Subscribe to Gizbot

ಎಚ್ಚರ..!!!!! ಟೊರೆಂಟ್ನಲ್ಲಿ ಮೂವಿ ಡೌನ್‌ಲೋಡ್ ಮಾಡುವ ಮುನ್ನ ಈ ಸ್ಟೋರಿ ನೋಡಿ..!!!

Written By:

ವಾನ್ನಾಕ್ರೈ ದಾಳಿಯ ನಂತರದಲ್ಲಿ ಹ್ಯಾಕರ್ಸ್ ಗಳು ನಿಮ್ಮ ಕಂಪ್ಯೂಟರ್ ಒಳಗೆ ಹೇಗೆ ನುಗ್ಗಬಹುದು ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು, ಇಲ್ಲಿ ದೊರೆತ ಮಾಹಿತಿಗಳು ನಿಜಕ್ಕೂ ಭಯಹುಟ್ಟಿಸುವಂತಹದು. ನಾವು ದಿನನಿತ್ಯ ಮಾಡುತ್ತಿರುವ ತಪ್ಪುಗಳು ಹ್ಯಾಕರ್ಸ್ ಗಳ ಪಾಲಿಗೆ ಅವಕಾಶವಾಗುತ್ತಿದ್ದು, ಅದರ ಮೂಲಕ ನಮ್ಮ ಕಂಪ್ಯೂಟರ್ ಗಳ ಮೇಲೆ ದಾಳಿ ಮಾಡುತ್ತಿದ್ದಾರೆ.

ಎಚ್ಚರ..!!!!! ಟೊರೆಂಟ್ನಲ್ಲಿ ಮೂವಿ ಡೌನ್‌ಲೋಡ್ ಮಾಡುವ ಮುನ್ನ ಈ ಸ್ಟೋರಿ ನೋಡಿ..!

ಓದಿರಿ: ದೇಶದಲ್ಲಿ ಮೊದಲಿಗೆ BSNLನಿಂದ ಸ್ಯಾಟಿಲೈಟ್ ಫೋನ್ ಸೇವೆ: ಪ್ರತಿ ನಿಮಿಷಕ್ಕೆ ವಿಧಿಸುವ ದರ ಕೇಳಿದ್ರೆ ಶಾಕ್ ಆಗ್ತೀರ..!

ಇತ್ತೀಚಿನ ದಿನಗಳಲ್ಲಿ ಟೊರೆಂಟ್ನಲ್ಲಿ ಮೂವಿ ಡೌನ್‌ಲೋಡ್ ಮಾಡಿಕೊಂಡು ನೋಡುವುದು ಜಾಸ್ತಿಯಾಗಿದೆ. ಏಕೆಂದರೆ ಹಲವು ಸಿನಿಮಾಗಳು ತೆರೆಕಂಡ ದಿನವೇ ಟೊರೆಂಟ್ನಲ್ಲಿ ದೊರೆಯಲಿದೆ. ಹಾಗಾಗಿ ಹೆಚ್ಚಿನ ಜನರು ಈ ಒಂದು ಅಭ್ಯಾಸ ವನ್ನು ಇಟ್ಟುಕೊಂಡಿದ್ದಾರೆ. ಅಂತಹವರು ಹೆಚ್ಚಿನ ಎಚ್ಚರಿಕೆಯನ್ನು ವಹಿಸುವುದು ಅಗತ್ಯ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಂದಿದೆ ಹೊಸ ಹ್ಯಾಕಿಂಗ್ ಟೆಕ್ನಾಲಜಿ:

ಬಂದಿದೆ ಹೊಸ ಹ್ಯಾಕಿಂಗ್ ಟೆಕ್ನಾಲಜಿ:

ದಿನೇ ದಿನೇ ಹೊಸ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿರುವ ಹ್ಯಾಕರ್ಸ್ ಗಳು ಇಂದು ನೀವು ಡೌನ್‌ಲೋಡ್ ಮಾಡುವ ವಿಡಿಯೋ ಸಬ್ ಟೈಟಲ್ ಮೂಲಕ ನಿಮ್ಮ ಕಂಪ್ಯೂಟರ್ ಪ್ರವೇಶಿಸುತ್ತಿದ್ದಾರೆ. ಆ ನಂತರ ನಿಮ್ಮ ಕಂಪ್ಯೂಟರ್ ಅನ್ನು ಸಂಪೂರ್ಣವಾಗಿ ಅವರ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ.

ಮೀಡಿಯಾ ಪ್ಲೇಯರ್ ಮತ್ತು ವಿಎಲ್‌ಸಿ ಮೂಲಕ ಪ್ರವೇಶ:

ಮೀಡಿಯಾ ಪ್ಲೇಯರ್ ಮತ್ತು ವಿಎಲ್‌ಸಿ ಮೂಲಕ ಪ್ರವೇಶ:

ಹ್ಯಾಕರ್ಸ್ ಗಳು ಸಬ್ ಟ್ರೈಟರ್ ರನ್ ಮಾಡುವ ಮೀಡಿಯಾ ಪ್ಲೇಯರ್ ಮತ್ತು ವಿಎಲ್‌ಸಿ ಪ್ಲೇಯರ್‌ಗಳ ಮೂಲಕ ಹ್ಯಾಕರ್ಸ್ ನಿಮ್ಮ ಕಂಪ್ಯೂಟರ್ ಗೆ ಪ್ರವೇಶವನ್ನು ಪಡೆಯಲಿದ್ದಾರೆ ಎನ್ನುವ ಮಾಹಿತಿ ಲಬ್ಯವಾಗಿದೆ.

ಸಬ್‌ ಟೈಟಲ್ ಮೂಲಕ ದಾಳಿ ಏಕೆ..?

ಸಬ್‌ ಟೈಟಲ್ ಮೂಲಕ ದಾಳಿ ಏಕೆ..?

ಹ್ಯಾಕರ್ಸ್ ಗಳು ಸಬ್ ಟೈಟಲ್ ಮೂಲಕ ನಿಮ್ಮ ಕಂಪ್ಯೂಟರ್ ಪ್ರವೇಶಿಸಲು ಕಾರಣ ಈ ಫೈಲ್‌ಗಳನ್ನು ಯಾರು ಹೆಚ್ಚಾಗಿ ಸ್ಕ್ಯಾನ್ ಮಾಡುವುದಿಲ್ಲ. ಕಾರಣ ನೇರವಾಗಿ ಆ ಫೇಲ್ ಗಳನ್ನು ತೆರೆಯಲು ಆಗುವುದಿಲ್ಲ. ಪ್ಲೇಯರ್ ಗಳಲ್ಲಿ ತಾನಾಗಿಯೇ ಓಪನ್ ಆಗುವುದರಿಂದ ವೈರಸ್‌ಗಳು ವೇಗವಾಗಿ ಕಂಪ್ಯೂಟರ್ ಮೇಲೆ ದಾಳಿ ಮಾಡುತ್ತವೆ.

ವಿಡಿಯೋ ಡೌನ್‌ಲೋಡ್ ಮಾಡಬೇಕಾದರೆ ಹುಷಾರ್:

ವಿಡಿಯೋ ಡೌನ್‌ಲೋಡ್ ಮಾಡಬೇಕಾದರೆ ಹುಷಾರ್:

ಈ ಕಾರಣಕ್ಕಾಗಿ ಯಾವುದೇ ತಿಳಿಯದ ವೆಬ್ ತಾಣಗಳಿಂದ ವಿಡಿಯೋ ಮತ್ತು ಸಬ್‌ಟೈಟಲ್ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾದರೆ ಎಚ್ಚರ ವಹಿಸುವುದ ತೀರಾ ಅಗತ್ಯ. ಇಲ್ಲವಾದರೆ ನಿಮ್ಮ ಕಂಪ್ಯೂಟರ್ ನಲ್ಲಿರುವ ಮಾಹಿತಿ ಹ್ಯಾಕರ್ ಪಾಲಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
new hacking technique that can violate your privacy and take over your computer, and it comes from a very unlikely source — subtitles. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot