ಇನ್ನು ಜಿಯೋ ನೆಟ್‌ವರ್ಕ್ ಸ್ಪೀಡ್ ಇಲ್ಲ ಎನ್ನುವಂತಿಲ್ಲ: ಕಾರಣ ಇಲ್ಲಿದೇ

ಜಿಯೋ ತನ್ನ ಗ್ರಾಹಕರಿಗೆ ಗುಣಮಟ್ಟದ ನೆಟ್‌ವರ್ಕ್ ನೀಡಬೇಕು ಎನ್ನುವ ಸಲುವಾಗಿ ತನ್ನ ಮೊಬೈಲ್ ನೆಟ್‌ವರ್ಕ್ ಅನ್ನು ಹೆಚ್ಚು ಮಾಡಲಿದ್ದು, ಸದ್ಯ ಇರುವುದಕ್ಕಿಂತ ಎರಡು ಪಟ್ಟು ಜಾಸ್ತಿ ಮಾಡಲಿದೆ.

|

ಜಿಯೋ ತನ್ನ ಗ್ರಾಹಕರ ಸಂಖ್ಯೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದ್ದು, ಇದೇ ಹಿನ್ನಲೆಯಲ್ಲಿ ಗ್ರಾಹಕರಿಗೆ ಗುಣಮಟ್ಟದ ನೆಟ್‌ವರ್ಕ್ ನೀಡಬೇಕು ಎನ್ನುವ ಸಲುವಾಗಿ ತನ್ನ ಮೊಬೈಲ್ ನೆಟ್‌ವರ್ಕ್ ಅನ್ನು ಹೆಚ್ಚು ಮಾಡಲಿದ್ದು, ಸದ್ಯ ಇರುವುದಕ್ಕಿಂತ ಎರಡು ಪಟ್ಟು ಜಾಸ್ತಿ ಮಾಡಲಿದೆ.

ಇನ್ನು ಜಿಯೋ ನೆಟ್‌ವರ್ಕ್ ಸ್ಪೀಡ್ ಇಲ್ಲ ಎನ್ನುವಂತಿಲ್ಲ: ಕಾರಣ ಇಲ್ಲಿದೇ

ಓದಿರಿ: ಕೇವಲ ರೂ.5000ಕ್ಕೆ ದೊರೆಯಲಿದೆ ಜಿಯೋ 4G ಲ್ಯಾಪ್‌ಟಾಪ್...!?!?

ಜಿಯೋ ಡೇಟಾ ಬಳಕೆಯಲ್ಲಿ ಜಗತ್ತಿನ ಅತೀ ದೊಡ್ಡ ನೆಟ್‌ವರ್ಕ್ ಆಗಲಿದ್ದು, ಈಗಾಗಲೇ ಒಂದು ಲಕ್ಷ ಮೊಬೈಲ್ ಸೈಟ್‌ಗಳನ್ನು ಆಡ್ ಮಾಡಲಿದೆ, ಮುಂದಿನ ತಿಂಗಳಲ್ಲಿ ತನ್ನ ನೆಟ್‌ವರ್ಕ್ ಗಾತ್ರವನ್ನು ಹೆಚ್ಚಿಸಲಿದೆ ಎನ್ನಲಾಗಿದೆ.

ಓದಿರಿ: ನಿಮ್ಮವರು ಇನ್ನೊಬ್ಬರೊಂದಿಗೆ ಮಲಗಿದರೆ ಈ ಸ್ಮಾರ್ಟ್ ಹಾಸಿಗೆ ನಿಮಗೆ ಸಂದೇಶ ತಲುಪಿಸಲಿದೆ

ಜಿಯೋ ಬಳಕೆದಾರರ ಸಂಖ್ಯೆ 108.9 ಮಿಲಿಯನ್:

ಜಿಯೋ ಬಳಕೆದಾರರ ಸಂಖ್ಯೆ 108.9 ಮಿಲಿಯನ್:

ಜಿಯೋ ಬಳಕೆದಾರರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಮಾರ್ಚ್ 31ರ ಅಂಕಿ-ಅಂಶಗಳ ಪ್ರಕಾರ 108.9 ಮಿಲಿಯನ್ ಸಂಖ್ಯೆಯನ್ನು ದಾಟಿದೆ. ಈ ಸಂಖ್ಯೆಯೂ ಇನ್ನು ಹೆಚ್ಚಾಗುವ ಸಾಧ್ಯತೆ ಇದ್ದು, ಬೆಳೆಯುತ್ತಲೆ ಸಾಗಲಿದೆ.

ಡಬ್ಬಲ್ ಆಗಲಿದೆ ನೆಟ್‌ವರ್ಕ್:

ಡಬ್ಬಲ್ ಆಗಲಿದೆ ನೆಟ್‌ವರ್ಕ್:

ಜಿಯೋ ಉಚಿತ ಸೇವೆಯನ್ನು ನಿಲ್ಲಿಸಿ ಪೇಯ್ಡ್ ಸೇವೆಯನ್ನು ಆರಂಭಿಸಿದ್ದು, ಅಲ್ಲದೇ ಗ್ರಾಹಕರ ಸಂಖ್ಯೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗುಣಮಟ್ಟದ ಸೇವೆಯನ್ನು ನೀಡುವ ಸಲುವಾಗಿ ಮತ್ತು ವೇಗದ ನೆಟ್‌ವರ್ಕ್ ಗಾಗಿ ತನ್ನ ನೆಟ್‌ವರ್ಕ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಿದೆ.

1 ಲಕ್ಷ ಹೊಸ ಟವರ್‌:

1 ಲಕ್ಷ ಹೊಸ ಟವರ್‌:

ಈಗಾಗಲೇ ಜಿಯೋ ದೇಶದಲ್ಲಿ ಅತೀ ಹೆಚ್ಚಿನ ಮತ್ತು ಅತೀ ದೊಡ್ಡದ ನೆಟ್‌ವರ್ಕ್ ಜಾಲವನ್ನು ಹೊಂದಿದ್ದು, ಬೇರೆ ನೆಟ್‌ವರ್ಕ್‌ಗಳಿಗೆ ಹೋಲಿಸಿದರೆ ಜಿಯೋ ಅತೀ ವಿಸ್ತಾರವಾದ ನೆಟ್‌ವರ್ಕ್ ಹೊಂದಿದೆ. ಈಗಾಗಲೇ 1 ಲಕ್ಷ ಟವರ್ ಇದ್ದು, ಈಗ ಹೊಸದಾಗಿ 1 ಲಕ್ಷ ಟವರ್ ನಿರ್ಮಾಣ ಕಾರ್ಯ ಆರಂಭವಾಗಲಿದೆ.

ಪ್ರತಿ ತಿಂಗಳು 110 ಕೋಟಿ ಗೀಗಾ ಬೈಟ್ ಡೇಟಾ ಟ್ರಾಫಿಕ್:

ಪ್ರತಿ ತಿಂಗಳು 110 ಕೋಟಿ ಗೀಗಾ ಬೈಟ್ ಡೇಟಾ ಟ್ರಾಫಿಕ್:

ಜಿಯೋ ಬಳಕೆದಾರರ ಸಂಖ್ಯೆಯೂ ಹೆಚ್ಚು ಆಗುತ್ತಿದ್ದಂತೆ ಜಿಯೋ ಬಳಕೆದಾರರು ಬಳಸುತ್ತಿರುವ ಡೇಟಾ ಟ್ರಾಫಿಕ್ ಸಹ ಹೆಚ್ಚಾಗಿದೆ. ಜಿಯೋ ಪ್ರತಿ ತಿಂಗಳು 110 ಕೋಟಿ ಗೀಗಾ ಬೈಟ್ ಡೇಟಾ ಟ್ರಾಫಿಕ್ ಹೊಂದಿದೆ ಎನ್ನಲಾಗಿದೆ.

ಪ್ರತಿ ದಿನ 220 ಕೋಟಿ ನಿಮಿಷ ವಿಡಿಯೋ ಕಾಲಿಂಗ್:

ಪ್ರತಿ ದಿನ 220 ಕೋಟಿ ನಿಮಿಷ ವಿಡಿಯೋ ಕಾಲಿಂಗ್:

ಜಿಯೋ ಉಚಿತ ಡೇಟಾ ನೀಡುತ್ತಿದ್ದು ಹಾಗೇ ವೇಗದ ಇಂಟರ್‌ನೆಟ್ ನೀಡುತ್ತಿರುವ ಕಾರಣಕ್ಕೆ ಪ್ರತಿ ದಿನ 220 ಕೋಟಿ ನಿಮಿಷ ವಿಡಿಯೋ ಕಾಲಿಂಗ್ ಮಾಡುತ್ತಿದ್ದಾರೆ. ಇದು ಬೇರೆ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಇದು ಲಭ್ಯವಿಲ್ಲ.

5G ಗೆ ಜಿಯೋ ಈಗಾಗಲೇ ತಯಾರಿ ಶುರು ಮಾಡಿದೆ:

5G ಗೆ ಜಿಯೋ ಈಗಾಗಲೇ ತಯಾರಿ ಶುರು ಮಾಡಿದೆ:

ಜಿಯೋ 4G ಸೇವೆಯನ್ನು ಆರಂಭಿಸಿ ಟೆಲಿಕಾಂ ಲೋಕದಲ್ಲಿ ಹೊಸದೊಂದು ಕ್ರಾಂತಿಯನ್ನು ಆರಂಭಿಸಿದ್ದು ತಿಳಿದಿರುವ ವಿಚಾರವೆ. ಇದೇ ಮಾದರಿಯಲ್ಲಿ 5G ಸೇವೆಯನ್ನು ಆಂಭಿಸಲು ಈಗಾಗಲೇ ಪ್ಲಾನ್ ಮಾಡಲಾಗಿದೆ.

Best Mobiles in India

Read more about:
English summary
New telecom operator Reliance Jio plans to double its network size by adding 1 lakh additional mobile sites in coming months. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X