'Cancri 55 e' ನರಕ ಗ್ರಹ ಪತ್ತೆ ಮಾಡಿದ ಸಂಶೋಧಕರು!

By Suneel
|

ತಂತ್ರಜ್ಞಾನ ಬಳಕೆ ಮತ್ತು ಅಭಿವೃದ್ದಿಯಿಂದ ಹಲವು ಖಗೋಳಶಾಸ್ತ್ರಜ್ಞರು, ವಿಜ್ಞಾನಿಗಳು ಭೂಮಿಗೆ ಹೋಲುವ ಇತರೆ ಗ್ರಹಗಳನ್ನು ಪತ್ತೆ ಹಚ್ಚುವ ಪ್ರಯತ್ನದಲ್ಲಿದ್ದಾರೆ. ರೇಡಿಯೋ ಸಂವಹನ ಮತ್ತು ಬೆಳಕಿನ ದೂರದರ್ಶಕಗಳನ್ನು ಹಿಂದಿಗಿಂತಲೂ ವೇಗವಾಗಿ ಬಳಸುತ್ತಿರುವ ವಿಜ್ಞಾನಿಗಳು ಸ್ಫೋಟಕ ಮಾಹಿತಿಯೊಂದನ್ನು ತಿಳಿಸಿದ್ದಾರೆ.

ಖಗೋಳ ವಿಜ್ಞಾನಿಗಳ ತಂಡವೊಂದು 'Cancri 55 e" ಎಂಬ ಅಚ್ಚರಿ ಗ್ರಹವೊಂದನ್ನು ಇತ್ತೀಚೆಗೆ ಪತ್ತೆ ಹಚ್ಚಿದ್ದು. ಸಂಯೋಜನೆ ಮತ್ತು ವಾತಾವರಣದಿಂದ ನರಕದ ರೀತಿಯಲ್ಲಿ ಕಾಣುತ್ತದೆ ಎನ್ನಲಾಗಿದೆ.

ಇಷ್ಟು ದಿನ ಕಲ್ಪನೆಗೆ ಮಾತ್ರ ನರಕ ಬಗ್ಗೆ ಮಾತನಾಡುತ್ತಿದ್ದ ಜನತೆಗೆ ವಾಸ್ತವತೆ ಬಗ್ಗೆ ತಿಳಿಸುವ ವಿಲಕ್ಷಣ ಗ್ರಹವೊಂದನ್ನು ಅನ್ವೇಷಿಸಿ ಅಚ್ಚರಿ ಮೂಡಿಸಿದ್ದಾರೆ. ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿರುವ ಆ ನರಕ ಗ್ರಹ 'Cancri 55 e' ಹೇಗಿದೆ, ವಾತಾವರಣ ಹೇಗಿದೆ, ಏಕೆ ನರಕ ಗ್ರಹ ಎನ್ನಲಾಗುತ್ತಿದೆ ಎಂಬ ಇತ್ಯಾದಿ ಅಚ್ಚರಿ ಮಾಹಿತಿಗಳನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

25 ವರ್ಷಗಳ ಕಾಲ ಗುಹೆಯೊಳಗಿದ್ದ 'ರಾ ಪಾಲೆಟ್ಟೆ': ಆಶ್ಚರ್ಯಕರ ಚಟುವಟಿಕೆ!!

ನರಕದ ರೀತಿಯಲ್ಲಿ ಕಾಣುವ ಗ್ರಹ

ನರಕದ ರೀತಿಯಲ್ಲಿ ಕಾಣುವ ಗ್ರಹ

ವಿಜ್ಞಾನಿಗಳು ಇತ್ತೀಚೆಗೆ ಕಂಡುಹಿಡಿದ ನರಕದ ರೀತಿಯಲ್ಲಿ ಕಾಣುತ್ತಿರುವ ಗ್ರಹ ಎರಡು ಮುಖಗಳನ್ನು ಹೊಂದಿದೆ ಅಥವಾ ಅರ್ಧಗೋಳವನ್ನು ಹೊಂದಿದೆ ಎನ್ನಲಾಗಿದೆ.

"Cancri 55 e"

ವಿಜ್ಞಾನಿಗಳು ಪತ್ತೆ ಹಚ್ಚಿರುವ ಗ್ರಹದ ಒಂದು ಭಾಗ ಸಂಪೂರ್ಣ ಕತ್ತಲೆಯಿಂದ ಆವರಿಸಿದೆ. ಇನ್ನೊಂದು ಭಾಗ ಕುದಿಯುವ ಲಾವಾವನ್ನು ಸಂಪೂರ್ಣವಾಗಿ ಹೊಂದಿದೆ.

"Cancri 55 e"

"Cancri 55 e" ಕುದಿಯುವ ಲಾವಾ ಇರುವ ಮುಖಭಾಗವೂ ಸೂರ್ಯನ ತಾಪವನ್ನು ಎದುರಿಸುತ್ತಿದ್ದು, ಅದರ ಶಾಖ 2,000 ಡಿಗ್ರಿ ಸೆಲ್ಸಿಯಸ್‌ ಇದೆ. ಅಲ್ಲದೇ ಸಂಪೂರ್ಣ ವಾತಾವರಣವು ಹೈಡ್ರೂಜನ್‌ ಸೈನೆಡ್‌ನಿಂದ ಸಂಯೋಜನೆ ಹೊಂದಿದೆ. ಇದರಲ್ಲಿನ ಅತ್ಯಧಿಕವಾದ ವಿಷ ಅನಿಲ ಒಡ್ಡುವಿಕೆಯಿಂದ ಕೇವಲ ಒಂದು ನಿಮಿಷದೊಳಗೆ ಸಾವು ಸಂಭವಿಸುತ್ತದೆ.

ನರಕ ಗ್ರಹ

ನರಕ ಗ್ರಹ

ಮಂಗಳ ಗ್ರಹ ಸೇರಿದಂತೆ ಇತರ ಕೆಲವು ಗ್ರಹಗಳು ಜೀವನಕ್ಕೆ ಆಧಾರವಾಗಿವೆ. ಆದರೆ ತೀವ್ರ ಬೆಂಕಿ ಮತ್ತು ಸಂಪೂರ್ಣ ಕತ್ತಲೆ ಹೊಂದಿರುವ "Cancri 55 e" ಗ್ರಹವು ನರಕ ಎಂಬುದಕ್ಕೆ ವಿವರಣೆ ನೀಡುತ್ತದೆ.

"Cancri 55 e"

"Cancri 55 e" ನರಕ ಗ್ರಹವು ಸೂರ್ಯನ ಚಲನೆಯಿಂದ ಸ್ಥಗಿತಗೊಂಡಿದೆ, ಹೇಗೆ ಭೂಮಿಯ ಚಲನೆಯಿಂದ ಚಂದ್ರ ಸ್ಥಗಿತಗೊಂಡಿದೆಯೋ ಹಾಗೆ. ಆದ್ದರಿಂದ ಗ್ರಹದ ಒಂದು ಭಾಗ ಎಲ್ಲಾ ಕಾಲದಲ್ಲೂ ಸುಡುತ್ತಿರುತ್ತದೆ. ಇದರಿಮದ ಖಾಯಂ ಆಗಿ ಸಂಪೂರ್ಣ ಕತ್ತಲೆ ಹೊಂದಿರುವ ಭಾಗ 1,500 ಡಿಗ್ರಿ ಸೆಲ್ಸಿಯಸ್‌ ತಾಪಮಾನವನ್ನು ಹೊಂದುವುದರಲ್ಲಿದೆ. ಕೇವಲ ಒಂದು ಸೆಕೆಂಡಿನಲ್ಲಿ ಮನುಷ್ಯನನ್ನು ನಾಶಮಾಡಬಹುದಾಗಿದೆ.

ಪ್ರಬಲ ರೇಡಿಯೇಷನ್

ಪ್ರಬಲ ರೇಡಿಯೇಷನ್

"Cancri 55 e" ನರಕ ಗ್ರಹವು ಪ್ರಬಲ ರೇಡಿಯೇಷನ್ ಅನ್ನು ಬಿಡುಗಡೆ ಮಾಡುತ್ತದೆ. ಈ ರೇಡಿಯೇಷನ್‌ ಅಲ್ಲಿನ ಅಪಾಯ ಸಂಭವಿಸಿದ ಸ್ಫೋಟ ಮತ್ತು ಅಂತರ್‌ ಸಿಡಿತದಿಂದ ಬಿಡುಗಡೆಯಾಗುತ್ತದೆ.

ಹೋಲಿಕೆ

ಹೋಲಿಕೆ

ಇಂತಹ ಹಲವು ಗ್ರಹಗಳು ಬಾಹ್ಯಾಕಾಶದಲ್ಲಿದ್ದು ಅವುಗಳಲ್ಲಿ "Cancri 55 e" ಗ್ರಹದ ರೀತಿಯ ತಾಪಮಾನ ಸಾಮಾನ್ಯವಾಗಿದ್ದು, ವಾಸಿಸಲು ಯಾವುವು ಸಹ ಯೋಗ್ಯವಿಲ್ಲ. ಬಾಹ್ಯಾಕಾಶದಲ್ಲಿ ಇದು ಸಾಮಾನ್ಯವಾಗಿದೆ. ಅಲ್ಲದೇ ಸೌರವ್ಯೂಹದಲ್ಲಿ ಬುಧ, ಶುಕ್ರ ಗ್ರಹಗಳು ಸಹ ಅಧಿಕವಾದ ತಾಪಮಾನ ಹೊಂದಿದ್ದು ಅವುಗಳ ಸಹ ನಮಗೆ ಯೋಗ್ಯವಲ್ಲ.

ಮಂಗಳ ಗ್ರಹ

ಮಂಗಳ ಗ್ರಹ

ಮಂಗಳ ಗ್ರಹವು ಸಹ ಆದರ್ಶ ವಾತಾವರಣಕ್ಕಿಂತ ಹೆಚ್ಚು ತಂಪು ವಾತಾವರಣ ಹೊಂದಿದೆ. ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಸಹ ಕಲ್ಲಿನ ಸಮುದಾಯ ಹೊಂದಿಲ್ಲ. ಆದರೆ ಅನಿಲ ಮತ್ತು ದ್ರವ ಉತ್ತಮ ತಂಪು ಹೊಂದಿವೆ. ಪ್ಲುಟೊ ಸಹ ಸಾಮಾನ್ಯ ತಾಪಮಾನ ಹೊಂದಿದ್ದು ಇದಕ್ಕೆ ಅನಿಲ ಗಟ್ಟಿತನ ಕಾರಣವಾಗಿದೆ.

ಭೂಮಿ

ಭೂಮಿ

ವಿಜ್ಞಾನಿಗಳು ಭೂಮಿಯಿಂದ ಬಿಲಿಯನ್‌ ಗಟ್ಟಲೇ ಕಿಲೋ ಮೀಟರ್‌ ದೂರದಲ್ಲಿರುವ ಗ್ರಹಗಳ ತಾಪಮಾನ ಮತ್ತು ಜೀವಿಸುವ ಸಾಧ್ಯತೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಭೂಮಿಯೇ ಇಂದು ಸಂತೋಷಪಟ್ಟು ಜೀವಿಸುವಷ್ಟು ಸಾಧ್ಯತೆಗಳನ್ನು ಎಲ್ಲಾ ರೀತಿಯಿಂದಲೂ ಕಳೆದುಕೊಳ್ಳುತ್ತಿದೆ.

ನರಕ ಗ್ರಹ

ವೀಡಿಯೋ ನೋಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

25 ವರ್ಷಗಳ ಕಾಲ ಗುಹೆಯೊಳಗಿದ್ದ 'ರಾ ಪಾಲೆಟ್ಟೆ': ಆಶ್ಚರ್ಯಕರ ಚಟುವಟಿಕೆ!!

ಪ್ರಪಂಚಕ್ಕೆ ಕೊಡುಗೆ ನೀಡಿದ ಭಾರತೀಯರ ಪ್ರಖ್ಯಾತ ಆವಿಷ್ಕಾರಗಳು

Most Read Articles
Kannada Gizbot - Page Not Found
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more

Read more about:
English summary
Hell Planet Founded; said Researchers. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more