ಒನ್‌ಪ್ಲಸ್‌ 5Tಗೆ ಟಾಂಗ್ ನೀಡಲು ಬಂದಿದೆ ''ಹಾನರ್ ವೀವ್ 10''!..29,999 ರೂ. ಮೊಬೈಲ್ ಫೀಚರ್ಸ್ ಇವು!!

Written By:

ಹುವಾವೆ ಒಡೆತನದ ನೆಚ್ಚಿನ ಬ್ರಾಂಡ್ ಹಾನರ್‌ನ ಮತ್ತೊಂದು ಹೈ ಫೀಚರ್ಸ್ ಫ್ಲಾಗ್‌ಶಿಪ್ ಫೋನ್ ಭಾರತದಲ್ಲಿ ಬಿಡುಗಡೆ ಮಾಡಿದೆ.! ಒನ್‌ಪ್ಲಸ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುವಂತಹ ಹೈ ಎಂಡ್‌ ''ಹಾನರ್ ವೀವ್ 10'' ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ.!!

ಅಮೆಜಾನ್‌ನಲ್ಲಿ ಇದೇ 8ನೇ ತಾರೀಖಿನಿಂದ ಹಾನರ್ ವೀವ್ 10 ಸ್ಮಾರ್ಟ್‌ಫೋನ್ ಅನ್ನು ಮಾರಾಟಕ್ಕಿಡಲಾಗಿದ್ದು, ಭಾರತದಲ್ಲಿ 29,999 ರೂಪಾಯಿಗಳಿಗೆ ಬಿಡುಗಡೆಯಾಗಿರುವ ''ಹಾನರ್ ವೀವ್ 10'' ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ವಿನ್ಯಾಸ.!!

ಡಿಸ್‌ಪ್ಲೇ ಮತ್ತು ವಿನ್ಯಾಸ.!!

ಹಾನರ್ ವೀವ್ 10 ಸ್ಮಾರ್ಟ್‌ಫೋನ್ 18:9 ರೆಷ್ಯೂವಿನ (1080x2160 ಪಿಕ್ಸೆಲ್) 5.99 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಮುಂಬಾಗದಲ್ಲಿ ಫಿಂಗ್ರಪ್ರಿಂಟ್ ಕ್ಯಾಮೆರಾ ಹಾಗೂ ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿರುವ ಹಾನರ್ ವೀವ್ 10 ಕ್ರಾಸ್ ಎಡ್ಜ್ ವಿನ್ಯಾಸಕ್ಕೆ ಎಲ್ಲರೂ ಮನಸೋಲುವಂತಿದೆ.!!

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

6GB RAM ಮತ್ತು 128GB ವೆರಿಯಂಟ್‌ನಲ್ಲಿ ಹಾನರ್ ವೀವ್ 10 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. 1.8GHz ಆಕ್ಟಕೋರ್ ಕಿರಿನ್ 970 ಚಿಪ್‌ಸೆಟ್ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಜವಬ್ದಾರಿ ನೋಡಿಕೊಳ್ಳಲಿದ್ದು, EMUI 8.0 ಬೇಸ್‌ನಲ್ಲಿ ಆಂಡ್ರಾಯ್ಡ್ ಓರಿಯೋ ಮೂಲಕ ಚಿಪ್‌ಸೆಟ್ ಕಾರ್ಯನಿರ್ವಹಣೆ ಅತ್ಯುತ್ತಮವಾಗಿರಲಿದೆ.!!

ಕ್ಯಾಮೆರಾ ಫೀಚರ್ಸ್ ಹೇಗಿದೆ?

ಕ್ಯಾಮೆರಾ ಫೀಚರ್ಸ್ ಹೇಗಿದೆ?

16MP ಪ್ರೈಮರಿ RGB ಸೆನ್ಸಾರ್ ಹಾಗೂ 20MP ಸೆಕೆಂಡರಿ ಮಾನೊಕ್ರೋಮ್ ಸೆನ್ಸಾರ್ ಕ್ಯಾಮೆರಾಗಳು ಹಾನರ್ ವೀವ್ 10 ಸ್ಮಾರ್ಟ್‌ಫೋನ್ ರಿಯರ್ ಕ್ಯಾಮೆರಾದ ಅದ್ಬುತ ವಿಶೇಷತೆಗಳಾಗಿವೆ. ಇನ್ನು 13MP ಸೆಲ್ಫಿ ಕ್ಯಾಮೆರಾ ಅತ್ಯುತ್ತಮ ಸೆಲ್ಫಿ ತೆಗೆಯುವುದರ ಜೊತೆಗೆ ಫೇಸ್‌ಲಾಕ್‌ ಕಾರ್ಯವನ್ನು ನೋಡಿಕೊಳ್ಳಲಿದೆ.!!

ಬ್ಯಾಟರಿ ಶಕ್ತಿ ಹೇಗಿದೆ?

ಬ್ಯಾಟರಿ ಶಕ್ತಿ ಹೇಗಿದೆ?

ಹಾನರ್ ವೀವ್ 10 3750mAh ಶಕ್ತಿಯ ತೆಗೆಯಲಾರದ ಬ್ಯಾಟರಿಯನ್ನು ಹೊಂದಿದೆ. ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಜೊತೆಗೆ ಅತ್ಯುತ್ತಮ 9V / 2A ಚಾರ್ಜರ್ ಫೋನ್‌ ಜೊತೆಗಿರುವುದರಿಂದ ಕೇವಲ 20 ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್ ಪೂರ್ತಿ ಚಾರ್ಜ್ ಆಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.!!

ಇತರೆ ಎಲ್ಲಾ ಫೀಚರ್ಸ್!!

ಇತರೆ ಎಲ್ಲಾ ಫೀಚರ್ಸ್!!

ಹೈ ಎಂಡ್ ಸ್ಮಾರ್ಟ್‌ಫೋನ್‌ಗಳು ಹೊಂದಿರಬಹುದಾದ ಎಲ್ಲಾ ಫೀಚರ್ಸ್‌ಗಳನ್ನು ಹಾನರ್ ವೀವ್ 10 ಸ್ಮಾರ್ಟ್‌ಫೋನ್ ಹೊಂದಿದ್ದು, ಡಿಜಿಟಲ್ ಕಂಪಾಸ್, ಆಂಬಿಯೆಂಟ್ ಲೈಟ್ ಸೆನ್ಸರ್, ಅಕ್ಸೆಲೆರೊಮೀಟರ್ ನಂತಹ ಹೆಚ್ಚಿನ ಫೀಚರ್‌ಗಳು ಸ್ಮಾರ್ಟ್‌ಫೋನ್ ಅಂದವನ್ನು ಹೆಚ್ಚಿಸಿವೆ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Honor today announced the price of its flagship smartphone.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot