ಶಾಂಘೈನ ಆಪಲ್ ಫ್ಯಾಕ್ಟ್ರಿಯ ಅತಿ ರಹಸ್ಯ ಅಂಶಗಳು

Written By:

ಐಫೋನ್ ತಯಾರಿಕಾ ಕಂಪೆನಿ ಎಷ್ಟು ರಹಸ್ಯಮಯವಾಗಿರುತ್ತದೆ ಎಂಬುದು ನಿಮಗೆ ಗೊತ್ತೇ? ಪಿಂಕ್ ಬಣ್ಣದ ಜಾಕೆಟ್‌ಗಳನ್ನು ಧರಿಸಿರುವ ಇಲ್ಲಿನ ಉದ್ಯೋಗಿಗಳು ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಟ್ಟಿರಬೇಕು. ಉದ್ಯೋಗಕ್ಕೆ ಹಾಜರಾದೊಡನೆ ಅವರ ಸೂಪರ್ ವೈಸರ್ ಐಪ್ಯಾಡ್‌ನಿಂದ ತಮ್ಮ ಐಡಿ ಕಾರ್ಡ್ ಅನ್ನು ಸ್ಕ್ಯಾನ್ ಮಾಡಿಸಿಕೊಳ್ಳಬೇಕಾಗುತ್ತದೆ. ಇಲ್ಲಿಂದ ನಂತರ ಸಾಲು ಮಾಡಿ ಮುಖಚರ್ಯೆ ಗುರುತು ಪರೀಕ್ಷೆಗೆ ಹಾಜರಾಗಬೇಕು.

ಶಾಂಘೈನಲ್ಲಿರುವ ಐಫೋನ್ ಫ್ಯಾಕ್ಟ್ರಿಯಲ್ಲಿ 50,000 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು ಇದು 90 ಫುಟ್‌ಬಾಲ್ ಕ್ಷೇತ್ರವನ್ನು ಕವರ್ ಮಾಡುವಷ್ಟು ವಿಶಾಲವಾಗಿದೆ. ಹಾಗಿದ್ದರೆ ಈ ಫ್ಯಾಕ್ಟ್ರಿಯಲ್ಲಿ ಇನ್ನು ಯಾವ ಯಾವ ತರಹದ ಭದ್ರತಾ ಪರೀಕ್ಷೆಗಳು ನಡೆಯುತ್ತವೆ ಎಂಬುದನ್ನು ಅರಿತುಕೊಳ್ಳುವ ಕುತೂಹಲವೇ. ಇಂದಿನ ಲೇಖನದಲ್ಲಿ ಈ ಎಲ್ಲಾ ಮಾಹಿತಿಗಳನ್ನು ನಾವು ನೀಡುತ್ತಿದ್ದು ಖಂಡಿತ ಈ ಅಂಶಗಳು ನಿಮ್ಮನ್ನು ದಂಗುಬಡಿಸುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌ಗಾಗಿ ಐಫೋನ್‌

ಆಪಲ್‌ಗಾಗಿ ಐಫೋನ್‌

#1

ಶಾಂಘೈನಲ್ಲಿರುವ ಪೆಗಾಟ್ರನ್ ಫ್ಯಾಕ್ಟ್ರಿಯಲ್ಲಿ ರೋಲ್‌ ಕಾಲ್‌ಗಾಗಿ ನೂರಕ್ಕಿಂತಲೂ ಹೆಚ್ಚು ಜನ ಸೇರಿದ್ದು ಆಪಲ್‌ಗಾಗಿ ಐಫೋನ್‌ಗಳನ್ನು ಇಲ್ಲಿ ತಯಾರಿಸಲಾಗುತ್ತದೆ.ಚಿತ್ರಕೃಪೆ:Bloomberg via getty images

ಕಟ್ಟುನಿಟ್ಟು

ಕಟ್ಟುನಿಟ್ಟು

#2

ಐಪ್ಯಾಡ್ ಅನ್ನು ಹಿಡಿದುಕೊಂಡು ಮೇಲ್ವಿಚಾರಕ ಉದ್ಯೋಗಿಗಳ ಐಡಿ ಕಾರ್ಡ್ ಅನ್ನು ಪರಿಶೀಲಿಸುತ್ತಿರುವುದು.ಚಿತ್ರಕೃಪೆ:Bloomberg via getty images

ಉದ್ಯೋಗಿಗಳ ಐಡಿ ಕಾರ್ಡ್

ಉದ್ಯೋಗಿಗಳ ಐಡಿ ಕಾರ್ಡ್

#3

ಐಫೋನ್‌ಗಳನ್ನು ತಯಾರಿಸುವುದಕ್ಕೆ ಮುನ್ನ ಮೇಲ್ವಿಚಾರಕ ಉದ್ಯೋಗಿಗಳ ಐಡಿ ಕಾರ್ಡ್ ಅನ್ನು ಪರಿಶೀಲಿಸಬೇಕು.ಚಿತ್ರಕೃಪೆ:Bloomberg via getty images

ಹೆಚ್ಚು ದುಬಾರಿ ಐಫೋನ್‌

ಹೆಚ್ಚು ದುಬಾರಿ ಐಫೋನ್‌

#4

ಪೆಗಾಟ್ರನ್ ಫ್ಯಾಕ್ಟ್ರಿಯಲ್ಲಿರುವ ಉದ್ಯೋಗಿಗಳ ಹೆಸರನ್ನು ಮೇಲ್ವಿಚಾರಕ ತಪಾಸಣೆ ನಡೆಸುತ್ತಿರುವುದು. ಜಗತ್ತಿನ ಹೆಚ್ಚು ದುಬಾರಿ ಐಫೋನ್‌ಗಳನ್ನು ಇಲ್ಲಿ ತಯಾರಿಸಲಾಗುವುದರಿಂದ ಕಟ್ಟುನಿಟ್ಟಿನ ನೀತಿ ನಿಯಮಗಳನ್ನು ಉದ್ಯೋಗಿಗಳು ಪಾಲಿಸಬೇಕಾಗುತ್ತದೆ.ಚಿತ್ರಕೃಪೆ:Bloomberg via getty images

ರೋಲ್ ಕಾಲ್

ರೋಲ್ ಕಾಲ್

#5

ಪರಿಶೀಲನೆ ನಡೆದ ನಂತರ ರೋಲ್‌ಕಾಲ್‌ಗಾಗಿ ಉದ್ಯೋಗಿಗಳು ಸಾಲುಗಟ್ಟಿ ನಿಂತಿರುವುದನ್ನು ನಿಮಗಿಲ್ಲಿ ಕಾಣಬಹುದಾಗಿದೆ.ಚಿತ್ರಕೃಪೆ:Bloomberg via getty images

ಸಮವಸ್ತ್ರ

ಸಮವಸ್ತ್ರ

#6

ಉದ್ಯೋಗಿಗಳು ನೀಲಿ ಬಣ್ಣದ ಟೊಪ್ಪಿಗೆ ಮತ್ತು ಕಪ್ಪು ಬಣ್ಣದ ಸ್ಲಿಪ್ಪರ್ಸ್ ಮತ್ತು ಸಮವಸ್ತ್ರವನ್ನು ಧರಿಸಬೇಕು.ಚಿತ್ರಕೃಪೆ:Bloomberg via getty images

50,000 ಜನ

50,000 ಜನ

#7

ಇಲ್ಲಿ ಕಾರ್ಯನಿರ್ವಹಿಸುವವರು ಸರಿಸುಮಾರು 50,000 ಜನರಾಗಿದ್ದು ಆಪಲ್ ಇಂಕ್‌ನ ನಿಕಟವಾದ ಕೊಂಡಿ ಇದಾಗಿದೆ.ಚಿತ್ರಕೃಪೆ:Bloomberg via getty images

ಸರತಿ ಸಾಲಿನಲ್ಲೇ

ಸರತಿ ಸಾಲಿನಲ್ಲೇ

#8

ಇನ್ನು ಸರತಿ ಸಾಲಿನಲ್ಲೇ ಉದ್ಯೋಗಿಗಳು ತಮ್ಮ ಕೆಲಸ ಮಾಡುವ ಸ್ಥಳವನ್ನು ತಲುಪಬೇಕಾಗಿದ್ದು ಇಲ್ಲಿನ ಕ್ರಮವೇ ಇದಾಗಿದೆ.

ಹೊಸ ಮಾದರಿಯ ಐಡಿ ವ್ಯವಸ್ಥೆ

ಹೊಸ ಮಾದರಿಯ ಐಡಿ ವ್ಯವಸ್ಥೆ

#9

ಹೊಸ ಮಾದರಿಯ ಐಡಿ ವ್ಯವಸ್ಥೆಯನ್ನು ಪ್ರಾಯೋಜಿಸಲಾಗಿದ್ದು, ಉದ್ಯೋಗಿಗಳಲ್ಲಿ ಇದು ಇನ್ನಷ್ಟು ನಿಷ್ಟತೆಯನ್ನು ಜಾರಿಗೊಳಿಸಿದ್ದು, ಪ್ರತಿ ಸೆಕೆಂಡ್ ಲೆಕ್ಕವನ್ನು ಇದು ಮಾಡುತ್ತದೆ.

ಸ್ವಯಂಚಾಲಿತ ಸಂದೇಶ

ಸ್ವಯಂಚಾಲಿತ ಸಂದೇಶ

#10

ಉದ್ಯೋಗಿಗಳ ಕೆಲಸದ ಮೇಲೆ ನಿಯಂತ್ರಣವನ್ನು ಇರಿಸಲು ಈ ಐಡಿ ಕಾರ್ಡ್ ಸಹಕಾರಿಯಾಗಿದ್ದು ನಿರ್ವಾಹಕರಿಗೆ ಇದು ಸ್ವಯಂಚಾಲಿತ ಸಂದೇಶಗಳನ್ನು ಕಳುಹಿಸುತ್ತದೆ.

ನಡವಳಿಕೆ ಷರತ್ತು

ನಡವಳಿಕೆ ಷರತ್ತು

#11

ಆಪಲ್ ವಿಧಿಸಿರುವ ನಡವಳಿಕೆ ಷರತ್ತುಗಳಿಗೆ ಉದ್ಯೋಗಿಗಳು ಬದ್ಧರಾಗಿರಬೇಕು ಎಂಬುದು ಕಂಪೆನಿ ಹೊರಡಿಸಿರುವ ನಿಯಮವಾಗಿದೆ.
ಚಿತ್ರಕೃಪೆ:Bloomberg via getty images

ಉತ್ತಮ ವೇತನ

ಉತ್ತಮ ವೇತನ

#12

ಉತ್ತಮ ವೇತನ, ಮಾಸಿಕ ಭತ್ಯೆ, ತಂಗುವ ವ್ಯವಸ್ಥೆ, ಆಹಾರದ ಖರ್ಚುಗಳನ್ನು ಕಂಪೆನಿ ನೀಡುತ್ತದೆ.ಚಿತ್ರಕೃಪೆ:Bloomberg via getty images

ಫೇಶಿಯಲ್ ರೆಕಾಗ್ನಿಶನ್ ಡಿವೈಸ್‌

ಫೇಶಿಯಲ್ ರೆಕಾಗ್ನಿಶನ್ ಡಿವೈಸ್‌

#13

ಫೇಶಿಯಲ್ ರೆಕಾಗ್ನಿಶನ್ ಡಿವೈಸ್‌ನಲ್ಲಿ ಉದ್ಯೋಗಿಯು ಪರಿಶೀಲಿಸಿಕೊಳ್ಳುತ್ತಿರುವುದು.ಚಿತ್ರಕೃಪೆ:Bloomberg via getty images

ಬ್ಯಾಡ್ಜ್‌ಗಳನ್ನು ಸ್ವೈಪ್

ಬ್ಯಾಡ್ಜ್‌ಗಳನ್ನು ಸ್ವೈಪ್

#14

ತಮ್ಮ ಬ್ಯಾಡ್ಜ್‌ಗಳನ್ನು ಸ್ವೈಪ್ ಮಾಡಿದ ನಂತರ ಫೇಶಿಯಲ್ ರೆಕಗ್ನಿಶನ್ ತನಿಖೆಗೆ ಇವರು ಒಳಗಾಗಬೇಕು.ಚಿತ್ರಕೃಪೆ:Bloomberg via getty images

ಟರ್ನ್ ಸ್ಟೈಲ್‌

ಟರ್ನ್ ಸ್ಟೈಲ್‌

#15

ಟರ್ನ್ ಸ್ಟೈಲ್‌ಗಳನ್ನು ದಾಟಿಕೊಂಡೇ ಉದ್ಯೋಗಿಯು ಪೆಗಾಟ್ರನ್ ಫ್ಯಾಕ್ಟ್ರಿಗೆ ಕಾಲಿಡಬೇಕು.ಚಿತ್ರಕೃಪೆ:Bloomberg via getty images

ಕಟ್ಟುನಿಟ್ಟಿನ ಭದ್ರತೆ

ಕಟ್ಟುನಿಟ್ಟಿನ ಭದ್ರತೆ

#16

ಫ್ಯಾಕ್ಟ್ರಿಯು ಕಟ್ಟುನಿಟ್ಟಿನ ಭದ್ರತೆಯನ್ನು ಒಳಗೊಂಡಿದ್ದು ಐಫೋನ್‌ನ ಅತಿ ರಹಸ್ಯ ಭಾಗಗಳನ್ನು ಇಲ್ಲಿ ನಿರ್ಮಾಣ ಮಾಡುವುದರಿಂದ ಭದ್ರತೆ ತುಸು ಜೋರಾಗಿಯೇ ಇದೆ.ಚಿತ್ರಕೃಪೆ:Bloomberg via getty images

ಮುಖ ಗುರುತಿಸುವಿಕೆ ಯಂತ್ರ

ಮುಖ ಗುರುತಿಸುವಿಕೆ ಯಂತ್ರ

#17

ಮುಖ ಗುರುತಿಸುವಿಕೆ ಯಂತ್ರ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಚಿತ್ರದಲ್ಲಿ ನಿಮಗೆ ಕಾಣಬಹುದು.ಚಿತ್ರಕೃಪೆ:Bloomberg via getty images

ಕೆಲವೊಂದು ರಹಸ್ಯ

ಕೆಲವೊಂದು ರಹಸ್ಯ

#18

ಈ ಫ್ಯಾಕ್ಟ್ರಿಯು ತನ್ನಲ್ಲಿ ಕೆಲವೊಂದು ರಹಸ್ಯಗಳನ್ನು ಒಳಗೊಂಡಿದ್ದು ಉದ್ಯೋಗಿಗೆ ಮಾನಸಿಕ ಕಿರುಕುಳವನ್ನು ನೀಡುತ್ತದೆ ಎಂಬ ಮಾಹಿತಿ ಕೂಡ ಇದೆ. ವಿಶ್ರಾಂತಿ ಇಲ್ಲದೆಯೇ ಉದ್ಯೋಗಿಗಳನ್ನು ಕಂಪೆನಿ ದುಡಿಸಿಕೊಳ್ಳುತ್ತದೆ ಎಂಬ ಮಾತೂ ಇದೆ. ಚಿತ್ರಕೃಪೆ:Bloomberg via getty images

ಸಮವಸ್ತ್ರ ಧರಿಸಿ

ಸಮವಸ್ತ್ರ ಧರಿಸಿ

#19

ಫ್ಯಾಕ್ಟ್ರಿಗೆ ಕಾಲಿಟ್ಟ ನಂತರ ಸಂಸ್ಥೆಯು ಒದಗಿಸಿರುವ ಸಮವಸ್ತ್ರಗಳನ್ನು ಧರಿಸಿಯೇ ರೋಲ್‌ಕಾಲ್‌ಗೆ ಹಾಜರಾಗಬೇಕು.ಚಿತ್ರಕೃಪೆ:Bloomberg via getty images

ಆಪಲ್ ಫ್ಯಾಕ್ಟ್ರಿಯ ಒಳಗಿನ ದೃಶ್ಯ

ಆಪಲ್ ಫ್ಯಾಕ್ಟ್ರಿಯ ಒಳಗಿನ ದೃಶ್ಯ

#20

ಆಪಲ್ ಫ್ಯಾಕ್ಟ್ರಿಯ ಒಳಗಿನ ದೃಶ್ಯಗಳನ್ನು ಚಿತ್ರದಲ್ಲಿ ಕಾಣಬಹುದು ಚಿತ್ರಕೃಪೆ:Bloomberg via getty images

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Lined up with military precision, hundreds of employees wait to make iPhones at one of the most secretive factories in the Apple production line.Dressed in pink jackets, blue hairnets and plastic slippers, the workers have their ID badges scanned on an iPad by a supervisor at morning roll call.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot