Subscribe to Gizbot

ವಿಶ್ವದಲ್ಲಿಯೇ ನಂ 1 ಟೆಕ್‌ ಸಿಟಿಯಾಗಿ ನಮ್ಮ ಬೆಂಗಳೂರು ಆಯ್ಕೆ!!

Written By:

ಬೆಂಗಳೂರು ವಿಶ್ವದಲ್ಲಿಯೇ ಕೈಗೆಟುಕಬುದಾದ ಟೆಕ್ ಸಿಟಿ ಎನ್ನುವ ವರದಿಯೊಂದು ಹೊರಬಿದ್ದಿದೆ. ಹೌದು, ಸಿಲಿಕಾನ್ ವ್ಯಾಲಿ, ನಮ್ಮ ಬೆಂಗಳೂರು ಇಡಿ ವಿಶ್ವದಲ್ಲಿಯೇ ಮತ್ತೊಮ್ಮೆ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಡೀ ವಿಶ್ವದಲ್ಲಿಯೇ ಅತ್ಯಂತ ಟೆಕ್ ಯೋಗ್ಯ ವಾಸಸ್ಥಾನ ಎಂಬುದನ್ನು ಮತ್ತೆ ನಿರೂಪಿಸಿದೆ.!!

ವಿಶ್ವದ ಟಾಪ್ 22 ಟೆಕ್ ನಗರಗಳ ಪೈಕಿ ಬೆಂಗಳೂರು ಬದುಕಲು ಅತ್ಯುತ್ತಮವಾದ ಮತ್ತು ಜೀವನಕ್ಕೆ ಕಡಿಮೆ ವೆಚ್ಚದ ನಗರ ಎಂಬುದಾಗಿ ಟೆಕ್ಕಿಗಳು ಆಯ್ಕೆ ಮಾಡಿದ್ದಾರೆ. ಇನ್ನು ಬೆಂಗಳೂರು ಮೊದಲಸ್ಥಾನಕ್ಕೆ ಅರ್ಹವಾಗಿರುವ ಕಾರಣಗಳು ಹಲವಿದ್ದು, ಅವುಗಳು ಯಾವುವು? ಏಕೆ ಬೆಂಗಳೂರು ಬೆಸ್ಟ್ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸರಾಸರಿ ಮನೆ ಬಾಡಿಗೆ 15,250!!

ಸರಾಸರಿ ಮನೆ ಬಾಡಿಗೆ 15,250!!

ಬೆಂಗಳೂರಿನಲ್ಲಿ ಸರಾಸರಿ ಮನೆ ಬಾಡಿಗೆ 15,250 ಆಗಿದ್ದರೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಇದು 50,000 ರೂ. ವೆಚ್ಚವಾಗಲಿದೆ. ವ ಟೆಕ್ ಸಿಟೀಸ್ ಇಂಡೆಕ್ಸ್ ರದಿ ಪ್ರಕಾರ ಬೆಂಗಳೂರು ನಗರ ಕೇಪ್ ಟೌನ್, ಸ್ಯಾಂಟಿಯಾಗೊ, ಬ್ಯೂನಸ್ ಮತ್ತು ಬರ್ಲಿನ್ ಗಿಂತ ಅಗ್ಗವಾಗಿದೆ.!!

ಟೆಕ್ ಯೋಗ್ಯ ವಾತಾವರಣ!

ಟೆಕ್ ಯೋಗ್ಯ ವಾತಾವರಣ!

'ಟೆಕ್ ಎನ್ವಿರಾನ್ಮೆಂಟ್' ಸೂಚ್ಯಂಕದಲ್ಲಿ ಬೆಂಗಳೂರು ಎರಡನೆಯ ಸ್ಥಾನದಲ್ಲಿ ಸ್ಥಾನ ಪಡೆದಿದೆ. ತಂತ್ರಜ್ಞಾನದ ಮೂಲಭೂತ ಸೌಕರ್ಯದ ಗಾತ್ರ ಮತ್ತು ಮೌಲ್ಯದ ಆಧಾರದ ಮೇಲೆ ಜನರು ಟೆಕ್ ಯೋಗ್ಯ ವಾತಾವರಣದ ಬಗ್ಗೆ ತೀರ್ಮಾನಿಸಿದ್ದಾರೆ. ಫ್ರಾನ್ಸಿಸ್ಕೊ ಮೊದಲ ಸ್ಥಾನದಲ್ಲಿದೆ.

ವ್ಯವಹಾರ ಯೋಗ್ಯ ವಾತಾವರಣ!

ವ್ಯವಹಾರ ಯೋಗ್ಯ ವಾತಾವರಣ!

ವ್ಯವಹಾರ ಯೋಗ್ಯ ವಾತಾವರಣ ವಿಭಾಗದಲ್ಲಿ ಬೆಂಗಳೂರು 19 ನೇ ಸ್ಥಾನ ಪಡೆದುಕೊಂಡಿದೆ.ಹೂಡಿಕೆ ಮಾರ್ಗ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯ ಆಧಾರದ ಮೇಲೆ ವರದಿಯ ಮೌಲ್ಯಮಾಪನ ಮಾಡಿದ್ದಾರೆ.

ಟ್ಯಾಲೆಂಟ್ ಪೂಲ್

ಟ್ಯಾಲೆಂಟ್ ಪೂಲ್

'ಟ್ಯಾಲೆಂಟ್ ಪೂಲ್' ವಿಭಾಗದ ಸಮೀಕ್ಷೆಯಲ್ಲಿ ಬೆಂಗಳೂರು 17 ನೇ ನಗರಕ್ಕೆ ತೃಪ್ತಿಪಟ್ಟಿದೆ. ಸಮೀಕ್ಷೆಗೆ ಪ್ರತಿಭೆ ಮತ್ತು ಉನ್ನತ ಶಿಕ್ಷಣ ಅವಕಾಶಗಳು ಮತ್ತು ವಲಸೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಟ್ಯಾಲೆಂಟ್ ಪೂಲ್ ವಿಭಾಗದಲ್ಲಿ ಬೋಸ್ಟನ್ ಮೊದಲ ಸ್ಥಾನದಲ್ಲಿ ಇದ್ದರೆ. ಟೆಲ್ ಅವಿವ್ ಮತ್ತು ಸಿಂಗಾಪುರ್ ಬಾಸ್ಟನ್ ನಂತರದ ಸ್ಥಾನದಲ್ಲಿವೆ.!!

ಬೆಂಗಳೂರಿನಲ್ಲಿ ಕ್ಷೇಮವಿಲ್ಲ.!!

ಬೆಂಗಳೂರಿನಲ್ಲಿ ಕ್ಷೇಮವಿಲ್ಲ.!!

ನಗರದಲ್ಲಿರುವ ಕ್ಷೇಮದ ಬಗ್ಗೆ ಬಟೆಕ್ ಜನರಿಗೆ ಅಷ್ಟೇನು ನಂಬಿಕೆ ಇಲ್ಲ. ಈ ವಿಭಾಗದಲ್ಲಿ ಬೆಂಗಳೂರು ಕನಿಷ್ಠ ಸ್ಥಾನ ಪಡೆದಿದೆ. ಮಾಲಿನ್ಯ ಅಪರಾಧ, ಆರೋಗ್ಯ ರಕ್ಷಣೆ, ಸಮಾನತೆ ಮತ್ತು ಸಂಚಾರ ಸಮಯವನ್ನು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.!!

ಓದಿರಿ:ಟೆಲಿಕಾಂಗೆ ಮತ್ತೆ ಶಾಕ್ ನೀಡಿದ 'ಟ್ರಾಯ್'...ಗ್ರಾಹಕರಿಗೆ ಆಗುತ್ತಿದ್ದ ಭಾರಿ ವಂಚನೆಗೆ ಬ್ರೇಕ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Bengaluru is the Most Affordable Tech City in the World. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot