ನಿಗೂಢತೆಯನ್ನು ಬಚ್ಚಿಟ್ಟುಕೊಂಡಿರುವ ಫೋಟೋಗ್ರಾಫ್ಸ್

Written By:

ನಿಗೂಢತೆಗಳ ರಹಸ್ಯವನ್ನು ಬೇಧೀಸುವುದು ಆ ಚಿತ್ರವನ್ನು ನೋಡುವುದಕ್ಕಿಂತ ಹೆಚ್ಚು ರೋಚಕವಾಗಿರುತ್ತದೆ. ವಿಶ್ವವು ಇಂತಹ ಅಸಂಖ್ಯ ರಹಸ್ಯಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದ್ದು ಕೆಲವೊಂದು ಇಂದಿಗೂ ಸೋಜಿಗನವನ್ನುಂಟು ಮಾಡುವಂತಿದೆ. ಅಂತೆಯೇ ಅದಕ್ಕೆ ಯಾವುದೇ ಅಂತಿಮ ತೀರ್ಮಾನ ಇನ್ನೂ ದೊರೆತಿಲ್ಲ.

ಓದಿರಿ: ಮಲಗುವ ವೇಳೆಯಲ್ಲಿ ಓದಲೇಬಾರದ ವಿಕಿಪೀಡಿಯ ಪೇಜ್‌ಗಳು!!

ಇಂದಿನ ಲೇಖನದಲ್ಲಿ ಹೆಚ್ಚು ರಹಸ್ಯಮಯ ಎಂದೆನಿಸಿರುವ ಫೋಟೋಗಳನ್ನು ನಾವು ನೀಡುತ್ತಿದ್ದು ಇದು ಏಕೆ ರಹಸ್ಯಮಯವಾಗಿದೆ ಎಂಬುದನ್ನೂ ನಾವು ತಿಳಿಸಲಿರುವೆವು. ಇದನ್ನು ನೋಡಿದಾಗ ಇಂತಹ ಅಂಶಗಳು ವಿಶ್ವದಲ್ಲಿ ನಡೆದದ್ದು ಹೌದೇ? ಎಂಬುದು ನಿಮ್ಮನ್ನು ಕಾಡಬಹುದು. ಹಾಗಿದ್ದರೆ ಬನ್ನಿ ಆ ರಹಸ್ಯಮಯ ಫೋಟೋಗಳ ವಿವರಗಳನ್ನು ನಾವು ಇಂದಿಲ್ಲಿ ನೀಡುತ್ತಿದ್ದು ನೀವೂ ಈ ಅಂಶಗಳ ಬಗ್ಗೆ ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಧುನಿಕ ದಿರಿಸು

ಆಧುನಿಕ ದಿರಿಸು

#1

1941 ರಲ್ಲಿ ತೆಗೆದ ಫೋಟೋ ಇದಾಗಿದ್ದು ಕ್ಯಾನಡಾದ ಸೌತ್ ಫೋರ್ಕ್ಸ್ ಸೇತುವೆಯ ಚಿತ್ರಣವಾಗಿದೆ. ಎದ್ದುಗಾಣಿಸಿರುವ ವ್ಯಕ್ತಿಯು ಆಧುನಿಕ ದಿರಿಸುಗಳನ್ನು ಧರಿಸಿ ಫೋಟೋದಲ್ಲಿ ಕಂಡುಬಂದಿರುವಂತಹದ್ದು ಹೆಚ್ಚು ರಹಸ್ಯಮಯವಾಗಿದೆ. ಏಕೆಂದರೆ ಅಂದಿನ ಕಾಲದ ವೇ‍ಷಭೂಷಣಕ್ಕೂ ಈತ ಧರಿಸಿದ್ದಕ್ಕೂ ಹೆಚ್ಚು ಸಾಮ್ಯತೆ ಇದೆ.

ಹಾವಿನ ಮಾದರಿಯ ದೈತ್ಯ ಜೀವಿ

ಹಾವಿನ ಮಾದರಿಯ ದೈತ್ಯ ಜೀವಿ

#2

1964 ರಲ್ಲಿ ಫ್ರೆಂಚ್ ಫೋಟೋಗ್ರಾಫರ್ ರಾಬರ್ಟ್ ಸೆರ್ರಿಕ್ ಆಸ್ಟ್ರೆಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಸಾಗರದಲ್ಲಿ ಕಂಡುಬಂದ ಹಾವಿನ ಮಾದರಿಯ ದೈತ್ಯ ಜೀವಿಯ ಫೋಟೋವನ್ನು ಸರೆಹಿಡಿದಿದ್ದಾರೆ. ಹಾಗಿದ್ದರೆ ಇದೇನು ಎಂಬುದು ಇನ್ನೂ ಪತ್ತೆಯಾಗಿಲ್ಲ.

ಪ್ರಕಾಶಮಾನವಾದ ದೀಪ

ಪ್ರಕಾಶಮಾನವಾದ ದೀಪ

#3

ನಾರ್ವೆಯ ಕೆಲವು ಭಾಗಗಳಲ್ಲಿ ಈ ಪ್ರಕಾಶಮಾನವಾದ ದೀಪಗಳು ಕಂಡುಬಂದಿದೆ. ಬಿಳಿ ಮತ್ತು ಹಳದಿ ಬಣ್ಣದ ದೀಪಗಳು ಇದಾಗಿದ್ದು ಯಾವುದೋ ಅಜ್ಞಾತ ಜೀವಿ ಇಲ್ಲಿ ಕಂಡುಬಂದಂತೆ ಭಾಸವಾಗಿದೆ.

ವಿಚಿತ್ರ ಮಹಿಳೆ

ವಿಚಿತ್ರ ಮಹಿಳೆ

#4

2000 ದಲ್ಲಿ ಇಬ್ಬರು ಫೋಟೋಗ್ರಾಫರ್‌ಗಳು ವಿಚಿತ್ರ ಮಹಿಳೆಯೊಬ್ಬರ ಫೋಟೋವನ್ನು ತೆಗೆದಿದ್ದು ಇದು ಪ್ರಾಣಿಯೋ ಮನುಷ್ಯರೋ ಎಂಬುದು ನಿಗೂಢವಾಗಿತ್ತು.

ಭಯಾನಕ ದೃಶ್ಯ

ಭಯಾನಕ ದೃಶ್ಯ

#5

ಟೆಕ್ಸಾಸ್‌ನಲ್ಲಿ ಹೊಸ ಮನೆಗೆ ಕಾಲಿಟ್ಟ ಕುಟುಂಬವೊಂದು ಕುಟುಂಬ ಚಿತ್ರಣವನ್ನು ತೆಗೆಸುವ ಸಂದರ್ಭದಲ್ಲಿ ಫೋಟೋದಲ್ಲಿ ಕಂಡುಬಂದ ಭಯಾನಕ ದೃಶ್ಯ ಇದಾಗಿದೆ.

ದೈತ್ಯ ಜೀವಿಯೊಂದರ ಕೈಬೆರಳಾಗಿದೆ

ದೈತ್ಯ ಜೀವಿಯೊಂದರ ಕೈಬೆರಳಾಗಿದೆ

#6

ಚಿತ್ರದಲ್ಲಿರುವುದು ದೈತ್ಯ ಜೀವಿಯೊಂದರ ಕೈಬೆರಳಾಗಿದೆ. ಇದು 15 ಇಂಚುಗಳಷ್ಟು ಉದ್ದವಾಗಿದ್ದು ಇದು 12 ಫೀಟ್ ಉದ್ದವಿರುವ ಮನುಷ್ಯನದ್ದೇ ಆಗಿರಬಹುದು ಎಂಬುದಾಗಿ ಅಂದಾಜಿಸಲಾಗಿದೆ.

ಏಲಿಯನ್‌

ಏಲಿಯನ್‌

#7

ಮೇ 20, 1967 ರಂದು ಸ್ಟೀಫನ್ ಮಿಕಾಲ್ಕ್ ಎರಡು ಸಿಗಾರ್ ಆಕಾರದ ಯುಎಫ್‌ಒ ಅವರ ಮನೆಯ ಸಮೀಪ ಇಳಿದಿರುವುದನ್ನು ಇವರು ಕಂಡರು. ನಂತರ ಈ ಜೀವಿಗಳೊಂದಿಗೆ ಮಿಕಾಲ್ಕ್ ಸಂವಹನ ನಡೆಸ ಹೊರಟರು. ಅದರೆ ಈ ಏಲಿಯನ್‌ಗಳು ಇವರೊಂದಿಗೆ ಸಂವಹನ ನಡೆಸಿಲ್ಲ. ತಮ್ಮ ಹಾರುವ ತಟ್ಟೆಯ ಬಾಗಿಲನ್ನು ಮುಚ್ಚಿ ಆಕಾಶಕ್ಕೆ ಹಾರತೊಡಗಿದವು ಅಂತೆಯೇ ವಾಹನದ ಒಳಗಿನಿಂದ ಬಂದ ಬಿಸಿ ಗಾಳಿಯು ಮಿಕಾಲ್ಕ್‌ ರ ಶರ್ಟ್‌ನಲ್ಲಿ ಚಿತ್ರದಲ್ಲಿರುವ ಆಕಾರವನ್ನು ಮೂಡಿಸಿದೆ. ಇದು ಹೊಟ್ಟೆಯಲ್ಲಿ ಅಚ್ಚೊತ್ತಿದೆ.

ವ್ಯಕ್ತಿಯ ಚಿತ್ರ

ವ್ಯಕ್ತಿಯ ಚಿತ್ರ

#8

ಜಿಮ್ ಟೆಂಪ್ಲೇಟನ್ ತಮ್ಮ ಮಗಳ ಫೋಟೋವನ್ನು ತೆಗೆದ ಸಂದರ್ಭದಲ್ಲಿ ಈ ದೃಶ್ಯ ಕಂಡುಬಂದಿದೆ. ಫೋಟೋ ತೆಗೆಯುತ್ತಿದ್ದಾಗ ಜಿಮ್‌ಗೆ ಯಾವುದೇ ವ್ಯಕ್ತಿ ಕಂಡುಬಂದಿಲ್ಲ. ಆದರೆ ಸೆರೆಹಿಡಿದ ಫೋಟೋದಲ್ಲಿ ಈ ವ್ಯಕ್ತಿಯ ಚಿತ್ರವಿತ್ತು.

ಅಪೋಲೊ

ಅಪೋಲೊ

#9

ಈ ಚಿತ್ರವನ್ನು 1972 ಡಿಸೆಂಬರ್ 17 ರಂದು ಅಪೋಲೊ ಸೆರೆಹಿಡಿದಿದೆ. ನಾಸಾವು ಈ ಚಿತ್ರವನ್ನು ಬ್ಲಾಂಕ್ ಎಂಬುದಾಗಿ ಪಟ್ಟಿ ಮಾಡಿದೆ, ಈ ಫೋಟೋವನ್ನು ಸ್ಪರ್ಶಿಸಿದಾಗ ಇಲ್ಲಿ ಏನೂ ಕಂಡುಬರುವುದಿಲ್ಲ. ಆದರೆ ಕಾಂಟ್ರಾಸ್ಟ್ ಅನ್ನು ತಿರುಗಿಸಿದಾಗ ಪಿರಾಮಿಡ್ ಆಕಾರದ ರಚನೆ ಕಂಡುಬರುತ್ತದೆ.

ಪ್ಯಾರಾನಾರ್ಮಲ್ ಫೋಟೋಗ್ರಾಫ್

ಪ್ಯಾರಾನಾರ್ಮಲ್ ಫೋಟೋಗ್ರಾಫ್

#10

ಹೆಚ್ಚಿನ ದೆವ್ವದ ಚಿತ್ರಗಳಲ್ಲಿ ಅದನ್ನು ನಾವು ಸುಲಭವಾಗಿ ಪತ್ತೆಹಚ್ಚಬಹುದು. ಆದರೆ ನಡುಕ ಹುಟ್ಟಿಸುವ ಈ ಫೋಟೋವನ್ನು ತೆಗೆದಿರುವುದು ರೆವ್ರೆಂಡ್ ಕೆ.ಎಫ್. ಲಾರ್ಡ್ ಆಗಿದ್ದು ಹೆಚ್ಚು ಜನಪ್ರಿಯ ಪ್ಯಾರಾನಾರ್ಮಲ್ ಫೋಟೋಗ್ರಾಫ್ ಎಂಬ ಬಿರುದನ್ನು ಪಡೆದುಕೊಂಡಿದೆ. ಅಲ್ಟರ್ ಪಕ್ಕದಲ್ಲಿ ಆಕೃತಿಯೊಂದು ನಿಂತಿರುವುದನ್ನು ಚಿತ್ರವು ತೋರಿಸಿದ್ದು ಚರ್ಚ್‌ನಲ್ಲಿ ಆಗ ಯಾರೂ ಇರಲಿಲ್ಲ.

ಹೆಚ್ಚು ರಹಸ್ಯಮಯವಾಗಿರುವ ಚಿತ್ರ

ಹೆಚ್ಚು ರಹಸ್ಯಮಯವಾಗಿರುವ ಚಿತ್ರ

#11

ಎಲ್ಲಾ ಕಾಲದಲ್ಲಿಯೂ ಹೆಚ್ಚು ರಹಸ್ಯಮಯವಾಗಿರುವ ಚಿತ್ರ ಇದಾಗಿದೆ. ಮೇರಿಯ ಚಿತ್ರವನ್ನು ಫೋಕಸ್ ಮಾಡಿದಾಗ, ಆಕೆಯ ಎಡಭಾಗದಲ್ಲಿ ನಿಗೂಢತೆಯನ್ನು ನಿಮಗೆ ಕಾಣಬಹುದು. ಯುಎಫ್‌ಒ ಆಕೃತಿಯೊಂದು ಇಲ್ಲಿ ಹಾರಾಡುತ್ತಿರುವುದನ್ನು ನಿಮಗೆ ಗಮನಿಸಬಹುದು. ಕೆಳಗೆ ಒಬ್ಬ ವ್ಯಕ್ತಿ ಮತ್ತು ಆತನ ನಾಯಿ ಮೇಲಕ್ಕೆ ನೋಟ ಹಾಯಿಸಿರುವುದು.

