Subscribe to Gizbot

ಜಿಯೋ ಲೈಫ್‌ಟೈಮ್ ಉಚಿತ ಸೇವೆ ಏಕೆ ನೀಡುತ್ತಿದೆ ಗೊತ್ತಾ? ಕಾರಣ ಇಲ್ಲಿದೆ !!

Written By:

ಇತ್ತೀಚಿಗೆ ಬಂದಿರುವ ವರದಿಗಳ ಪ್ರಕಾರ ಜಿಯೋ ಲೈಫ್‌ಟೈಮ್ ಉಚಿತ ಸೇವೆಯನ್ನು ನೀಡಲಿದೆ.!..ಮಾಚ್‌ 31 ನಂತರ ಜಿಯೋ ಹೊಸ ಘೋಷನೆಯನ್ನು ಹೊರಡಿಸಲಿದ್ದು ಕಲ್ ಮತ್ತು ಡೇಟಾವನ್ನು ಸಂಪೂರ್ಣ ಉಚಿತವಾಗಿ ನಿಡುತ್ತದೆ ಎಂಬ ವದಂತಿ ಹರಿದಾಡಿದೆ.!!

ಜಿಯೋ ಬಗ್ಗೆ ಹೊರಬೀಳುವ ಎಲ್ಲಾ ವದಂತಿಗಳು ಜಿಯೋನೆ ಹಬ್ಬಿಸುತ್ತದೆ ಎನ್ನುವ ಮಾತು ಟೆಲಿಕಾಂನಲ್ಲಿ ಹರಿದಾಡಿದ್ದು, ಬಹುತೇಕ ಜಿಯೋವಿನ ಎಲ್ಲಾ ಸುದ್ದಿಗಳು ನಿಜವಾಗಿವೆ.!! ಹಾಗಾಗಿ, ಇದೀಗ ಬಂದಿರುವ ಸುದ್ದಿಯ ಪ್ರಕಾರ ಜಿಯೋ ಲೈಫ್‌ಟೈಮ್ ಉಚಿತ ಸೇವೆ ನಿಡಲಿದೆ ಎಂಬುದು ಸತ್ಯಕ್ಕೆ ಹತ್ತಿರ ಎನ್ನಬಹುದು.

ಜಿಯೋ ಪ್ರೈಮ್ ಆಫರ್; 2018ರ ವರೆಗೂ ಮುಂದುವರೆಯಲಿದೆ ಜಿಯೋ ಉಚಿತ ಸೇವೆ..!!!

ಹಾಗಾದರೆ, ಜಿಯೋ ಏಕೆ ಉಚಿತವಾಗಿ ಸೇವೆ ನೀಡುತ್ತಿದೆ. ಇದರಿಂದ ಅಂಬಾನಿಗೆ ಲಾಸ್ ಆಗುವುದಿಲ್ಲವೇ ಎಂದು ಎಲ್ಲರೂ ಯೋಚಿಸುತ್ತಾರೆ. ಆದರೆ, ನಿಜ ಸಂಗತಿ ಎಂದರೆ ಲೈಫ್‌ಟೈಮ್ ಉಚಿತ ಸೇವೆ ನಿಡಿದರೂ ಜಿಯೋಗೆ ಲಾಸ್‌ ಆಗುವುದಿಲ್ಲ.!! ಹೇಗೆ ಗೊತ್ತಾ? ಅದಕ್ಕೆ 5 ಕಾರಣಗಳಿವ..!! ಅವುಗಳು ಯಾವುವು ಎಂಬುದನ್ನು ತಿಳಿಯಲು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜನರ ದುಡ್ಡಿಗಿಂತ ಜಾಹಿರಾತು ಬೆಲೆ ಜಾಸ್ತಿ.!!

ಜನರ ದುಡ್ಡಿಗಿಂತ ಜಾಹಿರಾತು ಬೆಲೆ ಜಾಸ್ತಿ.!!

ಆನ್‌ಲೈನ್ ಮಾರುಕಟ್ಟೆಯಲ್ಲಿ ಉಚಿತ ಸೇವೆ ನೀಡುತ್ತಿರುವ ಹಲವು ಸೈಟ್‌ಗಳಿವೆ. ಉದಾಹರಣೆಗೆ ಪೇಟಿಎಂ ತೆಗೆದುಕೊಳ್ಳಿ. ಜನರಿಂದ ಒಂದೇ ಒಂದು ರೂಪಾಯಿಯನ್ನು ತೆಗೆದುಕೊಳ್ಳದೇ ಸಾವಿರಾರು ಕೋಟಿ ಆದಾಯವನ್ನು ಹೇಗೆ ಗಳಿಸುತ್ತದೆ ಎಂಬುದು ನಿಮಗೆ ಗೊತ್ತಿದಿಯಾ? ಇದೇ ತಂತ್ರವನ್ನು ಜಿಯೋ ಹಾಕಿಕೊಂಡಿದೆ. ಹಾಗಾಗಿ, ಜಿಯೋ ಟೆಲಿಕಾಂನಲ್ಲಿ ಲೈಫ್‌ಟೈಮ್ ಉಚಿತ ಸೇವೆಯನ್ನು ನಿಡುತ್ತದೆ.

ಜಿಯೋ ಸೇವೆಗಳನ್ನು ಎಲ್ಲರೂ ಬಳಸಲೇಬೇಕು!!

ಜಿಯೋ ಸೇವೆಗಳನ್ನು ಎಲ್ಲರೂ ಬಳಸಲೇಬೇಕು!!

ಜಿಯೋವಿನ ಉಚಿತ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಬೇಕು ಎಂದರೆ ಜಿಯೋ ಸೇವೆಗಳಾದ ಜಿಯೋ ಮೂವಿ, ಜಿಯೋ ಚಾಟ್ ಮತ್ತು ಇತರ ಎಲ್ಲಾ ಸೇವೆಗಳನ್ನಿ ಜಿಯೋ ಗ್ರಾಹಕರು ಬಳಸಲೇಬೇಕು. ಇದು ಜಿಯೋವಿನ ಮೊದಲ ಟ್ರಿಕ್. ಈ ರೀತಿ ಬಳಸಿದರೆ ದೇಶದಲ್ಲಿರುವ ಎಲ್ಲಾ ಆನ್‌ಲೈನ್‌ ಸೇವಾ ಕಂಪೆನಿಗಳನ್ನು ಮೀರಿ ಜಿಯೋ ಬೆಳೆಯುತ್ತದೆ. ಇದರಿಂದ ಸಾವಿರಾರು ಕೊಟಿ ಆದಾಯವನ್ನು ಜಿಯೋ ಪಡೆಯುತ್ತದೆ.

ಜಿಯೋ ನೆಟ್‌ವರ್ಕ್ ಜಿಯೋ ಲೈಫ್!!

ಜಿಯೋ ನೆಟ್‌ವರ್ಕ್ ಜಿಯೋ ಲೈಫ್!!

ಸಾಮಾಜಿಕ ಶಾಪಿಂಗ್ ಜಾಲತಾಣಗಳಾದ ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಂತೆಯೇ ಜಿಯೋ ಸಹಸಂಸ್ಥೆ ರಿಲಾಯನ್ಸ್ ಮಾರ್ಟ್ ಕೂಡ ಆನ್‌ಲೈನ್ ಶಾಪಿಂಗ್ ಜಾಲತಾಣವನ್ನು ಹೊಂದಿದೆ. ಇದು ಮುಂದೆ ಜಿಯೋ ಶಾಪಿಂಗ್ ಜಾಲತಾಣವಾಗಿ ಬದಲಾಗಿ, ತನ್ನೆಲ್ಲಾ ವ್ಯವಹಾರಗಳನ್ನು ಜಿಯೋ ತನ್ನ ನೆಟ್‌ವರ್ಕ್‌ನಲ್ಲಿಯೇ ನಡೆಸುತ್ತದೆ . ಇನ್ನು ರಿಲಾಯನ್ಸ್ ಶಾಪಿಂಗ್ ಸಹ ಜಿಯೋ ಮೂಲಕ ನಡೆಯುತ್ತದೆ ಇದರಿಂದ ಜಿಯೋ ಆದಾಯ ದುಪ್ಪಟ್ಟಾಗುತ್ತದೆ.

ಜಿಯೋ ಕ್ಯಾಬ್.!!

ಜಿಯೋ ಕ್ಯಾಬ್.!!

ತನ್ನದೇ ಅತ್ಯುತ್ತಮ ನೆಟ್‌ವರ್ಕ್ ಹೊಂದಿರುವ ಜಿಯೋ ಮಾರ್ಚ್‌ಗೆ ಜಿಯೋ ಕ್ಯಾಬ್ ಸೇವೆಯನ್ನು ಶುರುಮಾಡಲಿದೆ. ಹಾಗಾಗಿ, ಜಿಯೋ ಕ್ಯಾಬ್ ಸರ್ವಿಸ್ ಬಹಳ ಕಡಿಮೆಗೆ ಜನರಿಗೆ ದೊರೆಯಲಿದ್ದು, ಇದರಿಂದ ಜಿಯೋಗೂ ಅಪಾರ ಲಾಭವಾಗುತ್ತದೆ.!!

ಫೆಸ್‌ಬುಕ್‌ ಆರ್ಭಟಕ್ಕೆ ಬ್ರೇಕ್

ಫೆಸ್‌ಬುಕ್‌ ಆರ್ಭಟಕ್ಕೆ ಬ್ರೇಕ್

ಭಾರತೀಯ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಗಳಿಸಿರುವ ಫೇಸ್‌ಬುಕ್ ಮತ್ತು ವಾಟ್ಸ್ಆಪ್‌ಗೆ ಬ್ರೇಕ್ ಹಾಕಲು ಜಿಯೋ ಚಿಂತಿಸಿದೆ. ವರ್ಷಕ್ಕೆ ನೂರಾರು ಕೋಟಿ ಆದಾಯ ಗಳಿಸುವ ಫೇಸ್‌ಬುಕ್ ಮತ್ತು ವಾಟ್ಸ್ಆಪ್ ಮಟ್ಟಹಾಕಿ. ಜಿಯೋ ನೆಟ್‌ವರ್ಕ್ ಮೂಲಕ ಜಿಯೋ ಬಕ್ ತೆರೆದು ಉಚಿತ ಸೇವೆ ನೀಡಿದರೆ ಫೇಸ್‌ಬುಕ್ ಬಳಕೆಯನ್ನು ಬಿಡುತ್ತಾರೆ ಎನ್ನುವುದು ಜಿಯೋವಿನ ಲೆಕ್ಕಾಚಾರ. ಇದರಿಂದ ಅಂಬಾನಿಸಾವಿರಾರು ಕೊಟಿ ಆದಾಯ ಗಳಿಸುತ್ತಾರೆ.

ಆನ್‌ಲೈನ್‌ನಲ್ಲಿ 30 ರೂ.ಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಹೇಗೆ? ಫುಲ್‌ ಡೀಟೆಲ್ಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Reliance Jio shook Indian Telecom with its great offers providing free voice calling and unlimited data plan until. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot