2200 ವರ್ಷಗಳ ಹಿಂದೆಯೇ ಭೂಮಿ ವ್ಯಾಸವನ್ನು ನಿಖರವಾಗಿ ಹೇಳಿದ್ದ ಈತ ಯಾರು ಗೊತ್ತಾ?

  |

  ಈ ಹೊಸಜಗತ್ತಿನಲ್ಲಿ ಉಪಗ್ರಹಗಳನ್ನು ಬಳಸಿ ಭೂಮಿಯ ಇಂಚಿಂಚು ಮಾಹಿತಿಯನ್ನು ಮಾನವನು ಕಲೆಹಾಕುತ್ತಿದ್ದಾನೆ. ಭೂಮಿಯ ತೂಕ ಎಷ್ಟಿದೆ ಎಂಬುದರಿಂದ ಹಿಡಿದು ನಮ್ಮ ಭೂಮಿಯ ತ್ರಿಜ್ಯ, ಆಳ ಮತ್ತು ಅದರ ವ್ಯಾಸ ಎಷ್ಟಿದೆ ಎಂಬುದನ್ನು ಸಹ ಅಳೆಯಲಾಗಿದೆ. ಇಂದು ತಂತ್ರಜ್ಞಾನವು ನಮ್ಮ ಜಗತ್ತಿನ ಬಗ್ಗೆ ನಮಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತಿದೆ.

  ಈ ತಂತ್ರಜ್ಞಾನ ಪ್ರಪಂಚದಲ್ಲಿ ಭೂಮಿಯ ಬಗ್ಗೆ ಮಾಹಿತಿಗಳನ್ನು ತಿಳಿಯುವುದು ನಮಗೀಗ ಈಗ ವಿಶೇಷವಾಗಿ ಕಾಣಿಸುತ್ತಿಲ್ಲ. ಆದರೆ, ನಿಮಗೆ ಗೊತ್ತಾ? ಈ ಭೂಮಿ ದುಂಡಗಿದೆಯೇ ಅಥವಾ ಚಪ್ಪಟೆಯಾಗಿದೆಯೇ ಎಂಬ ಯಕ್ಷ ಪ್ರಶ್ನೆಯನ್ನು ಹೊಂದಿದ್ದ 2200 ವರ್ಷಗಳ ಹಿಂದೆಯೇ 'ಎರತೋಸ್ತೇನಸ್' ಎಂಬುವವ ಭೂಮಿ ವ್ಯಾಸವನ್ನು ನಿಖರವಾಗಿ ಅಳೆದಿದ್ದಾನೆ.

  2200 ವರ್ಷಗಳ ಹಿಂದೆಯೇ ಭೂಮಿ ವ್ಯಾಸವನ್ನು ನಿಖರವಾಗಿ ಹೇಳಿದ್ದ ಈತ ಯಾರು ಗೊತ್ತಾ?

  ಹೌದು, ಕ್ರಿ.ಪೂ. ಸುಮಾರು 240 ರಲ್ಲಿ ಈಜಿಪ್ಟಿನ ಎರತೊಸ್ತನೀಸ್ (Eratosthenes) ಎಂಬ ಗಣಿತ ತಜ್ಞ ಭೂಮಿಯ ವ್ಯಾಸವನ್ನು ಅಳೆದವರಲ್ಲಿ ಮೊದಲಿಗ. ಹಾಗಾಗಿ, ಆ ಕಾಲದಲ್ಲಿ 'ಎರತೋಸ್ತೇನಸ್' ಭೂಮಿಯನ್ನು ಅಳೆದದ್ದು ಹೇಗೆ ಎಂಬ ವಿಶೇಷ ಮಾಹಿತಿಯನ್ನು ಇಂದು ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಆಧುನಿಕ ಕಾಲದ ಮಾಹಿತಿ!

  ದುಂಡಾಕಾರವಾಗಿರುವ ಭೂಮಿಯ ವ್ಯಾಸ 12,756 ಕಿಲೋ ಮೀಟರ್‌ಗಳು ಮತ್ತು ಅದರ ತೂಕ 5.97219 × 10‌‍24 ಕಿಲೋ ಗ್ರಾಂ. ಇದೆ ಎಂದು ಆಧುನಿಕ ಕಾಲದ ತಂತ್ರಜ್ಞಾದ ಸಹಾಯದಿಂದ ಹೇಳಲಾಗಿದೆ. ಇದು 2200 ವರುಷಗಳ ಹಿಂದೆ ಎರತೋಸ್ತೇನಸ್ ಅಳೆದ ಭೂಮಿಯ ಕಿಲೋ ಮೀಟರ್‌ಗಳಿಗೆ ತುಂಬಾ ಹತ್ತಿರವಾಗಿದೆ ಎಂಬುದು ಆಶ್ಚರ್ಯವೇ ಸರಿ.

  2200 ವರ್ಷದ ಹಿಂದೆ ಹೇಳಿದ್ದು?

  2200 ವರುಷಗಳ ಹಿಂದೆ ಎರತೊಸ್ತನೀಸ್ ಎಣಿಕೆ ಹಾಕಿದ ಭೂಮಿಯವ್ಯಾಸ 12730.7 ಕಿ.ಮೀ. ಆಗಿತ್ತು. ಇಂದು ತಂತ್ರಜ್ಞಾದ ಸಹಾಯದಿಂದ ಹೇಳಲಾದ 12,756 ಕಿಲೋ ಮೀಟರ್‌ಗಳಿಗೆ ಬಹಳ ಹತ್ತಿರವಾಗಿದೆ. ಇಡೀ ಭೂಮಿಯ ವ್ಯಾಸದ ಲೆಕ್ಕದಲ್ಲಿ ಎರತೊಸ್ತನೀಸ್ ನೀಡಿ ವ್ಯಾಸಕ್ಕೂ ಈಗಿನ ವ್ಯಾಸಕ್ಕೂ ಕೇವಲ 26 ಕಿಲೋಮೀಟರ್ ಮಾತ್ರ ವ್ಯತ್ಯಾಸವಿದೆ ಅಷ್ಟೆ.

  ಎರತೊಸ್ತನೀಸ್ ಲೆಕ್ಕಾ ಹಾಕಲು ಪ್ರೇರಣೆ?

  ಬೇಸಿಗೆಯ ಒಂದು ಗೊತ್ತುಪಡಿಸಿದ ಹೊತ್ತಿನಂದು ಸಿಯನ್ ಊರಿನ ಬಾವಿಯ ಮೇಲೆ ಹಾದುಹೋಗುವ ಸೂರ್ಯನ ಕಿರಣಗಳು, ಆ ಬಾವಿಯ ನಟ್ಟನಡುವೆ ಬೀಳುತ್ತಿದ್ದುದು ಮತ್ತು 750 ಕೀಲೋ ಮೀಟರ್ ದೂರದ ಲೆಕ್ಸಾಂಡ್ರಿಯಾದ ಕಂಬವೊಂದರ ಮೇಲೆ ಸೂರ್ಯನ ಬೆಳಕು ನೇರವಾಗಿರದೇ ಒಂದು ಕೋನದಲ್ಲಿ ಇರುತ್ತಿದ್ದುದು, ಎರತೋಸ್ತೇನಸ್ ಕುತೂಹಲ ಕೆರಳಿಸಿತು.

  ದುಂಡಾಗಿದೆ ಅನ್ನುವ ವಿಷಯ!

  ಸೂರ್ಯನ ನೇರವಾದ ಕಿರಣಗಳು ಉಂಟುಮಾಡುವ ನೆರಳು ಸಿಯಾನ್ ಊರಿನಲ್ಲಿ ನೇರವಾಗಿ ಮತ್ತು ಅದೇ ಹೊತ್ತಿಗೆ ಅಲೆಕ್ಸಾಂಡ್ರಿಯಾದಲ್ಲಿ ಒಂದು ಕೋನದಲ್ಲಿದ್ದದ್ದು, ನಮ್ಮ ಭೂಮಿ ಚಪ್ಪಟೆಯಾಗಿರದೇ ದುಂಡಾಗಿದೆ ಅನ್ನುವಂತ ವಿಷಯವನ್ನು ಎರತೊಸ್ತನೀಸ್‍ರಿಗೆ ತೋರಿಸಿಕೊಟ್ಟಿದ್ದವು. ಇದು ಭೂಮಿಯ ಸುತ್ತಳತೆಯನ್ನು ಅಳೆಯಲು ಮೊದಲ ಹೆಜ್ಜೆಯಾಯಿತು.

  ಗಣಿತದ ಆಧಾರದಲ್ಲಿ ಲೆಕ್ಕಹಾಕಿದ ತಜ್ಞ!

  ತಾನಿದ್ದ ಸ್ಥಳದಲ್ಲಿನ ಬಾವಿಯ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತಿದ್ದ ಹೊತ್ತಿಗೆ, ದೂರದಲ್ಲಿನ ಆ ಒಂದು ಕಂಬ ಉಂಟುಮಾಡುತ್ತಿದ್ದ ನೆರಳಿನ ಕೋನವು 7.2° ಎಂದು ಎರತೋಸ್ತೇನಸ್ ಕಂಡುಹಿಡಿದುಕೊಂಡನು. ನಂತರ ಗಣಿತದ ನಂಟುಗಳನ್ನು ಬಳಸಿ ಭೂಮಿಯ ಸುತ್ತಳತೆ ಮತ್ತು ದುಂಡಗಲವನ್ನು ಈ ಕೆಳಗಿನಂತೆ ಲೆಕ್ಕಹಾಕಿದನು.

  ಎರತೋಸ್ತೇನಸ್ ಲೆಕ್ಕಹಾಕಿದ್ದು ಹೇಗೆ?

  ಭೂಮಿಯು ದುಂಡಾಗಿದೆ ಎಂದು ಸ್ಪಷ್ಟವಾದ ನಂತರ 360° ಡಿಗ್ರು ಕೋನವೆಂದು ಸಾಬೀತಾಯಿತು. ಅಲೆಕ್ಸಾಂಡ್ರಿಯಾ ಕಂಬದ ನೆರಳಿನ ಕೋನ 7.2° ಎಂದು ತಿಳಿದುಬಂತು. ಈ ಎರಡು ಅಂಕಿಅಂಶಗಳನ್ನು ಭಾಗಿಸಿದಾಗ ಅಲೆಕ್ಸಾಂಡ್ರಿಯಾ ಮತ್ತು ಸಿಯಾನ್ ಊರುಗಳ ದೂರ ಭೂಮಿ 360/7.2 ಡಿಗ್ರಿಯಷ್ಟು ಇರಲೇಬೇಕು ಎಂದು ಎರತೋಸ್ತೇನಸ್ ಲೆಕ್ಕಹಾಕಿದನು.

  5000 ಸ್ಟೇಡಿಯಾ ದೂರ!

  ಈ ಮಾಹಿತಿಯಿಂದ ಅಲೆಕ್ಸಾಂಡ್ರಿಯಾ ಮತ್ತು ಸಿಯಾನ್ ಊರುಗಳ ದೂರ 5000 (1 ಸ್ಟೇಡಿಯಾ = 0.15 ಕಿ.ಮೀ.) ಸ್ಟೇಡಿಯಾ ಎಂದು ಎರತೋಸ್ತೇನಸ್ ಹೇಳಿದನು. (ಸ್ಟೇಡಿಯಾ: ದೂರವನ್ನು ಅಳೆಯಲು ಎರತೊಸ್ತನೀಸ್ ಬಳಸಿದ ಅಳತೆಗೋಲು) ಹಾಗಾಗಿ, ಎರತೊಸ್ತನೀಸ್ ಎಣಿಕೆ ಹಾಕಿದ ಭೂಮಿಯ ವ್ಯಾಸ 12730.7 ಕಿ.ಮೀ.ಆಗಿತ್ತು.

  ಪಕ್ಕಾ

  ಕಂಬ ಉಂಟುಮಾಡುತ್ತಿದ್ದ ನೆರಳಿನ ಕೋನವು 7.2° ಎಂದು ತಿಳಿದ ನಂತರ ಎರತೊಸ್ತನೀಸ್ ಎಣಿಕೆ ಹಾಕಿದ ಭೂಮಿಯ ವ್ಯಾಸ 40000/3.142 = 12730.7 ಕಿ.ಮೀ. ಎಂದಾಗಿತ್ತು. ನೆರಳು ಬೆಳಕಿನ ಮಿಲಿಮೀಟರ್ ಲೆಕ್ಕದಲ್ಲಿ ಸ್ವಲ್ಪ ಬದಲಾದರಿಂದಲೋ ಏನೋ ಆಧುನಿಕ ಲೆಕ್ಕಕ್ಕಿಂತ 26 ಕಿ. ಮೀ ವ್ಯತ್ಯಾಸವಾಯಿತು. ಆದರೂ, ಅವನಷ್ಟು ಪಕ್ಕಾ ಲೆಕ್ಕಾಚಾರ ಹಾಕಿದವರು ಯಾರಿಲ್ಲ.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  In 240 B.C., the Greek astronomer Eratosthenes made the first good measurement of the size of Earth. to know more. visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more