ಪಾರ್ಶ್ವವಾಯುವಿಗೆ ತುತ್ತಾದ ಚಿಂಪಾಂಜಿಗೆ ಮರುಜೀವ ನೀಡಿದ ಸ್ಮಾರ್ಟ್‌ಫೋನ್

By Shwetha
|

ಸ್ಮಾರ್ಟ್‌ಫೋನ್ ಎಂಬ ಮಾಯಾಲೋಕ ಬಳಕೆದಾರರನ್ನು ಮೋಡಿ ಮಾಡುತ್ತಿದೆ. ಈಗ ಫೋನ್ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ ಅಂತೆಯೇ ಅದನ್ನು ಬಿಟ್ಟು ನಾವು ಇರುವುದೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ಸಾಮಾನ್ಯ ಫೋನ್ ಬಳಕೆದಾರರ ಸಂಗತಿಯಾದರೆ ಪ್ರಾಣಿಗಳಿಗೂ ನಮ್ಮ ಸ್ಮಾರ್ಟ್‌ಫೋನ್ ವರವಾಗಿದೆ ಎಂಬುದು ನಿಮಗೆ ಗೊತ್ತೇ?

ಓದಿರಿ: ರಾತ್ರಿ ವೇಳೆಯಲ್ಲಿ ಕಂಪ್ಯೂಟರ್ ಶಟ್‌ಡೌನ್ ಏಕೆ ಮಾಡಬೇಕು?

ಜಪಾನ್‌ನ ವಿಜ್ಞಾನಿಗಳು ಕಂಪ್ಯೂಟರ್ ಪ್ರೊಗ್ರಾಮ್ ಒಂದನ್ನು ಸಿದ್ಧಪಡಿಸಿದ್ದು ಮತ್ತು ಟಚ್ ಸ್ಕ್ರೀನ್ ಅನ್ನು ಬಳಸಿಕೊಂಡು ಪಾರ್ಶ್ವವಾಯುವಿಗೆ ತುತ್ತಾದ ಚಿಂಪಾಂಜಿಯನ್ನು ಪುನಃ ನಡೆಯುವಂತೆ ಮಾಡಿದ್ದಾರೆ. ನಿಜಕ್ಕೂ ಇದು ಆಶ್ವರ್ಯಕರವಾಗಿದ್ದರೂ ಸ್ಮಾರ್ಟ್‌ಫೋನ್‌ನ ಸ್ಕ್ರೀನ್ ಅಂತೂ ಜಾದೂವನ್ನೇ ಉಂಟುಮಾಡಿದೆ.

ಕಂಪ್ಯೂಟರ್‌ಗಳು ಮತ್ತು ಟಚ್ ಸ್ಕ್ರೀನ್‌ನೊಂದಿಗೆ ಸಂವಹನ

ಕಂಪ್ಯೂಟರ್‌ಗಳು ಮತ್ತು ಟಚ್ ಸ್ಕ್ರೀನ್‌ನೊಂದಿಗೆ ಸಂವಹನ

ಜಪಾನ್‌ನ ಕೊಯೊಟೊ ಯೂನಿವರ್ಸಿಟಿಯ ಸಂಶೋಧಕರು ಕಂಪ್ಯೂಟರ್‌ಗಳು ಮತ್ತು ಟಚ್ ಸ್ಕ್ರೀನ್‌ನೊಂದಿಗೆ ಸಂವಹನವನ್ನು ನಡೆಸಿದ್ದು ಸಂವೇದನೆ ಮತ್ತು ಸಸ್ತನಿ ಗ್ರಹಿಕೆ ಅಧ್ಯಯನವನ್ನು ಇದರ ಮೂಲಕ ನಡೆಸಿದ್ದರು.

ಲಕ್ವಾ

ಲಕ್ವಾ

ರಿಯೋ ಹೆಸರಿನ ಗಂಡು ಚಿಂಪಾಂಜಿ, ಕತ್ತಿನ ಕೆಳಭಾಗದಲ್ಲಿ ಲಕ್ವಾಗೆ ತುತ್ತಾಗಿತ್ತು. ಈ ತಂತ್ರಜ್ಞಾನವನ್ನು ಬಳಸಿಕೊಂಡು ಅದನ್ನು ಪುನಃ ನಡೆಯುವಂತೆ ಮಾಡುವ ಹೊಸ ತಂತ್ರಜ್ಞಾನವನ್ನು ವಿಜ್ಞಾನಿಗಳು ನಡೆಸಿದರು.

ಮೊದಲ ಚಿಂಪಾಂಜಿ

ಮೊದಲ ಚಿಂಪಾಂಜಿ

ಇಂತಹ ಪ್ರಯೋಗಕ್ಕೆ ಒಳಗಾದ ಮೊದಲ ಚಿಂಪಾಂಜಿ ಎಂಬ ಹೆಸರನ್ನು ರಿಯೋ ಪಡೆದುಕೊಂಡಿದ್ದು, ಪ್ರಯೋಗ ನಡೆಸಿದ ವಿಜ್ಞಾನಿಗಳು ಈ ಮಾದರಿಯನ್ನು ಯಶಸ್ಸನ್ನು ಪಡೆದುಕೊಂಡಿದ್ದಾರೆ.

