ಭವಿಷ್ಯದ ಸಂಶೋಧನೆ ಈಗಲೇ ಸಕ್ಸಸ್!..ಹೇಗಿದೆ ಗೊತ್ತಾ ಡಿಸ್‌ಪ್ಲೇ ತಂತ್ರಜ್ಞಾನ!!

ಪ್ರಪಂಚದಲ್ಲಿ ಹೊಸ ಹೊಸ ಸಂಶೋಧನೆಗಳು ಎಂದೂ ನಿಂತಿಲ್ಲಾ ಎಂದು ಸಹ ನಿಲ್ಲುವುದಿಲ್ಲ ಎನ್ನಬಹುದು

|

ಪ್ರಪಂಚದಲ್ಲಿ ಹೊಸ ಹೊಸ ಸಂಶೋಧನೆಗಳು ಎಂದೂ ನಿಂತಿಲ್ಲಾ ಎಂದು ಸಹ ನಿಲ್ಲುವುದಿಲ್ಲ ಎನ್ನಬಹುದು. ಏಕೆಂದರೆ ಸೆಂಟ್ರಲ್ ಫ್ಲೋರಿಡಾ ವಿಶ್ವವಿದ್ಯಾಲಯದ ಸಂಶೋಧಕರು ಹೊಸದೊಂದು ಸಂಶೋಧನೆ ಮಾಡಿದ್ದು, ಟಿವಿ, ಸ್ಮಾರ್ಟ್‌ಫೋನ್ ಮತ್ತು ಇತರ ಸ್ಕ್ರೀನ್ ಗ್ಯಾಜೆಟ್‌ಗಳ ಲೋಕದಲ್ಲಿ ಭಾರಿ ಬದಲಾವಣೆಯಾಗುವ ಮುನ್ಸೂಚನೆ ನೀಡಿದೆ.!!

ಹೌದು, ನೀವು ಒಮ್ಮೆ ನಂಬಲೂ ಆಶ್ಚರ್ಯವಾಗುವಂತಹ ಹೊಸ ಸಂಶೋಧನೆಯೊಂದು ಹೊರಬಂದಿದ್ದು, ಗ್ಯಾಜೆಟ್‌ ಸ್ಕ್ರೀನ್‌ಗಳ ಗುಣಮಟ್ಟದಲ್ಲಿ ಮತ್ತೊಂದು ಹಂತವನ್ನು ವಿಜ್ಞಾನಿಗಳು ತಲುಪಿದ್ದಾರೆ.!! ಪ್ರಸ್ತುತ ಇರುವ ಡಿಸ್‌ಪ್ಲೇಗಳನ್ನು ಮೀರಿಸುವ ತಂತ್ರಜ್ಞಾನ ಇದಾಗಿದ್ದು, ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂದು ಕೆಳಗೆ ತಿಳಿಯಿರಿ.!!

ಬಣ್ಣ ಬದಲಾಯಿಸುವ ಮೇಲ್ಮೈ ಟ್ಯೂನಬಲ್!!

ಬಣ್ಣ ಬದಲಾಯಿಸುವ ಮೇಲ್ಮೈ ಟ್ಯೂನಬಲ್!!

ಫ್ಲೋರಿಡಾ ವಿಶ್ವವಿದ್ಯಾಲಯದ ಸಂಶೋಧಕರು ವಿದ್ಯುತ್ ವೋಲ್ಟೇಜ್ ಮೂಲಕ ಹೊಸ ಬಣ್ಣ ಬದಲಾಯಿಸುವ ಮೇಲ್ಮೈ ಟ್ಯೂನಬಲ್ ಅಭಿವೃದ್ದಿಪಡಿಸಿದ್ದಾರೆ. ಈ ಸಂಶೋದನೆ ಟಿವಿ, ಸ್ಮಾರ್ಟ್‌ಫೋನ್ ಮತ್ತು ಇತರ ಸಾಧನಗಳಿಗಿಂತ ಮೂರು ಪಟ್ಟು ಪ್ರಗತಿ ಸಾಧಿಸಿದೆ.!!.

ಪಿಕ್ಸೆಲ್ ಒಳಗೆಯೇ ಪಿಕ್ಸೆಲ್‌ಗಳು!!

ಪಿಕ್ಸೆಲ್ ಒಳಗೆಯೇ ಪಿಕ್ಸೆಲ್‌ಗಳು!!

ಹೊಸದಾಗಿ ಅಭಿವೃದ್ದಿ ಪಡಿಸಿರುವ ಡಿಸ್‌ಪ್ಲೇಯನ್ನು ಸಾವಿರಾರು ಪಿಕ್ಸೆಲ್‌ಗಳಿಂದ ಮಾಡಲಾಗಿದ್ದು, ಈ ಪಿಕ್ಸೆಲ್‌ಗಳಲ್ಲಿ ಪ್ರತಿಯೊಂದೂ ಮೂರು ಉಪಪಿಕ್ಸೆಲ್‌ಗಳನ್ನು ಹೊಂದಿದೆ.!! ಅಂದರೆ ಮುಂಬರುವ ಡಿಸ್‌ಪ್ಲೇಗಳ ಗುಣಮಟ್ಟವನ್ನು ಒಮ್ಮೆ ಲೆಕ್ಕಹಾಕಿ.!!

ವಿವಿಧ ಬಣ್ಣಗಳನ್ನು ಪ್ರದರ್ಶಿಸುತ್ತವೆ.!!

ವಿವಿಧ ಬಣ್ಣಗಳನ್ನು ಪ್ರದರ್ಶಿಸುತ್ತವೆ.!!

ಹೊಸದಾಗಿ ಅಭಿವೃದ್ದಿ ಪಡಿಸಿರುವ ಡಿಸ್‌ಪ್ಲೇ ವಿದ್ಯುತ್ ವೋಲ್ಟೇಜ್ ಮೂಲಕ ಹೊಸ ಬಣ್ಣ ಬದಲಾಯಿಸುವ ಶಕ್ತಿ ಹೊಂದಿರುತ್ತವೆ. ಒಂದು ಕೆಂಪು, ಒಂದು ಹಸಿರು, ಒಂದು ನೀಲಿ. ಇನ್ನು ವೈವಿಧ್ಯದ ವೋಲ್ಟೇಜ್ ಅನ್ವಯಿಸುವ ಮೂಲಕ ಕೆಂಪು, ಹಸಿರು ಅಥವಾ ನೀಲಿ ಬಣ್ಣಕ್ಕೆ ಪ್ರತ್ಯೇಕ ಉಪಪಿಕ್ಸಲ್ಗಳ ಬಣ್ಣವನ್ನು ಸಂಶೋಧಕರು ಬದಲಾಯಿಸಬಹುದಾಗಿದೆ.!!

ಪ್ರಮುಖ ಪರಿಣಾಮಗಳು ಉಂಟಾಗುತ್ತದೆ.!!

ಪ್ರಮುಖ ಪರಿಣಾಮಗಳು ಉಂಟಾಗುತ್ತದೆ.!!

ಮೂರು ಪಟ್ಟು ಹೆಚ್ಚು ಪಿಕ್ಸೆಲ್ಗಳೊಂದಿಗೆ ಹೆಚ್ಚಿನ ರೆಸಲ್ಯೂಶನ್ ಹೊಂದುವ ಸ್ಕ್ರೀನ್‌ಗಳು ಇನ್ನೇನು ಕೆಲವೇ ದಿವಸಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಟಿವಿ ಮತ್ತು ಸ್ಮಾರ್ಟ್‌ಫೋನ್ ಪ್ರಪಂಚ ಮತ್ತೊಂದು ಮಜಲಿಗೆ ಕಾಲಿಡುವುದರಲ್ಲಿ ಸಂದೇಹವಿಲ್ಲ.!!

ಓದಿರಿ:ವಿಶ್ವದಲ್ಲಿಯೇ ನಂ 1 ಟೆಕ್‌ ಸಿಟಿಯಾಗಿ ನಮ್ಮ ಬೆಂಗಳೂರು ಆಯ್ಕೆ!!

Best Mobiles in India

English summary
ಭವಿಷ್ಯದ ಸಂಶೋಧನೆ ಈಗಲೇ ಸಕ್ಸಸ್!..ಹೇಗಿದೆ ಗೊತ್ತಾ ಡಿಸ್‌ಪ್ಲೇ ತಂತ್ರಜ್ಞಾನ!!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X