ಅದ್ಭುತ: ಚೀನಾದಲ್ಲಿದೆ ಬಣ್ಣ ಬದಲಾಯಿಸುವ ಕಟ್ಟಡ

By Shwetha
|

ಇಂದಿನ ಅದ್ಭುತ ಜಗತ್ತಿನಲ್ಲಿ ಮಾನವ ನಂಬಲು ಸಾಧ್ಯವಿಲ್ಲದೇ ಇರುವಂತಹ ಕೌತುಕಗಳನ್ನು ಸೃಷ್ಟಿಸುತ್ತಿದ್ದಾನೆ. ಬದಲಾಗುತ್ತಿರುವ ಜೀವನ ಶೈಲಿ, ಹೊಸದನ್ನು ಮಾಡಬೇಕೆನ್ನುವ ಆತನ ಹುರುಪು ಅಸಾಧ್ಯವಾದುದುನ್ನು ಸಾಧ್ಯವಾಗಿಸಿದೆ. ಈ ಸಾಧನೆಯ ಹಿಂದೆ ಆತನ ಶಕ್ತಿ ಸಾಮರ್ಥ್ಯಗಳು ಮಿಳಿತವಾಗಿವೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಇಷ್ಟೆಲ್ಲಾ ಪೀಠಿಕೆಯನ್ನು ಈ ಲೇಖನದಲ್ಲಿ ನಾವು ಮಾಡುತ್ತಿರುವುದು ಏತಕ್ಕಾಗಿ ಅಂದರೆ ಇಂದಿನ ಲೇಖನದಲ್ಲಿ ನಿಮ್ಮನ್ನು ದಿಗ್ಭ್ರಮೆಗೊಳಿಸುವಂತಹ ಅಚ್ಚರಿಯೊಂದನ್ನು ಪ್ರಸ್ತುತಪಡಿಸಲಿದ್ದೇವೆ.

ಓದಿರಿ: ಫ್ಲೈಟ್‌ನಲ್ಲಿ ನಿಮ್ಮ ಫೋನ್ ಏರ್‌ಪ್ಲೇನ್ ಮೋಡ್‌ನಲ್ಲಿರಬೇಕು:ಕಾರಣ ಇಲ್ಲಿದೆ

ಚೀನಾದಲ್ಲಿ ರಚನೆಯಾಗುತ್ತಿರುವ ಕಟ್ಟಡವೊಂದು ನೀವು ಎಲ್ಲಿ ನಿಂತಿದ್ದೀರೋ ಅದನ್ನು ಆಧರಿಸಿ ಬಣ್ಣಗಳನ್ನು ಬದಲಾಯಿಸಲಿವೆ. ಜೀಜಾಂಗ್ ಗೇಟ್ ಟವರ್ಸ್‌ನಲ್ಲಿ ಈ ಕಟ್ಟಡವಿದ್ದು, ಹೊಳೆಯುವ ದ್ವಿ ಕಟ್ಟಡಗಳು ವಿಶ್ವವಿಖ್ಯಾತವಾಗುವುದರಲ್ಲಿ ಸಂಶಯವಿಲ್ಲ. ಪರಿಸರ ಸ್ನೇಹಿ ಮಾದರಿಯಲ್ಲೇ ಈ ಕಟ್ಟಡಗಳನ್ನು ರಚನೆ ಮಾಡಲಾಗಿದ್ದು ಬಣ್ಣಗಳ ಬದಲಾವಣೆಯೇ ಈ ಕಟ್ಟಡಗಳ ಹಿಂದಿರುವ ಪವಾಡ ಸದೃಶ ಅಂಶವಾಗಿದೆ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕಟ್ಟಡಗಳನ್ನು ಕುರಿತು ಇನ್ನಷ್ಟು ಮಾಹಿತಿಗಳನ್ನು ಹಂಚಿಕೊಳ್ಳೋಣ

ಆರಂಭಿಕ ರಚನಾ ಹಂತ

ಆರಂಭಿಕ ರಚನಾ ಹಂತ

ಈಗಾಗಲೇ ಕಟ್ಟಡವು ಆರಂಭಿಕ ರಚನಾ ಹಂತದಲ್ಲಿದ್ದು ಆದಷ್ಟು ಬೇಗನೇ ಇದನ್ನು ಪ್ರವಾಸಿಗರಿಗಾಗಿ ತೆರವುಗೊಳಿಸಲಾಗುತ್ತದೆ.

ರೂಫ್‌ಟಾಪ್ ಗಾರ್ಡನ್

ರೂಫ್‌ಟಾಪ್ ಗಾರ್ಡನ್

ಟವರ್‌ಗಳಲ್ಲೊಂದು ಅತಿದೊಡ್ಡ ರೂಫ್‌ಟಾಪ್ ಗಾರ್ಡನ್ ಅನ್ನು ಹೊಂದಿದೆ.

ಬೇರೆ ಬೇರೆ ಬಣ್ಣ

ಬೇರೆ ಬೇರೆ ಬಣ್ಣ

ಬೇರೆ ಬೇರೆ ಬಣ್ಣ ಮತ್ತು ಷೇಡ್‌ಗಳನ್ನು ಗ್ಲಾಸ್ ಅನ್ನು ಕಟ್ಟಡಗಳ ರಚನೆಯಲ್ಲಿ ಬಳಸಿಕೊಳ್ಳಲಾಗಿದ್ದು ಇವುಗಳ ಬಣ್ಣವನ್ನು ವಿಭಿನ್ನವಾಗಿ ಪ್ರತಿಬಿಂಬಿಸುತ್ತವೆ. ನೀವು ಬೇರೆ ಬೇರೆ ಕಡೆಗಳಲ್ಲಿ ನಿಂತಾಗಲೆಲ್ಲಾ ಕಟ್ಟಡವು ಬೇರೆ ಬೇರೆ ಬಣ್ಣಗಳಲ್ಲಿ ಕಾಣಲಿದೆ.

ಪರಿಸರ ಸ್ನೇಹಿ

ಪರಿಸರ ಸ್ನೇಹಿ

ಟವರ್ ಅನ್ನು ಪರಿಸರ ಸ್ನೇಹಿಯಾಗಿ ರೂಪಿಸುವಲ್ಲಿ ಗಾಜುಗಳು ಪ್ರಮುಖ ಪಾತ್ರವನ್ನು ವಹಿಸಿದ್ದು ಪ್ರಜ್ವಲಿಸುವ ಮತ್ತು ಸೌರ ಶಾಖ ಲಾಭವನ್ನು ಕಡಿಮೆ ಮಾಡಿವೆ.

ಲಾವಾ ಸಂಸ್ಥೆ

ಲಾವಾ ಸಂಸ್ಥೆ

ಈ ಯೋಜನೆಯನ್ನು ಕೈಗೆತ್ತಿಕೊಂಡವರು ಲ್ಯಾಬೊರೇಟರಿ ಫಾರ್ ವಿಶಿನರಿ ಆರ್ಕಿಟೆಕ್ಚರ್ (ಲಾವಾ) ಸಂಸ್ಥೆಯಾಗಿದ್ದು, ಇದಕ್ಕೆ ಎರಡನೆಯ ಪರಿಸರ ಸ್ನೇಹಿ ಕಟ್ಟಡವೆಂಬ ಬಿರುದನ್ನು ನೀಡಲಾಗಿದೆ.

ಎಂಟು ಸೂಪರ್ ಕಾಲಮ್‌

ಎಂಟು ಸೂಪರ್ ಕಾಲಮ್‌

ಎಂಟು ಸೂಪರ್ ಕಾಲಮ್‌ಗಳೊಂದಿಗೆ ಅವುಗಳನ್ನು ನಿರ್ಮಿಸುವ ಮೂಲಕ ಲಾವಾ ಅತಿ ಕಡಿಮೆ ಸಂಪನ್ಮೂಲಗಳನ್ನು ಬಳಸಿ ಟವರ್ ಅನ್ನು ವಿನ್ಯಾಸಪಡಿಸಲಿದೆ.

ಸೂಪರ್ ಕಾಲಮ್ಸ್

ಸೂಪರ್ ಕಾಲಮ್ಸ್

ಸೂಪರ್ ಕಾಲಮ್ಸ್ ಅಗತ್ಯವಾಗಿರುವ 30% ಕಾಂಕ್ರೀಟ್ ಅನ್ನು ಕಡಿಮೆ ಮಾಡುವ ಮೂಲಕ ಸಂಪನ್ಮೂಲದ ಬಳಕೆಯನ್ನು ನಿಯಂತ್ರಿಸಲಿದೆ

ಕಟ್ಟಡ ರಚನೆ

ಕಟ್ಟಡ ರಚನೆ

ಕಟ್ಟಡ ರಚನೆಯು 2019 ರಲ್ಲಿ ಸಂಪೂರ್ಣಗೊಳ್ಳಲಿದೆ ಎಂದಾಗಿದೆ.

Best Mobiles in India

English summary
China's these amazing buildings changing their colours.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X