ಗೂಗಲ್‌ನಲ್ಲೇ ನೀವು ವಾಯುಮಾಲಿನ್ಯದ ಪ್ರಮಾಣವನ್ನು ತಿಳಿಯಬಹುದು.!

By Lekhaka
|

ಸರ್ಚ್ ಇಂಜಿನ್ ದೈತ್ಯ ಗೂಗಲ್ ದಿನದಿಂದ ದಿನಕ್ಕೆ ಆಪ್ ಡೇಟ್ ಆಗುತ್ತಿದೆ. ಮನಕುಲದ ಒಳಿತಿಗೆ ಭವಿಷ್ಯದ ತಂತ್ರಜ್ಞಾನಗಳನ್ನು ನಿರ್ಮಿಸಲು ಮುಂದಾಗಿದೆ. ಇದೇ ಮಾದರಿಯಲ್ಲಿ ತನ್ನ ಗೂಗಲ್ ಆರ್ಥ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿದ್ದು, ಭೂಮಿ ಮೇಲಿನ ವಾಯುಮಾಲಿನ್ಯವನ್ನು ತೋರಿಸುವ ಆಯ್ಕೆಯೊಂದನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ.

ಗೂಗಲ್‌ನಲ್ಲೇ ನೀವು ವಾಯುಮಾಲಿನ್ಯದ ಪ್ರಮಾಣವನ್ನು ತಿಳಿಯಬಹುದು.!

ಇದಕ್ಕಾಗಿ ಅಲಿಮಾ ಎನ್ನು ಟೆಕ್ ಕಂಪನಿಯೊಂದಿಗೆ ಕೈ ಜೋಡಿಸಿದ್ದು, ಪರೀಕ್ಷಾರ್ಥವಾಗಿ ಕ್ಯಾಲಿಪೋರ್ನಿಯಾದಲ್ಲಿನ ವಾಯು ಮಾಲಿನ್ಯದ ಪ್ರಮಾಣವನ್ನು ಅಳತೆ ಮಾಡಿದೆ ಎನ್ನಲಾಗಿದೆ. ಇದನ್ನು ಗೂಗಲ್ ಸ್ಟ್ರಿಟ್ ವ್ಯೂ ಕಾರುಗಳನ್ನು ಬಳಕೆ ಮಾಡಿಕೊಂಡು. ರಚಿಸಲಾಗಿದ್ದು ಎಲ್ಲಾ ಸ್ಥಳದ ಮಾಹಿತಿಯನ್ನು ನೀಡಲಿದೆ.

ಈ ಹೊಸ ಆಯ್ಕೆಯೋ ವಿಜ್ಞಾನಿಗಳಿಗೆ ಸಹಾಯಕವಾಗಲಿದ್ದು, ವಾಯುಮಾಲಿನ್ಯದ ಪ್ರಮಾಣವನ್ನು ಅಳತೆ ಮಾಡಿ, ಹೆಚ್ಚಾದರೆ ಅದನ್ನು ಕಡಿಮೆ ಮಾಡುವ ವಿಧಾನಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಇದು ಸಹಾಯಕವಾಗಲಿದೆ ಎನ್ನಲಾಗಿದೆ.

ಮೈಕ್ರೊಮಾಕ್ಸ್ ಇನ್ಫಿನಿಟಿ ಪ್ರೋ ಶೀಘ್ರವೇ ಲಾಂಚ್..!ಮೈಕ್ರೊಮಾಕ್ಸ್ ಇನ್ಫಿನಿಟಿ ಪ್ರೋ ಶೀಘ್ರವೇ ಲಾಂಚ್..!

ಈ ಹೊಸ ಸೇವೆಯನ್ನು ಗೂಗಲ್ ಎಲ್ಲೇಡೆ ವಿಸ್ತರಿಸಲು ಯೋಜನೆಯನ್ನು ರೂಪಿಸಿದ್ದು, ಸದ್ಯದ ಪರೀಕ್ಷೆಯೂ ಯಶಸ್ವಿಯಾದಲ್ಲಿ ಮುಂದಿನ ದಿನದಲ್ಲಿ ಇಡೀ ವಿಶ್ವದಲ್ಲಿ ಈ ಸೇವೆಯನ್ನು ನೀಡುವ ಆಲೋಚನೆಯಲ್ಲಿದೆ.

ಈಗಾಗಲೇ ವಿಶ್ವದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯವು ಅಧಿಕವಾಗುತ್ತಿದೆ. ದೆಹಲಿ, ಬಿಜಿಂಗ್ ಸೇರಿದಂತೆ ಪ್ರಮುಖ ನಗರಗಳಲ್ಲಿ ವಾಸಿಸುವು ಕಷ್ಟ ಸಾಧ್ಯವಾಗುತ್ತಿದೆ. ಈ ಹಿನ್ನಲಯಲ್ಲಿ ಗೂಗಲ್ ಈ ಸೇವೆಯು ಹೆಚ್ಚು ಉಪಯೋಗಕ್ಕೆ ಬರಲಿದೆ.

Best Mobiles in India

Read more about:
English summary
Google has joined hands with environmental technology company Aclima to map air pollution levels on Google Earth.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X