ಗುಂಪು ಪೋಟೋ

ಗುಂಪು ಪೋಟೋ

#12

ಫ್ರೆಡ್ಡಿ ಜಾಕ್ಸನ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿಮಾನ ತಳ್ಳಕ (ಪ್ರೊಪೆಲ್ಲರ್) ನಿಂದ ಮರಣ ಹೊಂದಿದ. ಎರಡು ದಿನಗಳ ನಂತರ, ಅವರ ತಂಡವು ಗುಂಪು ಪೋಟೋವನ್ನು ತೆಗೆಯಿತು. ಫೋಟೋವನ್ನು ಡೆವಲಪ್ ಮಾಡಿದಾಗ ಫ್ರೆಡ್ಡಿ ಫೋಟೋದಲ್ಲಿ ಕಂಡುಬಂದಿದ್ದಾನೆ. ಆದರೆ ಈ ಫೋಟೋವನ್ನು ಆತನ ಅಂತ್ಯಕ್ರಿಯೆಯಂದೇ ತೆಗೆಯಲಾಗಿತ್ತು.

ಗುರುತಿಸಲಾಗದೇ ಇರುವ ಬೆಳಕುಗಳು

ಗುರುತಿಸಲಾಗದೇ ಇರುವ ಬೆಳಕುಗಳು

#13

ಮಾರ್ಚ್, 13, 1997 ರಲ್ಲಿ ಫೋನಿಕ್ಸ್ ನಗರದಲ್ಲಿ ಅರಿಜೋನಾದಲ್ಲಿ ಗುರುತಿಸಲಾಗದೇ ಇರುವ ಬೆಳಕುಗಳು ಗೋಚರವಾಗಿವೆ. ಆದರೆ ಇವುಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.

ಭೂಮ್ಯಾತೀತ ವಿಮಾನ

ಭೂಮ್ಯಾತೀತ ವಿಮಾನ

#14

ಆಧುನಿಕ ಯುಎಫ್‌ಒ ತತ್ವಜ್ಞರು ಹೇಳುವಂತೆ, ಇದೊಂದು ಭೂಮ್ಯಾತೀತ ವಿಮಾನವಾಗಿದೆ ಎಂದಾಗಿದೆ.

ಎಲಿಸಾ ಲ್ಯಾಮ್ ಮರಣ

ಎಲಿಸಾ ಲ್ಯಾಮ್ ಮರಣ

#15

2013 ರಲ್ಲಿ ಸಂಭವಿಸಿದ ಎಲಿಸಾ ಲ್ಯಾಮ್ ಮರಣ ಇನ್ನೂ ನಿಗೂಢವಾಗಿದೆ. ಆಕೆ ತಂಗಿದ್ದ ಹೋಟೆಲ್ ಕ್ರೆಸಿಲ್‌ನ ವಾಟರ್ ಟ್ಯಾಂಕ್‌ನಲ್ಲಿ ಈಕೆಯ ಶವ ದೊರಕಿದೆ. ಈಕೆ ಇಲ್ಲಿಗೆ ತಲುಪಿದ್ದು ಹೇಗೆ ಎಂಬುದು ಇನ್ನೂ ನಿಗೂಢವಾಗಿದ್ದು ಆಕೆ ಕಾಣೆಯಾಗಿದ್ದಳು ಎಂಬ ದಿನದಂದು ದೊರೆತಿರುವ ಎಲಾವೇಟರ್ ವೀಡಿಯೊ ಟೇಪ್ ಆಕೆಯ ಮುಖದಲ್ಲಿ ಗಾಬರಿ ಮತ್ತು ಭಯವನ್ನು ತೋರಿಸಿದೆ. ಇಲಾವೇಟರ್‌ನಲ್ಲಿ ಏನು ನಡೆಯಿತು ಎಂಬುದೂ ಅಸ್ಪಷ್ಟವಾಗಿ ಕಂಡುಬಂದಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving you creepy and mysterious photos that may never be explained.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot