ಫ್ಲೈಟ್‌ನಲ್ಲಿ ನಿಮ್ಮ ಫೋನ್ ಏರ್‌ಪ್ಲೇನ್ ಮೋಡ್‌ನಲ್ಲಿರಬೇಕು:ಕಾರಣ ಇಲ್ಲಿದೆ

By Shwetha
|

ನೀವು ಫ್ಲೈಟ್‌ನಲ್ಲಿದ್ದೀರಿ ಸೀಟ್ ಬೆಲ್ಟ್ ತೊಟ್ಟುಕೊಂಡು ಆರಾಮವಾಗಿ ನಿಮ್ಮ ಸೀಟ್‌ನಲ್ಲಿ ವಿರಾಜಮಾನರಾಗಿದ್ದೀರಿ, ಇನ್ನೇನು ಪ್ಲೇನ್ ಟೇಕ್ ಆಫ್ ಮಾಡಬೇಕು ಎಂಬ ಸಮಯದಲ್ಲಿ ಧ್ವನಿ ವರ್ಧಕದ ಮೂಲಕ ಈ ಘೋಷಣೆ ಕೇಳಿಬರುತ್ತದೆ

ಓದಿರಿ: ಗೂಗಲ್‌ ಮ್ಯಾಪ್‌ನಲ್ಲಿ ಪತ್ತೆಯಾದ ಆಶ್ಚರ್ಯಕರ ಸ್ಥಳ

"ಮೊಬೈಲ್ ಫೋನ್‌ಗಳು ಒಳಗೊಂಡಂತೆ ನಿಮ್ಮೆಲ್ಲಾ ಪೋರ್ಟೇಬಲ್ ಇಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಫ್ಲೈಟ್ ಮೋಡ್‌ಗೆ ಸೆಟ್ ಮಾಡಿ" ಎಂದಾಗಿರುತ್ತದೆ. ನೀವು ಫ್ಲೈಟ್‌ನಲ್ಲಿದ್ದ ಸಂದರ್ಭದಲ್ಲಿ, ನಿಮ್ಮ ಸೆಲ್ ಫೋನ್ ಒಂದಾ ಸ್ವಿಚ್ ಆಫ್ ಮಾಡಿರಬೇಕು ಅಥವಾ ಫ್ಲೈಡ್ ಮೋಡ್‌ನಲ್ಲಿರಿಸಿರಬೇಕು ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತೀರಿ. ನೀವು ಮರೆತಿದ್ದಲ್ಲಿ ಈ ಘೋಷಣೆಯು ನಿಮ್ಮನ್ನು ಎಚ್ಚರಿಸುತ್ತದೆ. ನೀವಿನ್ನೂ ಈ ಘೋಷಣೆಯನ್ನು ಆಲಿಸಿಲ್ಲ ಎಂದಾದಲ್ಲಿ ಗಗನ ಸಖಿಯು ನಿಮ್ಮನ್ನು ಸಮೀಪಿಸಿ ನಿಮ್ಮನ್ನು ಈ ಕುರಿತು ಎಚ್ಚರಿಸುತ್ತಾರೆ. ಈ ರೀತಿ ಏಕೆ ಮಾಡಬೇಕು ಎಂದರೆ ಪ್ಲೇನ್‌ನ ಇಲೆಕ್ಟ್ರಾನಿಕ್ ವ್ಯವಸ್ಥೆ ಮತ್ತು ಪ್ಲೇನ್ ಮಧ್ಯ ಗಾಳಿಯಲ್ಲಿ ತೇಲಾಡಬಾರದು ಎಂಬುದಕ್ಕೆ ನಿಮಗಿದ್ದು ಅರ್ಥವಾಯಿತು ಅಲ್ಲವೇ?

ಓದಿರಿ: 25 ವರ್ಷಗಳನ್ನು ಬರೇ ಸಮುದ್ರದಲ್ಲೇ ಕಳೆದ ಈತ ಮಾಡಿದ್ದಾದರೂ ಏನು?

ಇಂದಿನ ಲೇಖನದಲ್ಲಿ ಫೋನ್ ಅನ್ನು ಏತಕ್ಕಾಗಿ ಫ್ಲೈಟ್ ಮೋಡ್‌ನಲ್ಲಿರಿಸಬೇಕು ಎಂಬುದನ್ನು ಕುರಿತು ಮಾಹಿತಿಯನ್ನು ನಾವು ಕೆಳಗಿನ ಸ್ಲೈಡರ್‌ಗಳಲ್ಲಿ ನೀಡುತ್ತಿದ್ದು ಏರ್ ಪ್ಲೇನ್ ವ್ಯವಸ್ಥೆಯ ಕುರಿತು ಹೆಚ್ಚುವರಿಯಾಗಿ ನಿಮಗಿಲ್ಲಿ ತಿಳಿದುಕೊಳ್ಳಬಹುದಾಗಿದೆ.

ಏನು ಸಂಭವಿಸುತ್ತದೆ

ಏನು ಸಂಭವಿಸುತ್ತದೆ

ಇದೊಂದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಇದನ್ನು ಹೀಗೆ ಮಾಡಿದ್ದರೆ ಏನೂ ಸಂಭವಿಸುವುದಿಲ್ಲ ಎಂಬುದಾಗಿ ನಮ್ಮಲ್ಲಿ ಕೆಲವರು ತಿಳಿದಿದ್ದರೆ, ಇನ್ನು ಕೆಲವರು ಈ ರೀತಿ ಮಾಡದೇ ಇದ್ದರೆ ಪ್ಲೇನ್ ಕ್ರ್ಯಾಶ್ ಆಗಿ ದುರ್ಘಟನೆ ಸಂಭವಿಸುತ್ತದೆ ಎಂಬುದಾಗಿ ಭಯಬೀಳುತ್ತಾರೆ.

ಎರಡೂ ಅಭಿಪ್ರಾಯಗಳು ತಪ್ಪು

ಎರಡೂ ಅಭಿಪ್ರಾಯಗಳು ತಪ್ಪು

ನಾವು ಇಲ್ಲಿ ತಿಳಿಸುವ ಸತ್ಯವೆಂದರೆ ಎರಡೂ ಅಭಿಪ್ರಾಯಗಳು ತಪ್ಪು ಎಂದಾಗಿದೆ. ನಿಮ್ಮ ಫೋನ್ ಅನ್ನು ಫ್ಲೈಟ್ ಮೋಡ್‌ನಲ್ಲಿರಿಸಿದೆ ಆ ಸಿಗ್ನಲ್‌ಗಳು ವಿಮಾನವನ್ನು ಪತನ ಮಾಡಿರುವಂತಹ ಯಾವುದೇ ಘಟನೆಗಳು ಇದುವರೆಗೆ ದೊರೆತಿಲ್ಲ.

ಫ್ಲೈಟ್ ಮೋಡ್‌

ಫ್ಲೈಟ್ ಮೋಡ್‌

ಪ್ರಯಾಣಿಕರು ತಮ್ಮ ಫೋನ್ ಅನ್ನು ಫ್ಲೈಟ್ ಮೋಡ್‌ನಲ್ಲಿರಿಸದೇ ಮರೆತು ಹೋಗಿ ಪ್ಲೇನ್ ಕ್ರ್ಯಾಶ್ ಸಂಭವಿಸಿಲ್ಲ.

ಹಾಗಿದ್ದರೆ ಫ್ಲೈಟ್ ಮೋಡ್‌ನಲ್ಲಿ ಡಿವೈಸ್ ಅನ್ನು ಏಕೆ ಇರಿಸಬೇಕು?

ಹಾಗಿದ್ದರೆ ಫ್ಲೈಟ್ ಮೋಡ್‌ನಲ್ಲಿ ಡಿವೈಸ್ ಅನ್ನು ಏಕೆ ಇರಿಸಬೇಕು?

ಸಿಗ್ನಲ್‌ಗಳು ಭೂಮಿಯಲ್ಲಿರುವ ನೆಟ್‌ವರ್ಕ್ ಅನ್ನು ಇದು ತಟಸ್ಥಗೊಳಿಸುವ ಸಾಧ್ಯತೆ ಇರುವುದರಿಂದ ಫ್ಲೈಟ್ ಮೋಡ್ ಕ್ರಿಯೆಯನ್ನು ಅಳವಡಿಸಲಾಗಿದೆ.

ಸುಭದ್ರತೆ

ಸುಭದ್ರತೆ

ಸುಭದ್ರತೆಯ ಉದ್ದೇಶವಾಗಿ ಇದನ್ನು ಪರಿಗಣಿಸಬಹುದಾಗಿದೆ. ನೀವು ಹೆಚ್ಚು ವೇಗವಾಗಿ, ಗಾಳಿಯಲ್ಲಿ 10,000 ಫೀಟ್‌ಗಿಂತಲೂ ಹೆಚ್ಚಿನ ಎತ್ತರದಲ್ಲಿ ಹಾರಾಟ ಮಾಡುತ್ತಿದ್ದೀರಿ, ಈ ಸಮಯದಲ್ಲಿ ಫೋನ್ ಸಿಗ್ನಲ್‌ಗಳು ಹಲವಾರು ಟವರ್‌ಗಳನ್ನು ಸಂಪರ್ಕಿಸಲು ಆರಂಭಿಸುತ್ತವೆ ಅಂತೆಯೇ ಬಲಯುತವಾದ ಸಿಗ್ನಲ್‌ಗಳನ್ನು ಕಳುಹಿಸುತ್ತವೆ

ಫೋನ್ ದುರ್ಬಲ ಸಿಗ್ನಲ್‌

ಫೋನ್ ದುರ್ಬಲ ಸಿಗ್ನಲ್‌

ಏಕೆಂದರೆ ಟವರ್‌ನಿಂದ ನಿಮ್ಮ ಸೆಲ್ ಫೋನ್ ದುರ್ಬಲ ಸಿಗ್ನಲ್‌ ಅನ್ನು ಆರಿಸುತ್ತದೆ, ಆದರೆ ಹೆಚ್ಚು ಪ್ರಬಲ ಸಿಗ್ನಲ್ ಎಂದಲ್ಲಿ ಬೇಗನೇ ತಲುಪುತ್ತದೆ.

ಹೆಚ್ಚಿನ ಟವರ್‌ಗಳೊಂದಿಗೆ ಸಂವಹಿಸುತ್ತದೆ

ಹೆಚ್ಚಿನ ಟವರ್‌ಗಳೊಂದಿಗೆ ಸಂವಹಿಸುತ್ತದೆ

ನಿಮ್ಮ ಸೆಲ್ ಫೋನ್ ಹೆಚ್ಚಿನ ಟವರ್‌ಗಳೊಂದಿಗೆ ಸಂವಹಿಸುತ್ತದೆ ಮತ್ತು ಎಲ್ಲಾ ಸಂಪರ್ಕಗಳನ್ನು ಒಮ್ಮೆಲೇ ನಿರ್ವಹಿಸುವ ಪ್ರಯತ್ನಕ್ಕೆ ತೊಡಗುತ್ತದೆ.

ಘರ್ಷಿಸುವ ಸಂಭವ

ಘರ್ಷಿಸುವ ಸಂಭವ

ಟವರ್ ಹೆಚ್ಚು ದೂರದಲ್ಲಿದ್ದರೆ ಫೋನ್ ಸಿಗ್ನಲ್‌ಗಳನ್ನು ಬೂಸ್ಟ್ ಮಾಡುತ್ತದೆ ಇದರಿಂದ ಟವರ್‌ಗಳೊಂದಿಗೆ ಸಂಪರ್ಕದೊಂದಿಗಿರಲು ಸಿಗ್ನಲ್‌ಗಳಿಗೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಗ್ರೌಂಡ್‌ನಲ್ಲಿರುವ ಸೆಲ್ಯುಲಾರ್ ಸಿಗ್ನಲ್‌ಗಳೊಂದಿಗೆ ಘರ್ಷಿಸುವ ಸಂಭವ ಇರುತ್ತದೆ.

ಪೈಲೆಟ್‌ಗಳಿಗೆ ತೊಂದರೆಯನ್ನುಂಟು ಮಾಡದಿರಲು

ಪೈಲೆಟ್‌ಗಳಿಗೆ ತೊಂದರೆಯನ್ನುಂಟು ಮಾಡದಿರಲು

ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡುವುದು ಅಥವಾ ಫ್ಲೈಟ್ ಮೋಡ್‌ನಲ್ಲಿರಿಸುವ ಇನ್ನೊಂದು ಉದ್ದೇಶವೆಂದರೆ ಪೈಲೆಟ್‌ಗಳಿಗೆ ತೊಂದರೆಯನ್ನುಂಟು ಮಾಡದೇ ಇರುವುದಾಗಿದೆ.

ಎಮಿಶನ್ ಹೆಚ್ಚು ಶಕ್ತಿಯುತ

ಎಮಿಶನ್ ಹೆಚ್ಚು ಶಕ್ತಿಯುತ

ಫೋನ್‌ನ ರೇಡಿಯೊ ಎಮಿಶನ್ ಹೆಚ್ಚು ಶಕ್ತಿಯುತವಾಗಿದ್ದು ಇದು 8W ಗೂ ಅಧಿಕವಾಗಿ ಹೆಚ್ಚುವರಿ ಶಬ್ಧವನ್ನು ಉಂಟುಮಾಡುತ್ತದೆ. ಅಂತೆಯೇ ವಿಮಾನದಲ್ಲಿರುವ 100 ಪ್ರಯಾಣಿಕರ ಮೊಬೈಲ್ ಕೂಡ ಇಂತಹದೇ ಸದ್ದನ್ನು ಉಂಟುಮಾಡಿದಲ್ಲಿ ಪೈಲೆಟ್ ಶಾಂತವಾಗಿ ಹೇಗಿರಲು ಸಾಧ್ಯ?

ನಿರ್ದೇಶನ

ನಿರ್ದೇಶನ

ವಿಮಾನ ಸಿಬ್ಬಂದಿಗಳು ತಿಳಿಸಿರುವ ನಿರ್ದೇಶನದಂತೆ ನೀವು ಪಾಲಿಸಿದಲ್ಲಿ ವಿಮಾನ ಚಾಲಕರು ಮತ್ತು ಸಿಬ್ಬಂದಿ ವರ್ಗದವರೂ ನಿಮ್ಮ ಕ್ಷೇಮವನ್ನು ಇನ್ನಷ್ಟು ಸುರಕ್ಷಿತವಾಗಿ ನಿರ್ವಹಿಸುತ್ತಾರೆ.

ಸುರಕ್ಷತೆ

ಸುರಕ್ಷತೆ

ನಿಮ್ಮ ಸುರಕ್ಷತೆಯನ್ನು ಬಯಸುವ ಪೈಲೆಟ್ ಅನ್ನು ತೊಂದರೆಗೊಳಪಡಿಸಲು ನೀವು ಬಯಸುತ್ತೀರಾ? ಇದರಿಂದ ಉಂಟಾಗುವ ಹಾನಿ ನಿಮ್ಮೊಂದಿಗೆ ನಿಮ್ಮ ಸಹಪ್ರಯಾಣಿಕರನ್ನೂ ತಲುಪಬಹುದು. ಆದ್ದರಿಂದ ವಿಮಾನ ಹತ್ತಿದ ಕೂಡಲೇ ಫೋನ್ ಸ್ವಿಚ್ ಆಫ್ ಮಾಡಿ ಅಥವಾ ಫ್ಲೈಟ್ ಮೋಡ್‌ನಲ್ಲಿರಿಸಿ.

Best Mobiles in India

English summary
Here’s The Real Reason Why They Ask You To Switch Your Phone To Airplane Mode When You’re Flying.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X