ಶಾಕಿಂಗ್ ನ್ಯೂಸ್...ಜಾಗತಿಕ ಸೈಬರ್ ಅಟ್ಯಾಕ್‌ಗೆ ಅಮೆರಿಕಾ ಕಾರಣ!!?
ದಾಳಿಗೆ ಪರೋಕ್ಷವಾಗಿ ಅಮೆರಿಕಾ ಕಾರಣವಾಗಿದೆ ಎನ್ನಲಾಗಿದೆ.!!
ಹ್ಯಾಕರ್‌ಗಳು 'ವನ್ನಾಕ್ರೈ' ಎಂಬ ಕುತಂತ್ರಾಂಶ ಬಳಸಿ ಆರಂಭಿಸಿದ್ದ ಸೈಬರ್ ದಾಳಿ, ಭಾನುವಾರದ ವೇಳೆಗೆ ಭಾರಿ ಪ್ರಮಾಣದಲ್ಲಿ ವಿಸ್ತರಿಸಿದೆ. ಇದೇ ವೇಳೆ ಇನ್ನೊಂದು ಶಾಕಿಂಗ್ ಮಾಹಿತಿ ಹೊರಬಿದ್ದಿದ್ದು, ಈ ಸೈಬರ್ ದಾಳಿಯ ಬಗ್ಗೆ ಮತ್ತೊಂದು ಕುತೋಹಲ ಗರಿಗೆದರಿದೆ.!!
ಹೌದು, ವಿವಿಧ ದೇಶಗಳ ಸಂಸ್ಥೆಗಳ ಕಾರ್ಯಚಟುವಟಿಕೆ ಮೇಲೆ ಗೂಢಚರ್ಯೆ ನಡೆಸಲು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ) ಅಭಿವೃದ್ಧಿಪಡಿಸಿದ್ದ 'ಎಟರ್ನಲ್‌ಬ್ಲೂ' ತಂತ್ರಾಂಶವನ್ನು ಬಳಸಿ ಹ್ಯಾಕರ್‌ಗಳು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ದಾಳಿಗೆ ಪರೋಕ್ಷವಾಗಿ ಅಮೆರಿಕಾ ಕಾರಣವಾಗಿದೆ ಎನ್ನಲಾಗಿದೆ.!!

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ) ಮೇಲೆ ಎಲ್ಲರೂ ಕಿಡಿಕಾರುತ್ತಿದ್ದಾರೆ. ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಂಸ್ಥೆಯೇ ಈ ಹ್ಯಾಕ್‌ಗೆ ಮೂಲ ಕಾರಣ ಎಂದು ದೊಡ್ಡ ದೊಡ್ಡ ಕಂಪೆನಿಗಳ ವ್ಯವಸ್ಥಾಪಕರು ದೂರಿದ್ದಾರೆ.

ಆದರೆ, ಈ ಬಗ್ಗೆ ತುಟಿಬಿಚ್ಚದ ಎನ್‌ಎಸ್‌ಎ ಈ ಬಗ್ಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹ್ಯಾಕರ್‌ಗಳು ಎನ್‌ಎಸ್‌ಎ ತಂತ್ರಜ್ಞಾನವನ್ನು ಕದ್ದು ಈ ಹ್ಯಾಕ್ ಮಾಡಿರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗಲೂ ಸಹ ಪ್ರತಿಕ್ರಿಯೆ ನೀಡಲು ಎನ್‌ಎಸ್ಎ ಪ್ರತಿನಿಧಿಗಳು ನಿರಾಕರಿಸಿದ್ದಾರೆ.!!


Click it and Unblock the Notifications








