14ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಫೇಸ್‌ಬುಕ್!!..ಇಲ್ಲಿಯವರೆಗೂ ನೀವು ತಿಳಿಯದ ಅಚ್ಚರಿ ವಿಷಯಗಳಿವು!!

  2004ನೇ ವರ್ಷದ ಫೆಬ್ರವರಿ 4 ತಾರೀಖು ವಿಶ್ವದ ಆನ್‌ಲೈನ್ ಪ್ರಪಂಚದಲ್ಲಿಯೇ ದಾಖಲೆಯಾಗಿ ಉಳಿಯುವ ಒಂದು ದಿನ ಎಂದರೆ ತಪ್ಪಾಗಲಾರದು.! ಏಕೆಂದರೆ, ಮಾರ್ಕ್ ಝುಕರ್‌ಬರ್ಗ್ ಎಂಬ 19 ನೇ ವಯಸ್ಸಿನ ಬಾಲಕನ ಕೈಯಿಂದ ಜನ್ಮ ತಾಳಿದ ಫೇಸ್‌ಬುಕ್ ಎಂಬ ಸೋಶಿಯಲ್ ನೆಟ್‌ವರ್ಕ್‌ ಇಂದು ವಿಶ್ವದ ಬಹಳಷ್ಟು ಜನರನ್ನು ಬೆಸೆದಿದೆ.!!

  ಹೌದು, ವಿಶ್ವದ ಮೊದಲ ಹಾಗೂ ಬೃಹತ್ ಸೋಶಿಯಲ್ ನೆಟ್‌ವರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಫೇಸ್‌ಬುಕ್ ಇಂದಿಗೆ ಹದಿನಾಲ್ಕನೇ ವರ್ಷದ ಸಂಭ್ರಮಾಚರಣೆ ಮುಗಿಸಿ 15 ನೇ ವರ್ಷಕ್ಕೆ ಕಾಲಿಟ್ಟಿದೆ. ಇದೇ ಖುಷಿಯನ್ನು ಫೇಸ್‌ಬುಕ್‌ ಮಾಲಕ ಮಾರ್ಕ್ ಝುಕರ್‌ಬರ್ಗ್ ತಮ್ಮ ಫೇಸ್‌ಬುಕ್‌ ಖಾತೆ ಮೂಲಕ ವ್ಯಕ್ತಪಡಿಸಿದ್ದಾರೆ.!!

   14ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಫೇಸ್‌ಬುಕ್!!

  ಫೇಸ್‌ಬುಕ್ ಎಂಬ ಹೊಸ ಮಾಯ ಜಗತ್ತು ಇಂದು ಇಡೀ ವಿಶ್ವವನ್ನೇ ಕೈಯಲ್ಲಿ ನೋಡುವಂತೆ ಮಾಡಿದೆ. ಆದರೆ, ಅಂದು 19 ವರ್ಷ ಪ್ರಾಯದ ಯುವಕ ಮಾರ್ಕ್ ಝಕರ್‌ಬರ್ಗ್ ಅವರಿಗೆ ಜಾಗತಿಕ ಅಂತರ್ಜಾಲ ಸೇವೆ ನಿರ್ಮಿಸುವ ಕಲ್ಪನೆ ಕೂಡ ಇರಲಿಲ್ಲ ಎಂಬುದು ನಿಮಗೆ ಗೊತ್ತಾ?! ಹಾಗಾದರೆ, ಫೇಸ್‌ಬುಕ್ ಬೃಹದಾಕಾರವಾಗಿ ಬೆಳೆಯಲು ಕಾರಣಗಳೇನು? ಫೇಸ್‌ಬುಕ್ ಉದ್ಯೋಗಿಗಳ ಅನುಭವಗಳೇನು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಫೇಸ್‌ಬುಕ್‌ ಹುಟ್ಟುಹಬ್ಬ ಆಚರಣೆ!!

  ಫೇಸ್‌ಬುಕ್‌ ಹುಟ್ಟು ಹಬ್ಬದ ಸಂದರ್ಭಲ್ಲಿ ಪ್ರತಿವರ್ಷ ತನ್ನ ಉದ್ಯೋಗಿಗಳಿಗೆ ಫೇಸ್‌ಬುಕ್‌ ಪಾರ್ಟಿ ಆಯೋಜಿಸುತ್ತದೆ. ಈ ಸಂದರ್ಭದಲ್ಲಿ ಪ್ರತಿ ಉದ್ಯೋಗಿಗೆ ಒಂದು ಉಡುಗೊರೆ ನೀಡಲಾಗುತ್ತದೆ.! ಅಂದು ಫೇಸ್‌ಬುಕ್ ಉದ್ಯೋಗಿಗಳು ಜೊತೆಯಲ್ಲಿ ಪಾರ್ಟಿ ಮಾಡುತ್ತಾ ಫೇಸ್‌ಬುಕ್ ಹುಟ್ಟುಹಬ್ಬವನ್ನು ಆಚರಿಸುತ್ತಾರೆ.!!

  1 ಲಕ್ಷ ಡಾಲರ್‌ ಸಂಬಳ!!

  ಫೇಸ್‌ಬುಕ್‌ನಲ್ಲಿ ಕೆಲಸ ಗಿಟ್ಟಿಸುವ ಉದ್ಯೋಗಿಗಳಿಗೆ ಹೆಚ್ಚು ಸಂಬಳ ಇರುತ್ತದೆ ಎಂಬುದು ನಿಮಗೆ ಗೊತ್ತು. ಆದರೆ, ಫೇಸ್‌ಬುಕ್‌ನಲ್ಲಿ ಹೊಸದಾಗಿ ಸೇರಿದ ಉದ್ಯೋಗಿಗೆವಾರ್ಷಿಕವಾಗಿ 1 ಲಕ್ಷ ಡಾಲರ್‌ಗಿಂತಲೂ ಹೆಚ್ಚು ಸಂಬಳ ನೀಡುತ್ತಾರೆ (80 ಲಕ್ಷ) ಎಂದರೆ ಎಲ್ಲರಿಗೂ ಆಶ್ಚರ್ಯ ಮೂಡಿಸದೇ ಇರದು.!!

  ಕಂಪ್ಯೂಟರ್ ಓಎಸ್ ಬಳಕೆಗೆ ಅಡ್ಡಿಯಿಲ್ಲ.!!

  ಫೇಸ್‌ಬುಕ್‌ ಕಂಪ್ಯೂಟರ್ ಆಪರೇಟಿಂಗ್‌ ವಿಚಾರದಲ್ಲಿ ಫೇಸ್‌ಬುಕ್ ಉದ್ಯೋಗಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಮ್ಯಾಕ್‌ ಬೇಕಾದವರಿಗೆ ಮ್ಯಾಕ್‌, ಲೈನಕ್ಸ್ ಬೇಕಾದವರಿಗೆ ಲೈನಕ್ಸ್, ವಿಂಡೋಸ್ ಬೇಕಾದವರಿಗೆ ವಿಂಡೋಸ್‌ ಕಂಪ್ಯೂಟರ್‌ಗಳನ್ನು ಪಡೆಯಬಹುದಾದ ಆಯ್ಕೆ ಫೇಸ್‌ಬುಕ್ ಉದ್ಯೋಗಿಗಳಿಗಿದೆ.!!

  ಸಂವಾದ ನಡೆಸುತ್ತಾರೆ.!!

  ಪ್ರತಿ ಶುಕ್ರವಾರ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ತಮ್ಮ ಸಂಸ್ಥೆಯ ಬಹುತೇಕ ಉದ್ಯೋಗಿಗಳ ಜೊತೆ ಸಂವಾದ ನಡೆಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಉದ್ಯೋಗಿಗಳು ತಮ್ಮ ಅಭಿಪ್ರಾಯವನ್ನು ಜ್ಯುಕರ್ ಬರ್ಗ್ ಜೊತೆ ಹಂಚಿಕೊಳ್ಳಲು ಅವಕಾಶ ನೀಡುತ್ತಾರೆ.!!

  ಎಲ್ಲರೂ ಆಟವಾಡುತ್ತಾರೆ.!!

  ಫೇಸ್‌ಬುಕ್‌ ವರ್ಷದಲ್ಲಿ ಒಂದು ದಿನ ಹತ್ತಿರದಲ್ಲಿರುವ ಪಾರ್ಕ್‌ನ್ನು ಒಂದು ದಿನಕ್ಕೆ ಬಾಡಿಗೆಗೆ ಪಡೆಯುತ್ತದೆ. ಈ ದಿನ ಫೇಸ್‌ಬುಕ್‌ನ ಎಲ್ಲಾ ಉದ್ಯೋಗಿಗಳು ಈ ಪಾರ್ಕ್‌ನಲ್ಲಿ ವಿವಿಧ ಆಟಗಳನ್ನು ಆಡುತ್ತಾರೆ.! ಆದರೆ, ಇದರಲ್ಲೇನು ವಿಶೇಷ ಎನ್ನಬೇಡಿ. ಏಕೆಂದರೆ ಅಂದು ಮಾರ್ಕ್ ಝುಕರ್‌ಬರ್ಗ್ ಅವರ ಜತರಗೂಡಿ ಆಡವಾಡುತ್ತಾರೆ.!!

  ಅವರದ್ದೇ ಗ್ರೂಪ್‌ನಲ್ಲಿ ವ್ಯವಹರಿಸುತ್ತಾರೆ!!

  ಆಫೀಸ್‌ ಸಮಯದಲ್ಲಿ ಎಲ್ಲಾ ಉದ್ಯೋಗಿಗಳು ಆಂತರಿಕ ಸಂವಹನಕ್ಕಾಗಿ ಫೇಸ್‌ಬುಕ್‌ನಲ್ಲಿರುವ ತಮ್ಮ ನಿಗದಿ ಪಡಿಸಿದ ಗ್ರೂಪ್‌ನಲ್ಲೇ ವ್ಯವಹಾರ ನಡೆಸುತ್ತಾರೆ. ಅಂದರೆ, ಫೇಸ್‌ಬುಕ್ ಬಳಕೆದಾರರಿಗೆ ತಮ್ಮಿಂದ ಯಾವ ರೀತಿಯ ಸೇವೆ ಸಿಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳುತ್ತಾರಂತೆ.!!

  ಉದ್ಯೋಗಿಗಳೀಗೆ ಎಲ್ಲವೂ ಉಚಿತ!!

  ಫೇಸ್‌ಬುಕ್ ತನ್ನ ಉದ್ಯೋಗಿಗಳ ಅವರ ಜೀವನ ನಿರ್ವಹಣಗೆ ಬೇಕಾಗುವ ಎಲ್ಲಾ ಸಾಮಾನ್ಯ ಅಗತ್ಯತೆಗಳನ್ನು ಉಚಿತವಾಗಿ ನೀಡುತ್ತದೆ. ಊಟ, ವಸತಿ ಸೌಲಭ್ಯಗಳನ್ನು ನೀಡುವ ಫೇಸ್‌ಬುಕ್ ಉದ್ಯೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದು ಆಫೀಸ್‌ನಲ್ಲೇ ಡಾಕ್ಟರ್, ಫಿಸಿಕಲ್‌ ಥೆರಪಸ್ಟ್‌ಗಳನ್ನು ನಿಯೋಜಿಸಿದೆ.!!

  ಅಧ್ಯಯನಗಳಿಗೆ ಪ್ರೇರಣೆ!!

  ಫೆಸ್‌ಬುಕ್ ಉದ್ಯೋಗಿಗಳಾಗುವ ಮುನ್ನವೇ ಅವರು ಸಾಕಷ್ಟು ಅಂತರ್ಜಾಲ ಪ್ರಪಂಚದ ಬಗ್ಗೆ ಕಲಿತಿರುತ್ತಾರೆ. ಈ ಮಧ್ಯದಲ್ಲಿ ಫೇಸ್‌ಬುಕ್ ವಹಿಸಿರುವ ಕೆಲಸ ಬಿಟ್ಟು ಇನ್ನೇನಾದರೂ ಫೇಸ್‌ಬುಕ್‌ಗೆ ಸಂಬಂದಿಸಿದ ಅಧ್ಯಯನಗಳನ್ನು ಕೈಗೊಂಡರೆ ಅದಕ್ಕೆ ಸಂಬಳದ ಜೊತೆಗೆ ಪ್ರೇರಣೆಯನ್ನು ಸಹ ನೀಡುತ್ತಾರೆ.!!

  ತೊಂದರೆ ಎನ್ನುವ ಮಾತಿಲ್ಲ.!!

  ಉದ್ಯೋಗಿಗಳು ಕೆಲಸ ಮಾಡುತ್ತಿರುವ ಸಮಯದಲ್ಲಿ ಕಂಪ್ಯೂಟರ್, ಕೀಬೋರ್ಡ್, ಮೌಸ್‌ ಹೀಗೆ ಯಾವುದರಲ್ಲಿಯೂ ಒಂದು ಸಣ್ಣ ಸಮಸ್ಯೆ ಉಂಟಾದರೆ ಕ್ಷಣರ್ಧದಲ್ಲಿ ಅದನ್ನು ಬದಲಾಯಿಸಲಾಗುತ್ತದೆ. ಈ ಕಂಪ್ಯೂಟರ್ ಬಳಸಲು ನನಗೆ ಉತ್ತಮ ಫೀಲ್ ಇಲ್ಲ ಎಂದು ಉದ್ಯೋಗಿ ಹೇಳಿದರೂ ಸಾಕು ಅವರು ಹೇಳಿದ ಕಂಪ್ಯೂಟರ್ ತರಿಸಿಕೊಡಲಾಗುತ್ತದೆ.!!

  ಓದಿರಿ:3 ರಿಯರ್ ಕ್ಯಾಮೆರಾ ಹೊಂದಿರುವ ವಿಶ್ವದ ಮೊದಲ ಫೋನ್ ಮಾರುಕಟ್ಟೆಗೆ!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Feb. 4 will mark Facebook’s 14th birthday. It took the social media giant from 2004 to 2012 to reach 1 billion users, but it skyrocketed past 2 billion in 2017.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more