'ಗೂಗಲ್' ನಡೆಸುತ್ತಿರುವ ಭವಿಷ್ಯದ ಸಂಶೋಧನೆಗಳು ಇವು!..ನಮ್ಮ ಊಹೆಗೂ ಸಿಲುಕದವು!!

  ವಿಶ್ವದ ನಂಬರ್ ಒನ್ ಅಂತರ್ಜಾಲ ದಿಗ್ಗಜನಾಗಿ ಮೆರೆಯುತ್ತಿರುವ 'ಗೂಗಲ್' ಕಂಪೆನಿಯ ಈವರೆಗಿನ ಸಾಧನೆಗಳಿಗೆ ಲೆಕ್ಕವಿಲ್ಲ.! ಭವಿಷ್ಯದ ಪ್ರಪಂಚವನ್ನು ಊಹಿಸುತ್ತಾ ಏನಾದರೂ ಹೊಸತನವನ್ನು ಕಂಡುಹಿಡಯಬೇಕು ಎನ್ನುವ ಗೂಗಲ್ ಕಂಪೆನಿಯೂ ಈವರೆಗೂ ಕಂಡುಹಿಡಿದಿರುವ ಅವಿಷ್ಕಾರಗಳ ಲೀಸ್ಟ್ ಬೇಕಾದಷ್ಟಿವೆ ಎನ್ನಬಹುದು.!!

  ಇಷ್ಟೆಲ್ಲಾ ಅವಿಷ್ಕಾರಗಳನ್ನು ನಡೆಸಿರುವ, ಇಷ್ಟೆಲ್ಲ ಸಾಧನೆ ಮಾಡಿರುವ ಗೂಗಲ್ ಇಷ್ಟಕ್ಕೆ ಸುಮ್ಮನಾಗಿದೆಯೇ?.ಖಂಡಿತಾ ಇಲ್ಲ.! ಮನುಕುಲದ ಒಳಿತಿಗಾಗಿ ವಿಶ್ವಕ್ಕೆ ಹೊಸ ಆಯಾಮ ನೀಡುವಂತಹ ಹಲವು ಸಂಶೋಧನೆಗಳನ್ನು ಗೂಗಲ್ ಈಗಲೂ ನಡೆಸುತ್ತಿದೆ. ಈ ಅವಿಷ್ಕಾರಗಳು ಭವಿಷ್ಯದಲ್ಲಿ ಮಾನವನ ಬದುಕನ್ನೇ ಬದಲಾಯಿಸುವ ಶಕ್ತಿ ಹೊಂದಿರಲಿವೆ.!

  ಈ ಸಂಶೋಧನೆಗಳಿಗೆ ಗೂಗಲ್ ಸಾವಿರಾರು ಕೋಟಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದು, ಹಾಗಾದರೆ, ಗೂಗಲ್ ನಡೆಸುತ್ತಿರುವ ಭವಿಷ್ಯದ ಸಂಶೋಧನೆಗಳು ಯಾವುವು? ಹೇಗೆ ಸಂಶೋಧನೆಗಳು ನಡೆಯುತ್ತಿದೆ? ಇದರಿಂದ ಗೂಗಲ್‌ಗೆ ಲಾಭವೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಗೂಗಲ್ ಡೀಪ್ ಮೈಂಡ್‌!!

  ಲಂಡನ್‌ನ ಡೀಪ್‌ಮೈಂಡ್‌ ಎಂಬ ಸಂಸ್ಥೆಯನ್ನು ಮೂರು ವರ್ಷಗಳ ಹಿಂದೆ ಖರೀದಿಸಿರುವ ಗೂಗಲ್ ಅದೇ ಹೆಸರಲ್ಲೇ ಸಂಶೋಧನೆಗಳನ್ನು ಆರಂಭಿಸಿದೆ.! ಈ ಸಂಶೋಧನೆಯಲ್ಲಿ ಬುದ್ಧಿಶಕ್ತಿಯಲ್ಲಿ ಮನುಷ್ಯನನ್ನು ಸೋಲಿಸುವಂಥ ಶಕ್ತಿಯುತವಾದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ.! ಈಗಾಗಲೇ ಈ ಸಂಸ್ಥೆ ಅಭಿವೃದ್ಧಿಪಡಿಸಿದ ಅಲ್ಫಾಗೋ ಎಂಬ ತಂತ್ರಾಂಶ ಗೋ ಎಂಬ ಕ್ರೀಡೆಯಲ್ಲಿ ವಿಶ್ವ ಚಾಂಪಿಯನ್‌ನನ್ನು ಸೋಲಿಸಿದೆ! ತಾರ್ಕಿಕವಾಗಿ ಯೋಚಿಸಿ ಗೆಲ್ಲಬೇಕಾದ ಕ್ರೀಡೆಯಲ್ಲೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಗೆಲುವು ಸಾಧಿಸಿದೆ.!!

  ಸಮುದ್ರದ ನೀರು ಇಂಧನ!!

  ಸಮುದ್ರದ ನೀರನ್ನು ವಾಹನಗಳ ಇಂಧನವಾಗಿ ಬಳಸಬಹುದಾದ ಭವಿಷ್ಯದ ಸಂಶೋಧನೆಯೊಂದಕ್ಕೆ ಗೂಗಲ್ ಅಡಿಪಾಯಹಾಕಿದೆ. ವೆರಿಲಿ ಲ್ಯಾಬ್‌ನಲ್ಲಿ ನಡೆಯುತ್ತಿರುವ ಈ ಸಂಶೋಧನೆಯಲ್ಲಿ ಸಮುದ್ರದ ನೀರನ್ನು ವಾಹನಗಳ ಇಂಧನವಾಗಿ ಬಳಸಬಹುದಾದ ಎಲ್ಲಾ ಮಾರ್ಗಗಳ ಬಗ್ಗೆ ಅಧ್ಯಯನವಾಗುತ್ತಿದೆ.!!

  ಮನುಷ್ಯನ ಆಯಸ್ಸನ್ನು ಹೆಚ್ಚಿಸುವ ಅವಿಷ್ಕಾರ!!

  ಮನುಷ್ಯನ ಆಯಸ್ಸು 100 ವರ್ಷಗಳಾದರೂ ಮನುಷ್ಯ ಬದುಕುವ ಸರಾಸರಿ ವಯಸ್ಸು ಬಹಳ ಕಡಿಮೆ ಇದೆ.! ಹಾಗಾಗಿ, ಈ ಬಗ್ಗೆ ‘ಕ್ಯಾಲಿಕೊ' ಎಂಬ ಸಂಸ್ಥೆ ಮೂಲಕ ಗೂಗಲ್ ಸಂಶೋಧನೆಗಳನ್ನು ನಡೆಸುತ್ತಿದೆ.! ‘ನೇಕೆಡ್ ಮೋಲ್' ತಳಿಯ ಇಲಿಗಳು ಇತರೆ ತಳಿಯ ಇಲಿಗಳಿಗೆ ಹೋಲಿಸಿದರೆ ಹತ್ತುಪಟ್ಟು ಹೆಚ್ಚು ಕಾಲ ಜೀವಿಸುತ್ತಿವೆ. ಇದು ಹೇಗೆ ಸಾಧ್ಯ ಎಂಬ ರಹಸ್ಯ ಭೇದಿಸಿದರೆ ಮನುಷ್ಯ ರೋಗಗಳಿಗೆ ತುತ್ತಾಗದಂತೆ ಸುಖವಾಗಿ ನೂರು ವರ್ಷ ಬಾಳಬಹುದು ಎಂದು ಕಾಲಿಫೋರ್ನಿಯಾ ಲೈಫ್ ಕಂಪೆನಿ ಹೇಳಿಕೊಂಡಿದೆ.

  ಚಾಲಕರಹಿತ ವಾಹನ!!

  ಡೀಪ್‌ಮೈಂಡ್‌ ಅಭಿವೃದ್ದಿಪಡಿಸಿರುವ ತಂತ್ರಜ್ಞಾನ ಸಹಾಯದಿಂದ ಗೂಗಲ್ ತನ್ನ ಡೇಟಾ ಸೆಂಟರ್‌ಗಳಲ್ಲಿ ವಿದ್ಯುತ್‌ ಬಳಕೆಯನ್ನು ಶೇ 40ರಷ್ಟು ಕಡಿಮೆ ಮಾಡಿದೆಯಲ್ಲದೇ, ಚಾಲಕರಹಿತ ವಾಹನಗಳಲ್ಲೂ ಈ ತಂತ್ರಜ್ಞಾನವನ್ನು ಈಗಾಗಲೇ ಬಳಸಿಕೊಂಡಿದೆ.! ಹಾಗಾಗಿ, ತಾರ್ಕಿಕವಾಗಿ ಯೋಚಿಸಿ ವಾಹನ ಚಾಲನೆ ಮಾಡುವಂತಹ ಚಾಲಕರಹಿತ ವಾಹನಗಳು ಭವಿಷ್ಯದಲ್ಲಿ ರೋಡಿಗಿಳಿಯುವುದರಲ್ಲಿ ಎರಡು ಮಾತಿಲ್ಲ.!!

  ಗೂಗಲ್ ಎಕ್ಸ್‌!!

  ಬಲೂನ್‌ಗಳ ಮೂಲಕ ಮೊಬೈಲ್‌ಗಳಿಗೆ ಮತ್ತು ಕಂಪ್ಯೂಟರ್‌ಗಳಿಗೆ ಡೇಟಾ ಒದಗಿಸುವ ಹಲವು ಯೋಜನೆಗಳ ಸಮೂಹ ಈ ಗೂಗಲ್ ಎಕ್ಸ್‌.! ಪ್ರಾಜೆಕ್ಟ್‌ ಗ್ಲಾಸ್, ಪ್ರಾಜೆಕ್ಟ್ ಲೂನ್ ಮತ್ತು ಪ್ರಾಜೆಕ್ಟ್‌ ವಿಂಗ್‌ ಹೆಸರಿನಲ್ಲಿ ಹಲವು ಸಂಶೋಧನೆಗಳು ಈ ಬಗ್ಗೆ ನಡೆಯುತ್ತಿವೆ. ಈ ಎಲ್ಲಾ ಯೋಜನೆಗಳ ಮೂಲಕ ವಿಶ್ವದ ಪ್ರತಿಯೋರ್ವನಿಗೂ ಇಂಟರ್‌ನೆಟ್ ಸಂಪರ್ಕ ಕಲ್ಪಿಸಬೇಕು ಎಂಬುದು ಗೂಗಲ್‌ನ ಮಹತ್ವಾಕಾಂಕ್ಷೆ ಯೋಜನೆಯಾಗಿದೆ.!!

  Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
  ವೆರಿಲೀ ಲೈಫ್ ಸೈನ್ಸ್‌

  ವೆರಿಲೀ ಲೈಫ್ ಸೈನ್ಸ್‌

  ಡೆಂಗಿ, ಮಲೇರಿಯಾದಂತಹ ಜ್ವರಗಳನ್ನು ನಿಯಂತ್ರಿಸಲು ಗೂಗಲ್ ವೆರಿಲಿ ಲ್ಯಾಬ್‌ನಲ್ಲಿ ಗೂಗಲ್ ಸಂಶೋಧನೆಗಳನ್ನು ನಡೆಸುತ್ತಿದೆ. ರೋಗಗಳನ್ನು ಹರಡುವ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸುವ ಮೂಲಕ ರೋಗ ಹರಡದಂತೆ ನೋಡಿಕೊಳ್ಳುವುದು ಇದರ ಉದ್ದೇಶ. ಈ ಯೋಜನೆಗೆ ‘ಡಿಬಗ್' ಎಂದು ನಾಮಕರಣ ಮಾಡಲಾಗಿದೆ. ಆರೋಗ್ಯ ಸಮಸ್ಯೆಗಳನ್ನು ಗುರುತಿಸುವಂಥ ಗಡಿಯಾರವನ್ನೂ ವೆರಿಲಿ ಲ್ಯಾಬ್ ಸಂಶೋಧನೆ ಮೂಲಕ ತಯಾರಿಸಲಾಗಿದೆ.!!

  ಓದಿರಿ:"ಒಪ್ಪೊ ಎಫ್5" ಸೆಲ್ಫಿ ಕ್ಯಾಮೆರಾ ದಿಗ್ಗಜನಾಗಲು ಕಾರಣ AI ತಂತ್ರಜ್ಞಾನ!! ಏನಿದು ಗೊತ್ತಾ?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The technology giant likes to work on things that no one else in the world is taking on. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more