ಬೆನ್ನು ಹುರಿ ಊತ

ಬೆನ್ನು ಹುರಿ ಊತ

2006 ರಲ್ಲಿ, 24 ರ ಹರೆಯದ ರಿಯೋನ ಬೆನ್ನು ಹುರಿ ಊತಗೊಂಡಿತ್ತು. ಮೊದಲ 10 ತಿಂಗಳುಗಳ ಕಾಲ, ರಿಯೋಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಕುಳಿತುಕೊಳ್ಳುವಷ್ಟು ಚೇತರಿಕೆಯನ್ನು ಅದು ಕಂಡುಕೊಂಡಿತ್ತು ನಂತರ ಹಗ್ಗವನ್ನು ಬಳಸಿಕೊಂಡು ಚಿಂಪಾಂಜಿಯನ್ನು ಎಳೆಯಲಾಗುತ್ತಿತ್ತು.

ತೀವ್ರ ಭೌತಚಿಕಿತ್ಸೆ

ತೀವ್ರ ಭೌತಚಿಕಿತ್ಸೆ

41 ತಿಂಗಳುಗಳ ತೀವ್ರ ಭೌತಚಿಕಿತ್ಸೆಯ ನಂತರ, ತನ್ನ ತೋಳುಗಳನ್ನು ಬಳಸಿ ಮಾತ್ರ ಏರುವಂತಾಗಿತ್ತು. ಇದನ್ನು ನೋಡಿಕೊಳ್ಳುವವರು ಚಿಂಪಾಂಜಿ ಪುನಃ ನಡೆಯುವಂತಾಗಬೇಕು ಎಂದು ಬಯಸಿದ್ದರು.

ಕಂಪ್ಯೂಟರ್ ನಿಯಂತ್ರಣ

ಕಂಪ್ಯೂಟರ್ ನಿಯಂತ್ರಣ

ಕಂಪ್ಯೂಟರ್ ನಿಯಂತ್ರಣಕ್ಕೆ ಒಳಪಟ್ಟ ಮಾನಿಟರ್ ಅನ್ನು ಗೋಡೆಯ ಮೇಲೆ ಲಗತ್ತಿಸಲಾಯಿತು, ಅರಿವಿನ ಕಾರ್ಯಗಳನ್ನು ಪುನಃ ಇದರ ಮೂಲಕ ನಡೆಸಲಾಯಿತು.

ರಿಯೋದಿಂದ ಪ್ರತ್ಯುತ್ತರ

ರಿಯೋದಿಂದ ಪ್ರತ್ಯುತ್ತರ

ಪ್ರಥಮ ಕಾರ್ಯದಲ್ಲಿ ಇದು ಯಶಸ್ಸನ್ನು ಪಡೆದುಕೊಳ್ಳಲಿಲ್ಲ, ರಿಯೋದಿಂದ ಪ್ರತ್ಯುತ್ತರವನ್ನು ಸಂಶೋಧಕರು ಪಡೆಯುವವರೆಗೆ ತಮ್ಮ ವಿಚಾರಗಳನ್ನು ಇವರುಗಳು ಏಳು ಬಾರಿ ಕಾರ್ಯಾಚರಿಸಿದರು.

2 ಮೀಟರ್

2 ಮೀಟರ್

ತಮ್ಮ ಕಾರ್ಯಾಚರಣೆಯನ್ನು ಇವರುಗಳು ಯಶಸ್ವಿಯಾಗಿ ಮುಗಿಸಿದ ನಂತರ, ಕೋಣೆಯ ಮುಂಭಾಗದಲ್ಲಿ ಆಹಾರವನ್ನು ಇರಿಸಲಾಯಿತು. ಇದರ ಹತ್ತಿರ ಬರಲು ರಿಯೋ ಕನಿಷ್ಟ ಪಕ್ಷ 2 ಮೀಟರ್ ನಡೆಯುವಂತೆ ಮಾಡಲಾಯಿತು.

ಹಗ್ಗದ ಸಹಾಯ

ಹಗ್ಗದ ಸಹಾಯ

ನಂತರದ ಕಾರ್ಯಾಚರಣೆಯಲ್ಲಿ ಪುನಃ ಹಿಂದಕ್ಕೆ ಎರಡು ಮೀಟರ್ ನಡೆಯುವಂತೆ ರಿಯೋವನ್ನು ಮಾಡಲಾಯಿತು. ಹಗ್ಗದ ಸಹಾಯದಿಂದ ರಿಯೋ ಮೊದಲಿಗೆ ಇದನ್ನು ನಡೆಸಿತು.

ಪೆಂಗ್ವಿನ್ ನಡೆ

ಪೆಂಗ್ವಿನ್ ನಡೆ

ನಂತರ ಪೆಂಗ್ವಿನ್ ನೆಲದಲ್ಲಿ ನಡೆಯುವಂತೆ ರಿಯೋ ಹಗ್ಗವನ್ನು ಬಳಸದೇ ಹಾಗೆಯೇ ನಡೆಯಲು ಪ್ರಯತ್ನಿಸಿತು. ಎರಡು ಗಂಟೆಗಳ ಅವಧಿಯಲ್ಲಿ 500 ಮೀಟರ್‌ಗಳವರೆಗೆ ನಡೆಯಲು ಇದು ಪ್ರಯತ್ನಿಸಿದೆ.

Best Mobiles in India

English summary
Japanese scientists have used a computer programme and a touch screen device to encourage a paralysed chimpanzee to walk again, showing that euthanasia need not be the only option for animals injured in captivity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X