Subscribe to Gizbot

ಜಿಯೋ ಬಳಿ ಇರುವುದೇನು..? BSLN ಬಳಿ ಇಲ್ಲದೇ ಇರೋದೇನು..? ಇಲ್ಲಿದೇ ನೋಡಿ..!

Written By:

ದೇಶದಲ್ಲಿ 4G ಡೇಟಾ ಸಮರವೂ ಜೋರಾಗಿ ನಡೆಯುತ್ತಿದ್ದು, ವಿವಿಧ ಕಂಪನಿಗಳು ತಮ್ಮ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿವೆ. ಇದರಲ್ಲಿ ಸರ್ಕಾರಿ ಸ್ವಾಮ್ಯದ BSNL ಸಹ ಹಿಂದೆ ಬಿದ್ದಿಲ್ಲ. ರಿಲಯನ್ಸ್ ಮಾಲೀಕತ್ವದ ಜಿಯೋ ಗಿಂತಲೂ ಬೊಂಬಾಟ್ ಆಫರ್ ಘೋಷಿಸುವ ಮೂಲಕ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ.

ಜಿಯೋ ಬಳಿ ಇರುವುದೇನು..? BSLN ಬಳಿ ಇಲ್ಲದೇ ಇರೋದೇನು..? ಇಲ್ಲಿದೇ ನೋಡಿ..!

ಓದಿರಿ: ಎಪ್ರಿಲ್ 28ಕ್ಕೆ ನೋಕಿಯಾ 3310 ರೀಲಿಸ್: ಪ್ರೀ ಬುಕಿಂಗ್ ಆರಂಭ, ಬೆಲೆ ಎಷ್ಟು..?

ಈ ಹಿನ್ನಲೆಯಲ್ಲಿ ಜಿಯೋ ಧನ್ ಧನಾ ಧನ್ V/s BSNL ಡೇಟಾ ಆಫರ್ ನಡುವಿನ ವ್ಯತ್ಯಾಸವೇನು ಎಂಬುದನ್ನು ನೋಡುವ. ಇವರಲ್ಲಿ ಯಾವುದು ಬೆಸ್ಟ್, ಯಾವುದು ನಿಮಗೆ ಸೂಕ್ತ ಎಂಬುದನ್ನು ತಿಳಿದುಕೊಳ್ಳೋಣ.

ಓದಿರಿ: ಜಿಯೋ ನೀಡುತ್ತಿರುವ ಬೆಲೆಕಟ್ಟಲಾದ ಉಚಿತ ಸೇವೆಗಳಿದು..!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊದಲಿಗೆ BSNL ಪ್ಲಾನ್‌ಗಳ ಬಗ್ಗೆ:

ಮೊದಲಿಗೆ BSNL ಪ್ಲಾನ್‌ಗಳ ಬಗ್ಗೆ:

BSNL ತನ್ನ ಗ್ರಾಹಕರಿಗೆ ಟ್ರಿಪಲ್ ಎಸಿಇ ಎಂಬ ಪ್ಲಾನ್ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 90 ದಿನಗಳ ಕಾಲಕ್ಕೆ ಪ್ರತಿ ನಿತ್ಯ 3GB ಡೇಟಾವನ್ನು ನೀಡಲಿದೆ. ಅಂದ್ರೆ ಒಟ್ಟು 270GB ಡೇಟಾವನ್ನು ಗ್ರಾಹಕರ ಬಳಕೆಗೆ ನೀಡಲಿದೆ. ಆದರೆ ಇದು 80Kbps ವೇಗದಲ್ಲಿ ಮಾತ್ರ ಕಾರ್ಯನಿರ್ವಹಸಲಿದೆ ಎನ್ನಲಾಗಿದೆ.

BSNL ದಿಲ್ ಕೋಲ್ ಕೆ ಬೋಲ್:

BSNL ದಿಲ್ ಕೋಲ್ ಕೆ ಬೋಲ್:

ಜಿಯೋ ಗೆ ಸೆಡ್ಡು ಹೊಡೆದ BSNL, ಜಿಯೋ ಮಾದರಿಯಲ್ಲಿ ರೂ.349ಕ್ಕೆ ಪ್ರತಿ ದಿನ 2GB ಡೇಟಾ ನೀಡಲಿದ್ದು, 28 ದಿನಗಳ ಅವಧಿಗೆ. ಪ್ರತಿ ನಿತ್ಯ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಆಫರ್ ನೀಡಿದೆ. ಅಂದ್ರೆ 56GB ಡೇಟಾ ಬಳಕೆಗೆ ದೊರೆಯಲಿದೆ.

ರಿಲಯನ್ಸ್ ಜಿಯೋ ಪ್ಲಾನ್: `

ರಿಲಯನ್ಸ್ ಜಿಯೋ ಪ್ಲಾನ್: `

ಜಿಯೋ BSNL ಗಿಂತಲೂ ಮಂಚೆಯೇ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದೆ. ರೂ.99 ನೀಡಿ ರಿಲಯನ್ಸ್ ಜಿಯೋ ಪ್ರೈಮ್ ಮೆಂಬರ್ ಶಿಪ್ ಪಡೆದುಕೊಂಡರೆ. ಧನ್ ಧನಾ ಧನ್ ಆಫರ್ ಪಡೆಯಬಹುದಾಗಿದೆ.

ರೂ.309 ಪ್ಲಾನ್:

ರೂ.309 ಪ್ಲಾನ್:

ಜಿಯೋ ತನ್ನ ಗ್ರಾಹಕರಿಗೆ ಪ್ರತಿ ನಿತ್ಯ ಒಂದು GB ಯಂತೆ 84 ದಿನಗಳ ಕಾಲದ ಅವಧಿಗೆ ಈ ಆಫರ್ ಲಭ್ಯವಿರಲಿದೆ. ಇದರಲ್ಲಿ 128KBPS ವೇಗದ ಇಂಟರ್ನೆಟ್ ದೊರೆಯಲಿದೆ. ಇದರಲ್ಲಿ ಉಚಿತ ಕರೆ ಮಾಡುವ ಸೇವೆ ಮತ್ತು ಉಚಿತ ಎಸ್‌ಎಂಎಸ್ ಮಾಡುವ ಅವಕಾಶ ದೊರೆಯಲಿದೆ.

 ರೂ.509 ಪ್ಲಾನ್:

ರೂ.509 ಪ್ಲಾನ್:

ಜಿಯೋ ತನ್ನ ಗ್ರಾಹಕರಿಗೆ ಹೆಚ್ಚಿನ ಡೇಟಾ ಸೇವೆಯನ್ನು ನೀಡಲು ರೂ.509 ಪ್ಲಾನ್ ನೀಡಲಿದೆ. 84 ದಿನಗಳ ಕಾಲದ ಅವಧಿಗೆ ಪ್ರತಿ ನಿತ್ಯ 2GB ಡೇಟಾವನ್ನು ಬಳಕೆಗೆ ನೀಡಿದೆ. ಇಲ್ಲಿಯೂ ಉಚಿತ ಕರೆ ಮಾಡುವ ಸೇವೆ ಮತ್ತು ಉಚಿತ ಎಸ್‌ಎಂಎಸ್ ಮಾಡುವ ಅವಕಾಶ ದೊರೆಯಲಿದೆ.

ಜಿಯೋ ಹಾಗೂ BSNLಗೂ ಇರುವ ವ್ಯತ್ಯಾಸ:

ಜಿಯೋ ಹಾಗೂ BSNLಗೂ ಇರುವ ವ್ಯತ್ಯಾಸ:

ಜಿಯೋ ಹಾಗೂ BSNL ಒಂದೇ ಮಾದರಿಯ ಆಫರ್ ನೀಡಿವೆ, ಆದರೆ BSNL ಜಿಯೋ ಗಿಂತಲೂ ಹೆಚ್ಚಿನ ಆಫರ್ ನೀಡಿದೆ. ಆದರೆ ಇದರ ಬಹು ಮುಖ್ಯ ತೊಡಕು ಎಂದರೆ ವೇಗ ಕಡಿಮೆ ಆದರೆ ಅದೇ ಜಿಯೋ ಗರಿಷ್ಠ ವೇಗದ ಇಂಟರ್‌ನೆಟ್ ಸೇವೆಯನ್ನು ನೀಡುತ್ತಿದೆ. ಹಾಗೇಯೇ ಜಿಯೋ ಬಳಸಬೇಕಾದರೆ 4G ಸಪೋರ್ಟ್ ಫೋನ್‌ ಬೇಕೆ-ಬೇಕು. ಆದರೆ BSNL ಬಳಸಲು ಯಾವ ಪೋನ್ ಆದರು ಸಾಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Reliance Jio has shaken up the data prices in India, but state-owned player BSNL is giving it a tough competition. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot