ಜಗತ್ತಿನಲ್ಲಿ ಅತ್ಯಂತ ಉನ್ನತ ತಂತ್ರಜ್ಞಾನದ ದೇಶಗಳು ಯಾವುವು?.ನೀವು ಆಶ್ಚರ್ಯಪಡುತ್ತೀರಿ!.

ಬದಲಾವಣೆಗಳಿಗೆ ಒಗ್ಗಿಕೊಂಡೇ ಬಂದಿರುವ ತಂತ್ರಜ್ಞಾನ ಇಂದು ಭೂಮಿಯನ್ನು ಬಿಟ್ಟು ಬೇರೆ ಪ್ರಪಂಚವನ್ನು ತಲುಪುವಷ್ಟು ಮುಂದುವರೆದಿದೆ. ಇಂದು ಪ್ರತಿಯೊಂದು ಕೆಲಸವು ಒಂದು ಸ್ಮಾರ್ಟ್‌ಫೋನ್‌ನಲ್ಲಿಯೇ ನಡೆಯುತ್ತದೆ.

|

ಬದಲಾವಣೆಗಳಿಗೆ ಒಗ್ಗಿಕೊಂಡೇ ಬಂದಿರುವ ತಂತ್ರಜ್ಞಾನ ಇಂದು ಭೂಮಿಯನ್ನು ಬಿಟ್ಟು ಬೇರೆ ಪ್ರಪಂಚವನ್ನು ತಲುಪುವಷ್ಟು ಮುಂದುವರೆದಿದೆ. ಇಂದು ಪ್ರತಿಯೊಂದು ಕೆಲಸವು ಒಂದು ಸ್ಮಾರ್ಟ್‌ಫೋನ್‌ನಲ್ಲಿಯೇ ನಡೆಯುತ್ತದೆ. ಹಾಗಾಗಿ, ಮನುಷ್ಯ ಇಂದು ಕಣ್ಣು ಮಚ್ಚಿದರೂ, ಕಣ್ಣುಬಿಟ್ಟರೂ ತಂತ್ರಜ್ಞಾನದಿಂದಲೇ ಎನ್ನುವಹಾಗಿದೆ.!!

ಪ್ರತಿಯೊಬ್ಬರ ಜೀವನವನ್ನು ಸುಲಭಗೊಳಿಸಿರುವ ಈ ತಂತ್ರಜ್ಞಾನದ ಬಳಕೆ ಇಲ್ಲದಿದ್ದರೆ ಜೀವನವೇ ಇಲ್ಲ ಎನ್ನುವಷ್ಟು ತಂತ್ರಜ್ಞಾನದ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ. ಹಾಗಾಗಿ, ಇಂದಿನ ವಿಶ್ವದಲ್ಲಿ ಅತ್ಯುತ್ತಮ ತಂತ್ರಜ್ಞಾನದ ಬಳಕೆಯು ಯಾವುದೇ ಒಂದು ದೇಶದ ಅಭಿವೃದ್ದಿ ಸೂಚಕವಾಗಿದೆ ಎಂದರೆ ತಪ್ಪಾಗಲಾರದು ಎನ್ನಬಹುದು.!!

ಜಗತ್ತಿನಲ್ಲಿ ಅತ್ಯಂತ ಉನ್ನತ ತಂತ್ರಜ್ಞಾನದ ದೇಶಗಳು ಯಾವುವು?

ಹಾಗಾದರೆ, ಪ್ರಪಂಚದ ಯಾವ ಯಾವ ದೇಶಗಳು ತಂತ್ರಜ್ಞಾನವನ್ನು ಹೆಚ್ಚು ಬಳಕೆಮಾಡಿಕೊಳ್ಳುತ್ತಿವೆ? ಮತ್ತು ತಂತ್ರಜ್ಞಾನವನ್ನು ಹೆಚ್ಚು ಅಭಿವೃದಿಪಡಿಸುತ್ತಿರುವ ಟಾಪ್ 5 ರಾಷ್ಟ್ರಗಳು ಯಾವುವು? ತಂತ್ರಜ್ಞಾನ ಬಳಕೆಯಲ್ಲಿ ಈ ದೇಶಗಳು ತೋರಿಸುತ್ತಿರುವ ಆಸಕ್ತಿ ಎಷ್ಟಿದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯರಿ.

ಟಾಪ್ 5 - ಜರ್ಮನಿ

ಟಾಪ್ 5 - ಜರ್ಮನಿ

ಹೆಚ್ಚು ಬಳಕೆಮಾಡಿಕೊಳ್ಳುತ್ತಿರುವ ರಾಷ್ಟಗಳಲ್ಲಿ ಜರ್ಮನಿ ಟಾಪ್ 5ನೇ ಸ್ಥಾನದಲ್ಲಿದ್ದು, ಎಂಜಿನಿಯರಿಂಗ್ ತಂತ್ರಜ್ಞಾನದಲ್ಲಿ ಬಹಳ ಮುಂದುವರೆದಿದೆ. ಇನ್ನು ಸ್ಪೇಸ್‌ ಟ್ರಾವಲ್ ಮತ್ತು ಬಯೋ ಟೆಕ್ನಾಲಜಿಯಲ್ಲಿಯಲ್ಲಿಯೂ ಮೈಲಿಗಲ್ಲನ್ನು ಸ್ಥಾಪಿಸಿದೆ. ಇನ್ನೊಂದು ವಿಷಯ ಗೊತ್ತಾ? ಅತ್ಯುತ್ತಮ ಬ್ರಾಂಡ್ ಕಾರು ಕಂಪೆನಿಗಳಾದ ಬೆನ್ಜ್, ಆಡಿ, BMW ಮತ್ತು ವೋಲ್ಕ್ಸ್‌ವ್ಯಾಗನ್ ಕಂಪೆನಿಗಳೆಲ್ಲಾ ಜರ್ಮನ್‌ ದೇಶದಲ್ಲಿಯೇ ಇರುವುದು.!

ಟಾಪ್ 4 - ಇಸ್ರೇಲ್

ಟಾಪ್ 4 - ಇಸ್ರೇಲ್

ಇಸ್ರೇಲ್ ಎಂಬ ದೇಶ ಇದೆ ಎನ್ನುವುದೇ ಎಷ್ಟೊ ಜನರಿಗೆ ತಿಳಿದಿಲ್ಲ. ಆದರೆ, ಇಸ್ರೇಲ್ ತಂತ್ರಜ್ಞಾನವನ್ನು ಹೆಚ್ಚು ಬಳಕೆಮಾಡಿಕೊಳ್ಳುವ ದೇಶಗಳಲ್ಲಿ 4 ನೇ ಸ್ಥಾನದಲ್ಲಿ ಇದೆ. ಬಾಹ್ಯಾಕಾಶ ಸಾಧನೆಯಲ್ಲಿಯೂ ಟಾಪ್ 5 ರಾಷ್ಟ್ರಗಳ ಸ್ಥಾನದಲ್ಲಿದೆ.! ಇಸ್ರೇಲ್ ದೇಶದ ಪ್ರಮುಖ ಆದಾಯವೇ ತಂತ್ರಜ್ಞಾನದ ರಫ್ತು ಮಾಡುವುದಾಗಿದೆ.!!

ಟಾಪ್ 3- ಸೌತ್ ಕೋರಿಯಾ

ಟಾಪ್ 3- ಸೌತ್ ಕೋರಿಯಾ

ಬರಿ ಯುದ್ದದ ವಿಷಯದಲ್ಲಿಯೇ ಸುದ್ದಿಯಾಗುವ ಸೌತ್ ಕೋರಿಯಾ ತಂತ್ರಜ್ಞಾನದ ವಿಷಯದಲ್ಲಿ ಸಾಕಷ್ಟು ಮುಂದುವೆರದಿದೆ. ಅಮೆರಿಕಾದ ಸಹಾಯದಿಂದ ತಂತ್ರಜ್ಞಾನದ ಕ್ಷೇತ್ರಕ್ಕೆ ಕಾಲಿಟ್ಟ ಸೌತ್ ಕೋರಿಯಾ ಇಂದು ಅಮೆರಿಕಾಕ್ಕೆ ಸೆಡ್ಡುಹೊಡೆಯುವಂತೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.

ಟಾಪ್ 2- ಅಮೆರಿಕಾ

ಟಾಪ್ 2- ಅಮೆರಿಕಾ

ಜಗತ್ತಿನ ದೊಡ್ಡಣ್ಣನಾಗಿ ಮೆರೆಯುತ್ತಿರುವ ಅಮೆರಿಕಾ ಉಪಯೋಗಿಸುತ್ತಿರುವ ತಂತ್ರಜ್ಞಾನದ ಬಗ್ಗೆ ಯಾರಿಗೂ ಹೆಚ್ಚೇನು ಹೇಳುವ ಅವಶ್ಯಕತೆ ಇಲ್ಲ ಎನ್ನಬಹುದು. ಅಷ್ಟು ತಂತ್ರಜ್ಞಾದ ಬಳಕೆಯನ್ನು ಅಮೆರಿಕಾ ಹೊಂದಿದೆ.! ಉದಾಹರಣೆಗೆ ಮುಂದಿನ 100 ವರ್ಷಗಳಿಗಾಗುವಷ್ಟು ಕರೆಂಟ್ ಅಮೆರಿಕಾದ ಬಳಿ ಈಗಲೇ ಶೇಖರವಾಗಿದೆ.!

ಟಾಪ್ 1- ಜಪಾನ್

ಟಾಪ್ 1- ಜಪಾನ್

ಎರಡನೇ ಮಹಾಯುದ್ದದಲ್ಲಿ ನಾಶಗೊಂಡರೂ ತನ್ನ ಗಟ್ಟಿ ನಿರ್ಧಾರದಿಂದ ಇಂದು ಪ್ರಪಂಚದಲ್ಲಿಯೇ ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿರುವ ಟಾಪ್ 1 ದೇಶ ಜಪಾನ್.! ಕಣ್ಣು ಮಚ್ಚಿದರೂ, ಕಣ್ಣುಬಿಟ್ಟರೂ ತಂತ್ರಜ್ಞಾನದಿಂದಲೇ ಎನ್ನುವ ಈ ದೇಶದ ಹೆಗ್ಗಳಿಕೆಯೇ 'ಎಲೆಕ್ಟ್ರಾನಿಕ್ ಮತ್ತು ರೊಬಾಟ್' ತಂತ್ರಜ್ಞಾನ.!

ಎಲ್ಲರಿಗೂ ಭಯಹುಟ್ಟಿಸುತ್ತಿರುವ 'ಸಿಮ್ ಸ್ವಾಪ್' ಹಗರಣದ ಬಗ್ಗೆ ನಿಮಗೆಷ್ಟು ಗೊತ್ತು?ಎಲ್ಲರಿಗೂ ಭಯಹುಟ್ಟಿಸುತ್ತಿರುವ 'ಸಿಮ್ ಸ್ವಾಪ್' ಹಗರಣದ ಬಗ್ಗೆ ನಿಮಗೆಷ್ಟು ಗೊತ್ತು?

Best Mobiles in India

English summary
Who are the most high tech countries in the World? You will be surprised!. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X