ಸ್ಮಾರ್ಟ್ ಹೋಮ್ ವಸ್ತುಗಳನ್ನು ಬಳಸುವಾಗ ಎಚ್ಚರ..!

By: lekhaka

ಇಂದು ಭಾರತೀಯ ಮಾರುಕಟ್ಟೆಯಲ್ಲಿ ವಾಯ್ಸ್ ಬೆಸ್ಡ್ ಸ್ಮಾರ್ಟ್ ಸ್ಪೀಕರ್ ಗಳ ಹಾವಳಿಯೂ ಹೆಚ್ಚಾಗುತ್ತಿದೆ. ಮಾರುಕಟ್ಟೆಯಲ್ಲಿ ಅಮೆಜಾನ್ ಇಕೋ ಸರಣಿಯ ಸ್ಮಾರ್ಟ್ ಸ್ವೀಕರ್ ಗಳು ಸದ್ದು ಶುರು ಮಾಡಿವೆ, ಅಲ್ಲದೇ ಗೂಗಲ್ ತನ್ನ ಹೋಮ್ ಸ್ಮಾರ್ಟ್ ಸ್ಪೀಕರ್ ಅನ್ನು ಶೀಘ್ರವೇ ಮಾರಾಟ ಮಾಡಲಿದೆ. ಅಲ್ಲದೇ ಆಪಲ್ ಸಹ ಹೋಮ್ ಪಾಡ್ ಬಿಡುಗಡೆಯ ಸನಿಹದಲ್ಲಿ. ಜೊತೆಗೆ ಶಿಯೋಮಿ ಸಹ ತನ್ನದೇ ಸ್ಮಾರ್ಟ್ ಸ್ಪೀಕರ್ ಅನ್ನು ಲಾಂಚ್ ಮಾಡಲಿದೆ ಎನ್ನುವ ಸುದ್ದಿ ಲಭ್ಯವಾಗಿದೆ.

ಸ್ಮಾರ್ಟ್ ಹೋಮ್ ವಸ್ತುಗಳನ್ನು ಬಳಸುವಾಗ ಎಚ್ಚರ..!

ಹೀಗೆ ದಿನಕ್ಕೊಂದು ಸ್ಮಾರ್ಟ್ ಸ್ಪೀಕರ್ ಗಳು ನಮ್ಮ ಮನೆಯನ್ನು ಸೇರುತ್ತಿರುವ ಸಂದರ್ಭದಲ್ಲಿಯೇ ಸ್ಮಾರ್ಟ್ ಹೋಮ್ ಕಲ್ಪನೆ ಗರಿಗೆದರಿದೆ. ಇದರಿಂದಾಗಿ ಹ್ಯಾಕರ್ ಗಳು ಸಹ ನಮ್ಮ ಮನೆಯನ್ನು ಸುಲಭವಾಗಿ ಪ್ರವೇಶಿಸಬಹುದಾಗಿದೆ. ಮೂಲಗಳ ಪ್ರಕಾರ ಸ್ಮಾರ್ಟ್ ಸ್ಪೀಕರ್ ಗಳನ್ನು ಹ್ಯಾಕ್ ಮಾಡುವುದು ಸುಲಭವಾಗಿದ್ದು, ನಮ್ಮ ಖಾಸಗಿ ಮಾಹಿತಿಗಳನ್ನು ಕದಿಯಬಹುದಾಗಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್ ಸ್ಪೀಕರ್ ಗಳಿದ್ದರೆ ಹ್ಯಾಕರ್ ಗಳನ್ನು ಎನು ಮಾಡಬಹುದು ಎನ್ನುವುದರ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಮಾತುಗಳನ್ನು ಕೇಳಬಹುದು:

ನಿಮ್ಮ ಮಾತುಗಳನ್ನು ಕೇಳಬಹುದು:

ನೀವು ನಿಮ್ಮ ಸ್ಮಾರ್ಟ್ ಸ್ಪೀಕರ್ ನಲ್ಲಿರುವ ವಾಯ್ಸ್ ಅಸಿಸ್ಟೆಂಟ್ ನೊಂದಿಗೆ ಮಾತನಾಡುವ ಪ್ರತಿಯೊಂದು ವಿಚಾರವನ್ನು ಹ್ಯಾಕರ್ ಗಳು ಕೇಳಿಸಿಕೊಳ್ಳಬಹುದಾಗಿದೆ, ಅಲ್ಲದೇ ಅಮೆಜಾನ್ ಮತ್ತು ಗೂಗಲ್ ಗಳು ನಿಮ್ಮ ಮಾತು ಕತೆಯನ್ನು ರೆಕಾರ್ಡ್ ಸಹ ಮಾಡಿಕೊಳ್ಳುತ್ತವೆ ಎನ್ನಲಾಗಿದೆ.

ನಿಮ್ಮನ್ನು ನೋಡಬಹುದು:

ನಿಮ್ಮನ್ನು ನೋಡಬಹುದು:

ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ವಿಡಿಯೋ ಅಸಿಸ್ಟೆಂಟ್ ಗಳು ಬರುತ್ತಿದ್ದು ಅದರಲ್ಲಿ ಇರುವ ಕ್ಯಾಮೆರಾವನ್ನು ಬಳಕೆ ಮಾಡಿಕೊಂಡು ನೀವು ಮನೆಯಲ್ಲಿ ಏನು ಮಾಡುತ್ತೀದ್ದಿರಾ ಎನ್ನುವುದನ್ನು ಕದ್ದು ನೋಡುವ ಸಾಧ್ಯತೆ ಸಹ ಇದೆ ಎನ್ನಲಾಗಿದೆ. ಇದರಿಂದಾಗಿ ಅತೀ ಎಚ್ಚರ ವಹಿಸುವುದು ಅಗತ್ಯ.

ಶುರುವಾಯಿತು ವಾಟ್ಸ್‌ಆಪ್ ಪೇಮೆಂಟ್ ಸೇವೆ..! ನಿಮ್ಮ ಮೊಬೈಲ್‌ಗೂ ಬಂದಿದೆಯೇ ಚೆಕ್ ಮಾಡಿ..!

ನಿಮ್ಮ ಮನೆಗೆ ಎಂಟ್ರಿ ಪಡೆಯಬಹುದು:

ನಿಮ್ಮ ಮನೆಗೆ ಎಂಟ್ರಿ ಪಡೆಯಬಹುದು:

ಈಗಾಗಲೇ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಲಾಕ್ ಗಳು ಕಾಣಿಸಿಕೊಂಡಿದ್ದು, ಇವುಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದಾಗಿದೆ, ಹ್ಯಾಕರ್ ಗಳು ಸುಲಭವಾಗಿ ನಿಮ್ಮ ಮನೆಗೆ ನುಸುಳಿ ಇದ್ದ ಎಲ್ಲಾ ವಸ್ತುಗಳನ್ನು ದೊಚುವ ಸಾಧ್ಯತೆ ಸಹ ಇದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Many devices from reputable manufacturers have safeguards built in, but those can't guarantee against hacks. Gadgets from startups and no-name brands may offer little or no protection. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot