ಸೂರ್ಯನ ಗಾತ್ರವನ್ನೇ ಮೀರಿಸಿದ ಅತಿ ದೊಡ್ಡ ಒಂಭತ್ತು ನಕ್ಷತ್ರಗಳು

By Shwetha
|

ಒಂಭತ್ತು ನಕ್ಷತ್ರಗಳು ಸೂರ್ಯನಿಗೆ ಸವಾಲು ಹಾಕುವಷ್ಟು ಗಾತ್ರದಲ್ಲಿ ದೊಡ್ಡದಾಗಿವೆ ಎಂಬುದಾಗಿ ಹಬ್ಬಲ್ ಸ್ಪೇಸ್ ಟೆಲಿಸ್ಕೋಪ್ ಪತ್ತೆಹಚ್ಚಿದೆ. ಇದುವರೆಗೆ ಈ ನಕ್ಷತ್ರಗಳೇ ಅತಿ ದೊಡ್ಡದಾಗಿದ್ದು ಇವುಗಳ ಗಾತ್ರಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಹಬ್ಬಲ್ ಸ್ಪೇಸ್ ಟೆಲಿಸ್ಕೋಪ್ ಭೂಮಿಯಿಂದ 170,000 ಜ್ಯೋತಿರ್ವರ್ಷಗಳ ಅಂತರದಲ್ಲಿರುವ ಈ ನಕ್ಷತ್ರಗಳ ಫೋಟೋಗಳನ್ನು ಸೆರೆಹಿಡಿದಿದ್ದು R.136 ಎಂಬುದಾಗಿ ಇದನ್ನು ಹೆಸರಿಸಲಾಗಿದೆ. ಈ ಪ್ರತಿಯೊಂದು ನಕ್ಷತ್ರಗಳು ಸೂರ್ಯನಿಗಿಂತಲೂ ಗಾತ್ರದಲ್ಲಿ ಹಿರಿದಾಗಿವೆ. ಇವುಗಳೆಲ್ಲವನ್ನೂ ಒಟ್ಟಾಗಿಸಿ ನೋಡಿದಾಗ ಸೂರ್ಯನಿಗಿಂತಲೂ 30 ಮಿಲಿಯನ್‌ಗಿಂತಲೂ ಅಧಿಕವಾಗಿ ಇವುಗಳು ಹೊಳೆಯಲಿವೆ ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

#1

#1

ಇದುವರೆಗೆ ಪತ್ತೆಮಾಡಲಾದ ನಕ್ಷತ್ರಗಳಲ್ಲೇ ಅತ್ಯಂತ ಹಿರಿದಾದುದು ಎಂಬ ಹಣೆಪಟ್ಟಿಯನ್ನು ಈ ನಕ್ಷತ್ರಗಳು ಪಡೆದುಕೊಂಡಿವೆ.
ಕೃಪೆ:ನಾಸಾ

#2

#2

ಸಣ್ಣ ಸಣ್ಣ ನಕ್ಷತ್ರಗಳು ಒಟ್ಟಾಗಿ ಈ ದೊಡ್ಡ ನಕ್ಷತ್ರಗಳು ರೂಪುಗೊಳ್ಳುತ್ತವೆ ಎಂಬುದಾಗಿ ದಾಖಲೆಗಳಿದ್ದರೂ R136 ವಿಷಯದಲ್ಲಿ ಹೀಗೆ ನಡೆದಿಲ್ಲ. ನಕ್ಷತ್ರ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಇಂತಹ ನಕ್ಷತ್ರಗಳು ಜನ್ಮತಾಳಿವೆ ಎಂಬುದು ಈ ವಿಜ್ಞಾನಿಗಳ ವಾದವಾಗಿದೆ.
ಕೃಪೆ:ನಾಸಾ

#3

#3

ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿ ಕೇವಲ ಕೆಲವೇ ನಕ್ಷತ್ರಗಳು ಮಾತ್ರ ಈ ಗಾತ್ರದಲ್ಲಿರುತ್ತವೆ ಎಂಬುದು ನಾಸಾ ಅಭಿಪ್ರಾಯವಾಗಿದೆ.
ಕೃಪೆ:ನಾಸಾ

#4

#4

ಇನ್ನು ಅಧ್ಯಯನಗಳ ಪ್ರಕಾರ ಈ ನಕ್ಷತ್ರಗಳ ಜೀವಿತಾವಧಿ ಅತಿ ಕಡಿಮೆ ಸಮಯವಾಗಿದೆ. ಸೂರ್ಯನು 10 ಬಿಲಿಯನ್ ವರ್ಷಗಳ ಜೀವಿತಾವಧಿಯನ್ನು ಪಡೆದುಕೊಂಡಿದ್ದರೆ, ಈ ನಕ್ಷತ್ರಗಳು ಕೇವಲ 2 ರಿಂದ 3 ಮಿಲಿಯನ್‌ಗಳವರೆಗೆ ಮಾತ್ರ ಬದುಕುತ್ತವೆ.
ಕೃಪೆ:ನಾಸಾ

#5

#5

ಈ ನಕ್ಷತ್ರಗಳು ತಮ್ಮ ಜೀವಿತಾವಧಿಯ ಕೊನೆಯ ಹಂತದಲ್ಲಿವೆ ಎಂಬುದಾಗಿ ಸುದ್ದಿ ತಿಳಿದು ಬಂದಿದೆ.
ಕೃಪೆ:ನಾಸಾ

#6

#6

ನಕ್ಷತ್ರಗಳು ಒಂದಕ್ಕೊಂದು ಬಹು ಸಮೀಪದಲ್ಲಿದ್ದರೆ, ಒಂದಕ್ಕೊಂದು ಡಿಕ್ಕಿ ಹೊಡೆದು ಗುರುತ್ವ ಅಲೆಗಳುಂಟಾಗಿ ಅವುಗಳು ಕಪ್ಪು ರಂಧ್ರಗಳಾಗಿ ಕುಸಿತಗೊಳಗಾಗುತ್ತವೆ ಎಂಬುದಾಗಿ ನಾಸಾ ಹೇಳಿಕೆ ನೀಡಿದೆ.
ಕೃಪೆ:ನಾಸಾ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಗುಡ್‌ಬಾಯ್‌ ಹೇಳಿ ಟ್ರಾಫಿಕ್‌ ಜಾಮ್‌ಗೆ, ಹಾಯ್‌ ಹೇಳಿ ಪಾಡ್‌ ಟ್ಯಾಕ್ಸಿಗೆ</a><br /><a href=ಮಂಗಳನಲ್ಲಿ ಮಾನವನ ವಾಸ- ಸಾಧ್ಯತೆಗಳು ಅಸಾಧ್ಯತೆಗಳು
ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?" title="ಗುಡ್‌ಬಾಯ್‌ ಹೇಳಿ ಟ್ರಾಫಿಕ್‌ ಜಾಮ್‌ಗೆ, ಹಾಯ್‌ ಹೇಳಿ ಪಾಡ್‌ ಟ್ಯಾಕ್ಸಿಗೆ
ಮಂಗಳನಲ್ಲಿ ಮಾನವನ ವಾಸ- ಸಾಧ್ಯತೆಗಳು ಅಸಾಧ್ಯತೆಗಳು
ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?" />ಗುಡ್‌ಬಾಯ್‌ ಹೇಳಿ ಟ್ರಾಫಿಕ್‌ ಜಾಮ್‌ಗೆ, ಹಾಯ್‌ ಹೇಳಿ ಪಾಡ್‌ ಟ್ಯಾಕ್ಸಿಗೆ
ಮಂಗಳನಲ್ಲಿ ಮಾನವನ ವಾಸ- ಸಾಧ್ಯತೆಗಳು ಅಸಾಧ್ಯತೆಗಳು
ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

ಫೇಸ್‌ಬುಕ್ ಪುಟ

ಫೇಸ್‌ಬುಕ್ ಪುಟ

ನಮ್ಮ ಕನ್ನಡ.ಗಿಜ್‌ಬಾಟ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
There is a cluster of nine supermassive stars that puts our biggest, the Sun, to shame. This is huge because until now, astronomers didn't even know that stars could get as big.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X