ಸರ್ಕಾರದಿಂದಲೇ ಬ್ಯಾನ್ ಆಗಲಿವೆ ಚೀನಾ ಮೊಬೈಲ್‌ಗಳು!?..ಇಲ್ಲಿದೆ ಕಂಪ್ಲೀಟ್ ಸ್ಟೋರಿ!!

Written By:

ಬಹುತೇಕ ಭಾರತೀಯರು ಚೀನಾ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳನ್ನೇ ಬಳಸುತ್ತಿದ್ದು, ಫೋನ್‌ಗಳಲ್ಲಿನ ಮಾಹಿತಿಗಳನ್ನು ಕದ್ದು ಚೀನಾಕ್ಕೆ ಕಳಿಸಲಾಗುತ್ತದೆ. ಸ್ಮಾರ್ಟ್‌ಫೋನ್‌ಗಳು ಇದೀಗ ಎರಡೂ ದೇಶದ ಯುದ್ಧದ ಜಾಗವಾಗಿ ಪರಿವರ್ತಿತವಾಗಿದೆ ಎಂಬ ಟೊರೆಂಟೋ ವಿಶ್ವವಿದ್ಯಾಲಯದ ಸಂಶೋಧನಾ ವರದಿ ಭಾರತಕ್ಕೆ ಶಾಕ್ ನೀಡಿತ್ತು.!!

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಕೇಂದ್ರ ಸರಕಾರ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಭದ್ರತಾ ಅಂಶಗಳನ್ನು ನೀಡುವಂತೆ ಮತ್ತು ಈ ಬಗ್ಗೆ ಖಾತರಿ ಪಡಿಸುವಂತೆ ಚೀನಾ ಕಂಪೆನಿಗಳಿಗೆ ನೋಟಿಸ್ ನೀಡಿದೆ.!! ಒಟ್ಟು 21 ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ಈ ನಿರ್ದೇಶನ ನೀಡಲಾಗಿದ್ದು ಇದರಲ್ಲಿ ಯುಸಿ ಬ್ರೌಸರ್ ಕೂಡ ಸೇರಿಕೊಂಡಿದೆ.!!

ಹಾಗಾದರೆ, ಏನಿದು ಮೊಬೈಲ್ ವಾರ್? ಭಾರತೀಯರ ಮಾಹಿತಿಯನ್ನು ಚೀನಾ ಕಂಪೆನಿಗಳು ಕದಿಯುತ್ತಿವೆಯ? ಮಾಹಿತಿ ಕದ್ದರೆ ಏನಾಗಬಹುದು? ಚೀನಾ ಕಂಪೆನಿಗಳೆಲ್ಲವೂ ಬ್ಯಾನ್ ಆಗುತ್ತವೆಯೇ? ಎಂಬೆಲ್ಲಾ ಪ್ರಶ್ನೆಗಳಿಗೆ ಕೆಳಗಿನ ಸ್ಲೈಡರ್‌ಗಳಲ್ಲಿ ಉತ್ತರ ಪಡೆಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೇ.54ರಷ್ಟು ಚೀನಾ ಫೋನ್‌ ಮಾರಾಟ

ಶೇ.54ರಷ್ಟು ಚೀನಾ ಫೋನ್‌ ಮಾರಾಟ

ಪ್ರಸ್ತುತ ಭಾರತದಲ್ಲಿ ಮಾರಾಟವಾಗುವ ಶೇ.54ರಷ್ಟು ಫೋನ್‌ಗಳು ಚೀನಾ ದೇಶದ ಕಂಪೆನಿಗಳಿಂದ ರೂಪಿತವಾಗಿವೆ. ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ಸ್ ನೀಡುವ ಚೀನಾ ಕಂಪೆನಿಗಳ ಮೊಬೈಲ್‌ ಅನ್ನು ಹೆಚ್ಚು ಭಾರತೀಯರು ಖರೀದಿಸಿದ್ದು, ಮೊಬೈಲ್ ಕಂಪೆನಿಗಳು ಮಾಹಿತಿ ಕಳುವು ಮಾಡಿದರೆ ಅಪಾಯಕ್ಕೆ ತುತ್ತಾಗುವರಲ್ಲಿ ಇವರೆ ಮೊದಲು!!

ಸೈಬರ್ ದಾಳಿಯ ತೀವ್ರ ಅಪಾಯ!!

ಸೈಬರ್ ದಾಳಿಯ ತೀವ್ರ ಅಪಾಯ!!

ಒಂದು ವೇಳೆ ಭಾರತ ಮತ್ತು ಚೀನಾಕ್ಕೆ ಯುದ್ದವೇನಾದರೂ ನಡೆದರೆ ಭಾರತೀಯರ ಸ್ಮಾರ್ಟ್‌ಪೊನ್‌ ಮೇಲೆ ಚೀನಾ ಸೈಬರ್‌ ದಾಳಿ ನಡೆಸಬಹುದಾದ ಅಪಾಯ ಎದುರಾಗಿದೆ.!! ಇದಕ್ಕೆ ಚೀನಾ ಮೊಬೈಲ್‌ ಕಂಪೆನಿಗಳು ತಮ್ಮ ಕೊಡುಗೆ ನೀಡಲು ನಮ್ಮ ಮೊಬೈಲ್‌ನಲ್ಲಿರುವ ಮಾಹಿತಿ, ದತ್ತಾಂಶಗಳು ಸಾಕಾಗುತ್ತದೆ.!!

ಯುಸಿ ಬ್ರೌಸರ್‌ಗೂ ವಾರ್ನಿಂಗ್!!

ಯುಸಿ ಬ್ರೌಸರ್‌ಗೂ ವಾರ್ನಿಂಗ್!!

ಚೀನಾ ಮೊಬೈಲ್‌ ಕಂಪೆನಿಗಳು ಮಾಹಿತಿ ಕದ್ದು ತಮ್ಮ ದೇಶಕ್ಕೆ ನೀಡಬಹುದು. ಆದರೆ, ಜನರೆ ತಮ್ಮೆಲ್ಲಾ ಮಾಹಿತಿಯನ್ನು ಯುಸಿ ಬ್ರೌಸರ್ ಮೂಲಕ ಹಂಚಿಕೊಂಡರೆ ನಮ್ಮ ಮಾಹಿತಿ ಚೀನಾದ ಪಾಲಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲಾ.!! ಹಾಗಾಗಿ, ಪೂರಕವಾಗಿ ಆಲಿಬಾಬಾ ಕಂಪೆನಿ ಸ್ವಾಮ್ಯದ ಯುಸಿ ಬ್ರೌಸರ್ ಮೇಲೆ ಸರ್ಕಾರ ಕಣ್ಣಿಟ್ಟಿದೆ.

ಭಾರತದಲ್ಲಿ ಸರ್ವರ್‌ಗಳು!!

ಭಾರತದಲ್ಲಿ ಸರ್ವರ್‌ಗಳು!!

ಚೀನ ಕಂಪೆನಿ ಮೊಬೈಲ್‌ಗ‌ಳ ಸರ್ವರ್‌ಗಳು ಚೀನದಲ್ಲೇ ಇರುವ ಕಾರಣ ಭದ್ರತೆ ಉಲ್ಲಂಘನೆಯ ತೀವ್ರ ಸಂಶಯವಿರುವುದರಿಂದ ಸರ್ಕಾರ ಮುಂದಾಲೋಚನೆಯನ್ನು ಮಾಡಿಕೊಂಡಿದೆ. ಚೀನಾ ಕಂಪೆನಿ ಮೊಬೈಲ್‌ ಕಂಪೆನಿಗಳು ಭಾರತದಲ್ಲಿ ಸರ್ವರ್‌ಗಳನ್ನು ಸ್ಥಾಪಿಸುವಂತೆ ಸೂಚಿಸಿದೆ.

ನಿಷೇಧಿಸುವ ಸಾಧ್ಯತೆಯೂ ಇದೆ.!!

ನಿಷೇಧಿಸುವ ಸಾಧ್ಯತೆಯೂ ಇದೆ.!!

ಕ್ಸಿಯೋಮಿ, ಲೆನೊವೊ, ಒಪ್ಪೊ, ವಿವೋ ಮತ್ತು ಯುಸಿ ಬ್ರೌಸರ್ ಯಾವುದೇ ಚೀನಾ ಕಂಪೆನಿ ತಪ್ಪಿತಸ್ಥ ಎಂದು ಕಂಡಲ್ಲಿ ಅದನ್ನು ಸರಕಾರ ನಿಷೇಧಿಸುವ ಸಾಧ್ಯತೆಯೂ ಇದೆ. ಒಂದು ವೇಳೆ ಫೋನ್‌ಗಳಿಂದ ಮಾಹಿತಿ ಸೋರಿಕೆ, ಕಳವು ಆದರೆ, ಅಂತಹ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Chinese handset makers in the past have been accused of stealing smartphone user information in numerous instances. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot