ಮಲಗುವ ವೇಳೆಯಲ್ಲಿ ಓದಲೇಬಾರದ ವಿಕಿಪೀಡಿಯ ಪೇಜ್‌ಗಳು!!

  By Suneel
  |

  ವಿಕಿಪೀಡಿಯ ವಿಶ್ವದ ಅತ್ಯುತ್ತಮ ಆನ್‌ಲೈನ್‌ ವಿಶ್ವಕೋಶ. ಆಕರ್ಷಕ ಮಾಹಿತಿಯನ್ನು ಹೇರಳವಾಗಿ ಹೊಂದಿದ ಆನ್‌ಲೈನ್‌ ಕೋಶವು ಹೌದು. ವಿಕಿಪೀಡಿಯ ಆನ್‌ಲೈನ್‌ ವಿಶ್ವಕೋಶವನ್ನು 2001 ಜನವರಿ 15 ರಂದು ಜಿಮ್ಮಿ ವೇಲ್ಸ್‌ ಮತ್ತು ಲಾರ್ರಿ ಸಂಗರ್‌ಎಂಬುವವರು ಲಾಂಚ್‌ ಮಾಡಿದರು.

  ಅಸಂಖ್ಯಾತ ಮಾಹಿತಿಯನ್ನು ಹೊಂದಿರುವ ವಿಕಿಪೀಡಿಯವನ್ನು ಹಲವು ಜನರು ಸಂಜೆ ವೇಳೆಯ ನಂತರವು ಮಾಹಿತಿಗಾಗಿ ಬಳಸುವುದುಂಟು. ಆಕಸ್ಮಿಕವಾಗಿ ನಿವೇನಾದರೂ ವಿಕಿಪೀಡಿಯದಲ್ಲಿನ ಕೆಲವು ಪೇಜ್‌ಗಳ ಲಿಂಕ್‌ಗಳನ್ನು ಪಡೆದಲ್ಲಿ ಭಯಾನಕ ವಿಷಯಗಳ ಪೇಜ್‌ಗಳಿಗೆ ಹೋಗುವುದರಲ್ಲಿ ಸಂಶಯವಿಲ್ಲ. ಸಂಜೆ ವೇಳೆ ನಂತರ ಇಂಟರ್ನೆಟ್‌ನಲ್ಲಿ ಮಾಹಿತಿ ಹುಡುಕುವವರಿಗೆ ಈಗಲೇ ಎಚ್ಚರಿಕೆ ನೀಡುತ್ತಿದ್ದೇವೆ. ಗಿಜ್‌ಬಾಟ್‌ನ ಈ ಲೇಖನದಲ್ಲಿ ತಿಳಿಸುತ್ತಿರುವ ವಿಕಿಪೀಡಿಯ ಪೇಜ್‌ಗಳನ್ನು ಓದಿದಲ್ಲಿ ಭಯಭೀತರಾಗಿ ನೀವು ರಾತ್ರಿವಿಡಿ ಲೈಟ್‌ ಆನ್‌ ಮಾಡಿ ಕೂರುವುದರಲ್ಲಿ ಸಂಶಯವಿಲ್ಲ. ಅಂತಹ ವಿಕಿಪೀಡಿಯ ಪೇಜ್‌ಗಳು ಯಾವುವು ಎಂದು ಸ್ಲೈಡರ್‌ ಕ್ಲಿಕ್ಕಿಸಿ ನೋಡಿ.

  ಫೋಟೋ ಕೃಪೆ:www.buzzfeed.com

  ಭೂಮಿಗೆ ನಮ್ಮಿಂದ ಆಗುತ್ತಿರುವ ಹಾನಿ; ನಾಸಾ ತೋರಿಸಿದ್ದು ಹೇಗೆ ಗೊತ್ತೇ?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1

  ಒರಿಜಿನಲ್‌ ನೈಟ್‌ ಸ್ಟಾಕರ್‌ ದಕ್ಷಿಣ ಕ್ಯಾಲಿಫೋರ್ನಿಯಾದ ಸೀರಿಯಲ್‌ ಕಿಲ್ಲರ್‌. ದಕ್ಷಿಣ ಕ್ಯಾಲಿಪೋರ್ನಿಯಾದಲ್ಲಿ 10 ಜನರನ್ನು 1970-80 ರ ಏಳೆ ಕೊಂದಿದ್ದನು. ಈತನಿಗೆ ಸೀರಿಯಲ್‌ ರೇಪಿಸ್ಟ್, ದಿ ಗೋಲ್ಡೆನ್‌ ಸ್ಟೇಟ್‌ ಕಿಲ್ಲರ್‌ ಎಂಬಿತ್ಯಾದಿ ಹೆಸರುಗಳಿವೆ. ಈತನು ಪೊಲೀಸರರಿಗೆ ಇಂದಿಗೂ ಸಿಕ್ಕಿಲ್ಲ. ಈತನ ಬಗ್ಗೆ ವಿಕಿಪೀಡಿಯ ಪೇಜ್‌ ಇದ್ದು ಆಕಸ್ಮಿಕವಾಗಿ ಕ್ಲಿಕ್ಕಿಸಿದಲ್ಲಿ ಓದಬೇಡಿ.

  2

  ಕ್ಯಾಪ್‌ಗ್ರಾಸ್‌ ಭ್ರಮೆಯು ಒಂದು ರೀತಿಯ ಭ್ರಮೆಯನ್ನು ಸೃಷ್ಟಿಸುವ ಮಾನಸಿಕ ರೋಗವಾಗಿದ್ದು, ಇತರರನ್ನು ತಮ್ಮ ಹತ್ತಿರದ ಸಂಭಂಧಿಗಳಾಗಿ ಅವರಂತೆ ವರ್ತಿಸುವ ಹಾಗೆ ಭ್ರಮೆಯನ್ನು ಮೂಡಿಸುತ್ತದೆ. ಇಂತಹ ಮಾನಸಿಕ ಕಾಯಿಲೆಯಿಂದ ಕೆಲವರು ತಮಗೆ ತಾವೆ ಆಪತ್ತು ತಂದು ಕೊಳ್ಳುತ್ತಾರೆ. ಈ ಬಗ್ಗೆ ವಿಕಿಪೀಡಿಯ ಪೇಜ್‌ ಇದ್ದು ಇದರ ಬಗ್ಗೆ ಓದುವುದು ಸಹ ಸಮಸ್ಯೆಗೆ ಕಾರಣವಾಗುತ್ತದೆ.

  3

  Dupont de Ligonnèses ಕೊಲೆ ಪ್ರಕರಣವೊಂದು ದೊಡ್ಡ ಕೊಲೆ ಪ್ರಕರಣವಾಗಿದ್ದು, ಇದು ಸಹ ವಿಕಿಪೀಡಿಯ ಲಿಂಕ್‌ ತೆಗೆದುಕೊಳ್ಳುತ್ತದೆ. ಹೆಸರು ಕಾಣಿಸಿದಲ್ಲಿ ಈ ಪ್ರಕರಣದ ಬಗ್ಗೆ ಓದದಿರಿ.

  4

  Unit 731, ಎಂಬುದು ಜಪಾನಿನ ನಿಗೂಢ ಜೈವಿಕ ಮತ್ತು ರಾಸಾಯನಿಕ ಯುದ್ಧ ಸಂಶೋಧನೆ ಘಟಕವಾಗಿದೆ. ಮಾನವರ ಮೇಲೆ ಪ್ರಯೋಗ ನಡೆಸುವಲ್ಲಿ ಅಪಖ್ಯಾತಿ ಗಳಿಸಿದೆ.

  5

  ವಿಕಿಪೀಡಿಯದಲ್ಲಿ "List of Unusual Deaths " ಎಂಬ ಪೇಜ್‌ ಇದೆ. ಈ ಪೇಜ್‌ನಲ್ಲಿ ಅಸಾಧಾರಣವಾಗಿ ಸತ್ತವರ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ. ಈ ಬಗ್ಗೆ ಪೇಜ್‌ ಲಿಂಕ್‌ ತೆರೆದುಕೊಂಡಲ್ಲಿ ಓದದಿರಿ. ಕಾರಣ ಅಸಾಮಾನ್ಯ ಸಾವು ಹೀಗೂ ಇರುತ್ತದಾ ಎಂದು ಹೆದರಿ ರಕ್ತದ ಒತ್ತಡ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

  6

  1930 ರಲ್ಲಿ ಕ್ಲೀವ್ಲ್ಯಾಂಡ್ ಪ್ರದೇಶದಲ್ಲಿ ಪತ್ತೆ ಹಚ್ಚಲಾಗದ ಕೊಲೆಗಾರನೊಬ್ಬ 12 ಜನರನ್ನು ಕೊಲೆ ಮಾಡಿದ್ದನು. ಈ ಕೊಲೆಯನ್ನು ತಲೆಗಳನ್ನು ಕತ್ತರಿಸುವ ಮೂಲಕ ಮಾಡಲಾಗಿದ್ದು. ಆದರೆ ಕೊಲೆಗಾರ ಮಾತ್ರ ಪತ್ತೆಯಾಗಲಿಲ್ಲ. ಈ ಪೇಜ್‌ ಸಹ ವಿಕಿಪೀಡಿಯಾದಲ್ಲಿ ದೊರೆಯುತ್ತದೆ.

  7

  ಕೇವಲ ನಾಯಿಗಳೇ ಬಿದ್ದು ಸಾಯುತ್ತಿದ್ದ ಈ ಸೇತುವೆಗೆ 1994 ರಲ್ಲಿ ಒಬ್ಬ ವ್ಯಕ್ತಿಯು ತನ್ನ ಮಗನನ್ನೇ ಎಸೆದನಂತೆ. ಆದರೆ ಈತನನ್ನು ದೆವ್ವಗಳ ಅವತಾರ ಎಂದು ತಿಳಿಯಲಾಗಿತ್ತಂತೆ. ಈ ಪೇಜ್‌ ಸಹ ವಿಕಿಪೀಡಿಯದಲ್ಲಿದ್ದು ಓದಲು ಪ್ರಯತ್ನಿಸದಿರಿ.

  8

  1955 ರಲ್ಲಿ 7 ಜನರು ಹಾಪ್‌ಕಿನ್ಸ್‌ವಿಲ್ಲೆ ಎಂಬ ಸ್ಥಳೀಯ ತೋಟದಲ್ಲಿ ಏಲಿಯನ್ಸ್‌ಗಳಿಂದ ಕಿರುಕುಳಕ್ಕೆ ಒಳಗಾಗಿದ್ದರೆಂದು ಹೇಳಿದ್ದರು. ಈ ಬಗ್ಗೆ ಮಾಹಿತಿಯನ್ನು ಮೇಲಿನ ಹೆಡ್‌ಲೈನ್‌ನಲ್ಲಿ ವಿಕಿಪೀಡಿಯ ಪೇಜ್‌ನಲ್ಲಿ ನೀಡಲಾಗಿದೆ. ಈ ಬಗ್ಗೆ ಓದದಿರಿ.

  9

  1981 ರಲ್ಲಿ ನಾಲ್ಕು ಜನರು ಸಿಯೆರಾ ನೆವಾಡಾ ಪರ್ವತ ಪ್ರದೇಶದಲ್ಲಿ ಕ್ಯಾಬಿನ್ ಒಂದನ್ನು ಬಾಡಿಗೆಗೆ ಪಡೆದಿದ್ದರು. ಅವರನ್ನು ಕ್ಯಾಬಿನ್‌ನಲ್ಲೇ ದುಷ್ಕರ್ಮಿಗಳು ಕೊಲೆಮಾಡಿದ್ದರು. ಅವರನ್ನು ಕೊಲ್ಲಲು ಬಳಸಿದ್ದ ಚಾಕುವು 25 ಡಿಗ್ರಿ ಬಾಗಿದ್ದು, ಈ ಘಟನೆ ಬಗ್ಗೆ ವಿಕಿಪೀಡಿಯ ಪೇಜ್‌ನಲ್ಲಿ ಬರೆಯಲಾಗಿದೆ.

  10

  'ಗ್ರೇ ಗೂ' ಎಂಬುದು ಕಾಲ್ಪನಿಕ ಪರಿಸ್ಥಿತಿಯಾಗಿದ್ದು, ಸ್ವಯಂ ಪುನರಾವರ್ತಕ ರೋಬೋಟ್ಗಳು ತಮ್ಮನ್ನು ಹೆಚ್ಚು ಹೆಚ್ಚು ನಿರ್ಮಿಸಲು ಬಳಸಿಕೊಳ್ಳುತ್ತವೆ. ನ್ಯಾನೋ ಟೆಕ್ನಾಲಜಿ ಆಧಾರಿತ ಗ್ರೇ ಗೂ ತಮ್ಮನ್ನು ತಾವು ಯಾವುದೇ ನಿಯಂತ್ರಣವಿಲ್ಲದೇ ಹೆಚ್ಚು ಬೆಳೆಯುತ್ತವೆ.

  11

  ಚಿತ್ರ ಕಾಣುತ್ತಿರುವ ವ್ಯಕ್ತಿಯೊಬ್ಬನು ಹೋಗುತ್ತಿರುವ ರೂಮ್‌ಗೆ ಹೋದಲ್ಲಿ ರಹಸ್ಯವಾಗಿ ವ್ಯಕ್ತಿಗಳು ಕಾಣೆಯಾಗುತ್ತಾರಂತೆ. ನಂತರದಲ್ಲಿ ಎಲ್ಲೂ ಸಹ ಕಾಣಿಸಿಕೊಳ್ಳುವುದು ಇಲ್ಲವಂತೆ.

  12

  ಹಿಂಸೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಪದ. ಆದರೆ ಡಚ್‌ ಕ್ರಾಂತಿ ವೇಳೆ ಇಲಿಗಳನ್ನು ಜನರಿಗೆ ಹಿಂಸೆ ನೀಡಲು ಬಳಸುತ್ತಿದ್ದರಂತೆ. ಈ ಬಗ್ಗೆ ವಿಕಿಪೀಡಿಯ ಪೇಜ್‌ನಲ್ಲಿ ವಿವರಿಸಲಾಗಿದೆ.

  13

  ವಾಯ್ನಿಕ್ ಹಸ್ತಪ್ರತಿಯೂ ಯಾರಿಗೂ ತಿಳಿಯದ ಸಿಸ್ಟಮ್‌ ಬಗ್ಗೆ ಬರೆಯಲಾದ ಮಾಹಿತಿಯನ್ನು ಹೊಂದಿದ್ದು, 15ನೇ ಶತಮಾನದಲ್ಲಿ ಕಾರ್ಬನ್‌ ಡೇಟೆಡ್‌ ಮಾಡಲಾಯಿತಂತೆ. ಆದರೆ ಕ್ರಿಪ್ಟೊಗ್ರಾಫರ್‌ ಪ್ರಯತ್ನಿಸಿದರೂ ಸಹ ಇದನ್ನು ಡಿಕೋಡ್‌ ಮಾಡಲಾಗಲಿಲ್ಲವಂತೆ.

  14

  'Kaz II' ಇದು ಪ್ರೇತ ಹಡಗು ಎಂದೇ ಹೆಸರು ಪಡೆದಿದೆ. ಇದರಲ್ಲಿ 3 ಸಿಬ್ಬಂದಿ ಕಣ್ಮರೆಯಾದರು. ಆದರೆ ಅಂದಿನಿಂದಲೂ ಸಹ ಹಡಗಿನ ಇಂಜಿನ್‌ ಆನ್‌ ಆಗುತ್ತಲೇ ಇದೆ ಮತ್ತು ಲ್ಯಾಪ್ಟಾಪ್‌ ರನ್ನಿಂಗ್‌ನಲ್ಲಿದೆಯಂತೆ.

  15

  ವಿಕಿಪೀಡಿಯದಲ್ಲಿ 'Cicada 3301' ಹೆಡ್‌ಲೈನ್‌ನ ಪೇಜ್‌ ಅನ್ನು ಮಾತ್ರ ಓದುವ ಪ್ರಯತ್ನ ಮಾಡಬೇಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Don’t Read These Wikipedia Pages If You Want To Sleep Tonight. Read more about this in kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more