ಗೂಗಲ್‌ನಲ್ಲಿ ನಿಮಗೆ ತಿಳಿಯದ ಮೋಜಿನ ವಿಷಯಗಳು ಇವು!..ಖಂಡಿತ ಆಶ್ಚರ್ಯ ಪಡ್ತೀರಾ!!

  ಕಳೆದ ಒಂದು ವರ್ಷದಲ್ಲಿ ಗೂಗಲ್‌ನಲ್ಲಿ ಸರ್ಚ್ ಮಾಡಿದ ಹುಡುಕಾಟಗಳು 2,161,530,000,000.!ಅಂದರೆ ವಿಶ್ವದ ಪ್ರತಿಯೋರ್ವ ವ್ಯಕ್ತಿ 360ಕ್ಕೂ ಹೆಚ್ಚು ಬಾರಿ ಗೂಗಲ್ ಸರ್ಚ್ ಮಾಡಿದ್ದಾನೆ ಎಂದರೆ ಜನರಿಗೆ ಗೂಗಲ್‌ನಲ್ಲಿ ಕೇಳಬೇಕಿರುವ ಪ್ರಶ್ನೆಗಳು ಎಷ್ಟಿರಬಹುದು ಎಂಬುದಕ್ಕೆ ಇದು ಉದಾಹರಣೆಯಾಗಬಹುದು.!!

  ಜನರು ಹೀಗೆ ಸರ್ಚ್ ಮಾಡಿ ವಿಷಯಗಳನ್ನು ತಿಳಿದುಕೊಳ್ಳಲು ಗೂಗಲ್ ಸಹಾಯ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಗೂಗಲ್ ಕೇವಲ ಸರ್ಚ್ ಮಾಡಿದವರಿಗೆ ವಿಷಯಗಳನ್ನು ಮಾತ್ರವಲ್ಲದೇ ಕೆಲವು ನೇರ ಸರ್ಚ್ ಸೇವೆಗಳನ್ನು ನೀಡುವುದು ಮಾತ್ರ ಯಾರಿಗೂ ತಿಳಿದಿರುವುದಿಲ್ಲ ಎನ್ನಬಹುದು.!!

  ಗೂಗಲ್‌ನಲ್ಲಿ ನಿಮಗೆ ತಿಳಿಯದ ಮೋಜಿನ ವಿಷಯಗಳು ಇವು!..ಖಂಡಿತ ಆಶ್ಚರ್ಯ ಪಡ್ತೀರಾ!!

  ಇದು ಗೂಗಲ್‌ನ ಮೋಜಿನ ವಿಷಯಗಳು ಕೂಡ ಆಗಿದ್ದು, ಗೂಗಲ್ ಸರ್ಚ್ ಮೂಲಕ ನೀವು ಮಾಡಬಹುದಾದ ಉಪಯುಕ್ತವಾದ ವಿಷಯಗಳ ಪಟ್ಟಿಯನ್ನು ನಾವು ನಿಮಗೆ ನೀಡುತ್ತೇವೆ.! ಹಾಗಾಗಿ, ಇಂದಿನ ಲೇಖನದಲ್ಲಿ ಗೂಗಲ್ ಮೂಲಕ ನೀವು ಮಾಡಬಹುದಾದ ಮೋಜಿನ ವಿಷಯಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಗೂಗಲ್ ವೆಬ್‌ಸೈಟ್ ತಿರುಗಿಸಬಹುದು!!

  ಗೂಗಲ್‌ನ ಕೆಲವು ಮೋಜಿನ ವಿಷಯಗಳಲ್ಲಿ "do a barrel roll" ಕೂಡ ಒಂದು. ನೀವು ಗೂಗಲ್‌ನಲ್ಲಿ do a barrel roll ಎಂದು ಟೈಪಿಸಿ ಸರ್ಚ್ ಮಾಡಿದರೆ ನಿಮಗೆ ಒಂದು ವಿಶಿಷ್ಟ ಅನುಭವವಾಗಲಿದೆ. ನೀವಿದ್ದನ್ನು ಪ್ರಯತ್ನಿಸಿ ನೋಡಿದರೆ ಮಾತ್ರವೇ ನಿಮಗೆ ಆ ಅನುಭವ ಸಿಗಲಿದೆ.!!

  ಗೂಗಲ್ ಪೇಜ್‌ನಲ್ಲಿ ಗೇಮ್!!

  ಗೂಗಲ್‌ನಲ್ಲಿ ಸರ್ಚ್ ಮಾಡಿತ್ತಾ ಬೇಜಾರಾದರೆ ಗೂಗಲ್ ಪೇಜ್‌ನಲ್ಲಿ ನೇರವಾಗಿ ಗೇಮ್ ಆಡಬಹುದು. ಅಟಾರಿ ಬ್ರೇಕ್ಔಟ್ (Atari Breakout) ಎಂದು ಸರ್ಚ್ ಮಾಡಿದರೆ ನಿಮಗೊಮದು ಲಿಂಕ್ ಕಾಣಿಸುಯತ್ತದೆ ಅದನ್ನು ನೀವು ಕ್ಲಿಕ್ ಮಾಡಿದ ತಕ್ಷಣವೇ ಅಟಾರಿ ಬ್ರೇಕ್ಔಟ್ ಗೇಮ್ ಶುರುವಾಗುತ್ತದೆ.!!

  ಯಾವ ಮೊಬೈಲ್ ಉತ್ತಮ?

  10000 ರೂಪಾಯಿಗಳಲ್ಲಿ ಯಾವ ಸ್ಮಾರ್ಟ್‌ಫೋನ್ ಖರೀದಿಸಿದರೆ ಉತ್ತಮ ಎಂಬ ಕನ್‌ಫ್ಯೂಸ್ ನಿಮಗಿದ್ದರೆ ಗೂಗಲ್ ನಿಮಗೆ ಸಹಾಯ ನೀಡುತ್ತದೆ. ಬೆಸ್ಟ್ ಫೋನ್ ಅಂಡರ್ 10000 ಎಂದು ನೀವು ಸರ್ಚ್ ಮಾಡಿದರೆ ಆ ಪಟ್ಟಿಯನ್ನು ಗೂಗಲ್ ನಿಮಗೆ ಕ್ಷಣ ಮಾತ್ರದಲ್ಲಿ ಒದಗಿಸುತ್ತದೆ.!

  ಸಿನಿಮಾ ರಿಲೀಸ್ ಡೇಟ್!!

  ನೀವು ಯಾವುದಾದರೂ ಪ್ರಸಿದ್ದ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬುದನ್ನು ನೇರ ಸರ್ಚ್‌ನಲ್ಲಿ ತಿಳಿಯಬಹುದು " 2.O release date" ಎಂದು ಟೈಪಿಸಿದರೆ ಸಿನಿಮಾ ರಜಿನಿ 2.O ಸಿನಿಮಾ ಬಿಡುಗಡೆಯಾಗುವ ದಿನಾಂಕವನ್ನು ಗೂಗಲ್ ತನ್ನ ವೆಬ್‌ಪುಟದಲ್ಲಿ ನಿಮಗೆ ನೇರವಾಗಿ ತಿಳಿಸುತ್ತದೆ.!!

  ವಿಮಾನ ಸ್ಥಿತಿಯನ್ನು ಪರಿಶೀಲಿಸಬಹುದು.!!

  ನೀವು ವಿಮಾನದಲ್ಲಿ ಪ್ರಯಾಣಿಸುವ ಸಲುವಾಗಿ ಯಾವುದೇ ವಿಮಾನಕ್ಕೆ ಕಾಯುತ್ತಿದ್ದರೆ, ಆ ವಿಮಾನದ ಸ್ಥಿತಿಯನ್ನು ಒಂದೇ ಕ್ಲಿಕ್‌ನಲ್ಲಿ ತಿಳಿಯಬಹುದು.! ನೀವು ಕಾಯುತ್ತಿರುವ ವಿಮಾನದ ಹಸರನ್ನು ಸಚ್‌ ಮಾಡಿದರೆ ಸಾಕು ಆ ವಿಮಾನ ಎಲ್ಲಿದೆ ಎಂಬೆಲ್ಲಾ ಮಾಹಿತಿಯನ್ನು ಗೂಗಲ್ ನಿಮಗೆ ನಿಖರವಾಗಿ ಒದಗಿಸುತ್ತದೆ.!!

  ಉತ್ತಮ ಆಹಾಯ ಯಾವುದು ಎಂದು ತಿಳಿಯಬಹುದು!!

  ನಿಮಗೆ ಬೇಕಾದ ಯಾವುದೇ ಆಹಾರ ಪದಾರ್ಥದ ಬಗ್ಗೆ ಗೂಗಲ್ ಕ್ಷಣ ಮಾತ್ರದಲ್ಲಿ ತಿಳಿಸುತ್ತದೆ. ಅಷ್ಟೇ ಅಲ್ಲದೇ, ನೀವು ಸೇವಿಸಬೇಕಿರುವ ಎರಡು ಆಹಾರ ಪದಾರ್ಥಗಳಲ್ಲಿ ಯಾವುವು ಎಷ್ಟು ಕ್ಯಾಲೊರಿ ಎಂಬುದನ್ನು ಬಾಕ್ಸ್ ಮಾಡಿ ಗೂಗಲ್ ತಿಳಿಸುತ್ತದೆ.!

  Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
  ಸೂರ್ಯ ಹುಟ್ಟುವ ಮತ್ತು ಮುಳುಗುವ ವೇಳೆ!!

  ಸೂರ್ಯ ಹುಟ್ಟುವ ಮತ್ತು ಮುಳುಗುವ ವೇಳೆ!!

  ಭಾರತದಲ್ಲಿ ಸೂರ್ಯ ಹುಟ್ಟುವ ನಿಖರವಾದ ಸಮಯವನ್ನು ನೀವು ತಿಳಿಯಬಹುದು. "sunrise in india" ಎಂದು ಗೂಗಲ್‌ನಲ್ಲಿ ಚರ್ಸ್ ಮಾಡಿದರೆ ಸೂರ್ಯ ಹುಟ್ಟುವ ನಿಖರವಾದ ಸಮಯ ಪೇಜ್‌ನಲ್ಲಿ ಮೂಡುತ್ತದೆ. ಸನ್‌ಸೆಟ್ ಎಂದು ಟೈಪ್‌ ಮಾಡಿದರೆ ಆ ಸಮಯವು ಸಹ ತಿಳಿಯುತ್ತದೆ.!

  ಓದಿರಿ:ರಾತ್ರಿವೇಳೆ ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತೀರಾ?..ಈ ಶಾಕಿಂಗ್ ಸ್ಟೋರಿ ನೋಡಿ!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  You can do a lot of things on Google Search but Google Search just keeps on giving. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more