ರೂ. 2,999 ಕ್ಕೆ ಮೋಟೋರೋಲಾ ಹೆಡ್‌ಫೋನ್‌ಗಳು ಲಾಂಚ್

By: Shwetha PS

ಮೋಟೋರೋಲಾ ಇತ್ತೀಚೆಗೆ ತಾನೇ ಅತ್ಯಂತ ಮನಮೋಹಕ ಹೆಡ್‌ಫೋನ್ ಅನ್ನು ಲಾಂಚ್ ಮಾಡಿದ್ದು ಇದರ ಬೆಲೆ ರೂ. 2,999 ಆಗಿದೆ. ಇದು ಮೂರು ಬಣ್ಣಗಳಲ್ಲಿ ಲಭ್ಯವಿದ್ದು, ಬಿಳಿ, ಚಿನ್ನದ ಬಣ್ಣ ಮತ್ತು ಕಪ್ಪು ಹಾಗೂ ಬೆಳ್ಳಿಯ ಬಣ್ಣಗಳಾಗಿವೆ. ಮೋಟೋ ಪ್ಲಸ್ ಎಮ್ ಎಂಬುದಾಗಿ ಈ ಹೆಡ್‌ಫೋನ್ ಹೆಸರನ್ನು ಪಡೆದುಕೊಂಡಿದ್ದು ಮೆಟಾಲಿಕ್ ಫಿನಿಶ್ ಅನ್ನು ಹೊಂದಿದೆ. ಇದು ಬಳಕೆದಾರರಿಗೆ ಮೃದುವಾದ ಅನುಭುತಿಯನ್ನು ನೀಡುವಂತಿದ್ದು ಹಾಡನ್ನು ಆಸ್ವಾದಿಸಲು ಬಳಕೆದಾರರಿಗೆ ಯೋಗ್ಯವಾಗಿದೆ.

ರೂ. 2,999 ಕ್ಕೆ ಮೋಟೋರೋಲಾ ಹೆಡ್‌ಫೋನ್‌ಗಳು ಲಾಂಚ್

ಇಯರ್ ಪ್ಯಾಡ್‌ಗಳನ್ನು ಇದರಲ್ಲಿ ಅಳವಡಿಸಲಾಗಿದ್ದು ಇದನ್ನು ಮಡಚಬಹುದಾದ ಇಯರ್ ಪ್ಯಾಡ್ ಅನ್ನು ಹೊಂದಿದೆ. ಇನ್‌ಲೈನ್ ಕಂಟ್ರೋಲ್ ಯೂನಿಟ್‌ಗಳನ್ನು ಇದು ಹೊಂದಿದ್ದು ವಾಲ್ಯೂಮ್ ರಾಕ್ ಕಂಟ್ರೋಲ್ಸ್ ಮತ್ತು ಮ್ಯೂಸಿಕ್ ಕಂಟ್ರೋಲ್ ಬಟನ್‌ಗಳನ್ನು ಹೊಂದಿದೆ. ಹೆಡ್‌ಫೋನ್‌ಗಳು 40 ಎಮ್‌ಎಮ್ ಸ್ಪೀಕರ್ ಅನ್ನು ಹೊಂದಿದ್ದು ಇಯರ್ ಕಪ್‌ಗಳಿವೆ. ಇದು 96ಡಿಬಿ ಔಟ್‌ಪುಟ್‌ನೊಂದಿಗೆ ಬಂದಿದೆ.

ಗುಣಮಟ್ಟದ ಆಡಿಯೋ ಉತ್ಪನ್ನವನ್ನು ಬಳಕೆದಾರರಿಗೆ ನೀಡುವುದಕ್ಕಾಗಿಯೇ ಮೋಟೋರೋಲಾ ಈ ಬಗೆಯ ಹೆಡ್‌ಫೋನ್‌ಗಳನ್ನು ತಯಾರು ಮಾಡಿದೆ.

ಮೋಟೋರೋಲಾ ಇತ್ತೀಚೆಗೆ ತಾನೇ ವರ್ವ್ ಲೂಪ್ ಬ್ಲೂಟೂತ್ ಹೆಡ್‌ಫೋನ್‌ಗಳನ್ನು ಪಡೆದುಕೊಂಡಿದ್ದು ಇದೇ ಬೆಲೆಗೆ ದೊರೆಯಲಿದೆ. ವರ್ವ್ ಬ್ಲೂಟೂತ್ ಹೆಡ್‌ಫೋನ್‌ಗಳು ಐಪಿ54 ಪ್ರಮಾಣಪತ್ರವನ್ನು ಹೊಂದಿದ್ದು ವೈರ್‌ಲೆಸ್ ಆಡಿಯೊ ಗಿಜ್ಮೊ ಸ್ಪಾಲ್ಶ್ ಪ್ರೂಪ್ ಇದರಲ್ಲಿದೆ. ವಯರ್ ಮತ್ತು ವಯರ್‌ಲೆಸ್ ಹೆಡ್‌ಫೋನ್‌ಗಳನ್ನು ಮೋಟೋರೋಲಾ ಬಳಕೆದಾರರಿಗೆ ಒದಗಿಸಿದ್ದು ಇದರ ಲಾಂಚ್ ಮೋಟೋ ಪ್ಲಸ್ ಎಮ್ ಸ್ಮಾರ್ಟ್‌ಫೋನ್‌ಗಳೊಂದಿಗೆ ನಡೆಯಲಿದೆ.

English summary
Motorola has launched a pair of wired over-the-ear headphones in India, the Moto Pulse M, that retail at Rs. 2,999 and has a detachable audio cable.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot