ಈ 10 ಮಕ್ಕಳು ಅಪಾಯಕಾರಿ ಅಂದ್ರೇ ಅಪಾಯಕಾರಿ... ಯಾಕಂತ ಗೊತ್ತಾ..?!

|

ನಮಗೆಲ್ಲರಿಗೂ ತಿಳಿದಿರುವಂತೆ ಕಂಪ್ಯೂಟರ್ ಭಾಷೆಯಲ್ಲಿ ಹ್ಯಾಕರ್ ಅಂದರೆ ಯಾರು ಕಂಪ್ಯೂಟರ್ ಸಿಸ್ಟಮ್ ಅಥವಾ ನೆಟ್ ವರ್ಕ್ ನ ದೌರ್ಬಲ್ಯವನ್ನು ಬಳಸಿಕೊಂಡು ಅದರ ಡಾಟಾವನ್ನು ಕದಿಯುತ್ತಾನೋ ಆತ. ಕಳ್ಳರು ಯಾವುದರಿಂದ ಬೇಕಾದರೂ ಪ್ರೇರಿತರಾಗಿರಬಹುದು. ಅದಕ್ಕೆ ಹಲವು ಕಾರಣಗಳಿವೆ. ಲಾಭ ಗಳಿಸುವುದು, ಪ್ರತಿಭಟಿಸುವುದು, ಸವಾಲು, ಸಂತೋಷ ಪಡಲು, ಅಥವಾ ದೌರ್ಬಲ್ಯವನ್ನು ಮೌಲ್ಯಮಾಪನಗೊಳಪಡಿಸುವ ಉದ್ದೇಶವೂ ಇರಬಹುದು.

ಈ 10 ಮಕ್ಕಳು ಅಪಾಯಕಾರಿ ಅಂದ್ರೇ ಅಪಾಯಕಾರಿ... ಯಾಕಂತ ಗೊತ್ತಾ..?!

ಹಾಗಾದ್ರೆ ಇಲ್ಲೊಂದಿಷ್ಟು ಮಂದಿ ಮಕ್ಕಳಿದ್ದಾರೆ. ಇವರು ವಿಶ್ವದ ಅಪಾಯಕಾರಿ ಮತ್ತು ಕುತೂಹಲಕಾರಿ ಹ್ಯಾಕರ್ ಗಳು. ಇವರನ್ನು ನೀವು ತಿಳಿದುಕೊಳ್ಳಲೇಬೇಕು.

ಫೇಸ್‌ಬುಕ್‌ಗೆ ವೈರಸ್ ಅಟ್ಯಾಕ್!..ಕೂಡಲೇ ಈ ಸೆಟ್ಟಿಂಗ್ಸ್ ಬದಲಾಯಿಸಲು ಬಳಕೆದಾರರಿಗೆ ಸೂಚನೆ!!ಫೇಸ್‌ಬುಕ್‌ಗೆ ವೈರಸ್ ಅಟ್ಯಾಕ್!..ಕೂಡಲೇ ಈ ಸೆಟ್ಟಿಂಗ್ಸ್ ಬದಲಾಯಿಸಲು ಬಳಕೆದಾರರಿಗೆ ಸೂಚನೆ!!

1. ಕ್ರಿಸ್ಟಫರ್ ವೋನ್ ಹ್ಯಾಜಲ್ ( 5 ವರ್ಷ)

1. ಕ್ರಿಸ್ಟಫರ್ ವೋನ್ ಹ್ಯಾಜಲ್ ( 5 ವರ್ಷ)

ಕ್ರಿಸ್ಟಫರ್ ವೋನ್ ಹ್ಯಾಜಲ್ ವಿಶ್ವದ ಕಿರಿಯ ಹ್ಯಾಕರ್ ಆಗಿದ್ದು, ಅತ್ಯಂತ ಕಿರಿಯ ಭದ್ರತಾ ಅಧ್ಯಯನಕಾರ ಎಂದು ಮೈಕ್ರೋಸಾಫ್ಟ್ ಸೆಕ್ಯುರಿಟಿ ಟೆಕ್ ಸೆಂಟರ್ ನಲ್ಲಿ ಗುರುತಿಸಿಕೊಂಡಿದ್ದಾನೆ. ಕಂಪ್ಯೂಟರ್ ನ ದುರ್ಬಲತೆಯನ್ನು ಈತ ಚೆನ್ನಾಗಿ ಬಳಸಿಕೊಂಡಿದ್ದಾನೆ. ಅದ್ರಲ್ಲೂ ಪ್ರಮುಖವಾಗಿ Xbox ಲೈವ್ ನ ದೃಢೀಕರಣ ಪರದೆಯನ್ನು ದಾಟುವ ಸಾಮರ್ಥ್ಯವನ್ನು ಈತ ಹೊಂದಿದ್ದಾನೆ. ನಿಜಕ್ಕೂ ಹೇಳಬೇಕೆಂದರೆ, ಕ್ರಮಬದ್ಧವಾಗಿ ಹೋಗುವುದಾದರೆ ದೃಢಿಕರಣವಲ್ಲದೆ ಇದ್ದನ್ನು ಆಕ್ಸಿಸ್ ಮಾಡಲು ಸಾಧ್ಯವೇ ಇಲ್ಲ.

2. ರೂಬೆನ್ ಪೌಲ್( 9 ವರ್ಷ)

2. ರೂಬೆನ್ ಪೌಲ್( 9 ವರ್ಷ)

9 ವರ್ಷದ ರೂಬೆನ್ ಪೌಲ್ ನೈತಿಕ ಕಳ್ಳ ಎಂದೇ ಗುರುತಿಸಲ್ಪಟ್ಟಿದ್ದಾನೆ. ಈತ ಎಲ್ಲೂ ಹೊರಗಡೆ ಹೋಗದೆ ಮಾಧ್ಯಮದ ಗಮನ ಸೆಳೆದಿದ್ದಾನೆ, ಹೌದು ಕೇವಲ 15 ನಿಮಿಷದಲ್ಲಿ ಆಂಡ್ರಾಯ್ಡ್ ಫೋನಿನ ಎಲ್ಲಾ ಡಾಟಾ( ಸಂಪರ್ಕ ವಿವರ, ಕಾಲ್ ಲಾಗ್ಸ್ ಮತ್ತು ಹೌಸ್ ಹೋಲ್ಡ್ ಗೂಡ್ಸ್) ಡಾಟಾವನ್ನು ಕದಿಯಬಲ್ಲ. ಸದ್ಯ ಈತ Prudent Games ಕಂಪೆನಿಯ ಸಿಇಓ ಆಗಿ ಕೆಲಸ ಮಾಡುತ್ತಿದ್ದಾನೆ. ಈ ಕಂಪೆನಿಯು ಕಲಿಕೆಗೆ ನೆರವು ನೀಡುವ ಆಟಗಳನ್ನು ಡೆವಲಪ್ ಮಾಡುವ ಕಾರ್ಯವನ್ನು ಮಾಡುತ್ತೆ. ಪ್ರಸಿದ್ಧ ಹ್ಯಾಕರ್ ಗಳ ಪಟ್ಟಿಯಲ್ಲಿ ಈತನನ್ನು "ದಿ ರ್ಯಾಪ್ ಸ್ಟಾರ್" ಎಂದು ಗುರುತಿಸಲಾಗುತ್ತೆ.

3. ಬೆಟ್ಸಿ ಡೇವೀಸ್( 7 ವರ್ಷ)

3. ಬೆಟ್ಸಿ ಡೇವೀಸ್( 7 ವರ್ಷ)

ಬೆಟ್ಸಿ ಡೇವೀಸ್ ಕೇವಲ ಏಳು ವರ್ಷದ ಬ್ರಿಟೀಷ್ ಹುಡುಗಿ, ಓಪನ್ ವೈ-ಫೈ ನೆಟ್ ವರ್ಕ್ ನ್ನು ಹ್ಯಾಕ್ ಮಾಡುವುದು ಹೇಗೆ ಮತ್ತು ಎಷ್ಟು ಸುಲಭವೆಂದು ತೋರಿಸಿಕೊಳ್ಳಲು. ಚಾನಲ್ 5 ನ್ಯೂಸ್ ನಲ್ಲಿ ಒಂದು ಪ್ರಯೋಗವನ್ನು ಮಾಡಲಾಯಿತು ಮತ್ತು VPN(ವರ್ಚುವಲ್ ಪ್ರೈವೇಟ್ ನೆಟ್ ವರ್ಕ್) ಪ್ರೊವೈಡರ್ ಆಗಿರುವ Hidemyass.com ನಲ್ಲಿ ಈ ಏಳು ವರ್ಷದ ಬಾಲಕಿ ಕೇವಲ 10 ನಿಮಿಷ 54 ಸೆಕೆಂಡ್ ನಲ್ಲಿ ಅದರ ಸದಸ್ಯರ ವೈ-ಫೈ ನೆಟ್ ವರ್ಕ್ ಕದ್ದಿದ್ದಳು.

4. ಅನಾಮದೇಯ ಕೆನಡಿಯನ್ ಹ್ಯಾಕರ್ (12 ವರ್ಷ)

4. ಅನಾಮದೇಯ ಕೆನಡಿಯನ್ ಹ್ಯಾಕರ್ (12 ವರ್ಷ)

ವಾರ್ತಾ ಮಾಧ್ಯಮ ಟೊರೆಂಟೋ ವರದಿ ಮಾಡಿರುವಂತೆ 5th ಗ್ರೇಡ್ ನ ವಿದ್ಯಾರ್ಥಿಯೊಬ್ಬ Denial-of-Service (DoS)ಗೆ ಜವಾಬ್ದಾರಿಯಂತೆ. ಸರ್ಕಾರಿ ಮತ್ತು ಪೋಲೀಸ್ ಇಲಾಖೆಯ ಹಲವು ವೆಬ್ ಸೈಟ್ ಗಳನ್ನು ಕದ್ದಿರುವುದು ಈತನೇ ಎಂದು ಹೇಳಿದೆ. 12 ವರ್ಷದ ಹುಡುಗ ಹಲವಾರು ಸೈಟ್ ಗಳಲ್ಲಿ ಸುಮಾರು $60,000 ಡಾಲರ್ ನಷ್ಟು ನಷ್ಟವನ್ನುಂಟು ಮಾಡಿದ್ದಾನೆ. ಆ ಸರ್ವೀಸ್ ಗಳ ವಿವರಣೆ ನೀಡುತ್ತಾ ಸಾಗಿದರೆ ಅದು ಮುಗಿಯುವುದೇ ಇಲ್ಲ ಅಷ್ಟೊಂದಿದೆಯಂತೆ.
ಈತ ಹಲವಾರು ಪ್ರಮುಖ ಅಟ್ಯಾಕ್ ಗಳ ಮುಖ್ಯ ಪಾತ್ರಧಾರಿಯಂತೆ. ಕೇವಲ ಒಬ್ಬನಿಂದಲೇ ಅಲ್ಲ, ಇದಕ್ಕೆ ಇನ್ನೊಂದಿಷ್ಟು ಜನರ ಸಾಥ್ ಕೂಡ ಇದೆ ಎಂದು ಹೇಳಲಾಗುತ್ತೆ. ಈ ಸಣ್ಣ ವಯಸ್ಸಿನ ಅನಾಮಧೇಯ ಕೆನಡಿಯನ್ ಹ್ಯಾಕರ್ ಸರ್ಕಾರಿ ವೆಬ್ ಸೈಟ್ ಗಳಿಂದ ಕದ್ದಿರುವ ಡಾಟಾವನ್ನು ಇತರೆಡೆಗೆ ಮತ್ತು ಹಲವಾರು ಗ್ರೂಪ್ ಗಳಲ್ಲಿ ಹರಿದಾಡಿಸಿದ್ದಾನೆ ಮತ್ತು ವೀಡಿಯೋ ಗೇಮ್ಸ್ ಗಳನ್ನು ಬದಲಾಯಿಸಿಕೊಳ್ಳಲು ಬಳಸಿದ್ದಾನೆ. ಹಾಗಾಗಿ ಇದು ಯಾವುದೂ ಕೂಡ ರಾಜಕೀಯ ಪ್ರೇರಿತವಲ್ಲ ಎಂದು ಪರಿಗಣಿಸಲಾಯಿತು.

5. ACK!3STX ಆಸ್ಟ್ರೇಲಿಯಾದ ಹ್ಯಾಕರ್ (15ವರ್ಷ)

5. ACK!3STX ಆಸ್ಟ್ರೇಲಿಯಾದ ಹ್ಯಾಕರ್ (15ವರ್ಷ)

ACK!3STX 15ವರ್ಷದ ಆಸ್ಟ್ರೇಲಿಯಾದ ಹ್ಯಾಕರ್ ಮತ್ತು ಕಡಿಮೆ ಅವಧಿಯಲ್ಲಿ ಈತ ಅತ್ಯಂತ ಬೆಸ್ಟ್ ಹ್ಯಾಕರ್ ಎಂದು ಗುರುತಿಸಿಕೊಂಡಿದ್ದಾನೆ. ಯಾಕೆಂದರೆ ಈತನದ್ದೆಲ್ಲವೂ ಗೆಲುವಿನ ಅಟ್ಯಾಕ್ ಆಗಿತ್ತು. ACK!3STX ಸುಮಾರು 259 ಕಂಪೆನಿಯ ವೆಬ್ ಸೈಟ್ ಗಳಿಗೆ ಈತ ಕೇವಲ ಮೂರೇ ತಿಂಗಳ ಅವಧಿಯಲ್ಲಿ ದಾಳಿ ಇಟ್ಟಿದ್ದಾನೆ. ನಂತರ ಅದನ್ನು ಗಮನಿಸಿ ಆಸ್ಟ್ರೇಲಿಯನ್ ಪೋಲೀಸರು ಈತನನ್ನು ಬಂಧಿಸಿದ್ದರು.

How to Sharing a Mobile Data Connection with Your PC (KANNADA)
6. ಮ್ಯಾಥ್ಯೂ ವೈಗ್ ಮೆನ್

6. ಮ್ಯಾಥ್ಯೂ ವೈಗ್ ಮೆನ್

ಮ್ಯಾಥ್ಯೂ ವೈಗ್ ಮೆನ್ ಕೇವಲ 14 ವರ್ಷದವ ಮತ್ತು ಈತನಿಗೆ ಅಸಾಧಾರಣ ಕೇಳುವ ಸಾಮರ್ಥ್ಯವಿದ್ದು,ಸುಳ್ಳು ವರ್ಷನ್ ನ ಇನ್ ಬ್ಯಾಂಡ್ ಫೋನ್ ಸಿಗ್ನಲ್ ಗಳ ಮುಖಾಂತರ ಈತ ಟೆಲಿಫೋನ್ ಆಪರೇಟರ್ ಗಳನ್ನು ಮೋಸಗೊಳಿಸಿದ್ದ.ಈತನೊಬ್ಬ ಅಪಾಯಕಾರಿ ಹ್ಯಾಕರ್ ಆಗಿದ್ದು, 18 ವರ್ಷ ವಯಸ್ಸಿನಲ್ಲಿ ಹಲವು ಕಾರಣಗಳಿಗಾಗಿ ಈತ ಬಂಧಿಸಲ್ಪಟ್ಟಿದ್ದಾನೆ. ಈತ ಕಾಲರ್ ಐಡಿ ಸಿಸ್ಟಮ್ ಮುಖಾಂತರ ಹುಡುಗಿಯರ ನಂಬರ್ ಗಳನ್ನು ಪಡೆದು ವಂಚಿಸಿದ ಎಂದು ಹೇಳಲಾಗಿದೆ. ಮತ್ತು ಹುಡುಗಿಯರ ಬಳಿ ಅವನು ಸಾಕಷ್ಟು ನಟನೆ ಮಾಡುತ್ತಿದ್ದ.

7. ಅಪರಿಚಿತ ಕೆನಡಿಯನ್ ಹ್ಯಾಕರ್

7. ಅಪರಿಚಿತ ಕೆನಡಿಯನ್ ಹ್ಯಾಕರ್

2014 ರಲ್ಲಿ 11 ವರ್ಷದ ಹುಡುಗನೊಬ್ಬ ಸರಣಿ DDoS ದಾಳಿಯನ್ನು ಕೆನಡಿಯನ್ ಸರ್ಕಾರಿ ವೆಬ್ ಸೈಟ್ ಗಳ ವಿರುದ್ಧ ಮಾಡಿದ್ದ. ಈ ಮಗು ಸರ್ಕಾರಿ ವೆಬ್ ಸೈಟ್ ಗಳ ಹೋಮ್ ಪೇಜ್ ಗಳನ್ನು ಎಡಿಟ್ ಮಾಡಿ, ಎರಡು ದಿನ ಸರ್ಕಾರಿ ವೆಬ್ ಪೇಜ್ ಗಳು ಶಟ್ ಡೌನ್ ಆಗುವಂತೆ ಮಾಡಿದ್ದ. ಈ ಎರಡು ದಿನದಲ್ಲಿ ಕೆನಡಾ ಸರ್ಕಾರಕ್ಕೆ 260 ಸಾವಿರ ಡಾಲರ್ ನಷ್ಟು ನಷ್ಟವಾಗಿತ್ತಂತೆ.

8. ಸಿಫಿ

8. ಸಿಫಿ

ಸಿಫಿ ಕೇವಲ 10 ವರ್ಷದ ಹುಡುಗಿಯಾಗಿದ್ದಾಗ ಹಲವಾರು IOS ಗಳನ್ನು ಮತ್ತು ಆಂಡ್ರಾಯ್ಡ್ ಗೇಮ್ಸ್ ಗಳನ್ನು ಹ್ಯಾಕ್ ಮಾಡಿದ್ದಳು. ಆಕೆಯ ಪ್ರಕಾರ ಆವಳು ಆಟವಾಡುತ್ತಿದ್ದಳು ಮತ್ತು ಭದ್ರತಾ ವೈಫಲ್ಯದ ಮೂಲಕ ಅವಳ ಆಟ ಮುಕ್ತಾಯವಾಯಿತು. 2011 ರ DefCon 19 ನಲ್ಲಿ ನಡೆದ Defcon Kids ನಲ್ಲಿ ಆಕೆ ಪ್ರೇಕ್ಷಕರಿಗೆ, ಆಟ ಆಡುವುದಕ್ಕೆ ಆಕೆಗೆ ಬೋರ್ ಆಗುತ್ತದೆ ಮತ್ತು ಅದನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೆ. ಹಾಗಾಗಿ ಆಕೆ ಬೇರೆ ದಾರಿ ಕಂಡುಕೊಂಡಳಂತೆ. ಅದುವೇ ಆಂಟಿ-ಚೀಟ್- ಮೆಕಾನಿಸಂ ನನ್ನು ಕಲಿತಿರುವುದು.. ಹಾಗಾಗಿ ಆಕೆ ತನ್ನ ಡಿವೈಸ್ ನ ಗಡಿಯಾರವನ್ನು ಮಾನ್ಯೂವಲಿ ಬದಲಾಯಿಸಿದಳು ಮತ್ತು ಆಟವನ್ನು ಪೂರ್ಣಗೊಳಿಸದಳಂತೆ.

9. ಮೈಕೆಲ್ ಕ್ಯಾಲ್ಸ್

9. ಮೈಕೆಲ್ ಕ್ಯಾಲ್ಸ್

ಊಹಿಸಿ? ಈತ ಸರಣಿ denial-of-service program ‘Rivolta' ವನ್ನು ಬಿಡುಗಡೆಗೊಳಿಸಿ, ಕೆಲವು ಪ್ರಸಿದ್ಧ ವೆಬ್ ಸೈಟ್ ಗಳಾದ ಈ-ಬೇ, ಅಮೇಜಾನ್, ಡೆಲ್ ಇತ್ಯಾದಿಗಳ ಸರ್ವರ್ ಗಳು ಓವರ್ ಲೋಡ್ ಆಗುವಂತೆ ಮಾಡಿದಾಗ ಈತನಿಗಿನ್ನು ಕೇವಲ 15 ವರ್ಷ. 15 ವರ್ಷದ ಹುಡುಗನಾಗಿದ್ದಾಗಲೇ ಈತ ಸುಮಾರು 7.5 ಮಿಲಿಯನ್ ಡಾಲರ್ ನಷ್ಟು ಡ್ಯಾಮೇಜ್ ಮಾಡಿದ್ದನಂತೆ. ಈತನನ್ನು ಮಾಫಿಯಾ ಬಾಯ್ ಎಂದು ಕೂಡ ಕರೆಯುವುದುಂಟು. ಸೈಬರ್ ಕ್ರೈಮ್ ಗಾಗಿ 8 ತಿಂಗಳು ಈತನಿಗೆ ಜೈಲು ವಾಸವೂ ಆಗಿತ್ತು.

10. ಜೊನಾಥನ್ ಜೇಮ್ಸ್

10. ಜೊನಾಥನ್ ಜೇಮ್ಸ್

ಜೊನಾಥನ್ ಜೇಮ್ಸ್ ಈತನನ್ನು ‘C0mrade' ಎಂದು ಕೂಡ ಹ್ಯಾಕರ್ ಪ್ರಪಂಚದಲ್ಲಿ ಕರೆಯಲಾಗುತ್ತೆ. ಈತನಿಗೆ ಕೇವಲ 16 ವರ್ಷವಾಗಿದ್ದಾಗ ಯು.ಎಸ್ ನ ಸೈನ್ಯದ ಡಿಪಾರ್ಟ್ ಮೆಂಟ್ ನ್ನು ಈತ ಟಾರ್ಗೆಟ್ ಮಾಡಿ ಬಿಟ್ಟಿದ್ದ. ಡಿಫೆನ್ಸ್ ಥ್ರೆಟ್ ರಿಡಕ್ಷನ್ ಏಜೆನ್ಸಿ, ನಾಸಾ, ಮಾರ್ಷನ್ ಸ್ಪೇಸ್ ಫ್ಲೈಟ್ ಸೆಂಟರ್ ಗಳು ಈತನ ಗುರಿಯಾಗಿದ್ದವು.,ಇವೆಲ್ಲವೂ ಜಸ್ಟ್ ಸಂತೋಷವಾಗಿ ಬಂದ್ ಆಗಿ ಬಿಟ್ಟಿದ್ದವು. ಮ್ಯಾಸೀವ್ ಥೆಫ್ಟ್ ಇಡೆಂಟಿಟಿ ಇನ್ವೆಸ್ಟಿಕೇಷನ್ ಮೂಲಕ ಈತನ ಫನ್ ಎಲ್ಲವೂ ತಟಸ್ಥವಾಯಿತು.
ಒಂದು ವರದಿಯ ಪ್ರಕಾರ ಈ ಹುಡುಗ ಡಾಟಾವನ್ನು ಕದಿಯುತ್ತಿದ್ದ ಮತ್ತು ಕೆಲವೊಮ್ಮೆ ತನ್ನ ಸಾಧನೆಯನ್ನು ಟ್ವೀಟರ್ ನಲ್ಲೂ ಪ್ರಕಟಿಸಿದ್ದಾನಂತೆ. ಆದರೆ ಈತ ಯಾವುದೇ ಒಂದು ಸ್ಪೆಸಿಫಿಕ್ ಕಂಪೆನಿಯನ್ನೂ ಅಟ್ಯಾಕ್ ಮಾಡಿಲ್ಲ. ಈತನನ್ನು ಬಂಧಿಸಿ, ಪ್ರಶ್ನಿಸಿದಾಗ,ಕೂಡಲೇ ಹುಡುಗ ಪಶ್ಚಾತ್ತಾಪ ಪಟ್ಟನಂತೆ ಮತ್ತು ಇದನ್ನೆಲ್ಲ ಆತ ಮಾಡಿದ್ದು ಅವನಿಗೆ ಬೋರ್ ಆಗುತ್ತಿದೆ ಎಂದು ಮತ್ತು ಈತನಿಗೆ ಅದನ್ನು ಮಾಡಲು ಸಾಧ್ಯವಿದೆ ಎಂದು ಎಲ್ಲರಿಗೂ ತೋರಿಸುವ ಉದ್ದೇಶದಿಂದ ಮಾಡಿದನಂತೆ.

Best Mobiles in India

English summary
Meet The World’s 10 Most Dangerous Child Hackers.To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X