ಫೇಸ್‌ಬುಕ್, ಏರ್‌ಟೆಲ್ ಹೊಸ ಆಟ!..ಫೇಸ್‌ಬುಕ್, ವಾಟ್ಸ್‌ಆಪ್ ಬಳಕೆ ಇನ್ನು ಉಚಿತ!!!

Written By:

ಜಿಯೋಗೆ ಸೆಡ್ಡುಹೊಡೆಯಲು ಪಣತೊಟ್ಟಿರುವ ಏರ್‌ಟೆಲ್ ಇದೀಗ ಫೆಸ್‌ಬುಕ್ ಜೊತೆ ಸೇರಿ ನೂತನ ಪ್ಲಾನ್ ಒಂದನ್ನು ಹೊರತರುತ್ತಿದೆ.! ಹೌದು, ಏನಾದರೂ ಮಾಡಿ ಜಿಯೋವನ್ನು ಮಟ್ಟಹಾಕಲೇಬೇಕು ಎಂದು ಏರ್‌ಟೆಲ್ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಇದಕ್ಕಾಗಿ ಫೇಸ್‌ಬುಕ್ ಜೊತೆ ಕೈ ಜೋಡಿಸಿದೆ.!!

ಈ ಮೊದಲು ಫೇಸ್‌ಬುಕ್ ರೂಪಿಸಿದ್ದ ಫ್ರೀ ಬೇಸಿಕ್ ಇಂಟರ್‌ನೆಟ್ ನೀಡುವ ಯೋಜನೆಗೆ ಏರ್‌ಟೆಲ್ ಬಂಗಾವಲಿಗೆ ನಿಂತಿದ್ದು, ಫೇಸ್‌ಬುಕ್ ಇಂಟರ್‌ನೆಟ್‌.ಆರ್ಗ್ ಕಾರ್ಯಕ್ಕೆ ಏರ್‌ಟೆಲ್ ಬೆಂಬಲ ನೀಡಲು ಮುಂದಾಗಿದೆ.!! ಈ ಯೋಜನೆಗೆ "ಎಕ್ಸ್‌ಪ್ರೆಸ್ ವೈಫೈ" ಎಂದು ಹೆಸರಿಡಲಾಗಿದ್ದು, ಜಿಯೋಗೆ ಸೆಡ್ಡು ಹೊಡೆಯಲು ಈ ಪ್ಲಾನ್ ಬಿಡುಗಡೆ ಮಾಡಲಾಗಿದೆ.!!

ಹಾಗಾದರೆ, ಏನಿದು ಎಕ್ಸ್‌ಪ್ರೆಸ್ ವೈಫೈ ಯೋಜನೆ? ಈ ಯೋಜನೆಯಿಂದ ಜಿಯೋಗೆ ಹೇಗೆ ಫೈಟ್ ನೀಡಬಹುದು? ಇದರಿಂದ ಫೇಸ್‌ಬುಕ್‌ಗೆ ಏನು ಲಾಭ? ಎಂಬ ಪ್ರಶ್ನೆಗಳಿಗೆ ಕೆಳಗಿನ ಸ್ಲೈಡರ್‌ಗಳಲ್ಲಿ ಉತ್ತರ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಕ್ಸ್‌ಪ್ರೆಸ್ ವೈಫೈ ಯೋಜನೆ!!

ಎಕ್ಸ್‌ಪ್ರೆಸ್ ವೈಫೈ ಯೋಜನೆ!!

ಜಿಯೋಗೆ ಸೆಡ್ಡು ಹೊಡೆಯಲು ಏರ್‌ಟೆಲ್ ಎಕ್ಸ್‌ಪ್ರೆಸ್ ವೈಫೈ ಎಂಬ ಯೋಜನೆಗೆ ಕೈ ಹಾಕಿದ್ದು, ಫೇಸ್‌ಬುಕ್ ಸಹಯೋಗದೊಂದಿಗೆ ದೇಶದಾಧ್ಯಂತ 20,000 ವೈಫೈಗಳನ್ನು ಸ್ಥಾಪಿಸಲು ಮುಂದಾಗಿದೆ. ಈ ಯೋಜನೆಯಿಂದ ಕಡಿಮೆ ದರದಲ್ಲಿ ಅತಿ ಹೆಚ್ಚು ವೇಗದ ಡೇಟಾ ನೀಡಲು ಏರ್‌ಟೆಲ್ ಪ್ಲಾನ್ ರೂಪಿಸಿದೆ.!!

ಎಕ್ಸ್‌ಪ್ರೆಸ್ ವೈಫೈ ಮೂಲಕ ಎಷ್ಟು ವೇಗದ ಡೇಟಾ?

ಎಕ್ಸ್‌ಪ್ರೆಸ್ ವೈಫೈ ಮೂಲಕ ಎಷ್ಟು ವೇಗದ ಡೇಟಾ?

ಏರ್‌ಟೆಲ್ ಮತ್ತು ಫೇಸ್‌ಬುಕ್ ಸಹಯೋಗದೊಂದಿಗೆ ರೂಪಿತವಾಗುತ್ತಿರುವ ಎಕ್ಸ್‌ಪ್ರೆಸ್ ವೈಫೈ ಮೂಲಕ 1 GBPS ವೇಗದಲ್ಲಿ ಡೇಟಾ ನೀಡಲು ಏರ್‌ಟೆಲ್ ಮುಂದಾಗಿದೆ. ಇದರಿಂದ ಜಿಯೋ ಡೇಟಾಗೆ ಸೆಡ್ಡು ಹೊಡೆದು, ಕಡಿಮೆ ಬೆಲೆಯಲ್ಲಿ ಹೆಚ್ಚು ಸ್ಪೀಡ್‌ ವೇಗದ ಡೇಟಾ ನೀಡುವುದು ಎರ್‌ಟೆಲ್‌ ಉದ್ದೇಶವಾಗಿದೆ.!!

ಫೇಸ್‌ಬುಕ್ ಸಹಯೋಗ ಏಕೆ?

ಫೇಸ್‌ಬುಕ್ ಸಹಯೋಗ ಏಕೆ?

ಈ ಮೊದಲೇ ಫೇಸ್‌ಬುಕ್ ಉಚಿತ ಬೇಸಿಕ್ ಇಂಟರ್‌ನೆಟ್ ನೀಡುವ ಯೋಜನೆಯೊಂದನ್ನು ರೂಪಿಸಿತ್ತು. ಆದರೆ,ನಿಯಮಗಳ ಪ್ರಕಾರ ಅದು ಜಾರಿಗೆ ಬರಲು ಸಾಧ್ಯವಾಗಲಿಲ್ಲ. ಆದರೆ, ಈಗ ಏರ್‌ಟೆಲ್ ಜೊತೆ ಸೇರಿದರೆ ಈ ಯೋಜನೆಗೆ ಬಲ ಸಿಕ್ಕಂತಾಗುತ್ತದೆ. ಹಾಗಾಗಿಯೇ, ಫೇಸ್‌ಬುಕ್ ಏರ್‌ಟೆಲ್ ಜೊತೆ ಕೈ ಜೋಡಿಸಿದೆ. ಮತ್ತು ಬಂಡವಾಳ ಹೂಡಲು ತಯಾರಾಗಿದೆ.!!

 ವಾಟ್ಸ್‌ಆಪ್, ಫೇಸ್‌ಬುಕ್ ಬಳಕೆ ಉಚಿತ.!!

ವಾಟ್ಸ್‌ಆಪ್, ಫೇಸ್‌ಬುಕ್ ಬಳಕೆ ಉಚಿತ.!!

ಏರ್‌ಟೆಲ್ ಹೊರತರುತ್ತಿರುವ ಎಕ್ಸ್‌ಪ್ರೆಸ್ ವೈಫೈ ಯೋಜನೆಗೆ ಫೇಸ್‌ಬುಕ್ ಸಹ ಬಂಡವಾಳ ಹೂಡುತ್ತಿದ್ದು,ಎಕ್ಸ್‌ಪ್ರೆಸ್ ವೈಫೈ ಯೋಜನೆಯ ವೈಫೈ ಮೂಲಕ ವಾಟ್ಸ್‌ಆಪ್, ಫೇಸ್‌ಬುಕ್ ಬಳಕೆ ಉಚಿತವಾಗಿ ನೀಡಲಾಗುತ್ತದೆ ಎನ್ನಲಾಗಿರುವ ಮಾಹಿತಿ ಹೊರಬಿದ್ದಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Idea is to offer internet services through public hotspots in partnership with telcos. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot