

ಹೆರಾನ್ UAV ಡ್ರೋಣ್!!

ಹೆರಾನ್ UAV ಡ್ರೋಣ್!!

ಭಾರತದ ಸೈನ್ಯದಲ್ಲಿರುವ ಅತ್ಯಾಧುನಿಕ ಡ್ರೋಣ್‌ಗಳಲ್ಲಿ ಹೆರಾನ್ ಡ್ರೋಣ್ ಕೂಡ ಒಂದು.! ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿರುವ ಈ ಡ್ರೋಣ್ ಅನ್ನು ಚೀನಾ ಮತ್ತು ಭಾರತದ ಗಡಿ ಪ್ರದೇಶದಲ್ಲಿ ಚೀನೀ ಸೇನಾ ನಿಯೋಜನೆ ಮತ್ತು ಚಟುವಟಿಕೆಗಳಲ್ಲಿ ಕಣ್ಣಿಡಲು ಈ ಡ್ರೋನ್ ಅನ್ನು ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ.!!

ಇಸ್ರೇಲ್ ನಿರ್ಮಿತ ಡ್ರೋಣ್!!

ಇಸ್ರೇಲ್ ನಿರ್ಮಿತ ಡ್ರೋಣ್!!

ಹೆರಾನ್ ಡ್ರೋಣ್ ಅನ್ನು ಹೈರಾನ್ ಟೆಕ್ನಾಲಜಿಯೊಂದಿಗೆ ಇಸ್ರೇಲಿನ ಏರೋಸ್ಪೇಸ್ ಇಂಡಸ್ಟ್ರೀಸ್ (IAI) ತಯಾಸಿದೆ. 250kG ತೂಕದ ಈ ಮಾನವರಹಿತ ಅತ್ಯಾಧುನಿಕ ಡ್ರೋಣ್ ಗಡಿ ಪ್ರದೇಶದಲ್ಲಿ ಸ್ವಯಂಚಾಲಿವಾಗಿ ಕೆಲಸ ನಿರ್ವಹಿಸಿ ವಾಪಸ್ ತನ್ನ ಮೂಲ ಸ್ಥಾನಕ್ಕೆ ವಾಪಸಾಗುತ್ತಿತ್ತು ಎಂದು ಹೇಳಲಾಗಿದೆ.!!

ಹೆರಾನ್ ಡ್ರೋಣ್ ತಂತ್ರಜ್ಞಾನ!!

ಹೆರಾನ್ ಡ್ರೋಣ್ ತಂತ್ರಜ್ಞಾನ!!

250 ಕಿ.ಗ್ರಾಂ ತೂಕದ ಈ ಹೆರಾನ್ ಡ್ರೋಣ್, ಥರ್ಮೋಗ್ರಾಫಿಕ್ ಇನ್ಫ್ರಾರೆಡ್ ಕ್ಯಾಮರಾ, ಗೋಚರ-ಬೆಳಕು ಮೇಲ್ವಿಚಾರಣೆ, ಹವಾಮಾನ ತಂತ್ರಜ್ಞಾನ ಮತ್ತು ನೈಜ ಸಮಯದಲ್ಲಿ ವೀಡಿಯೋದಲ್ಲಿ ವರ್ಧಿತ ರಿಯಾಲಿಟಿ ಮೂಲಕ ಭೌಗೋಳಿಕ ಲಕ್ಷಣಗಳನ್ನು ತಿಳಿಸುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.!!

</a></strong><a class=ಒಂದು ಲೀಟರ್ ನೀರಿಗೆ 498.8 ಕಿ.ಮೀ ಓಡುವ ಬೈಕ್!!..ವಿಡಿಯೋ!!" title="ಒಂದು ಲೀಟರ್ ನೀರಿಗೆ 498.8 ಕಿ.ಮೀ ಓಡುವ ಬೈಕ್!!..ವಿಡಿಯೋ!!" loading="lazy" width="100" height="56" />ಒಂದು ಲೀಟರ್ ನೀರಿಗೆ 498.8 ಕಿ.ಮೀ ಓಡುವ ಬೈಕ್!!..ವಿಡಿಯೋ!!

Best Mobiles in India

English summary
Information that the downed Heron UAV, belonging to the Indian Army that landed about 20 km inside Chinese territory to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X