ಸೂರ್ಯ, ನಕ್ಷತ್ರಗಳು ಮನುಕುಲದ ಬದ್ಧ ವೈರಿಗಳಾಗಲಿವೆಯೇ?
ಭೂಮಿಯು ಸೌರ ಸ್ಫೋಟಗಳಿಂದ ಎದ್ದು ಕಾಣುತ್ತಿದ್ದು, ಗ್ರಹದ ಧ್ರುವಗಳ ಸುತ್ತಲೂ ಇರುವ ಅರುಣ ಶೋಭೆಗಳ ಮೇಲೆ ಇವುಗಳು ಪರಿಣಾಮವನ್ನು ಬೀರಲಿವೆ. ಆದರೆ ಈ ಶಕ್ತಿ ಕಣಗಳು ಸ್ಫೋಟಗೊಂಡಲ್ಲಿ ಸಾಕಷ್ಟು ಶಕ್ತಿಯನ್ನು ಹೊಂದಿರುವ ಇವು ನಮ್ಮ ಗ್ರಹವನ್ನು ಧ್ವಂಸ ಮಾಡಿ ವಾತಾವರಣವನ್ನು ಕೆಡಿಸಿ ಬಿಡುವಷ್ಟು ಅಪಾಯಕಾರಿಯಾಗಿವೆ. ಎಂಬುದಾಗಿ ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.
ಇತರ ನಕ್ಷತ್ರಗಳಲ್ಲಿ ಕಾಣುವ ಪ್ರಖರ ಜ್ವಾಲೆಗಳನ್ನು ಉತ್ಪಾದಿಸುವ ಶಕ್ತಿಯನ್ನು ಸೂರ್ಯನು ಹೊಂದಿದ್ದಾನೆ ಎಂಬುದಾಗಿ ಈ ವಿಜ್ಞಾನಿಗಳು ತಿಳಿಸಿದ್ದಾರೆ ಅಂತೆಯೇ ಮನುಕುಲಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಇಂದಿನ ಲೇಖನದಲ್ಲಿ ಸೂರ್ಯನು ಭೂಮಿಗೆ ಹೇಗೆ ಅಪಾಯಕಾರಿಯಾಗಿದ್ದಾನೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ಅರಿತುಕೊಳ್ಳೋಣ.

#1
ಸೂರ್ಯನ ಮೇಲ್ಮೈಯಲ್ಲಿರುವ ದೊಡ್ಡ ಕಾಂತ ಕ್ಷೇತ್ರಗಳು ಕುಸಿತಕ್ಕೆ ಒಳಗಾದಾಗ ಸೌರ ಸ್ಫೋಟಗಳು ಸಂಭವಗೊಳ್ಳುತ್ತದೆ. ಇದು ಸಂಭವಿಸಿದಾಗ ಬೃಹತ್ ಪ್ರಮಾಣದಲ್ಲಿ ಅಯಸ್ಕಾಂತೀಯ ಶಕ್ತಿಯು ಬಿಡುಗಡೆಯಾಗುತ್ತದೆ.

#2
ದೊಡ್ಡ ಸೌರ ಸ್ಫೋಟಗಳ ಸಂದರ್ಭದಲ್ಲಿ ಸೂರ್ಯನು ದೈತ್ಯ ಪ್ರಮಾಣದಲ್ಲಿ ಬಿಸಿ ಪ್ಲಾಸ್ಮಾವನ್ನು ಸುರಿಸಿದಾಗ ಭೂಮಿಯ ಮೇಲೆ ಇದು ಪರಿಣಾಮಗಳನ್ನು ಉಂಟುಮಾಡಬಹುದು.

#3
ನಿರ್ದಿಷ್ಟವಾಗಿ, ಇದು ಉಪಗ್ರಹಗಳು ಮತ್ತು ಸಂವಹನ ಪರಿಕರಗಳ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ.

#4
ಸೂಪರ್ ಫ್ಲೇರ್ಸ್ ತಮ್ಮದೇ ಆದ ಇತಿಹಾಸವನ್ನು ರಹಸ್ಯವನ್ನು ಒಳಗೊಂಡಿದ್ದು ಕೆಪ್ಲರ್ ಮಿಶನ್ ನಾಲ್ಕು ವರ್ಷಗಳ ಹಿಂದೆ ದೊಡ್ಡ ಸಂಖ್ಯೆಗಳಲ್ಲಿ ಪತ್ತೆಮಾಡಿವೆ ಅಂತೆಯೇ ಇದು ಸೂರ್ಯನಿಂದ ಉದ್ಭಗೊಂಡಿರುವುದೇ ಎಂಬುದರ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ.

#5
ಸ್ಪೇಸ್ ಯುಗದಲ್ಲೇ 10 ರಿಂದ 100 ರಷ್ಟು ದೊಡ್ಡ ಪ್ರಮಾಣದ ಸೌರ ಸ್ಫೋಟಗಳನ್ನು ವಿಜ್ಞಾನಿಗಳು ಪರಿಗಣಿಸಿದ್ದಾರೆ. ಅಂತೆಯೇ ತಮ್ಮ ಅಧ್ಯಯನಕ್ಕಾಗಿ ಪ್ರತಿಯೊಂದು ನಕ್ಷತ್ರಗಳಿಗೂ ತಂಡವು ಸ್ಪೆಕ್ಟ್ರಮ್ ಅನ್ನು ಬಳಸಿದ್ದಾರೆ.

#6
ಈ ಸ್ಪ್ರಕ್ಟ್ರಮ್ ನಕ್ಷತ್ರಗಳ ಬಣ್ಣ, ವೇವ್ ಲೆಂತ್ ಮತ್ತು ಬೆಳಕನ್ನು ಪ್ರದರ್ಶಿಸಿದೆ. ಅಂತೆಯೇ ನಕ್ಷತ್ರಗಳ ಸುತ್ತಲೂ ಇರುವ ಅಯಸ್ಕಾಂತೀಯ ಕ್ಷೇತ್ರವನ್ನು ಅಳತೆ ಮಾಡಿದ್ದಾರೆ.

#7
ಚೀನಾದಲ್ಲಿರುವ ನ್ಯು ಗುವೊ ಶೂ ಟೆಲಿಸ್ಕೋಪ್‌ನಿಂದ ಈ ಅನ್ವೇಷಣೆಗಳನ್ನು ಮಾಡಲಾಗಿದೆ. ನಕ್ಷತ್ರಗಳ ಮೇಲ್ಮೈಯಲ್ಲಿರುವ ಅಯಸ್ಕಾಂತೀಯ ಕ್ಷೇತ್ರಗಳು ಸೂರ್ಯನ ಮೇಲ್ಮೈಯಲ್ಲಿರುವ ಅಯಸ್ಕಾಂತೀಯ ಕ್ಷೇತ್ರಗಳಿಗಿಂತ ಹೆಚ್ಚು ಬಲಯುತವಾಗಿದೆ.

#8
ಇದರರ್ಥ ಸೂರ್ಯನ ಮೇಲ್ಮೈಯಲ್ಲಿರುವ ಅಯಸ್ಕಾಂತೀಯ ಕ್ಷೇತ್ರವು ತುಂಬಾ ದುರ್ಬಲವಾಗಿದ್ದು ಅಂತಹ ಪ್ರಬಲವಾದ ಸೂಪರ್ ಫ್ಲೇರ್ಸ್ ಅನ್ನು ಉಂಟುಮಾಡಲಾರವು. ನಕ್ಷತ್ರಗಳ ಸೂರ್ಯನಿಗಿಂತಲೂ ಹೆಚ್ಚು ಬಲಯುತವಾಗಿದೆ.

#9
ನಕ್ಷತ್ರಗಳ ಮೇಲ್ಮೈಯಲ್ಲಿರುವ ಅಯಸ್ಕಾಂತೀಯ ಕ್ಷೇತ್ರವು ಹೆಚ್ಚು ಪ್ರಬಲವಾಗಿದ್ದು ಸೂರ್ಯನ ಸೂಪರ್ ಫ್ಲೇರ್ಸ್‌ಗಿಂತಲೂ ಹಿರಿದಾದುದಾಗಿದೆ.

#10
ಜಿಯೋಲಾಜಿಕಲ್ ಆರ್ಕೈವ್ಸ್ ಹೇಳುವಂತೆ ಸಣ್ಣ ಸೂಪರ್ ಫ್ಲೇರ್ಸ್ ಅನ್ನು ಉತ್ಪಾದಿಸಿದೆ.


Click it and Unblock the Notifications








