Subscribe to Gizbot

ಒಂದೇ ನಿಮಿಷದಲ್ಲಿ ಆಧಾರ್-PAN ಲಿಂಕ್ ಮಾಡುವುದು ಹೇಗೆ..?

Written By:

ದಿನ ಕಳೆದಂತೆ ಕೇಂದ್ರ ಸರಕಾರವೂ ಆಧಾರ್ ಬಳಕೆಯನ್ನು ಹೆಚ್ಚು ಮಾಡುವ ಸಲುವಾಗಿ ಮತ್ತು ತನ್ನ ಸೇವೆಗಳಲ್ಲಿ ಇರುವ ಹುಳುಕುಗಳನ್ನು ತಡೆಯುವ ಸಲುವಾಗಿ ಆಧಾರ್ ಬಳಕೆಯನ್ನು ಕಡ್ಡಾಯ ಮಾಡಲು ಮುಂದಾಗಿದೆ. ಬ್ಯಾಂಕ್ ವ್ಯವಹಾರ, ಸರ್ಕಾರಿ ಸೌಲಭ್ಯ ಪಡೆಯಲು ಸೇರಿದಂತೆ ಎಲ್ಲಾ ಕಡೆಯೂ ಆಧಾರ್ ಬೇಕೇಬೇಕಾಗಿದೆ.

ಒಂದೇ ನಿಮಿಷದಲ್ಲಿ ಆಧಾರ್-PAN ಲಿಂಕ್ ಮಾಡುವುದು ಹೇಗೆ..?

ಇದೇ ಮಾದರಿಯಲ್ಲಿ ಆದಾಯ ತೆರಿಗೆ ಪಾವತಿಸಲು ಆಧಾರ್ ಬೇಕಾಗಿದೆ. ಇಲ್ಲದೇ ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದಕ್ಕಾಗಿ ಒಂದೇ ನಿಮಿಷದಲ್ಲಿ ಆಧಾರ್-PAN ಲಿಂಕ್ ಮಾಡುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 01:

ಹಂತ 01:

ಕೇಂದ್ರ ಸರಕಾರದ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ತೆರೆಯಿರಿ. incometaxindiaefiling.gov.in ಇದು ತೆರಿಗೆ ಪಾವತಿ ಮಾಡಲು ಇರುವ ವೈಬ್ ತಾಣವಾಗಿದ್ದು, ನೀವು ಇಲ್ಲಯೇ ಆಧಾರ್-PAN ಲಿಂಕ್ ಮಾಡಬಹುದಾಗಿದೆ.

ಹಂತ-02

ಹಂತ-02

ನೀವು ಆಧಾರ್-PAN ಲಿಂಕ್ ಮಾಡಲು ನೀವು ರಿಜಿಸ್ಟರ್ ಮಾಡಿಕೊಳ್ಳವು ಅವಶ್ಯಕತೆ ಇಲ್ಲ. ಇದಕ್ಕಾಗಿ ವೆಬ್ ಸೈಟಿನ ಕೆಳಭಾಗದಲ್ಲಿ ಲಿಂಕ್ ಆಧಾರ್ ಎಂಬ ಆಯ್ಕೆಯನ್ನು ನೀಡಲಾಗಿದೆ. ಅದನ್ನು ಕ್ಲಿಕ್ ಮಾಡಿರಿ.

ಹಂತ- 03:

ಹಂತ- 03:

ಆ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರದಲ್ಲಿ ಪಾನ್ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ಮತ್ತು ಹೆಸರನ್ನು ನಮೂದಿಸಬೇಕಾಗಿದೆ. ಅಲ್ಲಿ ಆಧಾರ್ ಕಾರ್ಡ್‌ನಲ್ಲಿರುವ ಹೆಸರನ್ನೇ ನಮೂದಿಸಬೇಕಾಗಿದೆ.

ಹಂತ-04:

ಹಂತ-04:

ನಿಮ್ಮ ಮಾಹಿತಿಗಳನ್ನು ನೀಡಿದ ನಂತರದಲ್ಲಿ ನಿಮ್ಮ ಮಾಹಿಗಳನ್ನು ಆಧಾರ್ ವೆರಿಫಿಕೇಷನ್ ಮಾಡಲಿದೆ. ಇದಕ್ಕಾಗಿ ನಿಮಗೆ ಒನ್ ಟೈಮ್ ಪಾಸ್‌ವರ್ಡ್ ಸಹ ಬರಲಿದೆ. ಇದು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಬರಲಿದೆ.

ಹಂತ -05:

ಹಂತ -05:

ಇದಾದ ನಂತರ ನಿಮ್ಮ ಜನ್ಮ ದಿನಾಂಕವನ್ನು ದಾಖಲಿಸಬೇಕಿದ್ದು, ಇದು ನಿಮ್ಮ ಆಧಾರ್ ಮತ್ತು ಪ್ಯಾನ್ ನಡುವೆ ಲಿಂಕ್ ಮಾಡಲು ಅತ್ಯವಶ್ಯಕವಾಗಿದೆ. ಎರಡು ಕಾರ್ಡ್‌ಗಳಿಗೆ ನೀಡಿರುವ ಮಾಹಿತಿಯೂ ಒಂದೇ ಆಗಿರಬೇಕಾಗಿದೆ.

ಹಂತ - 06:

ಹಂತ - 06:

ಇದಾದ ನಂತರ ನಿಮ್ಮ ಎರಡು ಕಾರ್ಡ್ ಗಳ ನಡುವೆ ಲಿಂಕ್ ಆಗಿದ್ದು, ಆಧಾರ್ -ಪ್ಯಾನ್ ಎರಡರಲ್ಲೂ ನೀಡಿರುವ ಮಾಹಿತಿಯೂ ಸರಿಯಿದ್ದ ಪಕ್ಷದಲ್ಲಿ, ಇಲ್ಲವಾದರೆ ಎರಡರಲ್ಲಿ ಯಾವುದರಲ್ಲದರೂ ನಿಮ್ಮ ಮಾಹಿತಿಗಳನನ್ನು ಬದಲಾಯಿಸಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The government has made it mandatory for taxpayers to quote Aadhaar or the enrolment ID of Aadhaar application form for filing income tax returns. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot